Menstrual Hygiene Day: ಇಂದು ವಿಶ್ವ ಋತುಚಕ್ರ ನೈರ್ಮಲ್ಯ ದಿನ; ಇದರ ಆಚರಣೆ ಹಿಂದಿದೆ ಒಂದು ಕಾರಣ

Menstruation: ಈ ಬಾರಿ ಸಾಂಕ್ರಾಮಿಕ ಕಾಯಿಲೆ ಸಂದರ್ಭದಲ್ಲಿ ಮುಟ್ಟು ಎಂಬ ಥೀಮ್​ ಇಟ್ಟುಕೊಂಡು ವಿಶ್ವ ಋತುಚಕ್ರ ನೈರ್ಮಲ್ಯ ದಿನ ಆಚರಣೆ ಮಾಡಲಾಗುತ್ತಿದೆ.

news18-kannada
Updated:May 28, 2020, 11:41 AM IST
Menstrual Hygiene Day: ಇಂದು ವಿಶ್ವ ಋತುಚಕ್ರ ನೈರ್ಮಲ್ಯ ದಿನ; ಇದರ ಆಚರಣೆ ಹಿಂದಿದೆ ಒಂದು ಕಾರಣ
ಸಾಂದರ್ಭಿಕ ಚಿತ್ರ
  • Share this:
ಋತುಚಕ್ರ ಒಂದು ಸಹಜ ಕ್ರಿಯೆ. ಆದರೆ, ಕೆಲವರಲ್ಲಿ ಇದರ ಬಗ್ಗೆ ತಪ್ಪಾದ ಭಾವನೆ ಇದೆ. ಈ ತಪ್ಪು ಕಲ್ಪನೆ ಹೋಗಲಾಡಿಸಿ,ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ 28ಅನ್ನು ವಿಶ್ವ ಋತುಚಕ್ರ ನೈರ್ಮಲ್ಯ ದಿನ ಎಂದು ಆಚರಣೆ ಮಾಡಲಾಗುತ್ತದೆ.

ಹಾಗಾದರೆ, ವಿಶ್ವ ಋತುಚಕ್ರ ನೈರ್ಮಲ್ಯ ದಿನ ಎಂಬುದನ್ನು ಮೇ 28ರಂದೇ ಆಚರಿಸಲು ಒಂದು ಬಲವಾದ ಕಾರಣವಿದೆ. ಸಾಮಾನ್ಯವಾಗಿ 28 ದಿನಕ್ಕೆ ಒಮ್ಮೆ ಮುಟ್ಟು ಸಂಭವಿಸುತ್ತದೆ. ಅಲ್ಲದೆ, ಇದು ಐದು ದಿನಗಳ ಕಾಲ ಇರುತ್ತದೆ. ಹೀಗಾಗಿ 28-5ನ್ನು ವಿಶ್ವ ಋತುಚಕ್ರ ನೈರ್ಮಲ್ಯ ದಿನ ಎಂದು ಆಚರಿಸಲಾಗುತ್ತಿದೆ.

ಈ ಬಾರಿ 'ಸಾಂಕ್ರಾಮಿಕ ಕಾಯಿಲೆ ಸಂದರ್ಭದಲ್ಲಿ ಮುಟ್ಟು' ಎಂಬ ಥೀಮ್​ ಇಟ್ಟುಕೊಂಡು ವಿಶ್ವ ಋತುಚಕ್ರ ನೈರ್ಮಲ್ಯ ದಿನ ಆಚರಣೆ ಮಾಡಲಾಗುತ್ತಿದೆ. ಕೊರೋನಾ ವೈರಸ್​ನಿಂದ ಈಗಾಲೇ ಸಾಕಷ್ಟು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಮುಟ್ಟಿನ ದಿನಗಳಲ್ಲಿ ಮಹಿಳೆಯರು ಮತ್ತಷ್ಟು ಕಷ್ಟ ಪಡುವಂತಾಗಿದೆ. ಹೀಗಾಗಿ ಕೊರೊನಾ ಕಾಯಿಲೆಯ ದಿನಗಳಲ್ಲಿ ಮುಟ್ಟಾದ ಮಹಿಳೆಯರು ನೈರ್ಮಲ್ಯ ಕಾಪಾಡಿಕೊಳ್ಳುವ ಅಗತ್ಯವಿರುವುದರಿಂದ ಈ ಥೀಮ್​ ಆಯ್ಕೆ ಮಾಡಿಕೊಳ್ಳಲಾಗಿದೆ.

First published: May 28, 2020, 11:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading