ನ್ಯೂಸ್ 18 ಕನ್ನಡ
ಸಮುದ್ರ ತೀರದ ರೆಸ್ಟೊರೆಂಟ್ನಲ್ಲಿ ಕುಳಿತು ಆಹಾರ ಸೇವಿಸುವ ಮಜವೇ ಬೇರೆ. ಅಂತಹದರಲ್ಲಿ ಸಮುದ್ರದೊಳಗೆ ಹೋಗಿ ಪಾರ್ಟಿ ಮಾಡಲು ಅವಕಾಶ ಸಿಕ್ಕಿದರೆ? ಹೌದು ಇಂತಹ ಕನಸು ಕಾಣುವವರಿಗೆ ಶೀಘ್ರದಲ್ಲೇ ಸಿಹಿ ಸುದ್ದಿಯೊಂದು ಕಾದಿದೆ. ಮಾಲ್ಡೀವ್ಸ್ನ ಸಮುದ್ರದೊಳಗೆ ಇಂತಹದೊಂದು ರೆಸಾರ್ಟ್ ಪ್ರಾರಂಭವಾಗಲಿದೆ.
ಮಾಲ್ಡೀವ್ಸ್ನ ರಂಗಲಿ ದ್ವೀಪದಲ್ಲಿ ಸಮುದ್ರದ ಆಳದಲ್ಲಿ ರೆಸಾರ್ಟ್ ಸಿದ್ಧವಾಗಿದೆ. ಈ ರೆಸಾರ್ಟ್ನ ದಿನವೊಂದರ ಶುಲ್ಕ 15 ಮಿಲಿಯನ್ ಡಾಲರ್ ಎಂದು ಹೇಳಲಾಗಿದೆ. ರೆಸಾರ್ಟ್ನಲ್ಲಿ ರೆಸ್ಟೊರೆಂಟ್, ಅತಿಥಿ ಗೃಹ ಸೇರಿದಂತೆ ಎಲ್ಲ ಐಷಾರಾಮಿ ಸೌಲಭ್ಯಗಳು ಲಭ್ಯವಾಗಲಿದೆ.
ಶಾರ್ಕ್ ಮೀನುಗಳು ಸೇರಿದಂತೆ ಅನೇಕ ಕಡಲ ಜೀವಿಗಳನ್ನು ರೆಸಾರ್ಟ್ನಲ್ಲೇ ಕೂತು ವೀಕ್ಷಿಸಬಹುದಾಗಿದೆ. ರೆಸಾರ್ಟ್ನ ಒಂದು ಭಾಗದಲ್ಲಿ ಮಲಗುವ ಕೋಣೆಗಳಿದ್ದರೆ ಮತ್ತೊಂದು ಭಾಗದಲ್ಲಿ ಬಾರ್, ರೆಸ್ಟೊರೆಂಟ್, ಜಿಮ್ ವ್ಯವಸ್ಥೆ ಮಾಡಲಾಗಿದೆ.
ಇದು ಸಮುದ್ರದಲ್ಲಿ 16 ಅಡಿ ಆಳದಲ್ಲಿದ್ದು, 180-ಡಿಗ್ರಿ ವಿಹಂಗಮ ನೋಟವನ್ನು ಹೊಂದಿದೆ. ಇಂತಜಹದ್ದೇ ಎರಡನೇ ಐಷಾರಾಮಿ ರೆಸಾರ್ಟ್ ಅನ್ನು ದುಬೈನ ವೆನಿಸ್ ದ್ವೀಪದಲ್ಲಿ ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿ 2020ರಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ