ವಿಶ್ವದ ಕುರೂಪಿ ನಾಯಿ ಎಂದು ಖ್ಯಾತಿ ಪಡೆದ 'ಝ್ಯಾಸಾ' ಸಾವು

news18
Updated:July 12, 2018, 5:16 PM IST
ವಿಶ್ವದ ಕುರೂಪಿ ನಾಯಿ ಎಂದು ಖ್ಯಾತಿ ಪಡೆದ 'ಝ್ಯಾಸಾ' ಸಾವು
news18
Updated: July 12, 2018, 5:16 PM IST
ನ್ಯೂಸ್ 18 ಕನ್ನಡ

ವಿಶ್ವದ ಕುರೂಪಿ ನಾಯಿ ಎಂದು ಖ್ಯಾತಿ ಪಡೆದಿದ್ದ ಇಂಗ್ಲಿಷ್ ಬುಲ್​ಡಾಗ್ ಝ್ಯಾಸಾ ಝ್ಯಾಸಾ( Zsa Zsa) ಮಂಗಳವಾರ ಕೊನೆಯುಸಿರೆಳೆದಿದೆ. ತನ್ನ ಮುದ್ದಿನ ನಾಯಿ ತೀರಿಕೊಂಡಿರುವ ಬಗ್ಗೆ ಮಾಲಕಿ ಮೇಗನ್ ಬ್ರೈನಾರ್ಡ್​ ಫೇಸ್​ಬುಕ್​ನಲ್ಲಿ ಸಂತಾಪ ಸೂಚಿಸಿದ್ದಾರೆ. 9 ವರ್ಷದ ಝ್ಯಾಸಾ ಗೆ ಯಾವುದೇ ರೀತಿಯ ಅನಾರೋಗ್ಯದ ಸಮಸ್ಯೆ ಇರಲಿಲ್ಲ. ಆದರೆ ಮಂಗಳವಾರ ಬೆಳಿಗ್ಗೆ ನೋಡಿದಾಗ ಉಸಿರಾಟ ನಿಲ್ಲಿಸಿದೆ ಎಂದು ಅವರು ತಿಳಿಸಿದ್ದಾರೆ.

ತಂದೆಯ ಮನೆಯಲ್ಲೇ ಬೆಳೆದಿದ್ದ ಝ್ಯಾಸಾ ಝ್ಯಾಸಾ( Zsa Zsa) ಇದ್ದಕ್ಕಿದ್ದಂತೆ ತೀರಿಕೊಂಡಿರುವುದು ತನ್ನನ್ನು ಆಘಾತಕ್ಕೀಡು ಮಾಡಿದೆ ಎಂದು ಶ್ವಾನ ಪ್ರಿಯೆ ಮೇಗನ್ ಹೇಳಿದ್ದಾರೆ.2018ರ ವಿಶ್ವದ  ಕುರೂಪಿ ಶ್ವಾನ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಝ್ಯಾಸಾ ಝ್ಯಾಸಾ( Zsa Zsa) ಪಡೆದುಕೊಂಡಿತ್ತು.

ಉತ್ತರ ಕ್ಯಾಲಿಫೋರ್ನಿಯಾದ ಪೆಟ್ಲುಮಾದಲ್ಲಿ ನಡೆದಿರುವ  ಈ ಸ್ಪರ್ಧೆಯಲ್ಲಿ ಇಂಗ್ಲಿಷ್​ ಬುಲ್​ಡಾಗ್​ ಝ್ಯಾಸಾ ಅತ್ಯಂತ ಕುರೂಪಿ ನಾಯಿ ಎಂಬ ಪಟ್ಟ ತನ್ನದಾಗಿಸಿಕೊಂಡಿತ್ತು. ಜೊತೆಗೆ ಮೊದಲನೇ ಬಹುಮಾನವಾಗಿ 1,500 (ಸುಮಾರು 70 ಸಾವಿರ ರೂಪಾಯಿ) ಡಾಲರ್​ ಅನ್ನು ಪಡೆದಿತ್ತು.


Loading...

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮೇಗನ್ ತನ್ನ ಮುದ್ದಿನ ನಾಯಿಯೊಂದಿಗೆ 30 ಗಂಟೆಗಳ ದೀರ್ಘ ಪ್ರಯಾಣ ಮಾಡಿದ್ದರು. ಝ್ಯಾಸಾನಲ್ಲಿ ನಾವು ಸೌಂದರ್ಯವನ್ನು ಮಾತ್ರ ಕಾಣುತ್ತೇವೆ. ಈ ನಾಯಿಯನ್ನು ಶಾಶ್ವತವಾಗಿ ಮನೆಯಲ್ಲಿ ಇರಿಸಿಕೊಳ್ಳಲು ಬಯಸುತ್ತೇವೆ ಎಂದು ಸ್ಪರ್ಧೆಯ ಬಳಿಕ ಮೇಗನ್ ಹೇಳಿದ್ದರು.

ವೆಬ್​ಸೈಟ್​ ಒಂದರಲ್ಲಿ ನೋಡಿದ್ದ ಈ ನಾಯಿಯನ್ನು ಮಿಸೌರಿಯ ಶ್ವಾನ ಕೇಂದ್ರದಿಂದ ಮೇಗನ್ ಅವರು ಖರೀದಿಸಿದ್ದರು. ಅಲ್ಲದೆ ಹಂಗೇರಿಯಾದ ಹೆಸರಾಂತ ನಟಿ ಝ್ಯಾಸಾ  ಗ್ಯಾಬಾರ್ ಅವರ ಹೆಸರಿನ ಮೊದಲ ಪದವನ್ನು ತನ್ನ ಮುದ್ದಿನ ನಾಯಿಗೆ ನಾಮಕರಣ ಮಾಡಿದ್ದರು.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...