ಮದುವೆ (Wedding) ಸಮಾರಂಭಗಳು ಅಂದ್ರೆ ಕೇಳಬೇಕೆ? ಒಳ್ಳೆ ಸ್ವಾದಿಷ್ಟಕರವಾದ ಅಡುಗೆ (Food), ವೈಭವದಿಂದ ಕೂಡಿದ ಅಲಂಕಾರ (Decoration), ಮದುವೆ ಮಂಟಪ (Stage), ಗ್ರ್ಯಾಂಡ್ ಬಟ್ಟೆಗಳಲ್ಲಿ (Grand Dress) ತುಂಬಾನೇ ಚೆನ್ನಾಗಿ ಕಾಣಿಸಿಕೊಳ್ಳುವ ವಧು-ವರರು.. ಹೀಗೆ ಒಂದೇ, ಎರಡೇ ಅಬ್ಬಾ ದುಡ್ಡಿದ್ದರೆ ಮದುವೆಯನ್ನ ಹೇಗೆ ಬೇಕೋ ಹಾಗೆ ಮಾಡಬಹುದು ನೋಡಿ. ಕೆಲವರು ಜೀವನದಲ್ಲಿ (Life) ಮದುವೆ ಅಂತ ಆಗೋದು ಒಂದು ಸಲ, ಅದನ್ನ ತುಂಬಾನೇ ಗ್ರ್ಯಾಂಡ್ ಆಗಿ ಮಾಡಿಕೊಳ್ಳಬೇಕು ಅಂತ ತುಂಬಾನೇ ದುಡ್ಡು (Money) ಅದಕ್ಕೆ ಸುರಿದರೆ, ಇನ್ನೂ ಕೆಲವರು ಮದುವೆಗೆ ಏಕೆ ಅಷ್ಟೊಂದು ದುಡ್ಡು ವೆಚ್ಚ ಮಾಡೋದು, ಮದುವೆ ಸಿಂಪಲ್ (Simple Marriage) ಆಗಿರಲಿ, ಸಾಲ ಎಲ್ಲಾ ಮಾಡಿಕೊಳ್ಳುವುದು ಬೇಡ ಅಂತ ಅಂದುಕೊಳ್ಳುತ್ತಾರೆ ಅಂತ ಹೇಳಬಹುದು.
ಆದರೆ ಈ ಎರಡೂವರೆ ವರ್ಷಗಳಿಂದ ಎಂದರೆ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದ ಮದುವೆಗಳು ತುಂಬಾನೇ ಸಿಂಪಲ್ ಆಗಿ ಆಗುತ್ತಿದ್ದು, ಮನರಂಜನೆಗೆ ಅಂತ ಯಾವುದೇ ಕೊರತೆ ಮಾಡುತ್ತಿಲ್ಲ ನೋಡಿ.
ಕೆಲವೊಮ್ಮೆ ಮದುವೆಯಲ್ಲಿ ಸುಮ್ಮನೆ ಯದ್ವಾ ತದ್ವಾ ಹಣ ಖರ್ಚು ಮಾಡಿ, ನಂತರದಲ್ಲಿ ಅದರ ಬಗ್ಗೆ ಪಶ್ಚಾತ್ತಾಪ ಪಡುವ ಜನರನ್ನು ಸಹ ನಾವು ನೋಡಿರುತ್ತೇವೆ.
ಇದರ ಬಗ್ಗೆ ಇಷ್ಟೆಲ್ಲಾ ಏಕೆ ಮಾತು ಅಂತೀರಾ? ಇಲ್ಲೊಂದು ಯುವ ಜೋಡಿ ತುಂಬಾನೇ ಸರಳವಾಗಿ ಮದುವೆಯಾಗಿದ್ದಾರೆ ನೋಡಿ. ಇವರ ಮದುವೆ ಎಷ್ಟು ಸರಳವಾಗಿತ್ತು ಅಂತ ಹೇಳಿದರೆ, ಮದುವೆಗೆ ಬರುವ ಅತಿಥಿಗಳೆ ಅವರ ಊಟವನ್ನು ಜೊತೆಯಲ್ಲಿ ತಂದಿದ್ದರು ಅಂತ ಹೇಳಲಾಗುತ್ತಿದೆ ನೋಡಿ.
ಯುವ ಜೋಡಿಯ ಮದುವೆ ತುಂಬಾನೇ ಸರಳವಾಗಿತ್ತು.
26 ವರ್ಷ ವಯಸ್ಸಿನ ಶೆಲ್ಬಿ ಫೆಲ್ಪ್ಸ್ ಮತ್ತು ಆಕೆಯ ಪ್ರಿಯಕರ 26 ವರ್ಷ ವಯಸ್ಸಿನ ಗಾರ್ರೆಟ್ ಮದುವೆಗೆ ದುಡ್ಡು ವೆಚ್ಚ ಮಾಡಬಾರದು ಎಂಬ ಸಂಗತಿಯನ್ನು ತುಂಬಾನೇ ಚೆನ್ನಾಗಿ ಅರಿತುಕೊಂಡವರು ಅಂತ ಹೇಳಬಹುದು.
ಈ ರೀತಿಯ ದುಡ್ಡು ವೆಚ್ಚವನ್ನು ಮಾಡದೆ 8,09,874 ರೂಪಾಯಿಗಳನ್ನು ಉಳಿಸಲು ಸಹಾಯ ಮಾಡಿದ ಒಂದು ವಿಶಿಷ್ಟವಾದ ಯೋಜನೆಯೊಂದನ್ನು ತಂದರು.
ದಿ ಮಿರರ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅವರು ಹೊಸದಾಗಿ ಅಡುಗೆ ಮಾಡಿಸುವ ಬದಲಿಗೆ ತಮ್ಮ ಆಹಾರವನ್ನು ತಾವೇ ತೆಗೆದುಕೊಂಡು ಬರಲು ಮದುವೆಗೆ ಬರುವ ಅತಿಥಿಗಳಿಗೆ ಹೇಳಿದ್ದರು.
ಇಷ್ಟೇ ಅಲ್ಲದೆ ಹೊಸದಾಗಿ ಗಿಫ್ಟ್ ಗಳನ್ನು ಖರೀದಿಸಿ ತರುವ ಬದಲಿಗೆ ಚಾರಿಟಿ ಅಂಗಡಿಗಳಿಂದ ಸೆಕೆಂಡ್ ಹ್ಯಾಂಡ್ ಸರಕುಗಳನ್ನು ಖರೀದಿಸಲು ಸ್ನೇಹಿತರನ್ನು ಕೇಳಿದರು. ಈ ಮದುವೆಗೆ ಒಟ್ಟು 25 ಅತಿಥಿಗಳನ್ನು ಮಾತ್ರವೇ ಆಹ್ವಾನಿಸಲಾಗಿತ್ತು.
ಇದನ್ನೂ ಓದಿ:Weird Marriage: ಈ ಹಳ್ಳಿಯಲ್ಲಿ ವಧು ವರರಿಗೆ ಕೆಸರು ಎರಚುವಂತಹ ಶಾಸ್ತ್ರವಿದ್ಯಂತೆ, ಇದು ಇವರ ಸಂಪ್ರದಾಯ!
ತುಂಬಾನೇ ಪಾಕೆಟ್ ಸ್ನೇಹಿಯಾಗಿತ್ತು ಇವರ ಮದುವೆ ಸಮಾರಂಭ..
ಈ ದಂಪತಿಗಳು ಇಷ್ಟಕ್ಕೇ ಸುಮ್ಮನಾಗಲಿಲ್ಲ, ತಮ್ಮ ಮದುವೆಯನ್ನು ಇನ್ನೂ ಹೆಚ್ಚು ಪಾಕೆಟ್ ಸ್ನೇಹಿಯಾಗಿಸಲು ಇತರ ಮಾರ್ಗಗಳನ್ನು ಆರಿಸಿಕೊಂಡರು.
ವರನ ಮತ್ತು ವಧುವಿನ ಕಡೆಯವರು ತಮ್ಮದೇ ಆದ ಉಡುಪುಗಳನ್ನು ತಾವೇ ಖರೀದಿಸಿದರು ಮತ್ತು ದಂಪತಿಗಳು ಅಲಂಕಾರ ಕಾರ್ಯಕ್ಕಾಗಿ ತಮ್ಮ ಸಮುದಾಯದಿಂದ ಆಯ್ಕೆ ಮಾಡಿದ ವೈಲ್ಡ್ ಫ್ಲವರ್ ಗಳನ್ನು ಆಯ್ಕೆ ಮಾಡಿದರು.
ಮದುವೆ ಸಮಾರಂಭದಲ್ಲಿ ಅನೇಕ ಅಗತ್ಯ ಕಾರ್ಯಗಳನ್ನು ನಿರ್ವಹಿಸಲು ಅವರು ತಮ್ಮ ಸ್ನೇಹಿತರನ್ನು ಸಹ ನೇಮಿಸಿಕೊಂಡರು. ಛಾಯಾಗ್ರಹಣ, ಮದುವೆಯ ಚಿತ್ರೀಕರಣದಿಂದ ಹಿಡಿದು ಕೇಕ್ ತಯಾರಿಸುವವರೆಗೂ, ಈ ಕಾರ್ಯಗಳನ್ನು ದಂಪತಿಗಳ ಸ್ನೇಹಿತರು ಚೆನ್ನಾಗಿ ನಿರ್ವಹಿಸಿದರು.
ಏನ್ ಹೇಳಿದ್ರು ಶೆಲ್ಬಿ ತಮ್ಮ ಮದುವೆಯ ಬಗ್ಗೆ?
ಈ ಮದುವೆ ಸಮಾರಂಭವು ಎಷ್ಟು ಸುಗಮವಾಗಿ ನಡೆಯಿತು ಎಂಬುದರ ಬಗ್ಗೆ ಶೆಲ್ಬಿ ತುಂಬಾನೇ ಖುಷಿ ಪಟ್ಟಿದ್ದಾರೆ ಮತ್ತು ದಿ ಮಿರರ್ ಗೆ ನೀಡಿದ ಸಂದರ್ಶನದಲ್ಲಿ ಅದರ ಬಗ್ಗೆ ಮಾತನಾಡಿದರು.
ಪ್ರತಿಯೊಬ್ಬರೂ ಉತ್ತಮ ಸಮಯವನ್ನು ಕಳೆದರು ಮತ್ತು ಅದನ್ನು ಪರಿಪೂರ್ಣವಾಗಿಸಲು ಸಾವಿರ ರೂಪಾಯಿಗಳನ್ನು ಖರ್ಚು ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಇಡೀ ಮದುವೆ ಸಮಾರಂಭವನ್ನು ಆಯೋಜಿಸಲು ಐದು ನಿಮಿಷಗಳನ್ನು ತೆಗೆದುಕೊಂಡಿತು ಮತ್ತು ದೀಪೋತ್ಸವ ಆಚರಣೆಯೊಂದಿಗೆ ಕೊನೆಗೊಂಡಿತು ಎಂದು ಅವರು ಹೇಳಿದರು.
ಇವರಿಬ್ಬರು ಫೆಬ್ರವರಿ 2017 ರಲ್ಲಿ ಟಿಂಡರ್ ನಲ್ಲಿ ಭೇಟಿಯಾಗಿದ್ದರು. ಅದರ ನಂತರ ಶೆಲ್ಬಿ, ಗಾರ್ರೆಟ್ ಅವರನ್ನು ಭೇಟಿಯಾಗಲು ಒಂದೂವರೆ ಗಂಟೆ ಡ್ರೈವ್ ಮಾಡಿಕೊಂಡು ಹೋದರು ಮತ್ತು ಇದು ಅತ್ಯುತ್ತಮ ಮೊದಲ ಡೇಟಿಂಗ್ ಎಂದು ಅವರು ನೆನಪಿಸಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ