• Home
  • »
  • News
  • »
  • trend
  • »
  • Viral Video: ಈ ಒಂಟೆಯ ಬೆಲೆ 14 ಕೋಟಿ! ಅಬ್ಬಾ, ಅಷ್ಟೊಂದು ಬೆಲೆ ನೀಡಿ ಖರೀದಿಸಿದ ಪುಣ್ಯಾತ್ಮ ಯಾರು?

Viral Video: ಈ ಒಂಟೆಯ ಬೆಲೆ 14 ಕೋಟಿ! ಅಬ್ಬಾ, ಅಷ್ಟೊಂದು ಬೆಲೆ ನೀಡಿ ಖರೀದಿಸಿದ ಪುಣ್ಯಾತ್ಮ ಯಾರು?

ಒಂಟೆ

ಒಂಟೆ

Video Viral: ಕೆಲವರು ಒಂದು ವಸ್ತುವನ್ನು ಕಂಡಾಗ ಅದು ಬೇಕು ಎಂದು ಅನಿಸಿದರೆ ಸಾಕು, ಎಷ್ಟಾದರು ಹಣ ನೀಡಿ ಖರೀದಿಸುತ್ತಾರೆ ಇನ್ನು ಹಣವಂತರ ಬಗ್ಗೆ ಹೇಳಬೇಕಾಗಿಲ್ಲ. ಒಂದು ಬಾರಿ ಇಷ್ಟಪಟ್ಟರೆ ಮುಗೀತು. ಅದು ಅವರ ಕೈ ಸೇರುವವರೆಗೆ ಬಿಡುವುದಿಲ್ಲ.

  • Share this:

    ದುಬಾರಿ ಬೆಲೆ ನೀಡಿ ಕಾರು (Car) ಖರೀದಿಸಿದವರ ಬಗ್ಗೆ ಕೇಳಿರಬಹುದು. ದುಬಾರಿ ಬೆಲೆ ನೀಡಿ ವಾಹನಕ್ಕೆ ಫ್ಯಾನ್ಸಿ ನಂಬರ್​ ಹಾಕಿಸಿರುವುದರ ಬಗ್ಗೆಯೂ ಗೊತ್ತಿರಬಹುದು. ಅಷ್ಟೇ ಏಕೆ ದುಬಾರಿ ಹಣ ನೀಡಿ ನಾಯಿ, ಬೆಕ್ಕು ಖರೀದಿಸುವವರೂ ಇದ್ದಾರೆ. ಅದರಂತೆಯೇ ಇಲ್ಲೊಂದು ದುಬಾರಿ ಒಂಟೆ ಇದೆ. ಇದರ ಬೆಲೆ 14 ಕೋಟಿ ರೂಪಾಯಿ. ಅಂದಹಾಗೆಯೇ ಇಷ್ಟೊಂದು ಬೆಲೆಗೆ ದುಬಾರಿ ಸೈಟ್​, ಮನೆ, ಕಾರು ಖರೀದಿಸಬಹುದು. ಆದರೆ ಈ ಒಂಟೆಗೆ ಅಷ್ಟೊಂದು ಬೆಲೆ ಏಕೆ? ಅಷ್ಟೊಂದು ಬೆಲೆ ನೀಡಿ ಖರೀದಿಸುವವರೂ ಇದ್ದಾರೆಯೇ? ತಿಳಿಯೋಣ..  


    ಕೆಲವರು ಒಂದು ವಸ್ತುವನ್ನು ಕಂಡಾಗ ಅದು ಬೇಕು ಎಂದು ಅನಿಸಿದರೆ ಸಾಕು, ಎಷ್ಟಾದರು ಹಣ ನೀಡಿ ಖರೀದಿಸುತ್ತಾರೆ ಇನ್ನು ಹಣವಂತರ ಬಗ್ಗೆ ಹೇಳಬೇಕಾಗಿಲ್ಲ. ಒಂದು ಬಾರಿ ಇಷ್ಟಪಟ್ಟರೆ ಮುಗೀತು. ಅದು ಅವರ ಕೈ ಸೇರುವವರೆಗೆ ಬಿಡುವುದಿಲ್ಲ. ಆದರೆ ಇಲ್ಲಿ ನಡೆಯುತ್ತಿರುವುದು ಹರಾಜು ಪ್ರಕ್ರಿಯೆ. ಹಾಗಾಗಿ ಈ ಪ್ರಕ್ರಿಯೆಯಲ್ಲಿ ಒಂಟೆಯೊಂದರ ಬಲೆ 14 ಕೋಟಿ ಎಂಬುದು ವಿಡಿಯೋದ ಮೂಲಕ ತಿಳಿದುಬಂದಿದೆ.


    ಅಂದಹಾಗೆಯೇ ಈ ಒಂಟೆಯ ಬೆಲೆಗೆ ನೀವು ಬೆರಗಾಗುವುದು ಮಾತ್ರವಲ್ಲ, ಈ ಒಂಟೆಯ ವಿಶೇಷತೆ ಏನು ಎಂದು ನೀವು ಆಶ್ಚರ್ಯ ಪಡುತ್ತೀರಿ. ಸೌದಿ ಅರೇಬಿಯಾದಲ್ಲಿ ಒಂಟೆಯನ್ನು ತುಂಬಾ ದುಬಾರಿಯಾಗಿ ಮಾರಾಟ ಮಾಡಲಾಗಿದೆ, ಅದು ಈಗ ವಿಶ್ವದ ಅತ್ಯಂತ ಬೆಲೆಬಾಳುವ ಒಂಟೆ ಎಂದು ಹೇಳಲಾಗುತ್ತದೆ. ಈ ಒಂಟೆಯನ್ನು ಖರೀದಿಸಲು ವ್ಯಕ್ತಿಯೊಬ್ಬರು 7 ಮಿಲಿಯನ್ ಸೌದಿ ರಿಯಾಲ್ (ಸುಮಾರು 14 ಕೋಟಿ 23 ಲಕ್ಷ ರೂಪಾಯಿ) ಪಾವತಿಸಿದ್ದಾರೆ.


    ಇದನ್ನೂ ಓದಿ: Made in India: ಒಂದೇ ಒಂದು ಹನಿ ಪೆಟ್ರೋಲ್​​ ಬಳಸದೆ ಚಲಿಸುತ್ತೆ ಈ ಸೂಪರ್​ ಬೈಕ್​! 3 ಸೆಕೆಂಡ್ಸ್​​ನಲ್ಲಿ 100 Kmph ಸ್ಪೀಡ್​ ತೆಗೆದುಕೊಳ್ಳುತ್ತೆ!


    ಗಲ್ಫ್ ನ್ಯೂಸ್ ಪ್ರಕಾರ, ಸೌದಿ ಅರೇಬಿಯಾದಲ್ಲಿ ಒಂಟೆಗಳಿಗೆ ವಿಶೇಷ ಬೇಡಿಕೆ. ಹಾಗಾಗಿ ಇಲ್ಲಿ ಒಂಟೆಗಳ ಮಾರಾಟ ನಡೆಯುತ್ತಿರುತ್ತದೆ. ಸಾರ್ವಜನಿಕವಾಗಿ ಹರಾಜು ನಡೆಸುತ್ತಾರೆ. ಅದರಂತೆಯೇ ವಿಡಿಯೋವೊಂದು ಟ್ವಿಟ್ಟರ್(Twitter)​ನಲ್ಲಿ ವೈರಲ್​ ಆಗಿದ್ದು, ಸೌದಿ ಅರೇಬಿಯಾದ ಒಂಟೆಗಳ ಹರಾಜು ನಡೆದಿದೆ. ಇದರಲ್ಲಿ ಜನರು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ್ದಾರೆ. ಒಬ್ಬ ವ್ಯಕ್ತಿ ಮೈಕ್ರೊಫೋನ್ ಮೂಲಕ ಒಂಟೆ ಹರಾಜಿಗೆ ಹರಾಜು ಹಾಕುತ್ತಿರುವುದನ್ನು ಕಾಣಬಹುದು. ಹರಾಜಿನಲ್ಲಿ ಒಂಟೆಯನ್ನು ಆರಂಭದಲ್ಲಿ ಸುಮಾರು 10 ಕೋಟಿ 60 ಲಕ್ಷ ರೂ.ಗೆ ಬೆಲೆಯಿತ್ತು. ನಂತರ ಅದನ್ನು 14 ಕೋಟಿ 23 ಲಕ್ಷಕ್ಕೆ ಖರೀದಿಸಲಾಯಿತು. ಇಷ್ಟು ಮೊತ್ತಕ್ಕೆ ಒಂಟೆಯನ್ನು ಖರೀದಿಸಿದವರು ಯಾರು ಎಂಬುದನ್ನು ವಿಡಿಯೋ ಬಹಿರಂಗಪಡಿಸಿಲ್ಲ.



    ಇದನ್ನೂ ಓದಿ: Prisoners: ಪುಸ್ತಕ ಓದೋ ಖೈದಿಗಳಿಗೆ ಜೈಲಿನಿಂದ ಬೇಗ ಮುಕ್ತಿ! ಇಂಥಾ ಆಫರ್ ಎಲ್ಲೂ ಸಿಗಲ್ಲ ನೋಡಿ


    ಇಷ್ಟು ದುಬಾರಿ ಬೆಲೆಗೆ ಮಾರಾಟವಾದ ಈ ಒಂಟೆ ವಿಶ್ವದ ಅಪರೂಪದ ಒಂಟೆ ಜಾತಿಗಳಲ್ಲಿ ಒಂದಾಗಿದೆ. ಈ ಒಂಟೆಯ ಸೌಂದರ್ಯ ಮತ್ತು ವಿಶಿಷ್ಟತೆಯು ಪ್ರಪಂಚದಾದ್ಯಂತ ತಿಳಿದಿದೆ. ಏಕೆಂದರೆ ಈ ಜಾತಿಯ ಒಂಟೆಗಳು ಜಗತ್ತಿನಲ್ಲಿ ಅಪರೂಪವಾಗಿ ಕಂಡುಬರುತ್ತವೆ. ಸೌದಿ ಅರೇಬಿಯಾವನ್ನು ಒಂಟೆ ಮಾರುಕಟ್ಟೆ ತುಂಬಿಸುತ್ತದೆ. ಒಂಟೆ 14.23 ಕೋಟಿ ರೂ.ಗೆ ಮಾರಾಟವಾಗಿದೆ.

    Published by:Harshith AS
    First published: