• Home
  • »
  • News
  • »
  • trend
  • »
  • World's Expensive Vegetable: ಪ್ರಪಂಚದ ಅತ್ಯಂತ ದುಬಾರಿ ತರಕಾರಿ, ಬಂಗಾರಕ್ಕಿಂತಲೂ ಕಾಸ್ಟ್ಲಿ

World's Expensive Vegetable: ಪ್ರಪಂಚದ ಅತ್ಯಂತ ದುಬಾರಿ ತರಕಾರಿ, ಬಂಗಾರಕ್ಕಿಂತಲೂ ಕಾಸ್ಟ್ಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Expensive Vegetable: ಭಾರತದ ಹಿಮಾಚಲ ಪ್ರದೇಶದಲ್ಲಿ ಈ ಹಿಂದೆ ಹಾಪ್‌ ಸಸ್ಯಗಳನ್ನು ಬೆಳೆಸಲಾಗುತ್ತಿತ್ತು, ಆದರೆ ಮಾರುಕಟ್ಟೆ ಕೊರತೆ ಮತ್ತು ಹೆಚ್ಚಿನ ಕೃಷಿ ವೆಚ್ಚದ ಕಾರಣದಿಂದ ಈ ಯೋಜನೆಯನ್ನು ಅಷ್ಟೇ ವೇಗವಾಗಿ ಕೈಬಿಡಲಾಯಿತು

  • Trending Desk
  • 3-MIN READ
  • Last Updated :
  • Share this:

ಜಗತ್ತಿನ ಎಲ್ಲೆಡೆ ಈಗ ಸಸ್ಯಾಹಾರವನ್ನು (Veg Food) ಸೇವಿಸುವವರು ಗಣನೀಯವಾಗಿ ಹೆಚ್ಚುತ್ತಲೇ ಇದ್ದಾರೆ. ಆದ್ದರಿಂದ ಸಸ್ಯಾಹಾರಕ್ಕೆ ಬೆಲೆ ಜಾಸ್ತಿ ಆಗುತ್ತಿದೆ. ಆದರೂ ಸಹ ಮಾಂಸಹಾರದ ಊಟಕ್ಕೆ ಹೋಲಿಕೆ ಮಾಡಿದರೆ ಸಸ್ಯಾಹಾರದ ಊಟ (Food)  ಸ್ವಲ್ಪ ಕಡಿಮೆ ಅಂತಾನೇ ಹೇಳಬಹುದು. ಆದರೆ ಇಲ್ಲಿ ಸಸ್ಯಾಹಾರಕ್ಕಾಗಿ ಬರೋಬ್ಬರಿ 85,000 ರೂ. ಗಳನ್ನು ಖರ್ಚು ಮಾಡೋದು ಅಂದ್ರೆ ನಿಮಗೆ ಇದು ಜೋಕ್‌ (Joke) ಅನಿಸಬಹುದು. ಆದರೆ ಇಲ್ಲಿ ನಾವು ಹೇಳ ಹೊರಟಿರೋದು ಒಂದು ಸಸ್ಯಕ್ಕೆ ಸರಿಸುಮಾರು ಒಂದು ಕಿಲೋಗ್ರಾಮ್‌ಗೆ 85000 ರೂ. ಗಳು ಅಂದ್ರೆ ಈಗ ನಂಬಲೇಬೇಕು. ಏನಿದು ವಿಷಯ ಅಂತ ನಿಮಗೆ ಆಶ್ಚರ್ಯವಾಗಬಹುದು. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.


ಪ್ರಪಂಚದ ಅತ್ಯಂತ ದುಬಾರಿ ತರಕಾರಿ ಇದು


ಪ್ರಪಂಚದ ಅತ್ಯಂತ ದುಬಾರಿ ತರಕಾರಿ ಎಂದು ಹಾಪ್‌ ಸಸ್ಯವನ್ನು ಕರೆಯಲಾಗುತ್ತದೆ. ಹಾಪ್ ಚಿಗುರುಗಳು,  ಹಾಪ್ ಸಸ್ಯದ ಹಸಿರು ಚಿಗುರುಗಳಾಗಿವೆ. ಹಾಪ್ ಸಸ್ಯವನ್ನು ಸಾಮಾನ್ಯವಾಗಿ ಬಿಯರ್‌ ತಯಾರಿಸಲು ಬಳಕೆ ಮಾಡಲಾಗುತ್ತದೆ. ಅದರ ಹೂವುಗಳನ್ನು ಆಲ್ಕೊಹಾಲ್ಯುಕ್ತ ಪಾನೀಯದ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಅದರ ಜೊತೆಗೆ, ಆ ಹೂವುಗಳನ್ನು ಕೊಯ್ಲು ಮಾಡಿದ ನಂತರ ಹಾಪ್ ಚಿಗುರುಗಳನ್ನು ಹಾಗೆಯೇ ಬಿಡಲಾಗುವುದಿಲ್ಲ. ಬದಲಾಗಿ, ಅದರ ಹಸಿರು ಚಿಗುರುಗಳನ್ನು ಸಹ ಪಾಕ ಜಗತ್ತು ಅದ್ಬುತವಾಗಿ ಬಳಸಿಕೊಳ್ಳುತ್ತದೆ.


ಹಾಪ್‌ ಚಿಗುರು ದುಬಾರಿಯೇಕೆ?


ಸುದ್ದಿ ಮಾಧ್ಯಮ ದಿ ಗಾರ್ಡಿಯನ್‌ ಪ್ರಕಾರ “ಒಂದು ಕಿಲೋಗ್ರಾಂ ಹಾಪ್ ಚಿಗುರುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 85,000 ರಿಂದ 1 ಲಕ್ಷ ರೂ. ಬೆಳೆ ಬಾಳುತ್ತವೆ. ಈ ಚಿಗುರುಗಳು ಏಕೆ ಇಷ್ಟೊಂದು ದುಬಾರಿಯಾಗಿವೆ ಅಂದ್ರೆ ಈ ಸಸ್ಯಗಳನ್ನು ಬೆಳೆಯುವುದು ಮತ್ತು ಕೊಯ್ಲು ಮಾಡುವುದು ಅತ್ಯಂತ ಕಷ್ಟಕರವಾದ ಕೆಲಸವಾಗಿರುವುದರಿಂದ ಇದರ ಚಿಗುರುಗಳು ಅತ್ಯಂತ ದುಬಾರಿ ತರಕಾರಿಗಳಾಗಿ ಹೊರಹೊಮ್ಮಿವೆ” ಎಂದು ವರದಿಯಲ್ಲಿ ತಿಳಿಸಲಾಗಿದೆ.


ಹಾಪ್ ಸಸ್ಯಗಳು ಒಂದೇ ಕಡೆ ಬೆಳೆಯುವುದಿಲ್ಲ. ಅಂದರೆ ಚಿಗುರುಗಳನ್ನು ಕೊಯ್ಲು ಮಾಡಲು ಸಸ್ಯದ ಕೆಳಗೆ ಮತ್ತು ಅದರ ಸುತ್ತಲೂ ಕೊಯ್ಲು ಮಾಡುವ ಅಗತ್ಯವಿರುತ್ತದೆ. ಇದಲ್ಲದೆ, ಈ ಚಿಗುರುಗಳು ಚಿಕ್ಕದಾಗಿರುತ್ತವೆ. ಒಂದು ಕಿಲೋಗ್ರಾಂ ಹಾಪ್‌ ಚಿಗುರಿಗೆ ನೂರಾರು ಹಾಪ್ ಚಿಗುರುಗಳನ್ನು ಕೊಯ್ಲು ಮಾಡುವ ಅವಶ್ಯಕತೆ ಇರುತ್ತದೆ. ಇದಕ್ಕೆ ಈ ಸಸ್ಯ ಅತ್ಯಂತ ದುಬಾರಿ ಸಸ್ಯಯಾಗಿ ಹೊರಹೊಮ್ಮಿರುವುದು.


ಇದನ್ನೂ ಓದಿ:ನೆಟ್ಟಿಗರ ಮನ ಸೆಳೆದ ನವಿಲಿನ ಸುಂದರ ವಿಡಿಯೋ, ನೀವೂ ನೋಡಿ ಕಣ್ತುಂಬಿಕೊಳ್ಳಿ


ಭಾರತದಲ್ಲಿ ಹಾಪ್ ಕೃಷಿ


ಹಾಪ್ ಸಸ್ಯವನ್ನು ಹ್ಯೂಮುಲಸ್ ಲುಪ್ಯುಲಸ್ ಎಂದು ಕರೆಯಲಾಗುತ್ತದೆ. ಸಮಶೀತೋಷ್ಣ ವಲಯದ ಉತ್ತರ ಅಮೇರಿಕಾ, ಯುರೇಷಿಯಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಬೆಳೆಯುವ ಸ್ಥಳೀಯ ಸಸ್ಯವಾಗಿದೆ. ಉಷ್ಣವಲಯದ ಹವಾಮಾನದಲ್ಲಿ ಹಾಪ್ಸ್ ಚೆನ್ನಾಗಿ ಬೆಳೆಯುತ್ತದೆ. ಆದರೆ ಭಾರತದಲ್ಲಿ ಈ ಕೃಷಿಯು ಲಾಭದಾಯಕ ವ್ಯಾಪಾರವಾಗಿಲ್ಲ.


ತಜ್ಞರ ಅಭಿಪ್ರಾಯವೇನು?


ಮೈಕ್ರೋಬ್ರೂವರಿ ತಜ್ಞ ರೋಹಿತ್ ಜಾಫಾ ಅವರ ವೆಬ್‌ಸೈಟ್‌ನ ಪ್ರಕಾರ, “ಭಾರತದ ಹಿಮಾಚಲ ಪ್ರದೇಶದಲ್ಲಿ ಈ ಹಿಂದೆ ಹಾಪ್‌ ಸಸ್ಯಗಳನ್ನು ಬೆಳೆಸಲಾಗುತ್ತಿತ್ತು, ಆದರೆ ಮಾರುಕಟ್ಟೆ ಕೊರತೆ ಮತ್ತು ಹೆಚ್ಚಿನ ಕೃಷಿ ವೆಚ್ಚದ ಕಾರಣದಿಂದ ಈ ಯೋಜನೆಯನ್ನು ಅಷ್ಟೇ ವೇಗವಾಗಿ ಕೈಬಿಡಲಾಯಿತು." ಎಂದು ತಿಳಿಸಿದ್ದಾರೆ.


"ಹಾಪ್‌ ಸಸ್ಯಗಳು ಹೇಗ್‌ ಹೇಗೋ ಬೆಳೆಯುತ್ತವೆ,  ಅವುಗಳನ್ನು ಹುಡುಕುವುದು, ಕೊಯ್ಲು ಮಾಡುವುದು ಅತ್ಯಂತ ಕಷ್ಟದ ವಿಷಯ. ಹಾಪ್‌ ಸಸ್ಯಗಳನ್ನು ಜಾಸ್ತಿ ಕೊಯ್ಲು ಮಾಡಬೇಕು ಅಂದ್ರೆ ಬಹಳಷ್ಟು ಕಷ್ಟ ಪಡಬೇಕು” ಎಂದು ರೋಹಿತ್ ಜಾಫಾ ಹೇಳುತ್ತಾರೆ.


ಇದನ್ನೂ ಓದಿ: ಲೆಹೆಂಗಾದಲ್ಲಿ ಬಂದ ಅಮೆರಿಕದ ವಧು, ಅದ್ಭುತವಾಗಿತ್ತು ಅಪ್ಪನ ಪ್ರತಿಕ್ರಿಯೆ


ಕಳೆದ ವರ್ಷ, ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ರೈತರೊಬ್ಬರು ಹಾಪ್‌ಗಳನ್ನು ಬೆಳೆಯುತ್ತಿದ್ದಾರೆ ಎಂದು ವರದಿಯಾಗಿತ್ತು. ಇದರ ಕುರಿತು ಹಿಂದಿ ಪತ್ರಿಕೆ ದೈನಿಕ್ ಜಾಗರಣ್‌ನ ತಂಡವು ರೈತನನ್ನು ಭೇಟಿ ಮಾಡಿದಾಗ ಅವರ ಜಮೀನಿನಲ್ಲಿ ಯಾವುದೇ ಹಾಪ್‌ ಸಸ್ಯಗಳನ್ನು ಬೆಳೆಯುತ್ತಿಲ್ಲ ಎಂದು ತಿಳಿದಾಗ ಈ ವರದಿಗಳು ಎಲ್ಲ ಸುಳ್ಳು ಎಂದು ಸಾಬೀತಾಯಿತು.

Published by:Sandhya M
First published: