• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Yap Island: ಇಲ್ಲಿ ನೋಟು-ನಾಣ್ಯಗಳಿಗಿಲ್ಲ ಬೆಲೆ, ಖರೀದಿ-ಮಾರಾಟಕ್ಕೆ ಕಲ್ಲುಗಳೇ ಬೇಕು! ವಿಚಿತ್ರವಾದರೂ ಇದು ಸತ್ಯ

Yap Island: ಇಲ್ಲಿ ನೋಟು-ನಾಣ್ಯಗಳಿಗಿಲ್ಲ ಬೆಲೆ, ಖರೀದಿ-ಮಾರಾಟಕ್ಕೆ ಕಲ್ಲುಗಳೇ ಬೇಕು! ವಿಚಿತ್ರವಾದರೂ ಇದು ಸತ್ಯ

ಯಾಪ್ ದ್ವೀಪದಲ್ಲಿರುವ ಹಣ

ಯಾಪ್ ದ್ವೀಪದಲ್ಲಿರುವ ಹಣ

ಒಂದೆಡೆ, ಬಹುತೇಕ ಇಡೀ ವಿಶ್ವದಲ್ಲಿ ಕರೆನ್ಸಿ ಬಳಸಿ ವಹಿವಾಟು ನಡೆಯುತ್ತಿದೆ. ಆದರೆ ಇಲ್ಲೊಂದು ಕಡೆ ಜನರು ಅದರ ಇಂದಿಗೂ ಕಲ್ಲುಗಳ ವಿನಿಮಯ ಮಾಡಿಕೊಂಡು ಸರಕುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಪದ್ಧತಿ ಮುಂದುವರೆಸಿದ್ದಾರೆ. ಹಾಗಾದ್ರೆ ಈ ವಿಚಿತ್ರ ಪದ್ಧತಿ ಎಲ್ಲಿದೆ ಗೊತ್ತಾ?

 • Share this:

  ಹಣವಿಲ್ಲದೇ ವ್ಯವಹಾರ ನಡೆಯುತ್ತಿದ್ದ ಕಾಲವಿತ್ತು. ಅಂದ್ರೆ ವಸ್ತುಗಳ ವಿನಿಮಯ ಪದ್ಧತಿ. ವಿನಿಮಯ ವ್ಯವಸ್ಥೆ  (Barter System) ಎಂದರೆ ಒಬ್ಬ ವ್ಯಕ್ತಿಯು ಏನನ್ನಾದರೂ ಪಡೆಯಲು ಇಚ್ಛಿಸಿದರೆ, ಆತ ಆ ವಸ್ತುವಿನ ಬದಲಾಗಿ ತನ್ನ ಬಳಿ ಇರುವ ವಸ್ತುವನ್ನು ನೀಡಬೇಕಿತ್ತು. ಉದಾಹರಣೆಗೆ, ಯಾರಾದರೂ ಮೇಕೆಯನ್ನು ಖರೀದಿಸಲು ಬಯಸಿದರೆ, ಅವರು ಕುರಿ ಅಥವಾ ಬೇರೆ ಯಾವುದಾದರೂ ವಸ್ತುವನ್ನು ನೀಡಬೇಕಾಗಿತ್ತು. ಆದರೆ ದಿನಗಳು ಉರುಳುತ್ತಿದ್ದಂತೆಯೇ ಮೊದಲು ರತ್ನಗಳು, ನಂತರ ನಾಣ್ಯಗಳು (Coins), ಬಳಿಕ ನಿಧಾನವಾಗಿ ಕರೆನ್ಸಿ ನೋಟುಗಳು (Currency Bites) ಚಲಾವಣೆಗೊಳ್ಳಲಾರಂಭಿಸಿತು. ಸದ್ಯ ವಿಶ್ವಾದ್ಯಂತ ಬಹುತೇಕ ಎಲ್ಲಾ ಕಡೆ ಇದೇ ವ್ಯವಸ್ಥೆ ಜಾರಿಯಲ್ಲಿದೆ. ಹೀಗಿದ್ದರೂ ಅದೊಂದು ಕಡೆ ಮಾತ್ರ ಇಂದಿಗೂ ನೋಟುಗಳನ್ನು ಬಳಸದೆ ಕಲ್ಲುಗಳ (Stone Money) ಮೂಲಕ ವಹಿವಾಟು ನಡೆಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಕರೆನ್ಸಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕಾಗದದ ನೋಟುಗಳು ಅಥವಾ ಲೋಹದ ನಾಣ್ಯಗಳಿಗೆ ಇಲ್ಲಿ ಯಾವುದೇ ಬೆಲೆ ಇಲ್ಲ. ಏನೇ ಇರಲಿ ಇಲ್ಲಿ ಅತೀ ದೊಡ್ಡ ಹಾಗೂ ಹೆಚ್ಚು ಕಲ್ಲುಗಳಿರುವವನೇ ಶ್ರೀಮಂತ.


  ಹೌದು ಇಂತಹುದ್ದೊಂದು ವ್ಯವಸ್ಥೆ ಜಾರಿಯಲ್ಲಿರುವುದು ಪೆಸಿಫಿಕ್ ಸಾಗರದಿಂದ ಆವೃತವಾದ ಯಾಪ್ ದ್ವೀಪದಲ್ಲಿ (Yap Island). ಈ ದ್ವೀಪವು ಸುಮಾರು 100 ಚದರ ಕಿಲೋಮೀಟರ್ ಇದೆ. ಇದರಲ್ಲಿ ಸುಮಾರು 12 ಸಾವಿರ ಜನರು ವಾಸಿಸುತ್ತಿದ್ದಾರೆ. ಈ ಜನರು ವಹಿವಾಟುಗಳಿಗೆ ನೋಟುಗಳನ್ನು ಬಳಸುವುದಿಲ್ಲ ಆದರೆ ಕಲ್ಲುಗಳ ವಿನಿಮಯ ಮಾಡಿ ಸರಕುಗಳನ್ನು ಖರೀದಿಸುತ್ತಾರೆ ಹಾಗೂ ಮಾರಾಟ ಮಾಡುತ್ತಾರೆ. ಇಲ್ಲಿ ಅತ್ಯಂತ ಭಾರವಾದ ಕಲ್ಲು ಹೊಂದಿರುವ ವ್ಯಕ್ತಿಯನ್ನು ಶ್ರೀಮಂತ ಎಂದು ಪರಿಗಣಿಸಲಾಗುತ್ತದೆ. ವಿಶೇಷವೆಂದರೆ ಈ ಕಲ್ಲುಗಳ ಮಧ್ಯದಲ್ಲಿ ರಂಧ್ರವಿದ್ದು, ಅದನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ಕಲ್ಲನ್ನು ಇಲ್ಲಿಂದ ಅಲ್ಲಿಗೆ ಸರಿಸಬಹುದು.


  ಇದನ್ನೂ ಓದಿ: Digital Currency: ಭಾರತವನ್ನು ಆಳಲಿದ್ಯಾ ಡಿಜಿಟಲ್ ಕರೆನ್ಸಿ? ಯಾಕೆ ಎನ್ನುವುದಕ್ಕೆ ಇಲ್ಲಿದೆ 10 ಕಾರಣಗಳು!


  ಮನುಷ್ಯರಷ್ಟು ಎತ್ತರವಾಗಿವೆ ಇವರ ಕರೆನ್ಸಿ


  ಮಾಧ್ಯಮ ವರದಿಗಳ ಪ್ರಕಾರ, ಯಾಪ್ ದ್ವೀಪವು ಸುಮಾರು 100 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ. ಯಾಪ್ ದ್ವೀಪದಲ್ಲಿ ಬಹಳಷ್ಟು ಸಣ್ಣ ಹಳ್ಳಿಗಳಿದ್ದು, ಇಲ್ಲಿನ ಜನಸಂಖ್ಯೆ ಸುಮಾರು 12 ಸಾವಿರ. ಪ್ರತಿಯೊಂದು ಕುಟುಂಬವು ಕಲ್ಲಿನ ರೂಪದಲ್ಲಿ ಕರೆನ್ಸಿಯನ್ನು ಹೊಂದಿದೆ, ಅದರ ಮೇಲೆ ಕುಟುಂಬದ ಹೆಸರನ್ನು ಸಹ ಬರೆಯಲಾಗುತ್ತದೆ.


  ಗಮನಾರ್ಹವಾಗಿ, ಮಾನವನಷ್ಟು ದೊಡ್ಡದಾದ ಕರೆನ್ಸಿ ಕಲ್ಲುಗಳಿವೆ. ಈ ಕಲ್ಲುಗಳ ನಡುವೆ ರಂಧ್ರವನ್ನು ಮಾಡಲಾಗಿದೆ. ಕಲ್ಲಿನ ತೂಕದೊಂದಿಗೆ, ಅದರ ಮೌಲ್ಯವೂ ಹೆಚ್ಚಾಗುತ್ತದೆ. ಅಂದರೆ ಕಲ್ಲು ಭಾರವಾದಷ್ಟು ಬೆಲೆ ಜಾಸ್ತಿ. ಹೆಚ್ಚು ಮತ್ತು ಭಾರವಾದ ಕಲ್ಲು ಹೊಂದಿರುವ ಕುಟುಂಬವನ್ನು ಇಲ್ಲಿ ಶ್ರೀಮಂತ ಎಂದು ಪರಿಗಣಿಸಲಾಗುತ್ತದೆ.


  ಕಲ್ಲುಗಳ ಮೇಲೆ ಮಾಲೀಕರ ಹೆಸರನ್ನು ಬರೆಯಲಾಗುತ್ತದೆ


  ಇಲ್ಲಿ ಜನರು ದೊಡ್ಡ ವಹಿವಾಟು ನಡೆಸಬೇಕಾದರೂ ಅಥವಾ ದೊಡ್ಡ ವ್ಯವಹಾರ ಮಾಡಬೇಕಾದರೂ ಕಲ್ಲುಗಳನ್ನು ಬಳಸುತ್ತಾರೆ. ಮತ್ತೊಂದೆಡೆ, ಕೆಲವು ಕಲ್ಲುಗಳು ತುಂಬಾ ಭಾರವಾಗಿದ್ದು, ಅವುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಸಾಧ್ಯವಿಲ್ಲ, ಇದರಿಂದಾಗಿ ಈ ಜನರು ಆ ಕಲ್ಲನ್ನು ಅಲ್ಲಿಯೇ ಬಿಡುತ್ತಾರೆ. ಆದಾಗ್ಯೂ, ಅವರು ಈ ಕಲ್ಲಿನ ಮೇಲೆ ಮಾಲೀಕರ ಹೆಸರನ್ನು ಬರೆಯುತ್ತಾರೆ, ಇದರಿಂದ ಅದನ್ನು ಗುರುತಿಸಲು ಸಹಾಯವಾಗುತ್ತದೆ. ಇಲ್ಲೊಬ್ಬ ವ್ಯಕ್ತಿ ತನ್ನ ಹಾಗೂ ತನ್ನ ಕುಟುಂಬದ ಬಳಿ ಉತ್ತಮ ಗಾತ್ರವುಳ್ಳ ಐದು ಭಾರವಾದ ಕಲ್ಲುಗಳಿವೆ ಎಂದು ಹೇಳಿದ್ದಾರೆ.


  ಇದನ್ನೂ ಓದಿ: Fake Notes: ರಿಸರ್ವ್ ಅಲ್ಲ, ರಿವರ್ಸ್ ಬ್ಯಾಂಕ್ ಎಂದು ಬರೆದಿದ್ದ 26 ಕೋಟಿ ನಕಲಿ ಕರೆನ್ಸಿ ವಶಕ್ಕೆ!
  ಇಂತಹ ವ್ಯವಸ್ಥೆ ಯಾವಾಗ, ಯಾಕಾಗಿ ಜಾರಿಯಾಯ್ತು?


  ಈ ದ್ವೀಪದಲ್ಲಿ ಕಲ್ಲುಗಳ ಮೂಲಕ ವಹಿವಾಟು ನಡೆಯುವ ಪ್ರಕ್ರಿಯೆಯು ಶತಮಾನಗಳಿಂದಲೂ ಇದ. ಆದರೆ ಅದು ಹೇಗೆ ಮತ್ತು ಯಾವಾಗ ಪ್ರಾರಂಭವಾಯಿತು ಎಂಬುವುದಕ್ಕೆ ನಿಖರವಾದ ಕಾರಣ ಯಾರಿಗೂ ತಿಳಿದಿಲ್ಲ. ಆದರೆ ಯಾಪ್ ದ್ವೀಪದಲ್ಲಿ ಯಾವುದೇ ಬೆಲೆಬಾಳುವ ಕಚ್ಚಾ ವಸ್ತು ಅಥವಾ ಲೋಹ ಲಭ್ಯವಾಗದಿರುವುದು ಕಲ್ಲಿನ ಕರೆನ್ಸಿಯ ಬಳಕೆಯ ಹಿಂದಿನ ಕಾರಣ ಎಂದು ಹೇಳಲಾಗಿದೆ. ಈ ದ್ವೀಪದಲ್ಲಿ ಚಿನ್ನವಾಗಲೀ, ಬೆಳ್ಳಿಯಾಗಲಿ ಅಥವಾ ಕಲ್ಲಿದ್ದಲು ಕೂಡ ಕಂಡುಬರುವುದಿಲ್ಲ. ಹೀಗಾಗಿ ಶತಮಾನಗಳಿಂದ ಇಲ್ಲಿ ಸುಣ್ಣದ ಕಲ್ಲನ್ನು ಕರೆನ್ಸಿಯಾಗಿ ಬಳಸಲಾಗುತ್ತಿದೆ.

  Published by:Precilla Olivia Dias
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು