World Music Day 2021: ನಾವು ಬಾತ್​ರೂಂ​ ಸಿಂಗರ್ಸ್​ ಅಂತ ಬೇಜಾರ್​ ಮಾಡ್ಕೋಬೇಡಿ; ಎಲ್ಲರೂ ಮ್ಯೂಸಿಕ್​ ಡೇ ಸೆಲೆಬ್ರೇಟ್ ಮಾಡಿ...!

ವಿಶ್ವ ಸಂಗೀತ ದಿನವು ಅಂತರಾಷ್ಟ್ರೀಯ ಯೋಗದಿನದೊಂದಿಗೆ ಆಚರಿಸಲ್ಪಡುತ್ತದೆ. ಪ್ರತಿಯೊಬ್ಬರ ವಿವೇಕವನ್ನು ಕಾಪಾಡುವಲ್ಲಿ ಸಂಗೀತ ಮತ್ತು ಯೋಗ ಎರಡೂ ಪ್ರಮುಖ ಪಾತ್ರ ವಹಿಸುತ್ತವೆ. ಕೇವಲ ಸಂಗೀತಗಾರ ಮಾತ್ರ ಅಲ್ಲ, ಎಲ್ಲರೂ ಸಹ ಈ ವಿಶ್ವ ಸಂಗೀತ ದಿನವನ್ನು ಆಚರಿಸುತ್ತಾರೆ.

ವಿಶ್ವ ಸಂಗೀತ ದಿನ

ವಿಶ್ವ ಸಂಗೀತ ದಿನ

 • Share this:
  ಇಂದು ವಿಶ್ವ ಸಂಗೀತ ದಿನ. ಪ್ರತೀ ವರ್ಷ ಜೂನ್​ 21ನ್ನು ವಿಶ್ವ ಸಂಗೀತ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಮೇಕ್​ ಮ್ಯೂಸಿಕ್​ ಡೇ ಎಂದೂ ಸಹ ಕರೆಯಲಾಗುತ್ತದೆ. ಅಷ್ಟೇ ಜನಪ್ರಿಯ ಕೂಡ ಆಗಿದ್ದು, ಈ ದಿನ ಪ್ರತಿಯೊಬ್ಬರ ಜೀವನದಲ್ಲಿ ಸಂಗೀತದ ಮಹತ್ವ ಏನು ಎಂಬುದನ್ನು ತಿಳಿಸಲಾಗುತ್ತದೆ. ಪ್ರತಿಯೊಬ್ಬರೂ ಸಹ ಸಂಗೀತಗಾರರೇ. ಯಾಕೆಂದರೆ ಯಾವುದಾದರೊಂದು ಹಾಡನ್ನು ಒಂದು ಸಲವಾದರೂ ಗುನುಗಿರುತ್ತಾರೆ. ಬೇಜಾರಾದಾಗ, ಮನಸು ದುಃಖದಲ್ಲಿದ್ದಾಗ ಅವರಿಷ್ಟದ ಒಂದು ಹಾಡು ಕೇಳಿ ಮನಸನ್ನು ಹಗುರ ಮಾಡಿಕೊಳ್ಳುತ್ತಾರೆ. ಸಂಗೀತ ಒಂಥರಾ ಥೆರಪಿ ಇದ್ದಂಗೆ ಅಂತ ಹೇಳಿದ್ರು ತಪ್ಪಾಗಲ್ಲ.  

  ಸಮೀಕ್ಷೆಯೊಂದರ ಪ್ರಕಾರ, ಶೇ.92ರಷ್ಟು ಭಾರತೀಯರು ತಮ್ಮ ಕಷ್ಟದ ಸಂದರ್ಭದಲ್ಲಿ ಸಂಗೀತ ಕೇಳುವ ಮೂಲಕ ಸಾಂತ್ವನ ಪಡೆಯುತ್ತಾರೆ ಎಂದು ತಿಳಿದು ಬಂದಿದೆ. ಸಂಗೀತ ಕೇವಲ ವ್ಯಕ್ತಿಯನ್ನು ಗುಣಪಡಿಡುವ ಥೆರಪಿಯಲ್ಲ, ಜೊತೆಗೆ ಉತ್ತಮ ಮನಸ್ಥಿತಿ ಮತ್ತು ಆರೋಗ್ಯಕರ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಈ ದಿನ ಜನರು ಮ್ಯೂಸಿಕ್ ಎಂಜಾಯ್​ ಮಾಡಲು ಬೀದಿಗಳಲ್ಲಿ ಹೆಜ್ಜೆ ಹಾಕುತ್ತಾರೆ. ಇದು ಮುಕ್ತ ಕಾರ್ಯಕ್ರಮವಾಗಿದ್ದು, ಯಾರೂ ಬೇಕಾದರೂ ಭಾಗವಹಿಸಿ ಮ್ಯೂಸಿಕ್ ನುಡಿಸಬಹುದಾಗಿದೆ. ಆದರೆ ಈ ವರ್ಷ ಕೊರೋನಾ ಸೋಂಕು ಇರುವ ಕಾರಣದಿಂದಾಗಿ ಸಾರ್ವಜನಿಕ ಕಾರ್ಯಕ್ರಮಕ್ಕೆ ನಿಷಿದ್ಧ ಇದೆ. ಹೀಗಾಗಿ ಎಲ್ಲರೂ ತಮ್ಮ-ತಮ್ಮ ಮನೆಗಳಲ್ಲೇ ವಿಶ್ವ ಸಂಗೀತ ದಿನವನ್ನು ಆಚರಿಸಿ, ಎಂಜಾಯ್ ಮಾಡಬಹುದಾಗಿದೆ.

  ಇದನ್ನೂ ಓದಿ:International Yoga Day 2021: ಅಂತರಾಷ್ಟ್ರೀಯ ಯೋಗ ದಿನದಂದು M Yoga App ಲಾಂಚ್​ ಮಾಡಿದ ಪ್ರಧಾನಿ ಮೋದಿ

  ವಿಶ್ವ ಸಂಗೀತ ದಿನವು ಅಂತರಾಷ್ಟ್ರೀಯ ಯೋಗದಿನದೊಂದಿಗೆ ಆಚರಿಸಲ್ಪಡುತ್ತದೆ. ಪ್ರತಿಯೊಬ್ಬರ ವಿವೇಕವನ್ನು ಕಾಪಾಡುವಲ್ಲಿ ಸಂಗೀತ ಮತ್ತು ಯೋಗ ಎರಡೂ ಪ್ರಮುಖ ಪಾತ್ರ ವಹಿಸುತ್ತವೆ. ಕೇವಲ ಸಂಗೀತಗಾರ ಮಾತ್ರ ಅಲ್ಲ, ಎಲ್ಲರೂ ಸಹ ಈ ವಿಶ್ವ ಸಂಗೀತ ದಿನವನ್ನು ಆಚರಿಸುತ್ತಾರೆ.

  ವಿಶ್ವಸಂಗೀತ ದಿನದ ಆಚರಣೆ ಯಾವಾಗ್ಲಿಂದ ಶುರುವಾಯ್ತು?

  ಫ್ರಾನ್ಸ್​​ನಲ್ಲಿ 1980ರ ದಶಕದಲ್ಲಿ ಸಂಸ್ಕೃತಿ ಸಚಿವಾಲಯವು ಜನರಿಗೆ ಮ್ಯೂಸಿಕ್​ ಹಾಲಿಡೇ ನೀಡಬೇಕು ಎಂದು ನಿರ್ಧರಿಸಿತು. ರಸ್ತೆಗಳಿಂದ ಪಾರ್ಕ್​ಗಳವರೆಗೆ ಎಲ್ಲಾ ಕಡೆ ಮುಕ್ತವಾಗಿ ಸಂಗೀತ ನುಡಿಸುವುದು ಈ ದಿನದ ಉದ್ದೇಶವಾಗಿತ್ತು. ಜೂನ್​ 21ನ್ನು ನ್ಯಾಷನಲ್​ ಹಾಲಿಡೇ ಎಂದು ಸರ್ಕಾರವು ಘೋಷಿಸಿದ ಬಳಿಕ, ಮೊದಲ ಬಾರಿಗೆ 1982ರಲ್ಲಿ ಫ್ರಾನ್ಸ್​​ನಲ್ಲಿ ವಿಶ್ವ ಸಂಗೀತ ದಿನವನ್ನು ಆಚರಿಸಲಾಯಿತು. ಅಲ್ಲಿಂದ ಸುಮಾರು 120 ದೇಶಗಳಲ್ಲಿ ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತಿದೆ.

  ಇದನ್ನೂ ಓದಿ:Jammu-Kashmir Encounter: ಮೋಸ್ಟ್​ ವಾಂಟೆಡ್​ ಉಗ್ರ ಮುದಾಸಿರ್​ ಪಂಡಿತ್ ಸೇರಿ ಮೂವರ ಹತ್ಯೆ

  ಫ್ರೆಂಚ್​​ನ ಕಲೆ ಮತ್ತು ಸಂಸ್ಕೃತಿ ಸಚಿವ ಜಾಕ್​​ ಲಾಂಗೆ ಮತ್ತು ಮೌರಿಸಿ ಫ್ಲೆರೆಟ್ ಪ್ಯಾರಿಸ್​​ನಲ್ಲಿ ವಿಶ್ವ ಸಂಗೀತ ದಿನವನ್ನು ಆರಂಭಿಸಿದರು. ಫ್ಲೆರೆಟ್​ ಅವರು ಫ್ರೆಂಚ್​​ನ ಸಂಗೀತ ಸಂಯೋಜಕ, ಮ್ಯೂಸಿಕ್​ ಜರ್ನಲಿಸ್ಟ್​, ಫೆಸ್ಟಿವಲ್​ ಆರ್ಗನೈಜರ್ ಹಾಗೂ ರೇಡಿಯೋ ಪ್ರೊಡ್ಯೂಸರ್​​ ಕೂಡ ಆಗಿದ್ದರು.

  ಬಹುತೇಕ ಜನರಿಗೆ ಸಂಗೀತ ಅವರ ಜೀವನದ ಒಂದು ಭಾಗವಾಗಿದೆ. ಕೆಲವರು ಸಂಗೀತ ತರಬೇತಿ ಪಡೆದು ದೊಡ್ಡ ದೊಡ್ಡ ಸಿಂಗರ್​ಗಳಾದರೆ, ಇನ್ನು, ಕೆಲವರು ಬಾತ್​ರೂಮ್ ಸಿಂಗರ್​ಗಳಾಗಿರುತ್ತಾರೆ. ಒಟ್ಟಾರೆ ನೋಡುವುದಾದರೆ ಎಲ್ಲರೂ ಹಾಡುಗಾರರೇ. ಪ್ರತಿಯೊಬ್ಬರೂ ಸಹ ಒಂದಲ್ಲಾ, ಒಂದು ಹಾಡನ್ನು ಗುನುಗುತ್ತಿರುತ್ತಾರೆ. ಸಂಗೀತ ಮನಸಿನ ಒತ್ತಡ, ನೋವನ್ನು ವಾಸಿಮಾಡುವ ಮದ್ದು ಎಂದರೆ ತಪ್ಪಾಗಲಾರದು. ಸಂಗೀತ ಎಷ್ಟೋ ಜನರ ಕಾಯಿಲೆಗಳನ್ನು ವಾಸಿ ಮಾಡಿರುವುದು ಸತ್ಯ.
  Published by:Latha CG
  First published: