World Pest Day 2022: ವಿಶ್ವ ಕೀಟ ದಿನದ ಇತಿಹಾಸ, ಮಹತ್ವ, ಆಚರಣೆ ಮತ್ತು ಈ ಬಾರಿಯ ಥೀಮ್ ಬಗ್ಗೆ ತಿಳಿಯಿರಿ

ಇದೇನಪ್ಪಾ....ಇಂತಹ ಒಂದು ದಿನವೂ ಇದೆಯಾ ಎಂದು ಅಚ್ಚರಿ ಪಡದಿರಿ. ಖಂಡಿತವಾಗಿಯೂ ನಾವು ಈಗಾಗಲೇ ಆಚರಿಸುತ್ತಿರುವ ವಿವಿಧ ಬಗೆಯ ದಿನಗಳ ಜೊತೆ ವಿಶ್ವ ಕೀಟ ದಿನವನ್ನೂ ಸಹ ಆಚರಿಸುತ್ತ ಬಂದಿದ್ದೇವೆ. ಈ ವಿಶ್ವ ಕೀಟ ದಿನವನ್ನು ವಿಶ್ವ ಕೀಟ ಜಾಗೃತಿ ದಿನ ಎಂತಲೂ ಸಹ ಕರೆಯಲಾಗುತ್ತದೆ. ಪ್ರತಿ ವರ್ಷ ಜೂನ್ 6 ರಂದು ಈ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ.

ವಿಶ್ವ ಕೀಟ ದಿನ

ವಿಶ್ವ ಕೀಟ ದಿನ

  • Share this:
ಇದೇನಪ್ಪಾ....ಇಂತಹ ಒಂದು ದಿನವೂ (Day) ಇದೆಯಾ ಎಂದು ಅಚ್ಚರಿ ಪಡದಿರಿ. ಖಂಡಿತವಾಗಿಯೂ ನಾವು ಈಗಾಗಲೇ ಆಚರಿಸುತ್ತಿರುವ (Celebrating) ವಿವಿಧ ಬಗೆಯ ದಿನಗಳ ಜೊತೆ ವಿಶ್ವ ಕೀಟ ದಿನವನ್ನೂ (World Insect Day) ಸಹ ಆಚರಿಸುತ್ತ ಬಂದಿದ್ದೇವೆ. ಈ ವಿಶ್ವ ಕೀಟ ದಿನವನ್ನು ವಿಶ್ವ ಕೀಟ ಜಾಗೃತಿ ದಿನ (World Pest Awareness Day) ಎಂತಲೂ ಸಹ ಕರೆಯಲಾಗುತ್ತದೆ. ಪ್ರತಿ ವರ್ಷ ಜೂನ್ 6 ರಂದು ಈ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ನಾವು ಬದುಕುತ್ತಿರುವ ಈ ಪರಿಸರ ವ್ಯವಸ್ಥೆಯಲ್ಲಿ (Ecosystem) ಕೀಟಗಳೂ ಸಹ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಹಾಗಾಗಿ ಕೀಟ ನಿರ್ವಹಣೆ ಮತ್ತು ಸಸ್ಯಗಳು ಹಾಗೂ ನಮ್ಮ ಸುತ್ತಮುತ್ತಲಿನ ಜನರಿಗೆ ಅದರ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಈ ದಿನವನ್ನು ಆಚರಿಸಲಾಗುತ್ತದೆ.

ಈ ದಿನವು ಕೀಟ ನಿಯಂತ್ರಣದ ಕೆಲಸದಲ್ಲಿ ತೊಡಗಿರುವ ಜನರು ಹಾಗೂ ಸಂಸ್ಥೆಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆ ಮೂಲಕ ನಮ್ಮೆಲ್ಲರ ಜೀವನವನ್ನು ಸುರಕ್ಷಿತವಾಗಿರಿಸುವ ಸದುದ್ದೇಶವನ್ನು ಹೊಂದಿದೆ.

ಇತಿಹಾಸ
ಈ ದಿನದ ಇತಿಹಾಸದ ಬಗ್ಗೆ ಕೆದಕಿದರೆ ಅಷ್ಟೊಂದು ಶ್ರೀಮಂತ ಇತಿಹಾಸ ಎಂಬುದು ಈ ದಿನಕ್ಕಿಲ್ಲ. ಏಕೆಂದರೆ ಇದು ಪ್ರಾರಂಭವಾದದ್ದೆ ಇತ್ತೀಚಿನ ಕೆಲ ವರ್ಷಗಳ ಹಿಂದಷ್ಟೆ. ಹೌದು, ವಿಶ್ವ ಕೀಟ ದಿನವನ್ನು ಮೊದಲ ಬಾರಿಗೆ 2017 ರಲ್ಲಿ ಆಚರಿಸಲಾಯಿತು ಮತ್ತು 6 ಜೂನ್ 2017 ರಂದು ಬೀಜಿಂಗ್ ನಗರದ ಹೋಟೆಲ್‌ನಲ್ಲಿ ಉದ್ಘಾಟನಾ ಸಮಾರಂಭವನ್ನು ನಡೆಸಲಾಯಿತು.

ಚೈನಾ ಮೂಲದ ಚೈನೀಸ್ ಪೆಸ್ಟ್ ಕಂಟ್ರೋಲ್ ಅಸೋಸಿಯೇಷನ್ ​​ಈ ಆಚರಣೆಯನ್ನು ಪ್ರಾರಂಭಿಸಿತು. ಫೆಡರೇಶನ್ ಆಫ್ ಏಷ್ಯನ್ ಮತ್ತು ಓಷಿಯಾನಿಯಾ ಪೆಸ್ಟ್ ಮ್ಯಾನೇಜರ್ಸ್ ಅಸೋಸಿಯೇಷನ್ ​​ಮತ್ತು ಯುರೋಪಿಯನ್ ಪೆಸ್ಟ್ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನಂತಹ ಸಂಸ್ಥೆಗಳು ಸಹ ಈ ಆಚರಣೆಯಲ್ಲಿ ಕೈಜೋಡಿಸಿದ್ದು ಅದಕ್ಕಾಗಿ ಹಣವನ್ನು ನೀಡಲು ನಿರ್ಧರಿಸಿದವು.

ಇದನ್ನೂ ಓದಿ: Explained: ವಿಶ್ವದ ಈ ಪ್ರಸಿದ್ಧ ಸ್ಥಳಗಳು ಶೀಘ್ರವೇ ಕಣ್ಮರೆಯಾಗುತ್ತಂತೆ! ನೋಡಬೇಕು ಅಂದ್ರೆ ಬೇಗ ಹೊರಡಿ

ಒಟ್ಟಾರೆಯಾಗಿ ವಿಶ್ವದ 30 ಸಂಘಗಳು ಈ ದಿನವನ್ನು ಆಚರಿಸುತ್ತ ಬಂದಿದ್ದು ಈ ದಿನದಂದು ವಿಶೇಷವಾಗಿ ಕೀಟಗಳಿಂದ ಉಂಟಾಗುವ ಬೆದರಿಕೆಗಳು ಮತ್ತು ಅವುಗಳನ್ನು ನಿರ್ಮೂಲನೆ ಮಾಡುವ ಪರಿಹಾರಗಳನ್ನು ಕುರಿತು ಉತ್ತೇಜನ ನೀಡಲಾಗುತ್ತದೆ.

ವಿವಿಧ ರೀತಿಯ ಕೀಟಗಳು ಯಾವುವು?
ಹಾಗೆ ನೋಡಿದರೆ ಮನುಷ್ಯರಿಗೆ ಕೀಟಲೆ ನೀಡುವ ಜೀವಿಗಳನ್ನೇ ಕೀಟ ಎಂದು ಆಡು ಭಾಷೆಯಲ್ಲಿ ಅರ್ಥಿಸಬಹುದಾಗಿದೆ. ಆದಾಗ್ಯೂ ಈ ದಿನಕ್ಕೆ ಸಂಬಂಧಿಸಿದಂತೆ ಇಲ್ಲಿ ಪೆಸ್ಟ್ ಅಥವಾ ಕೀಟಗಳೆಂದರೆ ಮನುಷ್ಯರಿಗೆ ಅಥವಾ ಅವರ ಆಸ್ತಿಗೆ ಹಾನಿಯನ್ನುಂಟುಮಾಡುವ ಯಾವುದೇ ರೀತಿಯ ಪ್ರಾಣಿ, ಕೀಟ, ಸಸ್ಯ ಅಥವಾ ಸೂಕ್ಷ್ಮಜೀವಿಗಳನ್ನು ಕೀಟ ಅಥವಾ ಕ್ರಿಮಿಕೀಟ ಎಂದು ಕರೆಯಲಾಗುತ್ತದೆ. ಪ್ರಸ್ತುತ, ಒಟ್ಟು 900-ಮಿಲಿಯನ್ ಕೀಟಗಳ ಪ್ರಕಾರಗಳು ನಮ್ಮಲ್ಲಿದ್ದು ಅವುಗಳನ್ನು 4 ವಿಭಿನ್ನ ವರ್ಗಗಳಾಗಿ ವಿಭಾಗಿಸಲಾಗಿದೆ ಹಾಗೂ ಅವುಗಳೆಂದರೆ:

  •  ಇರುವೆಗಳು ಜೇನುನೊಣಗಳು, ಕಣಜಗಳು

  • ಜೀರುಂಡೆಗಳು

  • ಪತಂಗಗಳು ಮತ್ತು ಚಿಟ್ಟೆಗಳು

  • ನೋಣಗಳು


ದಿನವು ಏನನ್ನು ಸಾಧಿಸುವ ಗುರಿಯನ್ನು ಹೊಂದಿದೆ?
ದೊಡ್ಡ ದೊಡ್ಡ ನಗರ ಕೆಮ್ಡ್ರಗಳಲ್ಲಿ ಅಥವಾ ಜನನಿಬಿಡ ವಸತಿ ಕೇಂದ್ರಗಳಲ್ಲಿ ಆಗಾಗ ಜೇನುಹುಳಗಳ ದಾಳಿ, ಇರುವೆಗಳ ಕಾಟ ತಪ್ಪಿದ್ದಲ್ಲ. ಅಂತಹ ಸಂದರ್ಭಗಳಲ್ಲಿ ಕೀಟಗಳಿಂದ ಜನರ ಆರೋಗ್ಯಕ್ಕೆ ಹಾನಿ ಉಂಟಾಗದಂತೆ ಕೀಟ ನಿಯಂತ್ರಣ ಸಂಸ್ಥೆಗಳು ಸಾಕಷ್ಟು ಮುತುವರ್ಜಿಯಿಂದ ಕೆಲಸ ಮಾಡುತ್ತವೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಕೀಟ ನಿರ್ವಹಣಾ ಸಂಸ್ಥೆಗಳು ವಹಿಸುವ ಪ್ರಮುಖ ಪಾತ್ರದ ಬಗ್ಗೆ ಸರ್ಕಾರ, ಸಾರ್ವಜನಿಕ ಮತ್ತು ಮಾಧ್ಯಮಗಳಲ್ಲಿ ಹೆಚ್ಚಿನ ಜಾಗೃತಿಯನ್ನು ಮೂಡಿಸುವುದೇ ಈ ದಿನದ ಒಂದು ಪ್ರಮುಖ ಗುರಿ.

ಇದಲ್ಲದೆ, ಕೀಟ ನಿರ್ವಹಣೆ ಉದ್ಯಮದ ವೃತ್ತಿಪರ ಚಿತ್ರಣವನ್ನು ಚಿತ್ರಿಸಲು ವೃತ್ತಿಪರ ಕೀಟ ನಿರ್ವಹಣಾ ತಂತ್ರಗಳ ಬಳಕೆಯನ್ನು ಜವಾಬ್ದಾರಿಯುತ ರೀತಿಯಲ್ಲಿ ಪ್ರೋತ್ಸಾಹಿಸುವುದು ಈ ದಿನದ ಇನ್ನೊಂದು ಉದ್ದೇಶವಾಗಿದೆ. ಸಣ್ಣ ಸಣ್ಣ ಕೀಟಗಳೂ ಸಹ ನಮಗೆ ಹಲವು ರೀತಿಯಲ್ಲಿ ಬೆದರಿಕೆಗಳನ್ನು ಒಡ್ಡಬಹುದು, ಆ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನ ಆಚರಣೆಯ ಮಗದೊಂದು ಉದ್ದೇಶವಾಗಿದೆ.

ಈ ವರ್ಷದ ಆಚರಣೆಯ ಮುಖ್ಯ ಗಮನ ಯಾವುದು ಮತ್ತು ಅದನ್ನು ಹೇಗೆ ಆಚರಿಸಬಹುದು?
ಪ್ರತಿ ಸಲದಂತೆ ಈ ಬಾರಿಯ ವಿಶ್ವ ಕೀಟ ದಿನವೂ ಸಹ ಒಂದು ಕೇಂದ್ರಿತವಾದ ವಿಷಯದಡಿ ತನ್ನ ಒತ್ತು ನೀಡಿದೆ ಹಾಗೂ ಅದುವೇ "ಒಂದು ವಿಶ್ವ - ವೃತ್ತಿಪರ ಕೀಟ ನಿರ್ವಹಣೆಯ ಮೂಲಕ ಜಾಗತಿಕ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದು" ಎಂಬ ಅಂಶದ ಮೇಲೆ ಈ ಬಾರಿಯ ವಿಶ್ವ ಕೀಟ ದಿನವು ಹೆಚ್ಚು ಕೇಂದ್ರೀಕೃತವಾಗಿದೆ.

ಇದನ್ನೂ ಓದಿ: Explained: ಏನಿದು ಸ್ವಯಂ ವಿವಾಹ? ತನ್ನನ್ನು ತಾನೇ ಮದುವೆಯಾಗುವ ಕಲ್ಪನೆ ಶುರುವಾಗಿದ್ದು ಯಾವಾಗ? ಅಷ್ಟೇ ಅಲ್ಲ ಡಿವೋರ್ಸ್‌ ಕೂಡ ಆಗಿದೆಯಂತೆ!

ನೀವು ನಿಮ್ಮ ವಸತಿ ಕಟ್ಟಡಗಳ ಬಳಿ ಇರಬಹುದಾದ ಕೀಟಗಳನ್ನು ನಿರ್ವಹಿಸುವ ಉದ್ದೇಶದಿಂದ ವೃತ್ತಿಪರ ಕೀಟ ನಿಯಂತ್ರಕರನ್ನು ಕರೆಯುವ ಮೂಲಕ ಅಥವಾ ಅಂತಹ ಸಂಸ್ಥೆಗಳ ಸೇವೆಯನ್ನು ನಿಮ್ಮ ಮನೆಗಾಗಲಿ ಅಥವಾ ಕಚೇರಿಗಾಗಲಿ ಪಡೆಯುವುದರಿಂದ ನೀವು ಈ ವಿಶ್ವ ಕೀಟ ದಿನಕ್ಕೆ ನಿಮ್ಮದೆ ಆದ ಕೊಡುಗೆ ನೀಡಬಹುದು.
Published by:Ashwini Prabhu
First published: