World Music Day 2019: ನಿಯಮಿತವಾಗಿ ಸಂಗೀತ ಕೇಳುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತಾ?

World Music Day 2019: ಸಂಗೀತ ನಮ್ಮ ಮನಸ್ಥಿತಿ ಮತ್ತು ಭಾವನೆಯ ಮೇಲೆ ಗಾಢ ಪ್ರಭಾವ ಬೀರಬಲ್ಲದು. ನಮ್ಮ ಸಂತೋಷ, ಬೇಸರ, ಹಠ, ಭಯ, ನೋವು ಎಲ್ಲದರ ಜೊತೆಗೂ ಒಂದೊಂದು ರಾಗ ಕನೆಕ್ಟ್​ ಆಗುತ್ತದೆ. ಹಾಗಾಗಿ, ಅಂತಹ ಸಮಯದಲ್ಲಿ ನಾವು ಕೇಳುವ ಸಂಗೀತಕ್ಕೆ ಅನುಗುಣವಾಗಿ ನಮ್ಮ ಮನಸ್ಥಿತಿಯೂ ಸ್ವಲ್ಪಮಟ್ಟಿಗೆ ಬದಲಾಗುತ್ತದೆ.

Sushma Chakre | news18
Updated:June 21, 2019, 2:22 PM IST
World Music Day 2019: ನಿಯಮಿತವಾಗಿ ಸಂಗೀತ ಕೇಳುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತಾ?
ಸಾಂದರ್ಭಿಕ ಚಿತ್ರ
  • News18
  • Last Updated: June 21, 2019, 2:22 PM IST
  • Share this:
ಸಂಗೀತದಿಂದ ಎಂಥವರ ಮನಸನ್ನೂ ಕರಗಿಸಬಹುದು, ಸಂಗೀತ ಕೇವಲ ಮನುಷ್ಯರ ಮೇಲೆ ಮಾತ್ರವಲ್ಲ ಹೂವುಗಳು, ಗಿಡ-ಮರಗಳು, ಪ್ರಕೃತಿಯ ಮೇಲೂ ಪರಿಣಾಮ ಬೀರುತ್ತದೆ ಎಂಬ ವಿಷಯವನ್ನು ನೀವೇ ಕೇಳಿರಬಹುದು. ಸಂಗೀತಕ್ಕೆ ಇರುವ ಶಕ್ತಿಯೇ ಅಂಥದ್ದು. ಅದಕ್ಕೆ ಭಾಷೆಯಿಲ್ಲ. ಯಾವುದೇ ದೇಶ-ಭಾಷೆಯವರಾದರೂ ಸಂಗೀತಕ್ಕೆ ಬೇಗ ಕನೆಕ್ಟ್ ಆಗುತ್ತಾರೆ. ಅಂದಹಾಗೆ, ಇಂದು ವಿಶ್ವ ಸಂಗೀತ ದಿನ.

ಮನಸು ಅದೆಷ್ಟೇ ವಿಚಲಿತಗೊಂಡಿರಲಿ, ಬೇಸರದಿಂದ ಹೊರಬರಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಲ್ಲಿರಲಿ... ನಮಗಿಷ್ಟವಾದ ಹಾಡನ್ನು ಕೇಳಿದರೆ ಬೇರೆಲ್ಲ ಯೋಚನೆಗಳೂ ಒಮ್ಮೆ ನಮ್ಮ ಮನಸಿನಿಂದ ದೂರ ಹೋಗುತ್ತವೆ. ಖುಷಿಯಾದಾಗ, ಬೇಸರವಾದಾಗ, ದುಃಖವಾದಾಗ ಹಲವರಿಗೆ ಸಂಗೀತವೇ ಸಂಗಾತಿ. ಬೀಸುವ ಗಾಳಿ, ಹರಿಯುವ ನೀರು, ಹನಿಯುವ ಮಳೆಹನಿ ಹೀಗೆ ನಮ್ಮ ಸುತ್ತಲೂ ನಡೆಯುವ ಪ್ರತಿಯೊಂದು ಘಟನೆಗೂ ತನ್ನದೇ ಆದ ಲಯವಿದೆ. ಅದನ್ನು ಗ್ರಹಿಸುವ ಮನಸು ನಮ್ಮದಾಗಿದ್ದರೆ ಎಲ್ಲೆಲ್ಲೂ ಸಂಗೀತವೇ!

ಎಚ್ಚರ: ನೀವು ಸೇವಿಸುವ ಈ ಆಹಾರಗಳಿಂದ ಕ್ಯಾನ್ಸರ್ ಬರುತ್ತದೆ..!

ಮೊದಲ ಬಾರಿಗೆ 1982ರಂದು ವಿಶ್ವ ಸಂಗೀತ ದಿನವನ್ನು ಪ್ಯಾರೀಸ್​ನಲ್ಲಿ ಆಚರಿಸಲಾಯಿತು. ಹಾಗಿದ್ದರೆ ಸಂಗೀತದಿಂದ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಒಳ್ಳೆಯ ಪರಿಣಾಮಗಳು ಉಂಟಾಗುತ್ತವೆ ಎಂಬುದು ನಿಮಗೆ ಗೊತ್ತಾ? ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ, ಪ್ರತಿಯೊಂದು ಫಲಿತಾಂಶವೂ ಬೇರೆಬೇರೆ ರೀತಿಯಾಗಿವೆ. ನಮಗಿಷ್ಟವಾದ ಹಾಡು ಅಥವಾ ವಾದ್ಯದ ಸಂಗೀತವನ್ನು ನಾವು ಕೇಳಿದಾಗ ನಮ್ಮ ಮೆದುಳಿನಲ್ಲಿ ಡೊಪಮಿನ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದರಿಂದ ನಮಗೆ ಪಾಸಿಟಿವ್​ ಮೂಡ್​ ಬರುತ್ತದೆ.

ಸಂಗೀತ ನಮ್ಮ ಮನಸ್ಥಿತಿ ಮತ್ತು ಭಾವನೆಯ ಮೇಲೆ ಗಾಢ ಪ್ರಭಾವ ಬೀರಬಲ್ಲದು. ನಮ್ಮ ಸಂತೋಷ, ಬೇಸರ, ಹಠ, ಭಯ, ನೋವು ಎಲ್ಲದರ ಜೊತೆಗೂ ಒಂದೊಂದು ರಾಗ ಕನೆಕ್ಟ್​ ಆಗುತ್ತದೆ. ಹಾಗಾಗಿ, ಅಂತಹ ಸಮಯದಲ್ಲಿ ನಾವು ಕೇಳುವ ಸಂಗೀತಕ್ಕೆ ಅನುಗುಣವಾಗಿ ನಮ್ಮ ಮನಸ್ಥಿತಿಯೂ ಸ್ವಲ್ಪಮಟ್ಟಿಗೆ ಬದಲಾಗುತ್ತದೆ. ಅಲ್ಲದೆ, ಮನಸನ್ನು ಏಕಾಗ್ರತೆಯತ್ತ ವಾಲಿಸಲು ಸಂಗೀತ ಬಹಳ ಸಹಾಯ ಮಾಡಬಲ್ಲದು. ಇಷ್ಟೇ ಅಲ್ಲ, ಸಂಗೀತದಿಂದ ಕೆಲವು ಖಾಯಿಲೆಗಳನ್ನೂ ವಾಸಿ ಮಾಡಬಹುದು ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಈ ದೇಶದಲ್ಲಿ ಶೇ.50 ರಷ್ಟು ಜನರಿಗೆ ಮದುವೆ ಎಂಬುದೇ ಮರೀಚಿಕೆ...!

ಒತ್ತಡಕ್ಕೆ ಮದ್ದು: ಪ್ರತಿನಿತ್ಯ ಸಂಗೀತವನ್ನು ಕೇಳುವುದರಿಂದ ಮನಸಿನ ಮೇಲಾಗುವ ಒತ್ತಡ ಕಡಿಮೆಯಾಗುತ್ತದೆ. ಲಯಬದ್ಧವಾದ ಸಂಗೀತವನ್ನು ಕೇಳುವುದರಿಂದ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಒತ್ತಡದ ಹಾರ್ಮೋನ್​ಗಳು ಕಡಿಮೆಯಾಗುತ್ತದೆ. ಒಂಟಿಯಾಗಿರುವಾಗ ಅಥವಾ ಏಕಾಂತ ಬೇಕೆನಿಸಿದಾಗ ಹೆಚ್ಚು ಗದ್ದಲವಿಲ್ಲದ ವಾದ್ಯಗಳ ಸಂಗೀತವನ್ನು ಕೇಳಬೇಕು.ಖಿನ್ನತೆಗೆ ಪರಿಹಾರ: ಜಗತ್ತಿನ 350 ಮಿಲಿಯನ್ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ರಾತ್ರಿ ಮಲಗುವ ಮುನ್ನ ವೀಣೆ, ಗಿಟಾರ್ ವಾದನವನ್ನು ಕೇಳಿಕೊಂಡು ಮಲಗಿ. ಅಥವಾ ಶಾಸ್ತ್ರೀಯ ಸಂಗೀತವನ್ನು ಕೇಳಿಕೊಂಡು ಮಲಗುವುದರಿಂದಲೂ ಮನಸು ನಿರಾಳವಾಗುತ್ತದೆ. ಸಂಗೀತದ ಕೆಲವು ರಾಗಗಳಿಂದ ಕೆಲವು ರೋಗದ ಪರಿಣಾಮವೂ ಕಡಿಮೆಯಾಗಲಿದೆ ಎಂದು ಖುದ್ದು ವೈದ್ಯರೇ ತಿಳಿಸಿದ್ದಾರೆ.

ಉಪಯುಕ್ತ ಮಾಹಿತಿ: ಬಾಳೆಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಒಮ್ಮೆ ಯೋಚಿಸಿ

ಸ್ಮರಣಶಕ್ತಿ ಹೆಚ್ಚುತ್ತದೆ: ಸಂಗೀತವನ್ನು ನಿಯಮಿತವಾಗಿ ಕೇಳುವುದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ. ಏರೋಬಿಕ್ ವ್ಯಾಯಾಮ ಮಾಡುವಾಗ ಸಂಗೀತವನ್ನು ಆಲಿಸುವುದರಿಂದ ದೇಹದ ಅಂಗಗಳು ಸರಿಯಾಗಿ ಸಹಕರಿಸುತ್ತವೆ. ದೈಹಿಕ ಮತ್ತು ಮಾನಸಿಕ ಸ್ಥಿರತೆಯೂ ಹೆಚ್ಚುತ್ತದೆ. ಸಂಗೀತದ ರಿದಂ ಮತ್ತು ರಾಗಗಳು ಮೆದುಳನ್ನು ಸಕ್ರಿಯಗೊಳಿಸಿ ನೆನಪಿನ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಹೀಗಾಗಿ, ನೆನಪಿನ ಶಕ್ತಿಯನ್ನು ಕಳೆದುಕೊಂಡವರಿಗೆ, ಅಲ್ಜೀಮರ್​ನಿಂದ ಬಳಲುತ್ತಿರುವವರಿಗೆ ಸಂಗೀತದ ಚಿಕಿತ್ಸೆ ನೀಡಿದರೆ ಬೇಗ ಪರಿಣಾಮ ಕಂಡುಬರುತ್ತದೆ.

ಹೆಚ್ಚು ಹಸಿವೆಯಾಗದಂತೆ ತಡೆಯುತ್ತದೆ: ಊಟ ಮಾಡುವಾಗ ಮೆಲೋಡಿಯಾಗಿರುವ ಸಂಗೀತವನ್ನು ಕೇಳುವುದರಿಂದ ಹೆಚ್ಚು ತಿನ್ನುವುದನ್ನು ತಡೆಗಟ್ಟಬಹುದು. ಇದರಿಂದ ಹೆಚ್ಚು ಕ್ಯಾಲೋರಿ ಇರುವ ಆಹಾರ ದೇಹಕ್ಕೆ ಸೇರುವುದು ತಪ್ಪುತ್ತದೆ. ಆಹಾರ ಕಂಡಕೂಡಲೆ ನಿಮಗೆ ಹೆಚ್ಚು ತಿನ್ನಬೇಕು ಎನಿಸಿದರೆ ಸಂಗೀತವನ್ನು ಕೇಳಿ. ಹೆಚ್ಚು ಸ್ಪೀಡ್​ ಆಗಿರುವ ಸಂಗೀತವನ್ನು ಕೇಳುವುದರಿಂದ ಮನಸಿಗೆ ಸ್ಫೂರ್ತಿ ಸಿಗುತ್ತದೆ.  ಆಪರೇಷನ್​ನಿಂದ ಉಂಟಾಗಿರುವ ಗಾಯ ವಾಸಿಯಾಗಲು ಕೂಡ ಸಂಗೀತವನ್ನು ಕೇಳಲು ಕೆಲವು ವೈದ್ಯರು ಹೇಳುತ್ತಾರೆ.

First published:June 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ