World Costly Vegetable: ಇದು ಜಗತ್ತಿನ ಅತಿ ದುಬಾರಿ ತರಕಾರಿ; ಕೆಜಿಗೆ 85 ಸಾವಿರದಿಂದ 1 ಲಕ್ಷ ರೂಪಾಯಿ

ಹಾಪ್​ ಶೂಟ್ಸ್​

ಹಾಪ್​ ಶೂಟ್ಸ್​

ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಾಪ್ಸ್‌ ಶೂಟ್ಸ್‌ ಸ್ನಾಯುಗಳ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹಲವು ಅಧ್ಯಯನಗಳು ಹಾಪ್ಸ್‌ಗಳು ಸ್ನಾಯುಗಳ ನೋವನ್ನು ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತವೆ ಎಂದು ಹೇಳುತ್ತವೆ.

  • Trending Desk
  • 5-MIN READ
  • Last Updated :
  • Share this:

ನಮ್ಮಲ್ಲಿ ಹಣ್ಣುಗಳ ರೇಟ್‌ (Fruits Rate) ಸ್ವಲ್ಪ ದುಬಾರಿ ಅನಿಸಿದ್ರೂ ತರಕಾರಿಗಳ ರೇಟ್‌ (Vegetables Rate) ಕೆಜಿಗೆ ಅಬ್ಬಬ್ಬಾ ಅಂದ್ರೆ 30 ರೂ ನಿಂದ 150 ರೂಪಾಯಿಗಳವರೆಗೆ ತನಕ ಏರಿಕೆಯಾಗಬಹುದು. ಆದ್ರೆ ಇಲ್ಲೊಂದು ತರಕಾರಿ ಬೆಲೆ ಒಂದು ಕೆಜಿ ಗೆ ಬರೋಬ್ಬರಿ 85 ಸಾವಿರದಿಂದ 1 ಲಕ್ಷದವರೆಗೆ ಇದೆ ಎಂದರೆ ಅಚ್ಚರಿ ಪಡದೇ ಸುಮ್ಮನಿರಲಾಗದು. ಯಾವುದಪ್ಪ ಈ ತರಕಾರಿ? ಅಷ್ಟಕ್ಕೂ ಇಷ್ಟೆಲ್ಲಾ ಹಣ ಸುರಿದು ಈ ತರಕಾರಿನಾ ತಿಂತಾರಾ ಅಂತಾ ನೀವು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದು. ಜಗತ್ತಿನಲ್ಲಿ ದುಬಾರಿ ತರಕಾರಿ (world costly vegetable) ಎನಿಸಿಕೊಂಡಿರುವ ಈ ವೆಜಿಟೇಬಲ್‌ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ.


ದುಬಾರಿ ತರಕಾರಿ ಹಾಪ್ ಶೂಟ್ಸ್


ಹಾಪ್ ಶೂಟ್ಸ್‌ (Hop Shoots) ಅನ್ನೋ ಈ ತರಕಾರಿಯು ಜಾಗತಿಕ ಮಾರುಕಟ್ಟೆಯಲ್ಲಿ (International Market) ಅತ್ಯಂತ ದುಬಾರಿ ತರಕಾರಿ ಎಂದು ಪರಿಗಣಿಸಲಾಗಿದೆ. ಮೊಗ್ಗುಗಳಂತೆ ಕಾಣುವ ಈ ತರಕಾರಿ ಬೆಲೆಯು ಕಿಲೋಗೆ 85,000 ರಿಂದ 1 ಲಕ್ಷ ರೂ ಆಗಿದೆ. ಈ ತರಕಾರಿಯನ್ನು ಬೆಳೆಸುವುದು ಮತ್ತು ಕೊಯ್ಲು ಮಾಡುವುದು ಶ್ರಮದಾಯಕವಾದ ಕಾರಣ ಇದು ಬಹಳ ದುಬಾರಿ ಎನ್ನಲಾಗುತ್ತದೆ.


ತಜ್ಞರ ಪ್ರಕಾರ, ಅವು ಏಕರೂಪದ ಸಾಲುಗಳಲ್ಲಿ ಬೆಳೆಯುವುದಿಲ್ಲ. ಅಂದರೆ ಚಿಗುರುಗಳನ್ನು ಕೊಯ್ಲು ಮಾಡುವುದು ಅಗತ್ಯವಾಗಿರುತ್ತದೆ. ಹಾಗಾಗಿ ಅವುಗಳನ್ನು ಹುಡುಕಿ ಕೊಯ್ಲು ಮಾಡುವುದು ಕಷ್ಟ. ಇದಕ್ಕೆ ಕೈಯ್ಯಿಂದ ಸಾಕಷ್ಟು ಶ್ರಮ ಹಾಕಬೇಕಾಗುತ್ತದೆ.


ಇನ್ನು, ಅವು ಹಾಪ್ ಸಸ್ಯದ ಹಸಿರು ಸುಳಿಗಳಾಗಿವೆ. ಇದು ಸಾಮಾನ್ಯವಾಗಿ ಬಿಯರ್‌ನೊಂದಿಗೆ ಸಂಬಂಧಿಸಿದೆ. ಏಕೆಂದರೆ ಹೂವುಗಳನ್ನು ಆಲ್ಕೊಹಾಲ್ಯುಕ್ತ ಪಾನೀಯಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಹಸಿರು ಎಳೆಗಳನ್ನು ಇತರ ವಿಶೇಷ ಅಡುಗೆಗಳಲ್ಲೂ ಬಳಸಲಾಗುತ್ತದೆ.


ಪೌಷ್ಠಿಕಾಂಶವುಳ್ಳ ತರಕಾರಿ


ಹಾಪ್ ಶೂಟ್ಸ್‌ ವಿವಿಧ ತೈಲಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುವ ಗಿಡಮೂಲಿಕೆ ಔಷಧಿ ಎಂದು ಪರಿಗಣಿಸಲಾಗಿದೆ. ವಿಟಮಿನ್ ಇ, ವಿಟಮಿನ್ ಬಿ 6 ಮತ್ತು ವಿಟಮಿನ್ ಸಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಅಲ್ಲದೇ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚು ಸಕ್ರಿಯವಾಗಿ ಮಾಡುತ್ತದೆ.


ಚರ್ಮಕ್ಕೆ ಒಳ್ಳೆಯದು


ಈ ಸಸ್ಯದಲ್ಲಿ ಕಂಡುಬರುವ ನೈಸರ್ಗಿಕ ತೈಲ ಮತ್ತು ಖನಿಜಗಳು, ಚರ್ಮಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದನ್ನು ಚರ್ಮದ ಮೇಲ್ಮೈ ರಕ್ತನಾಳಗಳ ಆರೋಗ್ಯಕ್ಕಾಗಿ ಬಳಸಲಾಗುತ್ತದೆ. ಚರ್ಮದಲ್ಲಿ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡಲು ಬಳಸಲಾಗುತ್ತದೆ.


world costly vegetable, hop shoots price, most expensive vegetable, kannada news, karnataka news, ವಿಶ್ವದ ಅತಿ ದುಬಾರಿ ತರಕಾರಿ, ಹಾಪ್​ ಶೂಟ್ಸ್ ತರಕಾರಿ ಬೆಲೆ,
ಹಾಪ್​ ಶೂಟ್ಸ್​


ಕೂದಲು ಉದುರುವುದನ್ನು ತಡೆಯುತ್ತದೆ


ಅಧ್ಯಯನಗಳ ಪ್ರಕಾರ, ಕೆಲವೊಂದು ಸಂದರ್ಭಗಳಲ್ಲಿ ಬಿಯರ್ ನಿಂದ ಕೂದಲು ತೊಳೆಯಲು ಸೂಚಿಸಲಾಗುತ್ತದೆ. ಏಕೆಂದರೆ ಇದು ಉತ್ಕರ್ಷಣ ನಿರೋಧಕಗಳ ಹೊಂದಿರುತ್ತದೆ.




ಹಾಗಾಗಿ ಈ ತರಕಾರಿ ಕೂಡ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದಲ್ಲದೇ ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.


ಸ್ನಾಯುಗಳ ನೋವು ನಿವಾರಣೆ


world costly vegetable, hop shoots price, most expensive vegetable, kannada news, karnataka news, ವಿಶ್ವದ ಅತಿ ದುಬಾರಿ ತರಕಾರಿ, ಹಾಪ್​ ಶೂಟ್ಸ್ ತರಕಾರಿ ಬೆಲೆ,
ಹಾಪ್​ ಶೂಟ್ಸ್​


ಇದನ್ನೂ ಓದಿ:  Healthy Habits: ಬಾಲ್ಯದಿಂದಲೇ ಈ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ!


ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ


ಹಾಪ್‌ ಶೂಟ್ಸ್‌ ದೇಹದ ಚಯಾಪಚಯವನ್ನು ವೇಗಗೊಳಿಸುತ್ತದೆ. ಆದ್ದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚು ಪ್ರಯೋಜನಕಾರಿ ಎಂಬುದಾಗಿ ಹೇಳಲಾಗುತ್ತದೆ.


ನಿದ್ರಾಹೀನತೆಗೆ ಒಳ್ಳೆಯದು


ಅಧ್ಯಯನಗಳ ಪ್ರಕಾರ, ಹಾಪ್ ಶೂಟ್ಸ್‌ ಉತ್ತಮ ನಿದ್ರೆಗೆ ಸಹಕಾರಿ. ಹಾಗಾಗಿ ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಇದನ್ನು ಸೇವಿಸಲು ಸಲಹೆ ನೀಡಲಾಗುತ್ತದೆ.


world costly vegetable, hop shoots price, most expensive vegetable, kannada news, karnataka news, ವಿಶ್ವದ ಅತಿ ದುಬಾರಿ ತರಕಾರಿ, ಹಾಪ್​ ಶೂಟ್ಸ್ ತರಕಾರಿ ಬೆಲೆ,
ಹಾಪ್​ ಶೂಟ್ಸ್​


ಮುಟ್ಟಿನ ಸೆಳೆತಕ್ಕೆ ಚಿಕಿತ್ಸೆ ನೀಡುತ್ತದೆ


ಹಾಪ್ಸ್‌ನಲ್ಲಿರುವ ಸಾರಭೂತ ತೈಲಗಳು ಹಿತವಾದ ಗುಣಲಕ್ಷಣಗಳನ್ನು ಮತ್ತು ನಿದ್ರೆಯ ಪರಿಣಾಮವನ್ನು ಹೊಂದಿವೆ. ಅದು ಮಹಿಳೆಯರಲ್ಲಿ ಮುಟ್ಟಿನ ಸೆಳೆತ ಮತ್ತು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಸ್ನಾಯುಗಳನ್ನು ಸಡಿಲಗೊಳಿಸಲು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published by:Mahmadrafik K
First published: