ಹಣ್ಣುಗಳ ರಾಜ ಮಾವು (Mango). ಆದರೆ, ಎಲ್ಲರೂ ಇಷ್ಟಪಡುವ ಮತ್ತು ಎಲ್ಲಾ ಋತುಗಳಲ್ಲಿಯೂ ದೊರೆಯುವ ಒಂದು ಹಣ್ಣು ಬಾಳೆಹಣ್ಣು. ಬಾಳೆಹಣ್ಣುಗಳು ಭಾರತದಲ್ಲಿ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿ ಕಂಡುಬರುತ್ತವೆ. ಕೆಲವು ಬಗೆಯ ಬಾಳೆಹಣ್ಣುಗಳು ತುಂಬಾ ಚಿಕ್ಕದಾಗಿದ್ದರೆ, ಕೆಲವು ಬಾಳೆಹಣ್ಣುಗಳು (Banana) ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಸಹಜವಾಗಿ, ಅದು ದೊಡ್ಡದಾಗಿದ್ದರೂ, ಒಂದು ಬಾಳೆಹಣ್ಣಿನ ತೂಕವು 200 ಗ್ರಾಂ ವರೆಗೆ ಇರುತ್ತದೆ. ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಎಲ್ಲರೂ ಅರಿತಿರುತ್ತಾರೆ. ಹೀಗಾಗಿಯೇ ನಾನಾ ತಳಿಯ ಬಾಳೆಹಣ್ಣುಗಳನ್ನು ತಿನ್ನಲು ಇಷ್ಟ ಪಡುತ್ತಾರೆ. ಇದೀಗ ಇಲ್ಲೊಂದು ಬಾಳೆಹಣ್ಣು ಸಖತ್ ವೈರಲ್ (Viral) ಆಗ್ತಾ ಇದೆ. ಏನಿದು ಅಂತ ನೋಡಿ.
ನೀವು ಎಂದಾದರೂ ಮೂರು ಕಿಲೋ ತೂಕದ ಬಾಳೆಹಣ್ಣನ್ನು ನೋಡಿದ್ದೀರಾ ಅಥವಾ ತಿಂದಿದ್ದೀರಾ? ಈ ತೂಕದ ಬಾಳೆಹಣ್ಣಿನ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಜಗತ್ತಿನಲ್ಲಿ ಬಾಳೆಹಣ್ಣುಗಳಲ್ಲಿ ಹಲವು ವಿಧಗಳಿವೆ. ಭಾರತದಲ್ಲಿಯೂ ಸಹ ಬಾಳೆ ತಳಿಗಳ ವೈವಿಧ್ಯತೆಯನ್ನು ನೋಡಬಹುದು. ಪ್ರತಿಯೊಂದು ವಿಧದ ಬಾಳೆಹಣ್ಣುಗಳು ಆಕಾರ, ಬಣ್ಣ, ರುಚಿಯಲ್ಲಿ ವಿಶಿಷ್ಟವಾಗಿದೆ. ಆದರೆ ಸದ್ಯ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಬಾಳೆಹಣ್ಣು 3 ಕೆ.ಜಿ.
ಇದನ್ನೂ ಓದಿ: ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಲಿ ಕಾಣೋ, ಇಲ್ಲಿ ಬಾಡಿಗೆಗೆ ಹೆಂಡ್ತಿ-ಗರ್ಲ್ಫ್ರೆಂಡ್ ಕೂಡ ಸಿಗ್ತಾರೆ!
ಎಸ್, ಇಂಡೋನೇಷ್ಯಾಕ್ಕೆ ಸಮೀಪದಲ್ಲಿರುವ ಪಪುವಾ ನ್ಯೂಗಿನಿಯಾ ದ್ವೀಪದಲ್ಲಿ ಈ ರೀತಿಯ ಬಾಳೆಹಣ್ಣುಗಳನ್ನು ಬೆಳೆಸಲಾಗುತ್ತದೆ. ಈ ಬಾಳೆ ಮರಗಳು ಸಾಮಾನ್ಯ ಬಾಳೆ ಮರಗಳಿಗಿಂತ ಹಲವಾರು ಪಟ್ಟು ಎತ್ತರವಾಗಿದೆ. ಈ ತಳಿಯು ತೆಂಗಿನ ಮರದಷ್ಟು ಎತ್ತರವಾಗಿದೆ. ಈ ಮರದ ಪ್ರತಿ ಬಾಳೆ ಸಾಮಾನ್ಯವಾಗಿ ಸುಮಾರು 3 ಕೆಜಿ ತೂಗುತ್ತದೆ.
The biggest size of banana is grown in Papua New Guinea islands close to Indonesia. The plantain tree is of the height of a coconut tree and the fruits grow huge. Each banana weighs around 3 kg. pic.twitter.com/33oUfB8ppu
— Ananth Rupanagudi (@Ananth_IRAS) March 22, 2023
ಇದನ್ನೂ ಓದಿ: ‘ಶ್ಶ್, ಗುಮ್ಮ ಬಂತು ಗುಮ್ಮ’ ಇದೇ ಭಯದಿಂದ 42 ವರ್ಷದಿಂದ ಇಲ್ಲಿ ರೈಲೇ ಸಂಚರಿಸ್ತಿಲ್ಲ! ಓದಿದ್ರೆ ಶಾಕ್ ಆಗ್ತೀರಾ
ನಂತರ ಬಾಳೆಹಣ್ಣು ತನ್ನ ಮೊಣಕೈಯ ಎತ್ತರದಲ್ಲಿದೆ ಎಂದು ವ್ಯಕ್ತಿಯು ವೀಡಿಯೊದಲ್ಲಿ ತೋರಿಸುತ್ತಾನೆ. ಈ ವಿಶಿಷ್ಟ ಬಾಳೆಹಣ್ಣಿನ ವೀಡಿಯೋ ಸದ್ಯ ನೆಟಿಜನ್‌ಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಈ ವಿಡಿಯೋವನ್ನು ಅನಂತ್ ರೂಪನಗುಡಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇಂಡೋನೇಷ್ಯಾ ಮತ್ತು ಮಲೇಷಿಯಾ ಗಳಲ್ಲಿ ಈ ತಳಿಯ ಬಾಳೆಹಣ್ಣು ಕಾಣಬಹುದಾಗಿದೆ. ಒಬ್ಬ ವ್ಯಕ್ತಿಯ ಕೈ ಇಟ್ಟು ಬಾಳೆಹಣ್ಣಿನ ಸೈಜ್ ನೋಡಲಾಗುತ್ತದೆ. ಆಗ ಕೂಡ ಆ ಬಾಳೆಹಣ್ಣು ಆತನ ಕೈಗಿಂತ ದೊಡ್ಡದಾಗಿರುತ್ತದೆ.
ಅವರು 1997 ಬ್ಯಾಚ್‌ನ ಐಆರ್‌ಎಎಸ್. ಅವರು ರೈಲ್ವೇಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಪ್ರಸ್ತುತ ಚೆನ್ನೈನಲ್ಲಿದ್ದಾರೆ. ಅವರು ಹಂಚಿಕೊಂಡಿರುವ ಈ 38 ಸೆಕೆಂಡ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಈ ವಿಡಿಯೋಗೆ ಇದುವರೆಗೆ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ವಿಡಿಯೋ 91 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ವಿಡಿಯೋಗೆ ಹಲವರು ಕಮೆಂಟ್ ಕೂಡ ಮಾಡಿದ್ದಾರೆ. ಇಂತಹ ಬಾಳೆಹಣ್ಣನ್ನು ಹಿಂದೆಂದೂ ನೋಡಿಲ್ಲ ಎಂದು ಹಲವರು ಹೇಳಿದ್ದಾರೆ.
ಅನೇಕ ತಜ್ಞರ ಪ್ರಕಾರ, ಬಾಳೆಹಣ್ಣು ಒಂದು ಪೌಷ್ಟಿಕ ಹಣ್ಣು. ಬಾಳೆಹಣ್ಣು ಕಣ್ಣು, ಶ್ವಾಸಕೋಶ, ಚರ್ಮ ಮತ್ತು ಹೃದಯವನ್ನು ಆರೋಗ್ಯವಾಗಿಡಲು ಉಪಯುಕ್ತವಾಗಿದೆ. ಬಾಳೆಹಣ್ಣು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಇದನ್ನು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹ ಬಳಸಲಾಗುತ್ತದೆ. ಬಾಳೆಹಣ್ಣನ್ನು ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ