ಫಿಟ್​ನೆಸ್​ ಸವಾಲಿಗೆ ಟ್ವಿಸ್ಟ್​ ಮೂಲಕ ಉತ್ತರಿಸಿದ ರಾಕಿಂಗ್​ ಸ್ಟಾರ್​ ಯಶ್​

news18
Updated:June 4, 2018, 5:27 PM IST
ಫಿಟ್​ನೆಸ್​ ಸವಾಲಿಗೆ ಟ್ವಿಸ್ಟ್​ ಮೂಲಕ ಉತ್ತರಿಸಿದ ರಾಕಿಂಗ್​ ಸ್ಟಾರ್​ ಯಶ್​
news18
Updated: June 4, 2018, 5:27 PM IST
ನ್ಯೂಸ್​ 18 ಕನ್ನಡ

'ಹಮ್​ ಫಿಟ್​ ಹೈ ತೋ ಇಂಡಿಯಾ ಫಿಟ್​ ಹೈ' ಅಭಿಯಾನದ ಭಾಗವಾಗ ನಟ ಕಿಚ್ಚ ಸುದೀಪ್​ ನೀಡಿರುವ ಫೆಟ್​ನೆಸ್​ ಸವಾಲನ್ನು ಸ್ವೀಕರಿಸಿರುವ ಯಶ್ ಎಂದಿನಂತೆ ಇದರಲ್ಲೂ ಒಂದು ಟ್ವಿಸ್ಟ್​ ಇಟ್ಟಿದ್ದಾರೆ.

ಹೌದು, ಯಶ್​ ಏನೇ ಮಾಡಿದರೂ ಅದರಲ್ಲಿ ಒಂದು ಟ್ವಿಸ್ಟ್ ಇರುತ್ತದೆ. ಹಾಗೇ ಈ ಬಾರಿ ಅವರು ಸ್ವೀಕರಿಸಿರುವ ಫಿಟ್​ನೆಸ್​ ಚಾಲೆಂಜ್​ನಲ್ಲೂ ಒಂದು ಟ್ವಿಸ್ಟ್​ ಇದೆ. ಅದೇನು ಅಂತ ಅವರೇ ಹೇಳುತ್ತಾರೆ ಕೇಳಿ....

 ಸಿನಿಮಾ ನಟರು ತಮ್ಮ ವೃತ್ತಿ ಜೀವನಕ್ಕಾಗಿ ಸದಾ ಫಿಟ್​ನೆಸ್​ ಕಾಯ್ದುಕೊಳ್ಳುತ್ತಾರೆ. ಹೀಗಾಗಿ ನಾನು ಈ ಸವಾಲನ್ನು ಸ್ವೀಕರಿಸುತ್ತೇನೆ. ಆದರೆ ಅದನ್ನು ನನ್ನ ಸ್ನೇಹಿತನ ಕೈಯಲ್ಲಿ ಮಾಡಿಸುತ್ತೇನೆ ಎನ್ನುವ ಯಶ್​, ಹಿಂದೆಂದೂ ಜೀವನದಲ್ಲಿ ಫಿಟ್​ನೆಸ್​ ಬಗ್ಗೆ ಮಾತನಾಡದ ಸ್ನೇಹಿತ ಚೇತನ್​ (ಚಕ್ಲಿ) ಅವರ ಕೈಯಲ್ಲಿ ವ್ಯಾಯಾಮ ಮಾಡಿಸಿರುವ ವಿಡಿಯೋವನ್ನು ಯಶ್​ ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.
First published:June 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ