• Home
  • »
  • News
  • »
  • trend
  • »
  • Largest Rail: ಇದು ವಿಶ್ವದ ಅತಿ ಉದ್ದದ ಪ್ಯಾಸೆಂಜರ್ ರೈಲು: ಹೊಸ ದಾಖಲೆ ಬರೆದ ಸ್ವಿಸ್‌ನ ರೇಟಿಯನ್‌ ಕಂಪನಿ

Largest Rail: ಇದು ವಿಶ್ವದ ಅತಿ ಉದ್ದದ ಪ್ಯಾಸೆಂಜರ್ ರೈಲು: ಹೊಸ ದಾಖಲೆ ಬರೆದ ಸ್ವಿಸ್‌ನ ರೇಟಿಯನ್‌ ಕಂಪನಿ

ರೈಲು

ರೈಲು

1990 ರ ದಶಕದಿಂದ ಈವರೆಗೆ ಬೆಲ್ಜಿಯಂನ ರೈಲು ಅತಿ ಉದ್ದದ ಪ್ರಯಾಣಿಕ ರೈಲು ಎನಿಸಿಕೊಂಡಿತ್ತು, ಆದರೆ ಪ್ರಸ್ತುತ 1.9 ಕಿ.ಮೀ ಹೊಂದಿರುವ ಸ್ವಿಸ್‌ ರೈಲು ಈ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದೆ

  • News18 Kannada
  • Last Updated :
  • New Delhi, India
  • Share this:

ಈ ರೈಲು ಸಂಚಾರ ಎನ್ನುವುದು ಒಂದು ವಿಶೇಷ ಅನುಭವ (Experience). ಪ್ರಕೃತಿಯ ಮಡಿಲಿನಲ್ಲಿ, ಕಣಿವೆ ಅಂಚಿನಲ್ಲಿ, ಸುರಂಗದ ಒಳಗೆ ಹೀಗೆ ಅದು ಸಾಗುವ ಹಾದಿ ಅತ್ಯದ್ಭುತವಾಗಿರುತ್ತದೆ. ವಾಸ್ತವದಲ್ಲಿ (Reality) ರೈಲುಗಳು ಹಲವು "ಮೊದಲ" ದಾಖಲೆಗಳಿಗೂ ಸಹ ಭಾಜನವಾಗಿವೆ. ದೇಶ, ವಿದೇಶಗಳಲ್ಲಿ ರೈಲು (Rail) ವಿಶ್ವ ಪರಂಪರೆ ಪಟ್ಟಿಯಲ್ಲೂ ಸ್ಥಾನ ಪಡೆದಿವೆ. ಜಗತ್ತಿನ ಉದ್ದ ರೈಲು, ಸರಕು ರೈಲು, ಪ್ರಯಾಣಿಕರ ರೈಲು, ಸುಂದರ ರೈಲು ಹೀಗೆ ಅನೇಕ ವಿಭಾಗಗಳಲ್ಲಿ ರೈಲುಗಳು ತಮ್ಮದೇ ಗರಿಮೆಯನ್ನು ಪಡೆದಿವೆ.


ವಿಶ್ವದ ಅತಿ ಉದ್ದದ ಪ್ಯಾಸೆಂಜರ್ ರೈಲು
ರೈಲು ಅಂದರೆ ಅದು ಬೋಗಿಗಳ ಒಂದು ಉದ್ದನೆಯ ಸಾಲು. ಹೀಗೆ ಜಗತ್ತಿನಲ್ಲಿ ಕೂಡ ಒಂದು ಅತೀ ಉದ್ದದ ರೈಲು ಇದೆ. ಹೌದು, ಸ್ವಿಟ್ಜರ್ಲೆಂಡ್ ಈಗ ವಿಶ್ವದ ಅತಿ ಉದ್ದದ ಪ್ರಯಾಣಿಕ ರೈಲಿಗೆ ನೆಲೆಯಾಗಿದೆ. ಜಗತ್ತಿನ ಅತಿ ಉದ್ದದ ಪ್ರಯಾಣಿಕ ರೈಲಿನ ಖ್ಯಾತಿಗೆ ಸ್ವಿಜರ್‌ಲೆಂಡಿನ ರೇಟಿಯನ್‌ ಕಂಪನಿಯು ಭಾಜನವಾಗಿದ್ದು, ಇದು ಅಕ್ಟೋಬರ್ 29, 2022 ರಂದು ಯಶಸ್ವಿಯಾಗಿ ಸ್ವಿಸ್ ಅಲ್ಪ್ಸ್ ಪರ್ವತ ಶ್ರೇಣಿಯ ಮಾರ್ಗದಲ್ಲಿ ಪ್ರೇಡಾದಿಂದ ಬರ್ಗುಯೆನ್‌ಗೆ ಸಂಚರಿಸಿದ್ದು ವಿಶ್ವದಾಖಲೆಯನ್ನು ಬರೆದಿದೆ.


ವಿಶ್ವದಾದ್ಯಂತ ಹಲವು ಉದ್ದದ ಸರಕು ರೈಲುಗಳಿವೆ, ಆದರೆ ರೇಟಿಯನ್ ರೈಲ್ವೇ ಅತಿ ಉದ್ದದ ಪ್ರಯಾಣಿಕ ರೈಲಿಗಾಗಿ ವಿಶ್ವ ದಾಖಲೆಯನ್ನು ಬರೆದಿದೆ. ಸ್ವಿಟ್ಜರ್ಲೆಂಡ್‌ನ ರೈಲ್ವೆ ವ್ಯವಸ್ಥೆಯ 175 ನೇ ವಾರ್ಷಿಕೋತ್ಸದ ಸಂಭ್ರಮದಲ್ಲಿ ಇದನ್ನು ಘೋಷಿಸಲಾಯಿತು.


ಇದನ್ನೂ ಓದಿ: ಮಗಳಿಗಾಗಿ ತಂದೆ ಮಾಡಿದ ಕೆಲಸ ನೋಡಿ ʼಸೋ ಕ್ಯೂಟ್‌ʼ ಎಂದ ನೆಟ್ಟಿಗರು!


ದಾಖಲೆ ಮುರಿದ ಸ್ವಿಸ್‌ ರೈಲು
1990 ರ ದಶಕದಿಂದ ಈವರೆಗೆ ಬೆಲ್ಜಿಯಂನ ರೈಲು ಅತಿ ಉದ್ದದ ಪ್ರಯಾಣಿಕ ರೈಲು ಎನಿಸಿಕೊಂಡಿತ್ತು, ಆದರೆ ಪ್ರಸ್ತುತ 1.9 ಕಿ.ಮೀ ಹೊಂದಿರುವ ಸ್ವಿಸ್‌ ರೈಲು ಈ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದೆ. ಸೇತುವೆಗಳನ್ನು ದಾಟಿ ಸುರಂಗಗಳವರೆಗೆ ಹಲವಾರು ಸ್ಥಳಗಳಲ್ಲಿ ರೈಲನ್ನು ತೋರಿಸುವ ವೈಮಾನಿಕ ನೋಟವನ್ನು ಸ್ವಿಸ್ ಮಾಧ್ಯಮವು ಪ್ರಸಾರ ಮಾಡಿದೆ. ಪ್ಯಾಸೆಂಜರ್ ರೈಲು ಹಾದು ಹೋಗುವುದನ್ನು ಸ್ಥಳೀಯರು ಸಹ ವೀಕ್ಷಿಸಿದರು.


ರೈಲಿನಲ್ಲಿ ಎಷ್ಟು ಕೋಚ್‌, ಎಷ್ಟು ಸೀಟ್‌ ಇವೆ?
ರೇಟಿಯನ್‌ ಕಂಪನಿಯ ರೈಲು 1.9 ಕಿ.ಮೀ ಉದ್ದವಾಗಿದ್ದು, 100 ಬೋಗಿ, 4,550 ಆಸನಗಳನ್ನು ಒಳಗೊಂಡಿದೆ. ಈ ರೈಲು 22 ಸುರಂಗಗಳು ಹಾಗೂ 48 ಸೇತುವೆಗಳು ಹಾಗೂ ಪರ್ವತಗಳ ರಮಣೀಯ ಮಾರ್ಗದ ಮೂಲಕ ಸಾಗುತ್ತದೆ. ಇಡೀ ಪ್ರಯಾಣಕ್ಕೆ 1 ಗಂಟೆಯ ಅವಧಿ ತೆಗೆದುಕೊಳ್ಳುತ್ತದೆ. ಬರ್ನಿನಾ ಮಾರ್ಗವಾಗಿ ಸಂಚರಿಸುವ ರೇಟಿಯನ್‌ ರೈಲು ಈ ಹಿಂದೆ 2008ರಲ್ಲಿ ಅತ್ಯಂತ ಸುಂದರವಾದ ಮಾರ್ಗ ಎಂದು ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿತ್ತು.


ರೇಟಿಯನ್‌ ರೈಲ್ವೇ ಕಂಪನಿಯ ನಿರ್ದೇಶಕ, ರೆನಾಟೊ ಫ್ಯಾಸಿಯಾಟಿ, ಸ್ವಿಟ್ಜರ್ಲೆಂಡ್‌ನ ಕೆಲವು ಎಂಜಿನಿಯರಿಂಗ್ ಸಾಧನೆಗಳನ್ನು ಹೈಲೈಟ್ ಮಾಡಲು ಮತ್ತು ಸ್ವಿಸ್ ರೈಲ್ವೆಯ 175 ವರ್ಷಗಳನ್ನು ಗುರುತಿಸಲು ಈ ದಾಖಲೆಯನ್ನು ಯೋಜಿಸಲಾಗಿದೆ ಎಂದು ಹೇಳಿದರು. "ನನಗೆ, ಇದು ಕೇವಲ ಸ್ವಿಸ್ ಪರಿಪೂರ್ಣತೆಯಾಗಿದೆ" ಎಂದು ನಿರ್ದೇಶಕರು ಸ್ಥಳೀಯ ಪತ್ರಿಕೆಗಳಿಗೆ ತಿಳಿಸಿದರು.


ಅಕ್ಟೋಬರ್ 29, 2022 ರಂದು ರೈಲು ತನ್ನ ಪ್ರಯಾಣದಲ್ಲಿ 150 ಪ್ರಯಾಣಿಕರನ್ನು ಹೊತ್ತೊಯ್ದಿದೆ. ರೈಲು ಮುಂಭಾಗದಲ್ಲಿ "ಆಲ್ಪೈನ್ ಕ್ರೂಸ್" ಎಂದು ಓದುವ ಡಿಜಿಟಲ್ ಗಮ್ಯಸ್ಥಾನದ ಚಿಹ್ನೆಯನ್ನು ಹೊಂದಿದೆ. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಪಟ್ಟಿಮಾಡಲಾದ ಅದ್ಭುತವಾದ ಅಲ್ಬುಲಾ-ಬರ್ನಿನಾ ಮಾರ್ಗವಾಗಿ ಸಾಗಿತು.


ಹಲವು ಮುನ್ನೆಚ್ಚರಿಕೆ
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಡಿಪ್ಲೊಮಾವನ್ನು ಹೊಂದಿರುವ RhB ಮುಖ್ಯಸ್ಥರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದೀರ್ಘ ಪ್ರಯಾಣಿಕ ರೈಲು ಸುರಕ್ಷಿತವಾಗಿ ಪ್ರಯಾಣಿಸುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು. ಒಟ್ಟು 21 ತಂತ್ರಜ್ಞರು ಮತ್ತು ಏಳು ರೈಲು ಚಾಲಕರು ಎಲ್ಲಾ 25 ರೈಲುಗಳು ಒಂದೇ ಹಳಿಯಲ್ಲಿ ಸಾಗುವುದನ್ನು ಖಚಿತಪಡಿಸಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು. ಶ್ರೀಮಂತ ಆಲ್ಪೈನ್ ದೇಶದ ಮೊದಲ ರೈಲು ಸೇವೆಯು ಆಗಸ್ಟ್ 9, 1847ರಂದು ಪ್ರಾರಂಭವಾಗಿತ್ತು.

First published: