ವಿಶ್ವದ ದುಬಾರಿ ಶೂ: ಬೆಲೆ ಕೇಳಿದ್ರೆ ಶಾಕ್ ಆಗ್ತೀರ !

news18
Updated:September 29, 2018, 1:01 PM IST
ವಿಶ್ವದ ದುಬಾರಿ ಶೂ: ಬೆಲೆ ಕೇಳಿದ್ರೆ ಶಾಕ್ ಆಗ್ತೀರ !
@jadadubai
  • Advertorial
  • Last Updated: September 29, 2018, 1:01 PM IST
  • Share this:
-ನ್ಯೂಸ್ 18 ಕನ್ನಡ

ಫ್ಯಾಷನ್​ ಲೋಕ ಸದಾ ಸುದ್ದಿಯಲ್ಲಿರುತ್ತದೆ. ಕೆಲ ಬಾರಿ ವಿನ್ಯಾಸಗಳಿಂದ ಸದ್ದು ಮಾಡಿದರೆ, ಮತ್ತೆ ಕೆಲವೊಮ್ಮೆ ದುಬಾರಿ ಬೆಲೆಯಿಂದ ಗದ್ದಲ ಮಾಡಿರುತ್ತದೆ. ಇದೀಗ ಶೂವೊಂದು ತನ್ನ ದುಬಾರಿ ಬೆಲೆಯಿಂದ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ಹೌದು, ವಿಶ್ವದ ಅತಿ ದುಬಾತಿ ಪಾದರಕ್ಷೆ ಎಂಬ ಖ್ಯಾತಿಯ ಶೂಗಳು ದುಬೈನಲ್ಲಿ ಮಾರಾಟಕ್ಕಿಡಲಾಗಿದೆ. ಇದರ ಬೆಲೆ 17 ಮಿಲಿಯನ್ ಅಮೆರಿಕನ್ ಡಾಲರ್. ಅಂದರೆ ಬರೋಬ್ಬರಿ 123 ಕೋಟಿ ರೂಪಾಯಿಗಳು.
 


Loading...View this post on Instagram
 

Diamonds, gold.


A post shared by JADA DUBAI (@jadadubai) on

ಈ ಶೂಗಳ ವಿಶೇಷ ಏನಪ್ಪಾ ಅಂದರೆ ಇದನ್ನು ಬಂಗಾರ ಹಾಗೂ ಡೈಮಂಡ್​ಗಳಿಂದ ವಿನ್ಯಾಸಗೊಳಿಸಲಾಗಿದೆ. ಈ ದುಬಾರಿ ಶೂಗಳನ್ನು ತಯಾರಿಸಲು ಬರೋಬ್ಬರಿ 9 ತಿಂಗಳು ತೆಗೆದುಕೊಳ್ಳಲಾಗಿತ್ತು. 15 ಕ್ಯಾರೆಟ್​ನ ನೂರಾರು ವಜ್ರಗಳನ್ನು ಮತ್ತು ಚಿನ್ನವನ್ನು ಬಳಸಿ ಈ ಶೂಗಳನ್ನು ವಿನ್ಯಾಸಗೊಳಿಸಲಾಗಿದೆ. 
View this post on Instagram
 

Diamonds, gold. The Passion Diamond Shoes.


A post shared by JADA DUBAI (@jadadubai) on

ಯುಎಇ ಮೂಲದ ಜಡಾ ದುಬೈ ಬ್ರಾಂಡ್ ಮತ್ತು ಪ್ಯಾಷನ್ ಜ್ಯುವೆಲ್ಲರ್ಸ್​ ಸಹಯೋಗದಲ್ಲಿ ಈ ಐಷಾರಾಮಿ ಶೂಗಳನ್ನು ತಯಾರಿಸಲಾಗಿದ್ದು, ಇದನ್ನು ವಿಶ್ವ ವಿಖ್ಯಾತ ಹೊಟೇಲ್ ಬುರ್ಜ್ ಅಲ್ ಅರಬ್​ನಲ್ಲಿ ಇಡಲಾಗಿದೆ.

ಜಡಾ ದುಬೈ ಬ್ರಾಂಡ್ ಮಾತ್ರ ವಿಶ್ವದಲ್ಲೇ ವಜ್ರಗಳನ್ನು ಬಳಸಿ ಶೂ ವಿನ್ಯಾಸಗೊಳಿಸಿದೆ. ಅಪರೂಪದ ವಜ್ರಗಳನ್ನು ಬಳಸಿಕೊಂಡು ಜಗತ್ತಿನಲ್ಲೇ ದುಬಾರಿ ಶೂಗಳನ್ನು ಸೃಷ್ಟಿಸಲು ನಾವು ಬಯಸಿದ್ದೇವು. ಹೀಗಾಗಿ ಇಂತಹದೊಂದು ಶೂ ನಮ್ಮ ಸಂಸ್ಥೆಯಿಂದ ಮೂಡಿಬಂದಿದೆ ಎಂದು ಜಡಾ ಕಂಪನಿಯ ಸಂಸ್ಥಾಪಕ ಮರಿಯಾ ಮಜರಿ ತಿಳಿಸಿದ್ದಾರೆ.
First published:September 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...