Haunted Forest: ಈ ಕಾಡಿಗೆ ಕಾಲಿಟ್ಟರೆ ವಾಪಸ್​​ ಬರೋದು ಡೌಟ್​, ಇಲ್ಲಿವರಗೆ ಒಳಗೆ ಹೋದವರು ಯಾರೂ ಹೊರಬಂದಿಲ್ಲ!

Deadly Haunted Forest: ಈ ಕಾಡಿನಲ್ಲಿರುವ ಮರಗಳನ್ನ ಕಂಡರೇ ಭಯ ಹುಟ್ಟಿಸುವಂತಿದೆ. ಈ ಪ್ರದೇಶಕ್ಕೆ ಭೇಟಿ ಕೊಟ್ಟ ಸಾವಿರಾರು ಮಂದಿ ಕಣ್ಮರೆಯಾಗಿದ್ದಾರೆ. ಇಂದಿಗೂ ಅವರ ಕುರುಹುಗಳೂ ಕೂಡ ಪತ್ತೆಯಾಗಿಲ್ಲ.

ಹೋಯಾ ಬಾಸಿಯು ಕಾಡು

ಹೋಯಾ ಬಾಸಿಯು ಕಾಡು

  • Share this:
    World's Most Haunted Forest: ಈ ಪ್ರಪಂಚ(World)ದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಚಮತ್ಕಾರಗಳು ನಡೆಯುತ್ತಿರುತ್ತವೆ. ಈ ಭೂಮಿ ಮೇಲೆ ಅನೇಕ ವಿಚಿತ್ರ ಹಾಗೂ ನಿಗೂಢ ತಾಣಗಳು(Mysterious Places) ಹೆಚ್ಚಿದೆ. ಈ ಬಗ್ಗೆ ಅದೆಷ್ಟೇ ಸಂಶೋಧನೆ ನಡೆಸಿದ್ದರೂ ಇಂದಿಗೂ ಕೆಲವು ನಿಗೂಢಗಳಿಗೆ ಉತ್ತರ ಸಿಕ್ಕಿಲ್ಲ. ವಿಜ್ಞಾನಿಗಳ(Scientists) ಅದೆಷ್ಟೋ ಆವಿಷ್ಕಾರದ ಸುದ್ದಿಗಳ ಹೊರತಾಗಿಯೂ ಕೂಡ ಪವಾಡ ಎಂಬಂತೆ ಇನ್ನೂ ಕೆಲ ರಹಸ್ಯ ಸಂಗತಿಗಳು ಉತ್ತರವಿಲ್ಲದೆ ಹಾಗೆಯೇ ಉಳಿದಿವೆ. ಇದರಂತೆ ವಿಶ್ವದಲ್ಲಿ ಇಂತಹ ಹಲವು ಭಯಾನಕ ಪ್ರದೇಶಗಳಿವೆ. ಆ ಜಾಗಕ್ಕೆ ಹೋಗಲು ಅಥವಾ ಅಲ್ಲಿ ವಾಸಿಸಲು ಜನ ಗಡಗಡ ನಡುಗುತ್ತಾರೆ. ಕೆಲವು ಸಾಹಸಿಗಳು ಧೈರ್ಯ ಮಾಡಿ ಇಂತಹ ನಿಗೂಢ ಪ್ರದೇಶಗಳಿಗೆ ಹೋಗಿ ಕಣ್ಮರೆ(Disappeared) ಯಾಗಿದ್ದಾರೆ. ಇದೇ ರೀತಿ ವಿಶ್ವದ ಅತ್ಯಂತ ನಿಗೂಢ ಕಾಡಿಗೆ ಹೋದವರು ಮರಳಿ ಬಂದಿಲ್ವಂತೆ. ಎಲ್ಲಿದೆ ಆ ನಿಗೂಢ ಕಾಡು(Mysterious Forest)? ಅಲ್ಲಿ ಇರುವುದಾದರೂ ಯಾರು? ಯಾವ ದೇಶದಲ್ಲಿ ಇದೆ ಈ ಅರಣ್ಯ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

    ವಿಶ್ವದ ನಿಗೂಢ ಕಾಡು ಹೋಯಾ ಬಾಸಿಯು

    ಹೌದು, ರೊಮೇನಿಯಾದಲ್ಲಿರುವ ಹೋಯಾ ಬಾಸಿಯು ವಿಶ್ವದ ಅತ್ಯಂತ ನಿಗೂಢ ಕಾಡು ಎಂದು ಹೇಳಲಾಗುತ್ತೆ. ಈ ಕಾಡಿನ ಸುತ್ತಮುತ್ತ ವಾಸಿಸುತ್ತಿರುವ ಜನ ಸಂಜೆಯಾಗುತ್ತಿದ್ದಂತೆ ಮನೆ ಒಳಗೆ ಸೇರಿಕೊಳ್ಳುತ್ತಾರಂತೆ. ಈ ಕಾಡಿನ ಪ್ರದೇಶಕ್ಕೆ ಭೇಟಿ ಕೊಟ್ಟವರು ಯಾರೂ ವಾಪಸ್​ ಬಂದೇ ಇಲ್ಲವಂತೆ. ಅದೆಷ್ಟೋ ಮಂದಿ ಧೈರ್ಯ ಮಾಡಿ ಇಲ್ಲಿಗೆ ಹೋದವರು ಇಂದಿಗೂ ಕಣ್ಮರೆಯಾಗಿದ್ದಾರಂತೆ.

    ‘ಟ್ರಾನ್ಸಿಲ್ವೇನಿಯಾದ ಬರ್ಮುಡಾ ಟ್ರಯಾಂಗಲ್​’

    ಇಂತಹ ಅನೇಕ ವಿಚಿತ್ರ ಘಟನೆಗಳಿಗೆ ಟ್ರಾನ್ಸಿಲ್ವೇನಿಯಾ ಸಾಕ್ಷಿಯಾಗಿದೆ. ಜನರು ಈ ಪ್ರದೇಶಕ್ಕೆ ಬರಲು ಹೆದರುತ್ತಾರೆ. ಟ್ರಾನ್ಸಿಲ್ವೇನಿಯಾ ಪ್ರಾಂತ್ಯದ ಕ್ಲುಜ್​ ಕೌಂಟಿಯಲ್ಲಿ ಹೋಯಾ ಬಾಸಿಯು ಅರಣ್ಯ ಇದೆ. ಈ ಕಾಡಿನಲ್ಲಿ ನಡೆಯುತ್ತಿರುವ ಘಟನೆಗಳನ್ನ ನೋಡಿ, ಇದನ್ನು ‘ಟ್ರಾನ್ಸಿಲ್ವೇನಿಯಾದ ಬರ್ಮುಡಾ ಟ್ರಯಾಂಗಲ್​’ ಎಂದು ಕರೆಯಲಾಗುತ್ತೆ.

    World's most haunted deadly forest whoever enters never returns not one person came back alive till today where is it
    ಭಯಾನಕ ಅರಣ್ಯ ಹೋಯಾ ಬಾಸಿಯು


    ನಾಪತ್ತೆಯಾಗಿದ್ದಾರೆ ಸಾವಿರಾರು ಜನ

    'ದಿ ಇಂಡಿಪೆಂಡೆಂಟ್' ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಹೋಯಾ ಬಾಸಿಯು ಅನ್ನು ವಿಶ್ವದ ಅತ್ಯಂದ ಭಯಾನಕ ಅರಣ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ 'ಟ್ರಾನ್ಸಿಲ್ವೇನಿಯಾ ಟ್ರಯಾಂಗಲ್' (Bermuda Triangle Of Romania) ಎಂದು ಹೆಸರಿಡಲಾಗಿದೆ. ಈ ಕಾಡಿನಲ್ಲಿರುವ ಮರಗಳನ್ನ ಕಂಡರೇ ಭಯ ಹುಟ್ಟಿಸುವಂತಿದೆ. ಈ ಪ್ರದೇಶಕ್ಕೆ ಭೇಟಿ ಕೊಟ್ಟ ಸಾವಿರಾರು ಮಂದಿ ಕಣ್ಮರೆಯಾಗಿದ್ದಾರೆ. ಇಂದಿಗೂ ಅವರ ಕುರುಹುಗಳೂ ಕೂಡ ಪತ್ತೆಯಾಗಿಲ್ಲ.

    ಇದನ್ನೂ ಓದಿ: ಇದು ಬೆತ್ತಲೆ ಕಾಡು, ಮಹಿಳೆಯರಿಗೆ ಮಾತ್ರ ಪ್ರವೇಶ.. ಅಪ್ಪಿತಪ್ಪಿ ಪುರುಷರು ಪ್ರವೇಶಿಸಿದರೆ ಕತೆ ಅಷ್ಟೇ!

    ಇಲ್ಲಿ ನಿಜಕ್ಕೂ ಇದೆಯಾ ದೆವ್ವಗಳ ಆಟ?

    ಈ ಕಾಡಿಗೆ ಭೇಟಿ ಕೊಟ್ಟವರು ಯಾಕೆ ಕಾಣೆಯಾಗುತ್ತಿದ್ದಾರೆ ಅಂತ ಉತ್ತರ ಇಂದಿಗೂ ಸಿಕ್ಕಿಲ್ಲ. ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ, ನೂರಾರು ವರ್ಷಗಳ ಹಿಂದೆ ಈ ಕಾಡಿಗೆ 200 ಕುರಿಗಳ ಜತೆ ಕುರಿಗಾಹಿ ಒಬ್ಬ ಭೇಟಿ ನೀಡಿದ್ದನಂತೆ. ಈ ಕಾಡಿಗೆ ಹೋದ ನಂತರ 200 ಕುರಿಗಳ ಜತೆ ಆತ ನಾಪತ್ತೆಯಾಗಿದ್ದ. ಆಗಿನಿಂದ ಈ ರೀತಿಯ ನಿಗೂಢ ಘಟನೆಗಳು ನಡೆಯುತ್ತಿವೆ ಎಂದು ಹೇಳುತ್ತಾರೆ. ಆತ ಮೃತಪಟ್ಟು ದೆವ್ವವಾಗಿ ಇಲ್ಲಿಗೆ ಹೋದವರ ರಕ್ತ ಕುಡಿಯುತ್ತಾನೆ ಅಂತ ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಇಲ್ಲಿನ ರಹಸ್ಯ ಬೇಧಿಸಲು ಇಷ್ಟೆಲ್ಲ ನಿಗೂಢತೆಯಿಂದ ಕೂಡಿರುವ ಕಾಡಿಗೆ ಅನೇಕ ಸಾಹಸಿಗರು ಭೇಟಿ ನೀಡಿ ಕಣ್ಮರೆಯಾಗಿದ್ದರಂತೆ. ಪ್ರಯಾಣಿಕರು ಕೂಡ ಈ ದಾರಿ ಕಡೆ ತಲೆ ಕೂಡ ಹಾಕಲ್ಲವಂತೆ. ಅಷ್ಟರ ಮಟ್ಟಿಗೆ ಈ ಕಾಡು ಜನರಲ್ಲಿ ಭಯ ಹುಟ್ಟಿಸಿದೆ.

    (ವರದಿ - ವಾಸುದೇವ್​. ಎಂ)
    Published by:Soumya KN
    First published: