ವರ್ಷದ 365 ಅಥವಾ 366 ದಿನಗಳಲ್ಲಿ ಬಹುತೇಕ ಎಲ್ಲ ದಿನಗಳಲ್ಲೂ ಏನಾದರೂ ಒಂದು ವಿಶೇಷವಿದ್ದೇ ಇರುತ್ತದೆ. ಇದೇ ರೀತಿ, ಇಂದು ಅಂದರೆ ಆಗಸ್ಟ್ 21ರಂದು ವಿಶ್ವ ಹಿರಿಯ ನಾಗರಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವ ಹಿರಿಯ ನಾಗರಿಕರ ದಿನವು ವಯಸ್ಸಾದವರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಅರಿವು ಹೆಚ್ಚಿಸಲು ಮೀಸಲಾಗಿದೆ. ವಯಸ್ಸು ಹದಗೆಡುವುದರಿಂದ ಹಿಡಿದು ಹಿರಿಯರ ನಿಂದನೆಗೆ, ಪ್ರತಿಯೊಂದು ಸಮಸ್ಯೆಯನ್ನು ಈ ದಿನ ವ್ಯಾಪಕವಾಗಿ ಚರ್ಚಿಸಲಾಗುತ್ತದೆ, ಅನುಭವಗಳನ್ನು ಹಂಚಿಕೊಳ್ಳಲಾಗುತ್ತದೆ ಮತ್ತು ಬಹುಶಃ ಕೆಲವು ಪರಿಹಾರಗಳನ್ನೂ ನೀಡಲಾಗುತ್ತದೆ. ಪ್ರತಿ ವರ್ಷ, ಆಗಸ್ಟ್ 21ರಂದು ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಹಿರಿಯರ ಕೊಡುಗೆಯನ್ನೂ ಈ ದಿನವು ಅಂಗೀಕರಿಸುತ್ತದೆ. ಏಕೆಂದರೆ ಇದು ಸಮಾಜದಲ್ಲಿ ಮತ್ತು ಬೆಳವಣಿಗೆಯಲ್ಲಿ ಅವರ ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇನ್ನು, ಜೂನ್ 15ರಂದು ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
ಡಿಸೆಂಬರ್ 14, 1990ರಂದು, ಮೊದಲ ವಿಶ್ವ ಹಿರಿಯ ನಾಗರಿಕರ ದಿನವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಘೋಷಿಸಿತು. ನಂತರ, 1991 ರಂದು ಮೊದಲ ಆಚರಣೆ ನಡೆಸಲಾಯಿತು. ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅಧಿಕೃತವಾಗಿ ವಿಶ್ವ ಹಿರಿಯ ನಾಗರಿಕರ ದಿನವನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗುತ್ತಾರೆ.
ವಿಶ್ವ ಹಿರಿಯ ನಾಗರಿಕರ ದಿನದ ಮಹತ್ವ
ವಿಶ್ವ ಹಿರಿಯ ನಾಗರಿಕರ ದಿನವು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಸರ್ಕಾರಕ್ಕೆ ನೆನಪಿಸುವ ಒಂದು ಉತ್ತಮ ಸಂದರ್ಭವಾಗಿದೆ. ದುರುಪಯೋಗವನ್ನು ಎದುರಿಸದ ಜೊತೆಗೆ, ಹಿರಿಯ ನಾಗರಿಕರು ಸರ್ಕಾರದ ವಿವಿಧ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯಲು ಸಮರ್ಥರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.
ಹಿರಿಯ ನಾಗರಿಕರಿಗಾಗಿ ಸಮಗ್ರ ಕಾರ್ಯಕ್ರಮ, ರಾಷ್ಟ್ರೀಯ ವಯೋಶ್ರೀ ಯೋಜನೆ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ ಮತ್ತು ವಯೋಶ್ರೇಷ್ಠ ಸಮ್ಮಾನ್ ಸೇರಿದಂತೆ ಹಲವಾರು ಯೋಜನೆಗಳನ್ನು ಭಾರತದಲ್ಲಿ ಹಿರಿಯ ನಾಗರಿಕರಿಗಾಗಿ ಘೋಷಿಸಲಾಗಿದೆ. ಈ ಯೋಜನೆಗಳು ಹಿರಿಯ ನಾಗರಿಕರಿಗೆ ಮೂಲಭೂತ ಸೌಕರ್ಯಗಳು ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರ ಜೀವನದ ಗುಣಮಟ್ಟ ಸುಧಾರಿಸುವ ಗುರಿ ಹೊಂದಿವೆ.
ಇನ್ನು, 60 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಬಿಪಿಎಲ್ ವರ್ಗಕ್ಕೆ ಒಳಪಡುವ ಹಿರಿಯರಿಗೆ ಉಚಿತ ನೆರವಿನ ಜೀವನೋಪಾಯ ಮತ್ತು ಭೌತಿಕ ಸಾಧನಗಳನ್ನು ಒದಗಿಸಬೇಕು ಎಂದು ಸರ್ಕಾರ ಘೋಷಿಸಿದೆ.
ಹಾಗೂ, ಅವರ ಯೋಗಕ್ಷೇಮದ ಬಗ್ಗೆ ವಿಶೇಷ ಗಮನ ನೀಡಬೇಕು, ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕ ಮತ್ತು ಲಾಕ್ಡೌನ್ ವೇಳೆ ಅವರು ಕಷ್ಟದ ಸಮಯ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಹಿರಿಯ ನಾಗರಿಕರಿಗೆ ಸ್ವಲ್ಪ ಸಹಾಯ ಮಾಡಿದರೂ ಹೆಚ್ಚಿನ ಉಪಯೋಗ ಸಾಬೀತುಪಡಿಸಬಹುದು. ಈ ಹಿನ್ನೆಲೆ ಇ ರೀತಿ ಮಾಡಲು ಇಂದಿನ ವಿಶ್ವ ಹಿರಿಯ ನಾಗರಿಕರ ದಿನವನ್ನು ಹೊರತುಪಡಿಸಿ ಉತ್ತಮವಾದ ಸಂದರ್ಭ ಯಾವುದು ಎಂಬುದನ್ನು ನಮ್ಮನ್ನು ನಾವು ಪ್ರಶ್ನೆ ಕೇಳಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ