ವಿಶ್ವ ದಾಖಲೆ ಬರೆಯುವುದು ಸಾಮಾನ್ಯವಲ್ಲ. ಸಾಕಷ್ಟು ಪರಿಶ್ರಮ ಅದರ ಹಿಂದಿರುತ್ತದೆ. ವಿಶ್ವದಾದ್ಯಂತ ಅನೇಕರು ವಿಶ್ವ ದಾಖಲೆಯನ್ನು ಬರೆದವರಿದ್ದಾರೆ. ಒಬ್ಬೊಬ್ಬರು ಒಂದೊಂದು ವಿಚಾರಕ್ಕೆ ವಿಶ್ವ ದಾಖಲೆ ಮುಡಿಗೇರಿಸಿಕೊಂಡವರಿದ್ದಾರೆ. ಆದರಂತೆ ಇಲ್ಲೊಬ್ಬರು ಮಹಿಳೆ ತನ್ನ ಎರಡು ಕೈಗಳ ಉಗುರಿನಿಂದ ಗಿನ್ನೆಸ್ ವಲ್ಡ್ ರೆಕಾರ್ಡ್ ಪಡೆದಿದ್ದಾರೆ.
ಅಯನ್ನಾ ವಿಲಿಯಮ್ಸ್ ಎಂಬ ಮಹಿಳೆ ಎರಡು ಕೈಗಳ ಉಗುರು ಬೆಳಸುವ ಮೂಲಕ ಗಿನ್ನೆಸ್ ವಲ್ಡ್ ರೆಕಾರ್ಡ್ ಬರೆದಿದ್ದಾರೆ. ಅಷ್ಟಕ್ಕೂ ಆಕೆಯ ಕೈ ಉಗುರಿನ ಉದ್ದವೆಷ್ಟು ಗೊತ್ತಾ?. ಅಯಾನ್ನ ಮಿಲಿಯಮ್ಸ್ 576.4 ಸೆಂ.ಮೀ ನಷ್ಟು ಉದ್ದನೆಯ ಕೈ ಉಗುರನ್ನು ಬೆಳೆಸಿದ್ದಾರೆ. ಇದೇ ಕಾರಣಕ್ಕಾಗಿ ಆಕೆಯ ಗಿನ್ನೆಸ್ ದಾಖಲೆಯ ಪುಟ ಸೇರಿದ್ದಾರೆ.
ಅಯನ್ನಾ ವಿಲಿಯಮ್ಸ್ ಅಮೆರಿಕಾ ಮೂಲದವರಾಗಿದ್ದು, ಟೆಕ್ಸಾಸ್ನಲ್ಲಿ ವಾಸಿಸುತ್ತಿದ್ದಾರೆ. 23 ವರ್ಷಗಳೀಂದ ಕೈ ಉಗುರನ್ನು ಬೆಳೆಸಿದ್ದಾರೆ. 2018ರಲ್ಲಿ ಅಯಾನ್ನ ಅವರು ಗಿನ್ನೆಸ್ ರೆಕಾರ್ಡ್ ಸೇರ್ಪಡೆಯಾದರು. ಆ ಮೂಲಕ ಉದ್ದದ ಕೈ ಉಗುರನ್ನು ಬೆಳೆಸಿರುವ ಖ್ಯಾತಿಗೆ ಕಾರಣರಾದರು.
Ayanna Williams' nails have a combined total length of 576.4 cm (18 ft 10.9 in) 💅🏾🇺🇸 #LearnOnTikTok @tiktok_uk https://t.co/ZWy8iFDKqW pic.twitter.com/H7deK9OUqN
— GuinnessWorldRecords (@GWR) August 29, 2020
ಭಾರತೀಯ ಮೂಲದ ಶ್ರೀಧರ್ ಚಿಲ್ಲಾಲ್ ಕೂಡ ತನ್ನ ಎಡಗೈ ಉಗುರು ಬೆಳೆಸುವ ಮೂಲಕ ವಿಶ್ವದಾಖಲೆಯನ್ನು ಬರೆದಿದ್ದಾರೆ. ಬರೋಬ್ಬರಿ 66 ವರ್ಷಗಳ ಕಾಲ ಬೆಳೆಸಿದ್ದರು. ಕೊನೆಗೂ ಶ್ರೀಧರ್ ಅವರು 2018ರಲ್ಲಿ ಕತ್ತರಿ ಹಾಕಿದ್ದಾರೆ. ಆದರೂ ಅವರ ಉಗುರು ನಿಷ್ಪ್ರಯೋಜಕವಾಗಿಲ್ಲ. ಬದಲಾಗಿ ಈ ಉಗುರುಗಳು ನ್ಯೂಯಾರ್ಕ್ ಮ್ಯೂಸಿಯಂನಲ್ಲಿ ಇಡಲಾಗಿದೆ.
82 ವರ್ಷದ ಶ್ರೀಧರ್ ಅವರು ಕಳೆದ ಆರವತ್ತಾರು ವರ್ಷಗಳಿಂದ ಎಡಗೈ ಉಗುರುಗಳನ್ನು ಕತ್ತರಿಸಿರಲಿಲ್ಲ. ಹೀಗೆ ಬಿಟ್ಟಿದ್ದ ಉಗುರುಗಳು ಬೆಳೆಯುತ್ತಾ ಹೋಗಿದೆ. ಇತ್ತೀಚೆಗೆ ಇವುಗಳ ಅಳತೆ ತೆಗೆದಾಗ ಉಗುರುಗಳ ಒಟ್ಟು ಉದ್ದ 909.6cm (358.1 ಇಂಚುಗಳು) ಹೊಂದಿತ್ತು. ಅದರಲ್ಲಿ ಹೆಬ್ಬೆರಳ ಉಗುರಿನ ಉದ್ದ ಬರೋಬ್ಬರಿ 197.8cm (77.8 ಇಂಚುಗಳು).
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ