• Home
  • »
  • News
  • »
  • trend
  • »
  • ನಿಮ್ಗೆ ಲೆಕ್ಕ ಬರುತ್ತಾ? ಅಂಕಿ ಅಂಶಗಳು ಯಾಕೆ ಮುಖ್ಯ ಅನ್ನೋದನ್ನ ತಿಳಿಸೋದಕ್ಕೇ ಒಂದು ದಿನ ಇದೆ ನೋಡಿ!

ನಿಮ್ಗೆ ಲೆಕ್ಕ ಬರುತ್ತಾ? ಅಂಕಿ ಅಂಶಗಳು ಯಾಕೆ ಮುಖ್ಯ ಅನ್ನೋದನ್ನ ತಿಳಿಸೋದಕ್ಕೇ ಒಂದು ದಿನ ಇದೆ ನೋಡಿ!

ವಿಶ್ವ ಅಂಕಿ ಅಂಶಗಳ ದಿನ 2022

ವಿಶ್ವ ಅಂಕಿ ಅಂಶಗಳ ದಿನ 2022

ಸಮಾಜದ ದಿನನಿತ್ಯದ ಅಭಿವೃದ್ಧಿಯಲ್ಲಿ ಡೇಟಾ ಮತ್ತು ಅಂಕಿ ಅಂಶಗಳ ಮಹತ್ವವನ್ನು ಸಾರಲು ಅಕ್ಟೋಬರ್ 20 ರಂದು ಅಂದರೆ ನಿನ್ನೆ ವಿಶ್ವ ಅಂಕಿ ಅಂಶ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಅಂಕಿ ಅಂಶಗಳ ದಿನವು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಾಮಾಣಿಕ ಡೇಟಾವನ್ನು ಪ್ರಸ್ತುತಪಡಿಸುವ ಸಂಖ್ಯಾಶಾಸ್ತ್ರಜ್ಞರ ಕಠಿಣ ಪರಿಶ್ರಮ ಗುರುತಿಸಲು ಆಚರಿಸಲಾಗುವ ದಿನವಾಗಿದೆ.

ಮುಂದೆ ಓದಿ ...
  • Share this:

ನಮಗೆ ದಿನನಿತ್ಯದ ವ್ಯವಹಾರದಲ್ಲಿ (Business) ಅಂಕೆ ಸಂಖ್ಯೆಗಳು ತುಂಬಾ ಮುಖ್ಯವಾಗುತ್ತವೆ. ಅದಿಲ್ಲದೇ ಬದುಕು ದುಸ್ಥರ ಅಂತಲೇ ಹೇಳಬಹುದು. ಅದರಲ್ಲೂ ವ್ಯಾಪಾರ ವ್ಯವಹಾರಗಳಲ್ಲಿ ಸ್ಟಾಟಿಸ್ಟಿಕ್ಸ್‌ (Statistics) ಪಾತ್ರ ಬಹಳ ಮುಖ್ಯ. ಅಂದಹಾಗೆ ವಿಶ್ವ ಅಂಕಿ ಅಂಶಗಳ ದಿನವನ್ನ ವಿಶ್ವದಾದ್ಯಂತ ಆಚರಿಸಲಾಗುತ್ತದೆ . ಹೌದು, ಸಮಾಜದ ದಿನನಿತ್ಯದ ಅಭಿವೃದ್ಧಿಯಲ್ಲಿ ಡೇಟಾ ಮತ್ತು ಅಂಕಿ ಅಂಶಗಳ ಮಹತ್ವವನ್ನು ಸಾರಲು ಅಕ್ಟೋಬರ್ 20 ರಂದು ಅಂದರೆ ನಿನ್ನೆ ವಿಶ್ವ ಅಂಕಿ ಅಂಶ ದಿನವನ್ನು (World Statistics Day) ಆಚರಿಸಲಾಗುತ್ತದೆ. ವಿಶ್ವ ಅಂಕಿ ಅಂಶಗಳ ದಿನವು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಾಮಾಣಿಕ ಡೇಟಾವನ್ನು ಪ್ರಸ್ತುತಪಡಿಸುವ ಸಂಖ್ಯಾಶಾಸ್ತ್ರಜ್ಞರ ಕಠಿಣ ಪರಿಶ್ರಮ ಗುರುತಿಸಲು ಆಚರಿಸಲಾಗುವ ದಿನವಾಗಿದೆ.


ಇನ್ನು ವಿಶ್ವ ಸ್ಟಾಟಿಸ್ಟಿಕ್ಸ್‌ ದಿನ 2022 ಅನ್ನು ವಿಶ್ವಸಂಸ್ಥೆಯು ಆಚರಿಸಿದೆ . ಇದು ಯಶಸ್ವಿ ಮೂಲಸೌಕರ್ಯ ಪ್ರಗತಿಗಾಗಿ ವಿಶ್ವಾಸಾರ್ಹ ಮತ್ತು ಸಮಯೋಚಿತ ಅಂಕಿಅಂಶಗಳ ಡೇಟಾದ ಮಹತ್ವವನ್ನು ಒತ್ತಿಹೇಳುತ್ತದೆ.ಸಾಕಷ್ಟು ಜನರಿಗೆ ವಿಶ್ವ ಅಂಕಿಅಂಶ ದಿನದ ಬಗ್ಗೆ ಗೊತ್ತಿರೋದಿಲ್ಲ. ಹಾಗಿದ್ರೆ ಸ್ಟಾಟಿಸ್ಟಿಕ್ಸ್‌ ಡೇ 2022 ರ ಥೀಮ್, ಇತಿಹಾಸ, ಪ್ರಾಮುಖ್ಯತೆ ಮತ್ತು ಇತರ ಪ್ರಮುಖ ವಿವರಗಳು ಏನು ಅನ್ನೋದನ್ನು ನೋಡೋಣ.


ವಿಶ್ವ ಅಂಕಿಅಂಶ ದಿನದ ಥೀಮ್
'ಸುಸ್ಥಿರ ಅಭಿವೃದ್ಧಿಗಾಗಿ ಡೇಟಾ' ಅನ್ನೋದು ಈ ವರ್ಷದ ಸ್ಟಾಟಿಸ್ಟಿಕ್ಸ್‌ ಡೇ ಥೀಮ್‌ ಆಗಿದೆ. ಈ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಸಂಸ್ಥೆಯು ಆ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಸಂಶೋಧನೆಯ ಮೂಲಕ ಅತ್ಯುತ್ತಮ ಕೊಡುಗೆ ನೀಡಿದವರನ್ನು ಹಾಗೂ ಅಧಿಕೃತ ಅಂಕಿಅಂಶ ವ್ಯವಸ್ಥೆಗೆ ಪ್ರಯೋಜನಕಾರಿಯಾದ ಸೈದ್ಧಾಂತಿಕ ಅಂಕಿಅಂಶಗಳಿಗೆ ಕೊಡುಗೆ ನೀಡಿದವರಿಗೆ ಪ್ರಶಸ್ತಿಗಳನ್ನು ನೀಡುವುದರ ಮೂಲಕ ಗುರುತಿಸುತ್ತದೆ.


ವಿಶ್ವ ಅಂಕಿಅಂಶ ದಿನದ ಇತಿಹಾಸ
ವಿಶ್ವಸಂಸ್ಥೆಯ ಅಂಕಿಅಂಶಗಳ ಆಯೋಗವು ಫೆಬ್ರವರಿ 2010 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 41 ನೇ ಅಧಿವೇಶನದಲ್ಲಿ ವಿಶ್ವ ಅಂಕಿಅಂಶಗಳ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮುಂದಿಟ್ಟಿತು. ಆಯೋಗದ ಪ್ರಕಾರ, ವಿಶ್ವಾಸಾರ್ಹ, ಸಮಯೋಚಿತ ಅಂಕಿಅಂಶಗಳು, ದೇಶಗಳ ಪ್ರಗತಿಯ ಸೂಚಕಗಳ ಉತ್ಪಾದನೆಯು ಸರಿಯಾದ ನೀತಿ, ನಿರ್ಧಾರಗಳಿಗೆ ಮಹತ್ವದ್ದಾಗಿದೆ.


ಇದನ್ನೂ ಓದಿ: Kamal Kishor Mandal: ಅಂದು ಜವಾನ, ಇಂದು ಕಾಲೇಜ್ ಸಹಾಯಕ ಪ್ರಾಧ್ಯಾಪಕ! ಇವರ ಕಥೆ ಎಲ್ಲರಿಗೂ ಸ್ಫೂರ್ತಿ


ಹಾಗೆಯೇ ಇದು ಅಭಿವೃದ್ಧಿ ಗುರಿಗಳ ಅನುಷ್ಠಾನದ ಮೇಲ್ವಿಚಾರಣೆ ಮುಖ್ಯವಾಗಿದೆ. ಇನ್ನು ಮೊದಲ ವಿಶ್ವ ಅಂಕಿಅಂಶ ದಿನವನ್ನು 130 ಕ್ಕೂ ಹೆಚ್ಚು ದೇಶಗಳಲ್ಲಿ 'ಅಧಿಕೃತ ಅಂಕಿಅಂಶಗಳ ಅನೇಕ ಸಾಧನೆಗಳನ್ನು ಆಚರಿಸುವುದು' ಎಂಬ ಸಾಮಾನ್ಯ ವಿಷಯದ ಅಡಿಯಲ್ಲಿ ಆಚರಿಸಲಾಯ್ತು.


ವಿಶ್ವ ಅಂಕಿಅಂಶ ದಿನದ ಮಹತ್ವ
ಶೈಕ್ಷಣಿಕ ಸಂಶೋಧನೆಯಲ್ಲಿ ಮತ್ತು ನಾಗರಿಕ ಸಮಾಜ ಮತ್ತು ವ್ಯವಹಾರಗಳ ಅಭಿವೃದ್ಧಿಯಲ್ಲಿ ಅಂಕಿಅಂಶಗಳ ಮಹತ್ವವನ್ನು ಕೇಂದ್ರೀಕರಿಸಲು ಪ್ರತಿ ವರ್ಷ ಅಕ್ಟೋಬರ್ 20 ರಂದು ವಿಶ್ವ ಅಂಕಿಅಂಶ ದಿನವನ್ನು ಆಚರಿಸಲಾಗುತ್ತದೆ. ಯಾವುದೇ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅಂಕಿಅಂಶಗಳು ಅನಿವಾರ್ಯ ಎಂಬ ಅಂಶವನ್ನು ಈ ದಿನ ಎತ್ತಿ ತೋರಿಸುತ್ತದೆ. ಹಾಗೆಯೇ ಸರಿಯಾದ, ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸ್ಟಾಟಿಸ್ಟಿಕ್ಸ್‌ ಗಮನಾರ್ಹವಾಗಿ ಸಹಾಯ ಮಾಡುತ್ತದೆ.


ವಿಶ್ವ ಅಂಕಿ ಅಂಶ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ಕೆಲವು ದೇಶಗಳು, ವಿಶ್ವ ಅಂಕಿ ಅಂಶಗಳ ದಿನದಂದು, ಅಂಕಿಅಂಶಗಳ ನಿರ್ವಹಣೆಯಲ್ಲಿ ಸಹಕರಿಸಲು ಮತ್ತು ಅಂಕಿಅಂಶಗಳನ್ನು ಸಂಗ್ರಹಿಸುವ ಪ್ರಕ್ರಿಯೆಗೆ ಹೆಚ್ಚಿನ ಪ್ರಯತ್ನವನ್ನು ವಿನಿಯೋಗಿಸಲು ಒಟ್ಟಾಗಿ ಸೇರುತ್ತವೆ. ಒಬ್ಬ ವ್ಯಕ್ತಿಯಾಗಿ, ನಮ್ಮ ದಿನನಿತ್ಯದ ಜೀವನದಲ್ಲಿ ಅಂಕಿಅಂಶಗಳು ಮತ್ತು ಅದರ ಮಹತ್ವದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಮೂಲಕ ವಿಶ್ವ ಅಂಕಿಅಂಶ ದಿನವನ್ನು ಆಚರಿಸಬಹುದು. ಅಂಕಿಅಂಶಗಳು ಮತ್ತು ವಿಶ್ವ ಅಂಕಿಅಂಶಗಳ ದಿನದ ಜಾಗೃತಿಯನ್ನು ಹರಡುವುದು ಈ ಮಹತ್ವದ ದಿನವನ್ನು ಆಚರಿಸಲು ಉತ್ತಮ ಮಾರ್ಗವಾಗಿದೆ.


ಇದನ್ನೂ ಓದಿ:   Business Idea: ಬೈಕ್​ನಲ್ಲೇ ಇಡ್ಲಿ ವ್ಯಾಪಾರ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪದವೀಧರನ ಕಥೆ


ಒಟ್ಟಾರೆ, ಸ್ಟಾಟಿಸ್ಟಿಕ್ಸ್‌ ಇಲ್ಲದೇ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳುವುದು ಜನಸಾಮಾನ್ಯರ ಜೀವನದಲ್ಲೇ ಸಾಧ್ಯವಿಲ್ಲ. ಇನ್ನು ರಾಜ್ಯ, ದೇಶ, ವಿಶ್ವ ಮಟ್ಟದಲ್ಲಿ ಇದರ ಅಗತ್ಯ ಇನ್ನೂ ಹೆಚ್ಚು. ಹಾಗಾಗಿ ಅಂಕಿ ಅಂಶಗಳೆನ್ನುವುದು ಇಂದು ಅತ್ಯಂತ ಮಹತ್ವದ್ದಾಗಿದೆ.

Published by:Ashwini Prabhu
First published: