72ನೇ ಸ್ವಾತಂತ್ರ್ಯ ದಿನಾಚರಣೆಗೆ WWE ಸೂಪರ್​ಸ್ಟಾರ್ ಜಾನ್​ ಸೀನಾ ಕೂಡಾ ವಿಶ್​​ ಮಾಡಿದ್ದಾರೆ!


Updated:August 15, 2018, 12:28 PM IST
72ನೇ ಸ್ವಾತಂತ್ರ್ಯ ದಿನಾಚರಣೆಗೆ WWE ಸೂಪರ್​ಸ್ಟಾರ್ ಜಾನ್​ ಸೀನಾ ಕೂಡಾ ವಿಶ್​​ ಮಾಡಿದ್ದಾರೆ!

Updated: August 15, 2018, 12:28 PM IST
ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶ ವಿದೇಶ ಸೇರಿದಂತೆ ಸಾಕಷ್ಟು ಗಣ್ಯಾತಿಗಣ್ಯರು ಟ್ವಿಟರ್​ ಫೇಸ್​ಬುಕ್​ ಮೂಲಕ ಶುಭಾಶಯ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇದೀಗ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ ಫೈಟರ್ಸ್​ಗಳು ಕೂಡಾ ಶುಭಕೋರಿ ವಿಡಿಯೋ ಶೇರ್​ ಮಾಡಿದ್ದಾರೆ.

ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನವರೂ ವೀಕ್ಷಿಸಲ್ಪಡುವ ಕ್ರೀಡೆಗಳಲ್ಲಿ WWE ಕೂಡಾ ಒಂದು, ಈ ಜನಪ್ರಿಯ ಆಟದಲ್ಲಿ ಸಾಕಷ್ಟು ಭಾರತೀಯರೂ ಈಗಾಗಲೇ ತಮ್ಮ ಕಸರತ್ತು ಪ್ರದರ್ಶಿಸಿದ್ದಾರೆ. ಅದಲ್ಲದೇ ಭಾರತೀಯ ವಾಹಿನಿಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ಟಿವಿ ಶೋಗಳಲ್ಲಿ WWE ಕೂಡಾ ಒಂದು. ಹೀಗಾಗಿ ಆ.15ರ ಸ್ವಾತಂತ್ರ್ಯ ದಿನಾಚರಣೆಗೆ 16 WWE ವಿಶ್ವ ಚಾಂಪಿಯನ್​ ಪಟ್ಟ ಹೊಂದಿರುವ ಜಾನ್​ ಸೀನ ಸೇರಿದಂತೆ ಹಲವರು ಭಾರತಕ್ಕೆ ಸ್ವಾತಂತ್ರ್ಯ ದಿನಾಚರಣೆ ಶುಭ ಕೋರಿದ್ದಾರೆ. ಈ ವಿಡಿಯೋವನ್ನು WWE ತನ್ನ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದೆ.


ವಿಡಿಯೋದಲ್ಲಿ ಭಾರತದ WWE ಆಟಗಾರ ಜಿಂದರ್​ ಮಹಲ್​, ಫಿನ್​ ಬಾಲೋರ್​, ಕಾರ್ಮೆಲ್ಲಾ, ಕಾಲಿಸ್ಟೋ, ಎಜೆ ಸ್ಟೈಲ್​, ಸೆತ್​ ರೋಲಿನ್ಸ್​ ಸೇರಿದಂತೆ ಹಲವರು ಭಾರತಕ್ಕೆ ಶುಭಾಶಯ ಕೋರಿದ್ದಾರೆ.

ಇನ್ನು ಸ್ವಾತಂತ್ರ್ಯ ದಿನಾಚರಣೆಗೂ ಹಿಂದಿನ ದಿನವೇ ಈ ಕುರಿತು ಸಣ್ಣ ಸುಳಿವು ನೀಡಿದ್ದ ಜಾನ್​ ಸೀನಾ ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​, ಕಪಿಲ್​ ಶರ್ಮಾ ಸೇರಿದಂತೆ ಹಲವರ ಚಿತ್ರಗಳನ್ನು ತಮ್ಮ ಇನ್ಸ್ಟಾದಲ್ಲಿ ಶೇರ್​ ಮಾಡಿದ್ದರು.

First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ