World’s Loneliest Tree: ಹವಾಮಾನ ಬದಲಾವಣೆ ಬಗ್ಗೆ ತಿಳಿಸಲಿದೆ 'ವಿಶ್ವದ ಏಕಾಂಗಿ ಮರ'!

ಏಕಾಂಗಿ ಮರ ಎಂದರೆ ಸುತ್ತ ಮುತ್ತ ಯಾವುದೇ ಮರ -ಗಿಡಗಳು ಒಂದು ಇಲ್ಲದೇ ಒಂದೇ ಮರ ಆ ಸ್ದಳದಲ್ಲಿರುವುದು ಆಗಿದೆ. ಈ ಮರವು ಹವಾಮಾನದಲ್ಲಿ ಆಗಾಗ ಬದಲಾಗುತ್ತಿರುವ ಹವಾಮಾನ ಬದಲಾವಣೆಯ ಬಗ್ಗೆ ಮಾಹಿತಿ ಕಲೆ ಹಾಕಲು ಸಹಾಯ ಮಾಡುತ್ತದೆ ಎಂದು ನ್ಯೂಜಿಲೆಂಡ್‌ ಸಂಶೋಧಕರ ತಂಡ ಕಂಡುಹಿಡಿದಿದೆ. ಈ ಮರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.

ವಿಶ್ವದ ಏಕಾಂಗಿ ಮರ

ವಿಶ್ವದ ಏಕಾಂಗಿ ಮರ

  • Share this:
ಈ ಪ್ರಪಂಚದಲ್ಲಿ (World) ವೈವಿಧ್ಯಮಯ ಸಸ್ಯಕುಲದ ಬಗ್ಗೆ ಒಂದಲ್ಲ ಒಂದು ಸಲ ಕೇಳಿಯೇ ಇರುತ್ತೆವೆ. ಮರ -ಗಿಡಗಳು ತಮ್ಮ ವಿಶಿಷ್ಟತೆ (Uniqueness) ಮತ್ತು ವೈವಿಧ್ಯತೆಯಿಂದ ಅನೇಕ ದಾಖಲೆಗಳನ್ನು ಬರೆದಿರುವ ವರದಿಗಳನ್ನು ಕೂಡ ಆಗಾಗ ಕೇಳುತ್ತಿರುತ್ತೆವೆ. ಆದರೆ ಇಲ್ಲೊಂದು ಮರ “ವಿಶ್ವದ ಏಕಾಂಗಿ ಮರ (World’s Loneliest Tree) ಅಥವಾ ಪ್ರತ್ಯೇಕ ಮರ ” ಎಂದು ಕರೆಸಿಕೊಳ್ಳುತ್ತಿದೆ. ಆಶ್ಚರ್ಯವಾಗುತ್ತೆ ಅಲ್ವಾ? ಏಕಾಂಗಿ ಮರ? ಇದು ಯಾವುದು ಏಕಾಂಗಿ ಮರ ಎನಿಸುತ್ತಿದೆಯೇ? ಅದಕ್ಕೆ ಉತ್ತರ ಇಲ್ಲಿದೆ. ಏಕಾಂಗಿ ಮರ ಎಂದರೆ ಸುತ್ತ ಮುತ್ತ ಯಾವುದೇ ಮರ -ಗಿಡಗಳು ಒಂದು ಇಲ್ಲದೇ ಒಂದೇ ಮರ ಆ ಸ್ದಳದಲ್ಲಿರುವುದು ಆಗಿದೆ.

ಈ ಮರವು ಹವಾಮಾನದಲ್ಲಿ ಆಗಾಗ ಬದಲಾಗುತ್ತಿರುವ ಹವಾಮಾನ ಬದಲಾವಣೆಯ ಬಗ್ಗೆ ಮಾಹಿತಿ ಕಲೆ ಹಾಕಲು ಸಹಾಯ ಮಾಡುತ್ತದೆ ಎಂದು ನ್ಯೂಜಿಲೆಂಡ್‌ ಸಂಶೋಧಕರ ತಂಡ ಕಂಡುಹಿಡಿದಿದೆ. ಈ ಮರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಶೀರ್ಷಿಕೆ ಪಡೆದಿರುವ ಮರ
ಈ ಏಕಾಂಗಿ ಮರವು ಜನವಸತಿಯಿಲ್ಲದ ಕ್ಯಾಂಪ್‌ಬೆಲ್ ದ್ವೀಪದಲ್ಲಿರುವ ಸಿಟ್ಕಾ ಸ್ಪ್ರೂಸ್ ಮರವಾಗಿದೆ. ಇದು ಬರೋಬ್ಬರಿ ಒಂಬತ್ತು ಮೀಟರ್ ಎತ್ತರದ ಸ್ಪ್ರೂಸ್ ಮರವಾಗಿದ್ದು, ಇದು “ಅತಿ ದೂರದಲ್ಲಿರುವ ಮರ” ಎಂಬ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಶೀರ್ಷಿಕೆಯನ್ನು ಪಡೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ:  New Stars: ಇದು ನಕ್ಷತ್ರಗಳು ಹುಟ್ಟುವ ಸ್ಥಳ, ನಾಸಾ ತೆಗೆದ ಅದ್ಭುತ ಚಿತ್ರಗಳನ್ನು ನೋಡಿ

ದಕ್ಷಿಣ ಸಾಗರದಲ್ಲಿ ನ್ಯೂಜಿಲೆಂಡ್‌ನಿಂದ ದಕ್ಷಿಣಕ್ಕೆ 700 ಕಿಲೋಮೀಟರ್ ದೂರದಲ್ಲಿರುವ ಮತ್ತು ಅತಿ ಹೆಚ್ಚು ಗಾಳಿ ಬೀಸುವ ದ್ವೀಪದಲ್ಲಿರುವ ಏಕೈಕ ಮರ ಇದಾಗಿದೆ. ಇದು ಸುಮಾರು 222 ಕಿಮೀ ದೂರದಲ್ಲಿರುವ ಏಕೈಕ ಮರವಾಗಿದೆ. ಆಕ್ಲೆಂಡ್ ದ್ವೀಪಗಳ ಹತ್ತಿರದಲ್ಲಿ ಈ ಮರವು ಹೆಚ್ಚಾಗಿ ಕಂಡುಬರುತ್ತದೆ. ಕ್ಯಾಂಪ್‌ಬೆಲ್ ಐಲ್ಯಾಂಡ್‌ನ ಸ್ಪ್ರೂಸ್‌ ಮರಕ್ಕೂ ಮೊದಲು, ನೈಜರ್‌ನ ಟೆನೆರೆ ಮರವನ್ನು ವಿಶ್ವದ ಅತ್ಯಂತ ಏಕಾಂಗಿ ಮರ ಅಥವಾ ಪ್ರತ್ಯೇಕವಾದ ಮರವೆಂದು ಗುರುತಿಸಿಕೊಂಡಿತ್ತು. ಆದರೆ ಈ ಮರವನ್ನು 1973 ರಲ್ಲಿ ವಾಹನ ಚಾಲಕರೊಬ್ಬರು ವಾಹನ ಗುದ್ದಿಸಿ ಆ ಮರವನ್ನು ನಾಶಗೊಳಿಸಿದರು. ಅಂದಿನಿಂದ ಈ ಸ್ಪ್ರೂಸ್‌ ಮರವೇ ವಿಶ್ವದ ಏಕಾಂಗಿ ಮರವಾಗಿದೆ.

ಮರದ ಬಗ್ಗೆ ಅಲ್ಲಿನ ಜನ ಹೇಳಿದ್ದು ಹೀಗೆ 
ಈ ಸಿಟ್ಕಾ ಸ್ಪ್ರೂಸ್ ಮರವನ್ನು 1900 ರ ದಶಕದ ಆರಂಭದಲ್ಲಿ ನ್ಯೂಜಿಲೆಂಡ್‌ನ ಆಗಿನ ಗವರ್ನರ್ ಲಾರ್ಡ್ ರಾನ್‌ಫರ್ಲಿ ನೆಟ್ಟಿದ್ದರು ಎಂದು ಅಲ್ಲಿನ ಜನ ಹೇಳುತ್ತಾರೆ. ಆದ್ದರಿಂದ ಈ ಮರಕ್ಕೆ ರಾನ್‌ಫರ್ಲಿ ಮರ ಎಂಬ ಅಡ್ಡಹೆಸರು ಬಂದಿದೆ.

ಇದರ ಜೊತೆಗೆ ಸಂಶೋಧನಾ ಅಧ್ಯಯನಗಳಿಗೆ ಈ ಮರದ ನಿಖರವಾದ ವಯಸ್ಸನ್ನು ದೃಢೀಕರಿಸಲು ಸಾಧ್ಯವಾಗಿಲ್ಲ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಈ ಮರವನ್ನು ಪ್ರಪಂಚದ ಏಕಾಂಗಿ ಮರ ಎಂದು ಜನಪ್ರಿಯವಾಗಿ ಉಲ್ಲೇಖಿಸಿದ್ದರೂ ಸಹ, ಮರ ಎಂಬುದರ ಕುರಿತು ಸಾರ್ವತ್ರಿಕವಾಗಿ ಗುರುತಿಸಲಾದ ಯಾವುದೇ ವ್ಯಾಖ್ಯಾನಗಳು ಇಲ್ಲ. ಈ ಮರದ ಬಗ್ಗೆ ಹೇಳುತ್ತಾ ಮರಗಳ ನಾಶವನ್ನು ತಡೆಯಿರಿ ಇಲ್ಲವಾದರೆ ಜಾಗತಿಕ ಪರಿಸರ ದುರಂತವನ್ನು ಎದುರಿಸಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಈ ಮರದ ವಿಶೇಷತೆ ಏನು 
ಈ ಮರದ ಬಗ್ಗೆ ಜಿಎನ್‌ಎಸ್ ಸೈನ್ಸ್‌ನ ರೇಡಿಯೊಕಾರ್ಬನ್ ವಿಜ್ಞಾನದ ಲೀಡರ್‌ ಡಾ. ಜೋಸೆಲಿನ್ ಟರ್ನ್‌ಬುಲ್‌ ಅವರು “ಈ ಮರವು ದಕ್ಷಿಣ ಸಾಗರದಲ್ಲಿ ಕಾರ್ಬನ್‌ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವುದರೊಂದಿಗೆ ಏನಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಮರವು ಅಮೂಲ್ಯವಾದ ಸಾಧನವಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral News: ಪ್ರೀತಿಪಾತ್ರರ ಮೃತ ದೇಹವನ್ನು ತಿಂದರೆ, ಶತ್ರುವಿನ ಮೃತ ದೇಹವನ್ನು ಏನ್​ ಮಾಡ್ತಾರೆ ನೋಡಿ ಈ ಬುಡಕಟ್ಟು ಜನಾಂಗದವರು

"ನಾವು ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ಉತ್ಪಾದಿಸುವ ಕಾರ್ಬನ್‌ ಡೈ ಆಕ್ಸೈಡ್‌ ಅದರಲ್ಲಿ ಅರ್ಧದಷ್ಟು ಮಾತ್ರ ಉಳಿಯುತ್ತದೆ ಮತ್ತು ಉಳಿದ ಅರ್ಧವು ಭೂಮಿ ಮತ್ತು ಸಾಗರಕ್ಕೆ ಹೋಗುತ್ತದೆ. ಇದರ ಪರಿಣಾಮವಾಗಿ ಜಾಗತಿಕ ತಾಪಮಾನ ಹೆಚ್ಚಾಗುತ್ತಲಿದೆ" ಎಂದು ಟರ್ನ್‌ಬುಲ್ ಹೇಳಿದರು.

"ದಕ್ಷಿಣ ಮಹಾಸಾಗರವು ಕಾರ್ಬನ್ ಡೈ ಆಕ್ಸೈಡ್‌ ಹೆಚ್ಚಿರುವ ಸಾಗರಗಳಲ್ಲಿ ಇದು ಒಂದಾಗಿದೆ. ಕಳೆದ 150 ವರ್ಷಗಳಲ್ಲಿ ನಾವು ಉತ್ಪಾದಿಸಿದ ಎಲ್ಲಾ ಹೊರಸೂಸುವಿಕೆಗಳಲ್ಲಿ ಸುಮಾರು 10% ಅನ್ನು ಈ ಸಾಗರವು ತೆಗೆದುಕೊಂಡಿದೆ" ಎಂದು ಟರ್ನ್‌ಬುಲ್‌ ವಿವರಿಸಿದ್ಧಾರೆ.
Published by:Ashwini Prabhu
First published: