World Photography Day 2021: ಈ ವರ್ಷ ವೈರಲ್ ಆದ ಫೋಟೋಗಳ ವಿವರ ಇಲ್ಲಿದೆ.

ವಿಶ್ವ ಛಾಯಾಗ್ರಹಣ ದಿನದಂದು ಈ ವರ್ಷ ವೈರಲ್ ಆಗಿರುವ ಕೆಲವು ಫೋಟೋಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಮಯನ್ಮಾರ್ ಸೈನಿಕರಿಗೆ ಕ್ರೈಸ್ತ ಸನ್ಯಾಸಿನಿಯ ಮನವಿ

ಮಯನ್ಮಾರ್ ಸೈನಿಕರಿಗೆ ಕ್ರೈಸ್ತ ಸನ್ಯಾಸಿನಿಯ ಮನವಿ

  • Share this:

ಫೋಟೋಗಳು ಇಲ್ಲದೇ ಇದ್ದಿದ್ದರೆ, ಜಗತ್ತು ಅಸಂಖ್ಯ ನೆನಪುಗಳು ಮತ್ತು ಮೈಲಿಗಲ್ಲುಗಳನ್ನು ಕಳೆದುಕೊಳ್ಳಬೇಕಾಗುತ್ತಿತ್ತು. ಫೋಟೋಗಳು ಇತಿಹಾಸ ಸಂರಕ್ಷಿಸುವ ಸಾಧನ ಮಾತ್ರವಲ್ಲ, ಭಾಷೆ ಮತ್ತು ಗಡಿಗಳನ್ನು ಮೀರಿ ಕಥೆ ಹೇಳುವ ಪರಿಣಾಮಕಾರಿ ವಿಧಾನವೂ ಹೌದು. ಹಾಗಾಗಿ ಛಾಯಾಗ್ರಹದ ಮಾಂತ್ರಿಕತೆ ಒಪ್ಪಿಕೊಳ್ಳಲು ಮತ್ತು ಗೌರವ ನೀಡಲು ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಆಗಸ್ಟ್ 19. ವಿಶ್ವ ಛಾಯಾಗ್ರಹಣ ದಿನದಂದು ಈ ವರ್ಷ ವೈರಲ್ ಆಗಿರುವ ಕೆಲವು ಫೋಟೋಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.


ಅಮೆರಿಕ ವಿಮಾನದಲ್ಲಿ 600 ಅಫ್ಘಾನಿಗಳುಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಳ್ಳುತ್ತಲೇ, ವಿನಾಶದ ಮತ್ತು ನಷ್ಟದ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಿ ತುಳುಕತೊಡಗಿವೆ. ಅಂತಹ ಚಿತ್ರಗಳಲ್ಲಿ, ಅಮೆರಿಕ ವಾಯುಪಡೆಯ ವಿಮಾನದಲ್ಲಿ 600 ಅಪಘಾನಿಗಳು ತುಂಬಿಕೊಂಡಿರುವ ಚಿತ್ರವೂ ಒಂದು. ಈ ಚಿತ್ರ ಇಂತಹ ಸಂದರ್ಭದಲ್ಲಿ ಅಫ್ಘಾನಿಸ್ತಾನ ಜನರು ತಮ್ಮನ್ನು ತಾವು ಕಂಡುಕೊಳ್ಳಲು ನಡೆಸುತ್ತಿರುವ ಸಂಘರ್ಷದ ಸಂಕೇತವಾಗಿದೆ. ಸಿ-17 ಗ್ಲೋಬ್ ಮಾಸ್ಟರ್‌ನಲ್ಲಿ ಯಾವುದೇ ಭಯವಿಲ್ಲದೇ, ಸಾಮಾನುಗಳಿಲ್ಲದೆ ನೂರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಕೂಡಿಕೊಂಡಿರುವ ದೃಶ್ಯ ಈ ಚಿತ್ರದಲ್ಲಿದೆ.ಒಲಂಪಿಯನ್ ಡೈವರ್ ಟಾಮ್ ಡೇಲಿ ಅವರ ಹೆಣಿಗೆಟೋಕಿಯೋ ಒಲಂಪಿಕ್ಸ್ ಅನ್ನು ಕೋವಿಡ್ -19 ಸಾಂಕ್ರಾಮಿಕದ ನಡುವೆ ನಡೆಸಲಾಗಿದ್ದು , ಅದು ಆಟದ ಇತರ ಆವೃತ್ತಿಗಳಿಗಿಂತ ಬಹುತೇಕ ಭಿನ್ನವಾಗಿದೆ. ಈ ಒಲಂಪಿಕ್ ಪಂದ್ಯಾವಳಿಯ ಸಂದರ್ಭದಲ್ಲಿ ತೆಗೆಯಾದ ಫೋಟೋವೊಂದು ಜಗತ್ತಿನಾದ್ಯಂತ ಜನರ ಮುಖದಲ್ಲಿ ನಗು ಮೂಡಿಸುವಲ್ಲಿ ಸಫಲವಾಗಿದೆ. ಅದು ಬ್ರಿಟನಿನ ಒಲಂಪಿಯನ್ ಟಾಮ್ ಡೇಲಿ ಹೆಣಿಗೆ ಮಾಡುತ್ತಾ, ಮಹಿಳೆಯರ 3 ಮೀಟರ್ ಸ್ಪ್ರಿಂಗ್‍ಬೋರ್ಡ್ ಫೈನಲ್ ವೀಕ್ಷಿಸುತ್ತಿರುವ ಫೋಟೋ. ಈ ಫೋಟೋ ವೈರಲ್ ಆದ ಕೆಲವೇ ದಿನಗಳ ಮೊದಲು 27 ವರ್ಷದ ಆ ಡೈವರ್ ಡೇಲಿ, 10 ಮೀಟರ್ ಫ್ಲಾಟ್‍ಫಾರ್ಮ್ ಡೈವಿಂಗ್‍ನಲ್ಲಿ ಚಿನ್ನ ಗೆದ್ದಿದ್ದರು.ಕ್ರಿಶ್ಚಿಯನ್ ಎರಿಕ್ಸನ್ ಅವರನ್ನು ತಂಡ ಸುತ್ತುವರಿದದ್ದು

ಜೂನ್‍ನಲ್ಲಿ ನಡೆದ ಪಂದ್ಯದ ವೇಳೆ ಡೆನ್ಮಾರ್ಕ್‍ನ ಮಿಡಲ್ ಫೀಲ್ಡರ್ ಕ್ರಿಶ್ಚಿಯನ್ ಎರಿಕ್ಸನ್ ಮೈದಾನದಲ್ಲೇ ಕುಸಿದು ಬಿದ್ದಾಗ, ಪಂದ್ಯವನ್ನು ವೀಕ್ಷಿಸುತ್ತಿದ್ದ ಫುಟ್‍ಬಾಲ್ ಅಭಿಮಾನಿಗಳ ಹೃದಯ ಬಡಿದ ನಿಂತು ಹೋದಂತಾಗಿತ್ತು. ಆ ಕ್ಷಣವೇ ಆತನ ತಂಡದ ಮತ್ತು ಎದುರಾಳಿ ಫಿನ್‍ಲ್ಯಾಂಡ್ ತಂಡದ ಸದಸ್ಯರು ಸಹಾಯಕ್ಕೆ ಧಾವಿಸಿದರು. ತಂಡದ ಸದಸ್ಯರು, ಚಲನೆಯಿಲ್ಲದೆ ಮೈದಾನದಲ್ಲಿ ಮಲಗಿದ್ದ ಆತನನ್ನು ಸುತ್ತುವರಿದು ನಿಂತು, ಎರಿಕ್ಸನ್‍ಗೆ ಆ ದುರ್ಬಲ ಕ್ಷಣದಲ್ಲಿ ಅಗತ್ಯವಿದ್ದ ಗೌಪ್ಯತೆ ಮತ್ತು ಗೌರವವನ್ನು ಒದಗಿಸಿತು. ಆ ಕ್ಷಣದಲ್ಲಿ ಸೆರೆ ಹಿಡಿಯಲಾದ, ಸೋದರತ್ವ ಹಾಗೂ ಬಂಧುತ್ವವನ್ನು ಬಿಂಬಿಸುವ ಫೋಟೋ ವೈರಲ್ ಆಗಿತ್ತು.ಮಯನ್ಮಾರ್ ಸೈನಿಕರಿಗೆ ಕ್ರೈಸ್ತ ಸನ್ಯಾಸಿನಿಯ ಮನವಿ

ನಾಗರಿಕ ನಾಯಕ ಆಂಗ್ ಸಾನ್ ಸೂಕಿಯ ಮಿಲಿಟರಿ ಉಚ್ಛಾಟನೆಯ ನಂತರ, ಅಲ್ಲಿ ಗೊಂದಲದ ಸ್ಥಿತಿ ಉಂಟಾಗಿತ್ತು. ಆ ಸಂದರ್ಭದಲ್ಲಿ ಸಂಘರ್ಷವಲಯದಲ್ಲಿ ಸೆರೆ ಹಿಡಿಯಲಾದ ಚಿತ್ರವೊಂದು ಸಹಾನುಭೂತಿ ಮತ್ತು ಧೈರ್ಯದ ಸಂಕೇತವಾಗಿ ಮುನ್ನೆಲೆಗೆ ಬಂತು. ಅದು ಕ್ರೈಸ್ತ ಸನ್ಯಾಸಿ ಆನ್ ರೋಸ್ ತವಂಗ್, ‘ಮಕ್ಕಳನ್ನು’ ಉಳಿಸಿ ಮತ್ತು ಬದಲಿಗೆ ತನ್ನ ಜೀವವನ್ನು ತೆಗೆದುಕೊಳ್ಳಿ ಎಂದು ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳ ಮುಂದೆ ಮಂಡಿಯೂರಿ ಬೇಡಿಕೊಳ್ಳುತ್ತಿರುವ ಫೋಟೋ. ಶ್ವೇತ ವಸ್ತ್ರಧಾರಿಯಾಗಿ ಕೈಗಳನ್ನು ಹರಡಿ ಕೂತಿದ್ದ ಆಕೆಯ ಚಿತ್ರ ಶಾಂತಿ, ಸಹಾನುಭೂತಿ ಮತ್ತು ಧೈರ್ಯದ ಸಂಕೇತವಾಯಿತು.ಕೋವಿಡ್ -19ನಿಂದ ಮೃತರಾದವರ ಸಾಮೂಹಿಕ ಅಂತ್ಯ ಸಂಸ್ಕಾರಕೋವಿಡ್ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಅತ್ಯಧಿಕವಾಗಿತ್ತು. ಇದರಿಂದಾಗಿ ಆರೋಗ್ಯ ಸೇವೆಗಳು ಮತ್ತು ಅಂತ್ಯ ಸಂಸ್ಕಾರ ಸೇವೆಗಳು ತೀವ್ರ ಒತ್ತಡಕ್ಕೆ ಸಿಲುಕಿದವು. ಹಾಗಾಗಿ ಅನೇಕ ಕುಟುಂಬಗಳಿಗೆ ,ಕೋವಿಡ್‍ನಿಂದ ಮೃತರಾದ ತಮ್ಮ ಪ್ರೀತಿಪಾತ್ರರಿಗೆ ಸೂಕ್ತ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡುವುದು ಸಾಧ್ಯವಾಗಲಿಲ್ಲ. ಅಂತಹ ದುರಂತ ಹಾಗೂ ಕಷ್ಟಕರ ಸನ್ನಿವೇಶಗಳಲ್ಲಿ ಒಂದನ್ನು ಈ ಪೋಟೋದಲ್ಲಿ ಸೆರೆ ಹಿಡಿಯಲಾಗಿದ್ದು, ಇದು ದೆಹಲಿ ಸ್ಮಶಾನ ಮೈದಾನವೊಂದರಲ್ಲಿ ನಡೆಸಲಾದ ಕೋವಿಡ್ ಮೃತರ ಸಾಮೂಹಿಕ ಅಂತ್ಯ ಸಂಸ್ಕಾರದ ವೈಮಾನಿಕ ನೋಟ.First published: