• Home
  • »
  • News
  • »
  • trend
  • »
  • Gorilla: 32 ವರ್ಷಗಳಿಂದ ಪಂಜರದಲ್ಲಿ ಬಂಧಿಯಾದ ಗೊರಿಲ್ಲ! ಬಿಡುಗಡೆ ಮಾಡಲು 6 ಕೋಟಿ ಕೇಳಿದ ಮಾಲಿಕ

Gorilla: 32 ವರ್ಷಗಳಿಂದ ಪಂಜರದಲ್ಲಿ ಬಂಧಿಯಾದ ಗೊರಿಲ್ಲ! ಬಿಡುಗಡೆ ಮಾಡಲು 6 ಕೋಟಿ ಕೇಳಿದ ಮಾಲಿಕ

ಪಂಜರದಲ್ಲಿ ಭಂದಿಯಾದ ಗೋರಿಲ್ಲ

ಪಂಜರದಲ್ಲಿ ಭಂದಿಯಾದ ಗೋರಿಲ್ಲ

Gorilla: 32 ವರ್ಷಗಳಿಂದ ಶಾಪಿಂಗ್ ಮಾಲ್‌ನ ಮೇಲಿನ ಮೃಗಾಲಯದಲ್ಲಿ ಬಂಧಿಯಾಗಿ ವಾಸಿಸುತ್ತಿರುವ ಗೊರಿಲ್ಲಾ ಒಂದು ಬಿಡುಗಡೆಗೆ ಎದುರು ನೋಡುತ್ತಿದೆ.

  • Trending Desk
  • Last Updated :
  • New Delhi, India
  • Share this:

ಪ್ರಾಣಿಯಾಗಲಿ, ಪಕ್ಷಿಗಳಾಗಲಿ (Animals And Birds) ಅವುಗಳನ್ನು ಸ್ವಚ್ಛಂದವಾಗಿ ಸಂಚರಿಸಲು, ಹಾರಾಡಲು ಮುಕ್ತವಾಗಿ ಬಿಡಬೇಕು. ಯಾವುದೇ ಪ್ರಾಣಿ, ಪಕ್ಷಿಗಳನ್ನು ಬಂಧಿಸಿ ಗೂಡಿನಲ್ಲಿ, ಬೋನಿನಲ್ಲಿ ಇಡುವುದು ಅವುಗಳನ್ನು ಶಾಶ್ವತ (Permanent) ಖೈದಿಗಳನ್ನಾಗಿಸುವಂತೆ ಮಾಡುತ್ತದೆ. ಪಾಪ ಇಲ್ಲೊಂದು ಮೂಕ ಪ್ರಾಣಿಯ ಕಥೆ ಕೂಡ ಇದೇ ಆಗಿದೆ. 32 ವರ್ಷಗಳಿಂದ (32 Years) ಶಾಪಿಂಗ್ ಮಾಲ್‌ನ (Shopping Mall) ಮೇಲಿನ ಮೃಗಾಲಯದಲ್ಲಿ ಬಂಧಿಯಾಗಿ ವಾಸಿಸುತ್ತಿರುವ ಗೊರಿಲ್ಲಾ ಒಂದು ಬಿಡುಗಡೆಗೆ ಎದುರು ನೋಡುತ್ತಿದೆ.


ಥೈಲ್ಯಾಂಡ್‌ನ ಪಾಟಾ ಶಾಪಿಂಗ್ ಮಾಲ್‌ನ ಮೇಲಿರುವ ಮೃಗಾಲಯದಲ್ಲಿ ಬುವಾ ಎಂಬ ಹೆಸರಿನ ಗೊರಿಲ್ಲಾವನ್ನು ಬೋನಿನೊಳಗೆ ಬಂಧಿಸಿ ಇಡಲಾಗಿದೆ. ಬುವಾದ ಮಾಲೀಕ ಈ ಗೊರಿಲ್ಲಾವನ್ನು ಮಾರಾಟ ಮಾಡಲು ನಿರಾಕರಿಸುತ್ತಿದ್ದರಿಂದ ಒಂದೇ ಜಾಗದಲ್ಲಿ ಕುಳಿತು ಕಾಲಕಳೆಯುವ ಪರಿಸ್ಥಿತಿ ಪಾಪ ಬುವಾಗೆ ಬಂದಿದೆ.


ತುಕ್ಕು ಹಿಡದ ಬೋನಿನಲ್ಲಿ ಗೊರಿಲ್ಲಾ ವಾಸ


ರನ್‌ಡೌನ್ ಡಿಪಾರ್ಟ್‌ಮೆಂಟ್ ಸ್ಟೋರ್‌ನ ಮೇಲಿನ ಮಹಡಿಯಲ್ಲಿ ಬುವಾ ಒಂದು ಸಣ್ಣ ಮತ್ತು ಕೊಳಕು ಆವರಣದಲ್ಲಿ ವಾಸಿಸುತ್ತಿದೆ ಮತ್ತು ಅದು ವಾಸಿಸುವ ಬೋನು ಕೂಡ ತುಕ್ಕು ಹಿಡಿದು ಹೋಗಿದೆ. ದಶಕಗಳಿಂದ ಗೊರಿಲ್ಲಾವನ್ನು ಪ್ರಚಾರಕರು ಮತ್ತು ಪ್ರಾಣಿ ಕಾರ್ಯಕರ್ತರು ಸೆರೆಯಿಂದ ಮುಕ್ತಗೊಳಿಸಲು ಪ್ರಯತ್ನಿಸಿದ್ದಾರೆ.


ದುಃಖಕರ ವಿಚಾರವೆಂದರೆ, ಮೃಗಾಲಯದ ಮಾಲೀಕರು ಬುವಾವನ್ನು $7,80,000 (6.4 ಕೋಟಿ ರೂ)ಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ಒಪ್ಪುತ್ತಿಲ್ಲವಾದ್ದರಿಂದ ಬುವಾ ಇದ್ದ ಜಾಗದಲ್ಲೆ ಇದೆ.


ಮನವಿಗೆ ಕ್ಯಾರೇ ಎನ್ನುತ್ತಿಲ್ಲ ಜೂ ಮಾಲೀಕರು


ಈ ಗೊರಿಲ್ಲಾದ ಹೆಸರು ಬುವಾ ನೋಯಿ, ಈ ಹೆಸರಿನ ಅರ್ಥ 'ಲಿಟಲ್ ಲೋಟಸ್' ಎಂದು. ಗೊರಿಲ್ಲಾ ಕೇವಲ ಒಂದು ವರ್ಷವಿದ್ದಾಗ ಅದನ್ನು 1990ರಲ್ಲಿ ಜರ್ಮನಿಯಿಂದ ಥೈಲ್ಯಾಂಡ್‌ನ ಪಾಟಾ ಶಾಪಿಂಗ್ ಮಾಲ್‌ಗೆ ಕರೆತರಲಾಗಿತ್ತು.


2015 ರಿಂದ ಥಾಯ್ ಸರ್ಕಾರದ ಪ್ರಾಣಿ ಹಕ್ಕುಗಳ ಗುಂಪು PETA ಬಿಡುಗಡೆಗೊಳಿಸುವಂತೆ ಕೇಳಿದರೂ ಮತ್ತು ಪಾಪ್ ತಾರೆ ಚೆರ್ ಸಹ, ಬುವಾ ನೋಯಿ ಅವರ ಉಸ್ತುವಾರಿಗೆ ಮನವಿ ಮಾಡಿಕೊಂಡರೂ ಮಾಲೀಕರು ಮಾತ್ರ ಕ್ಯಾರೆ ಎನ್ನದೇ ತಮ್ಮ ನೀರಿಕ್ಷೆಯ ಹಣವನ್ನು ಎದುರು ನೋಡುತ್ತಿದ್ದಾರೆ. ಪ್ರಾಣಿಯನ್ನು ಇತರ ಗೊರಿಲ್ಲಾಗಳೊಂದಿಗೆ ಜರ್ಮನಿಯ ಅಭಯಾರಣ್ಯಕ್ಕೆ ವರ್ಗಾಯಿಸಬೇಕೆಂದು ಒತ್ತಾಯ ಮಾಡಲಾಗುತ್ತಿದೆ.


ಇದನ್ನೂ ಓದಿ: ವಿಚಿತ್ರವಾಗಿದೆ ಈ ಪ್ರೀ ವೆಡ್ಡಿಂಗ್​​ ಫೋಟೋಶೂಟ್​, ವೈರಲ್ ಆಯ್ತು ವಿಡಿಯೋ


ಇತ್ತೀಚಿನ ವರದಿಗಳ ಪ್ರಕಾರ ಪಾಟಾ ಮೃಗಾಲಯದ ಮಾಲೀಕರು ಥಾಯ್ ನೈಸರ್ಗಿಕ ಸಂಪನ್ಮೂಲ ಮತ್ತು ಪರಿಸರ ಸಚಿವ ವರವುತ್ ಸಿಲ್ಪಾ-ಆರ್ಚಾ ಅವರಿಗೆ ಬುವಾ ನೋಯಿಯನ್ನು $782,000ಗೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.


ನಿಧಿ ಸಂಗ್ರಹ ಕಾರ್ಯಕ್ರಮ


ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರ ಸಚಿವರ ಕಾರ್ಯದರ್ಶಿ ಥಾನೆಟ್ಪೋಲ್ ಥಾನಬೂನ್ಯಾವತ್, ಸಚಿವಾಲಯವು ನಿಧಿ ಸಂಗ್ರಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಆದರೆ ಮೃಗಾಲಯದ ಮಾಲೀಕರಿಗೆ ಪಾವತಿಸಲು ಸಾಕಷ್ಟು ಹಣವನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.


"ಹಣವನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ"


"ನಾವು ಈ ಹಿಂದೆ ಬುವಾ ನೋಯಿ ಬಿಡುಗಡೆಗಾಗಿ ಮತ್ತು ನಿಧಿ ಸಂಗ್ರಹಿಸಲು ಪ್ರಚಾರವನ್ನು ನಡೆಸಿದ್ದೇವೆ. ನಾವು ಬುವಾ ನೋಯಿ ಅವರ ಬೆಂಬಲಿಗರಿಂದ ದೇಣಿಗೆ ಸಂಗ್ರಹಿಸಿದ್ದೇವೆ. ಆದರೆ ಸಮಸ್ಯೆಯೆಂದರೆ ಬುವಾ ನೋಯಿ ಬೆಲೆ ಹೆಚ್ಚಿದ್ದು ಅದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ" ಎಂದು ಥಾನಬೂನ್ಯಾವತ್ ವಿವರಿಸಿದರು.


ಇದನ್ನೂ ಓದಿ: ಮಗುವಿಗೆ ಒಂದೊಳ್ಳೆ ಹೆಸರು ಸೂಚಿಸುವುದಕ್ಕೆ ಪೋಷಕರು ಲಕ್ಷ ರೂಪಾಯಿ ಕೊಡ್ತಾರಂತೆ!


ಸರಿಯಾದ ದಾಖಲಾತಿಗಳ ಕೊರತೆಯಿಂದಾಗಿ, ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಮತ್ತು ಸಸ್ಯ ಸಂರಕ್ಷಣಾ ಇಲಾಖೆ ಅಧಿಕಾರಿಗಳು 2015 ರಲ್ಲಿ ಶಿಥಿಲಗೊಂಡ ರನ್‌ಡೌನ್ ಮೃಗಾಲಯವನ್ನು ಮುಚ್ಚಿದರು. ಆದರೆ ಬುವಾ ಅವರ ಪಂಜರದಲ್ಲಿಯೇ ಸಿಕ್ಕಿಹಾಕಿ ಕೊಳ್ಳುವಂತಾಯಿತು.


PETA ಏಷ್ಯಾದ ಹಿರಿಯ ಉಪಾಧ್ಯಕ್ಷ ಜೇಸನ್ ಬೇಕರ್, ಬುವಾ ಜೀವನ ಪರಿಸ್ಥಿತಿಗಳು 'ಭಯಾನಕ ಮತ್ತು ಕ್ರೂರವಾಗಿದೆ'. 'ಪೇಟಾ ಈ ಪ್ರಾಣಿಯನ್ನು ಪ್ರತಿಷ್ಠಿತ ಅಭಯಾರಣ್ಯಗಳಿಗೆ ಕಳುಹಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

First published: