ಇವುಗಳ ಆಕಾರ ಚಿಕ್ಕದು (Small), ಮನುಷ್ಯನಾದವನು (Man) ಕ್ಷಣ ಮಾತ್ರದಲ್ಲೇ ತನ್ನ ಬೆರಳುಗಳಿಂದ ಇದನ್ನು ಹೊಸಕಿ ಹಾಕಬಲ್ಲ ಎಂಬ ಕಲ್ಪನೆಯಲ್ಲಿ ಧಿಮಾಕು ಮಾಡಬಹುದಾದರೂ ಇವುಗಳು ಜಾಗತಿಕ ಮಟ್ಟದಲ್ಲಿ ಉಂಟು ಮಾಡುವ ಒಟ್ಟಾರೆ ತೀವ್ರತೆಯನ್ನೊಮ್ಮೆ ಅವಲೋಕಿಸಿದರೆ ನಮಗೆ ದಿಗ್ಭ್ರಮೆ ಉಂಟಾದರೂ ತಪ್ಪಿಲ್ಲ. ಹೌದು, ಸೊಳ್ಳೆ (Mosquito) ಎಂಬ ಯಕಶ್ಚಿತ್ ಕೀಟ (insect) ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ, ಇವುಗಳ ಕಚ್ಚುವಿಕೆ ಹಲವಾರು ಮಾರಣಾಂತಿಕ ಕಾಯಿಲೆಗಳನ್ನು (Deadly Disease) ತಂದೊಡ್ಡಬಹುದು. ಇಂದಿಗೂ ಜಗತ್ತಿನಲ್ಲಿ ಪ್ರತಿ ವರ್ಷ ಲಕ್ಷಾಂತರ ಸಾವುಗಳು (Death) ಸೊಳ್ಳೆ ಕಚ್ಚುವಿಕೆಯಿಂದ ಉಂಟಾದ ಕಾಯಿಲೆಗಳಿಂದಾಗಿಯೇ ಸಂಭವಿಸುತ್ತಿವೆ.
ಇವುಗಳ ಆಕಾರ ಚಿಕ್ಕದು, ಮನುಷ್ಯನಾದವನು ಕ್ಷಣ ಮಾತ್ರದಲ್ಲೇ ತನ್ನ ಬೆರಳುಗಳಿಂದ ಇದನ್ನು ಹೊಸಕಿ ಹಾಕಬಲ್ಲ ಎಂಬ ಕಲ್ಪನೆಯಲ್ಲಿ ಧಿಮಾಕು ಮಾಡಬಹುದಾದರೂ ಇವುಗಳು ಜಾಗತಿಕ ಮಟ್ಟದಲ್ಲಿ ಉಂಟು ಮಾಡುವ ಒಟ್ಟಾರೆ ತೀವ್ರತೆಯನ್ನೊಮ್ಮೆ ಅವಲೋಕಿಸಿದರೆ ನಮಗೆ ದಿಗ್ಭ್ರಮೆ ಉಂಟಾದರೂ ತಪ್ಪಿಲ್ಲ. ಹೌದು, ಸೊಳ್ಳೆ ಎಂಬ ಯಕಶ್ಚಿತ್ ಕೀಟ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ, ಇವುಗಳ ಕಚ್ಚುವಿಕೆ ಹಲವಾರು ಮಾರಣಾಂತಿಕ ಕಾಯಿಲೆಗಳನ್ನು ತಂದೊಡ್ಡಬಹುದು. ಇಂದಿಗೂ ಜಗತ್ತಿನಲ್ಲಿ ಪ್ರತಿ ವರ್ಷ ಲಕ್ಷಾಂತರ ಸಾವುಗಳು ಸೊಳ್ಳೆ ಕಚ್ಚುವಿಕೆಯಿಂದ ಉಂಟಾದ ಕಾಯಿಲೆಗಳಿಂದಾಗಿಯೇ ಸಂಭವಿಸುತ್ತಿವೆ.
ವಿಶ್ವ ಸೊಳ್ಳೆ ದಿನ
ಈ ಹಿಂದೆ ನಮಗೆ ಸೊಳ್ಳೆಗಳೇ ಮಲೇರಿಯಾ ಹರಡುವ ಪ್ಯಾರಾಸೈಟುಗಳನ್ನು ಪ್ರಸರಿಸುತ್ತವೆ ಎಂದು ತಿಳಿದಿರಲಿಲ್ಲ. ಆದರೆ, ವೈಜ್ಞಾನಿಕ ಸಂಶೋಧನೆ ಪ್ರಗತಿಯಾದಂತೆ ಈ ಅಂಶವು ಬೆಳಕಿಗೆ ಬಂದಿತು. ಹಾಗಾಗಿ ಈ ಅನ್ವೇಷಣೆಯ ವಾರ್ಷಿಕ ದಿನ ಅಂದರೆ ಆಗಸ್ಟ್ 20 ಅನ್ನು ಗುರುತಿಸುವುದಕ್ಕಾಗಿಯೇ ವಿಶ್ವ ಸೊಳ್ಳೆ ದಿನ ಎಂದು ಆಚರಿಸಲಾಗುತ್ತಿದೆ. ಈ ದಿನವು ವಿಶೇಷವಾಗಿ ಬ್ರಿಟಿಷ್ ವೈದ್ಯ ಸರ್ ರೋನಾಲ್ಡ್ ರಾಸ್ ಅವರಿಗೆ ಮುಡಿಪಾಗಿರಿಸಲಾಗಿದೆ.
ಇದನ್ನೂ ಓದಿ: Kidneys Health: ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾದಾಗ ಯಾವ ಲಕ್ಷಣಗಳು ಕಂಡು ಬರುತ್ತವೆ?
ರಾಸ್ ಅವರು 1897 ರಲ್ಲಿ ಹೆಣ್ಣು ಸೊಳ್ಳೆಗಳಿಂದಲೇ ಮಲೇರಿಯಾ ರೋಗ ಹರಡುವುದನ್ನು ಮೊದಲ ಬಾರಿಗೆ ಕಂಡುಹಿಡಿದರು. ಹಾಗಾಗಿ ಅವರ ಗೌರವಾರ್ಥ ಈ ದಿನವನ್ನು ವಿಶ್ವ ಸೊಳ್ಳೆ ದಿನ ಎಂದು ಆಚರಿಸುತ್ತ ಬರಲಾಗಿದ್ದು ಇದರ ಮುಖ್ಯ ಉದ್ದೇಶ ಸೊಳ್ಳೆಗಳು ಹಾಗೂ ಅವು ತಂದೊಡ್ಡುವ ಅಪಾಯ ಮತ್ತು ಆ ಬಗ್ಗೆ ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಾಗಿದೆ.
ಸೊಳ್ಳೆಗಳಿಂದ ಹರಡುವ ಕಾಯಿಲೆಗಳು
ಸೊಳ್ಳೆಗಳಿಂದ ಮಲೇರಿಯಾ, ಡೆಂಗ್ಯೂ, ಜೈಕಾ, ವೆಸ್ಟ್ ನೈಲ್ ಗಳಂತಹ ಹಲವಾರು ಕಾಯಿಲೆಗಳು ಹರಡುತ್ತವೆ. ಭಾರತೀಯ ರಾಷ್ಟ್ರೀಯ ಆರೋಗ್ಯ ಪೋರ್ಟಲ್ ನಲ್ಲಿ ವಿವರಿಸಲಾಗಿರುವಂತೆ ಸೊಳ್ಳೆ ಪ್ರಭೇದಗಳಾದ ಅನಾಫಿಲಿಸ್, ಎಡಿಸ್ ಹಾಗೂ ಕ್ಯೂಲೆಕ್ಸ್ ಗಳಂತಹ ಸೊಳ್ಳೆಗಳು ಸಾಂಕ್ರಾಮಿಕ ರೋಗಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸುವ ಏಜೆಂಟ್ ಗಳಂತೆ ಕಾರ್ಯನಿರ್ವಹಿಸುತ್ತವೆ.
ಸಮೀಕ್ಷೆಯಿಂದ ತಿಳಿದುಬಂದಿರುವ ಇನ್ನೊಂದು ಆಸಕ್ತಿಕರ ವಿಷಯವೆಂದರೆ ಜಾಗತಿಕ ಮಟ್ಟದಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬ ವ್ಯಕ್ತಿ ಡೆಂಗ್ಯೂ, ಮಲೇರಿಯಾಗಳಂತಹ ಕಾಯಿಲೆಗಳನ್ನು ಸೊಳ್ಳೆಗಳ ಕಚ್ಚುವಿಕೆಯಿಂದಾಗಿಯೇ ಬರೆಸಿಕೊಳ್ಳುತ್ತಾನೆ ಎನ್ನಲಾಗಿದೆ. ಈ ಕಾಯಿಲೆಗಳು ಒಮ್ಮೆಲೆ ಸಾವು ಉಂಟು ಮಾಡದಿದ್ದರೂ ನಿರ್ಲಕ್ಷ್ಯ ತೋರಿದರೆ ಇವು ಮಾರಣಾಂತಿಕವಾಗಿಯೂ ಪರಿವರ್ತಿತವಾಗಬಹುದು. ಹಾಗಾಗಿ ಈ ಕಾಯಿಲೆಗಳನ್ನು ಕಡೆಗಣಿಸುವಂತಿಲ್ಲ.
ಮಲೇರಿಯಾ ಬರದಂತೆ ತಡೆಯುವುದು ಹೇಗೆ?
ಇನ್ನು, ಇಂತಹ ಗಂಭೀರ ಕಾಯಿಲೆಗಳು ಬರದಂತೆ ನಾವು ಸುರಕ್ಷತಾ ಕ್ರಮವಹಿಸಬಹುದಾಗಿದೆ. ಅದರಲ್ಲಿ ಮುಖ್ಯವಾದುದೆಂದರೆ ಸೊಳ್ಳೆಗಳಿಂದ ನಮ್ಮನ್ನು ನಾವು ದೂರವಿರಿಸಿಕೊಳ್ಳುವುದು. ಸೊಳ್ಳೆಗಳು ನಸುಕು ಹಾಗೂ ಸಂಜೆಯ ಸಮಯಗಳಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಇದನ್ನು ಗಮನದಲ್ಲಿರಿಸಿಕೊಂಡು ಸೊಳ್ಳೆಗಳು ಬರದಂತೆ ರಿಪೆಲ್ಲೆಂಟ್ ಗಳಂತಹ ಸಾಧನಗಳನ್ನು ಬಳಸುವುದು, ಸೊಳ್ಳೆ ಪರದೆಯ ಬಳಕೆ ಮಾಡುವುದು ಪ್ರಮುಖವಾಗಿವೆ. ನಿಂಬೆ ರಸ ಅಥವಾ ನೀಲಗಿರಿ ರಸ ಬಳಸಿದಾಗಲೂ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ.
ಇದನ್ನೂ ಓದಿ: Menopause: ಋತುಬಂಧದ ವೇಳೆ ಮಹಿಳೆಯರಿಗೆ ಎದುರಾಗುವ ಸಮಸ್ಯೆ ನಿವಾರಿಸಲು ಹೀಗೆ ಮಾಡಿ
ಇನ್ನು ನೀವು ಪ್ರವಾಸ ಮಾಡುತ್ತಿದ್ದರೆ ಮಲೇರಿಯಾ ಬರದಂತೆ ನಿಗ್ರಹಿಸುವ ಕೆಲ ಮಾತ್ರೆಗಳನ್ನು ವೈದ್ಯರ ಸಲಹೆ ಪಡೆದು ತೆಗೆದುಕೊಳ್ಳಬಹುದು. ಅಲ್ಲದೆ, RTS, RIGEL-003 ಗಳಂತಹ ಲಸಿಕೆಗಳನ್ನು ಪಡೆಯಬಹುದು. ಇನ್ನೊಂದು ಮುಖ್ಯ ಅಂಶವೆಂದರೆ ಸೊಳ್ಳೆಗಳು ಮತ್ತಷ್ಟು ಉತ್ಪತ್ತಿಯಾಗದಂತೆ ಕ್ರಮ ತೆಗೆದುಕೊಳ್ಳುವುದು. ನಿಂತ ನೀರಿನಲ್ಲೇ ಸೊಳ್ಳೆಗಳ ಸಂತಾನೋತ್ಪತ್ತಿ ಕ್ರಿಯೆ ನಡೆಯುವುದರಿಂದ ನಿಮ್ಮ ಮನೆಯಂಗಳ ಅಥವಾ ಸುತ್ತಮುತ್ತಲಿನಲ್ಲಿ ನೀರು ನಿಲ್ಲದಂತೆ ಎಚ್ಚರಿಕೆವಹಿಸಬೇಕು.
ಸೊಳ್ಳೆ ದಿನವನ್ನು ಆಚರಿಸುವ ಉದ್ದೇಶವೇನು?
80-90 ರ ದಶಕಗಳಲ್ಲಿ ಸೊಳ್ಳೆಗಳಿಂದ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಜನರು ಅಷ್ಟೊಂದು ಗಂಭೀರವಾಗಿರಲಿಲ್ಲ. ಆದರೆ, ತದನಂತರ ಅಂದರೆ 2000ರ ನಂತರ ಜನರಲ್ಲಿ ನಿಧಾನವಾಗಿ ಈ ಬಗ್ಗೆ ಅರಿವು ಮೂಡಲಾರಂಭಿಸಿ ಸೊಳ್ಳೆಗಳ ವಿರುದ್ಧ ಹೋರಾಡಲು ಸಿದ್ಧರಾಗತೊಡಗಿದರು. ಆದಾಗ್ಯೂ, ಬಹು ಜನರು ಈ ಬಗ್ಗೆ ಅಷ್ಟೊಂದು ಗಂಭೀರತೆಯನ್ನು ಹೊಂದಿಲ್ಲದೆ ಇರುವುದು ದುರದೃಷ್ಟಕರ. ಹಾಗಾಗಿ ಈ ರೀತಿಯ ದಿನಗಳ ಆಚರಣೆ ಮೂಲಕ ಜನರಲ್ಲಿ ಹೆಚ್ಚಿನ ಅರಿವು ಹಾಗೂ ಗಂಭೀರತೆ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ವಿಶೇಷವೆಂದರೆ 2000ರ ನಂತರ ಹಲವು ಜನರು ಸೊಳ್ಳೆಗಳ ವಿರುದ್ಧ ಹೋರಾಡಲು ತೊಡೆ ಕಟ್ಟಿ ನಿಂತಿದ್ದರಿಂದ ಇಲ್ಲಿಯವರೆಗೂ 7.6 ಮಿಲಿಯನ್ ಜೀವಗಳು ಉಳಿದಿವೆ ಎಂಬ ಅಂಕಿ-ಅಂಶಗಳು ಸಿಗುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ