ಒಂದು ಮೀನಿನ ಬೆಲೆ 21 ಕೋಟಿ: ಅಚ್ಚರಿಯಾದರೂ ಇದು ಸತ್ಯ..!

2020 ರಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್​ಗಾಗಿ ಹಳೆಯ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ.

zahir | news18
Updated:January 6, 2019, 9:43 PM IST
ಒಂದು ಮೀನಿನ ಬೆಲೆ 21 ಕೋಟಿ: ಅಚ್ಚರಿಯಾದರೂ ಇದು ಸತ್ಯ..!
@AFP
  • News18
  • Last Updated: January 6, 2019, 9:43 PM IST
  • Share this:
ಒಂದು ಮೀನು ಅಬ್ಬಬ್ಬಾ ಎಂದರೆ ಎಷ್ಟು ಬೆಲೆಗೆ ಹರಾಜಗಬಹುದು? ಸಾವಿರ, ಇಲ್ಲ ಒಂದು ಲಕ್ಷ ಅಥವಾ 10 ಲಕ್ಷ? ಊಹೂಂ...ಅಚ್ಚರಿ ಎಂಬಂತೆ 21 ಕೋಟಿ ರೂ.ಗೆ ಮೀನೊಂದು ಮೀನು ಹರಾಜಾಗಿದೆ. ಜಪಾನ್​ನಲ್ಲಿ ಇತ್ತೀಚೆಗಷ್ಟೇ ನಡೆದ ಹೊಸ ವರ್ಷದ ಮೊದಲ ಹರಾಜು ಪ್ರಕ್ರಿಯೆಯಲ್ಲಿ 278 ಕೆ.ಜಿಯ ತೂನಾ ಮೀನು 336.6 ಮಿಲಿಯನ್ ಯೆನ್(21 ಕೋಟಿ ರೂ.)ಗೆ ಮಾರಾಟವಾಗಿದೆ.

ಈ ಮೀನನ್ನು ದುಬಾರಿ ಬೆಲೆಗೆ ಕೊಂಡುಕೊಂಡಿದ್ದು ಕಿಯೋರಾ ಕಾರ್ಪೊರೇಶನ್ ಸಂಸ್ಥೆಯ  ಮಾಲೀಕ ಕೀಯೋಶಿ ಕಿಮುರಾ. ಅಪಾಯ ಅಂಚಿನಲ್ಲಿರುವ ಈ ವಿಶೇಷ ಮೀನಿನ ಗುಣಮಟ್ಟವು ಅತ್ಯುತ್ತಮವಾಗಿದ್ದರಿಂದ ಇದನ್ನು ಎಷ್ಟೇ ಹಣ ನೀಡಿಯಾದರೂ ಕೊಳ್ಳಲು ನಿರ್ಧರಿಸಿದ್ದೆ ಎಂದು ಕಿಮುರಾ ತಿಳಿಸಿದ್ದಾರೆ.

2013ರಲ್ಲಿ ಇದೇ ತ್ಸುಕಿಜಿ ಮೀನು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮೀನೊಂದು ಮಾರಾಟವಾಗಿ ಸಾಕಷ್ಟು ಸುದ್ದಿಯಾಗಿತ್ತು. ತ್ಸುಕಿಜಿ ಮೀನು ಮಾರುಕಟ್ಟೆ ವಿಶ್ವದ ಅತೀ ದೊಡ್ಡ ಫಿಶ್ ಮಾರುಕಟ್ಟೆಯಾಗಿದ್ದು, ಇತ್ತೀಚೆಗೆ ಇದನ್ನು ಹೊಸ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ ಇನ್ನೂ ಕೂಡ ಕೆಲವೊಂದು ಸ್ಟಾಲ್​ಗಳು ಇಲ್ಲಿದ್ದು, ಮರೆಯಾಗಲಿರುವ ಮಾರುಕಟ್ಟೆಗೆ ಗತವೈಭವವನ್ನು ತಿಳಿಸುವಂತೆ ಇದೀಗ ವಿಶ್ವ ದಾಖಲೆ ಬೆಲೆಗೆ ಮೀನು ಮಾರಾಟವಾಗಿದೆ.

ಇದನ್ನೂ ಓದಿ: ರಿಷಭ್ ಪಂತ್ ಮತ್ತೊಬ್ಬ ಗಿಲ್​ಕ್ರಿಸ್ಟ್​: ಲೆಜೆಂಡ್​ ಆಟಗಾರನಿಂದ ಪ್ರಶಂಸೆ

2020 ರಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್​ಗಾಗಿ ಹಳೆಯ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ. ತ್ಸುಕಿಜಿ ಮಾರುಕಟ್ಟೆ ಜಾಗದಲ್ಲಿ ಒಲಿಂಪಿಕ್ಸ್​ ಸಂದರ್ಭದಲ್ಲಿ ವಾಹನಗಳಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಅಪಹಾಸ್ಯ ವೀಡಿಯೊ ಹಾಕಿ ಜೈಲು ಸೇರಿದ ಯುವಕ

ಈ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ವರ್ಷದ ಮೊದಲ ಮತ್ತು ಕೊನೆಯ ಹರಾಜು ಇದಾಗಿದೆ ಎಂದು ಹೇಳಲಾಗಿದ್ದು, ಈ ಕಾರಣದಿಂದ ಮೀನಿನ ಹರಾಜಿನಲ್ಲಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಆದರೆ ಎಲ್ಲರನ್ನು ಹಿಂದಿಕ್ಕಿ ಉದ್ಯಮಿ ಕೀಯೋಶಿ ಕಿಮುರಾ 21 ಕೋಟಿಗೆ ಒಂದು ಮೀನನ್ನು ತನ್ನದಾಗಿಸಿಕೊಂಡರು.ಇದನ್ನೂ ಓದಿ: ಚಾಲನಾ ಪರವಾನಗಿ-ಆಧಾರ್ ಜೋಡಣೆ: ಶೀಘ್ರದಲ್ಲೇ ಜಾರಿಯಾಗಲಿದೆ ಹೊಸ ನಿಯಮ

First published:January 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ