• Home
  • »
  • News
  • »
  • trend
  • »
  • UNESCO: 2050ರ ವೇಳೆಗೆ ಕಣ್ಮರೆಯಾಗುತ್ತಾ ವಿಶ್ವ ಪರಂಪರೆಯ ಹಿಮನದಿಗಳು?

UNESCO: 2050ರ ವೇಳೆಗೆ ಕಣ್ಮರೆಯಾಗುತ್ತಾ ವಿಶ್ವ ಪರಂಪರೆಯ ಹಿಮನದಿಗಳು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಯೆಲ್ಲೊಸ್ಟೋನ್ ಮತ್ತು ಕಿಲಿಮಂಜಾರೊ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಅನೇಕ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿನ ಹಿಮನದಿಗಳು 2050 ರ ವೇಳೆಗೆ ಕಣ್ಮರೆಯಾಗಲಿವೆ ಎಂದು ಯುನೆಸ್ಕೋ ಹೇಳಿದೆ ಇದಕ್ಕೆ ಕಾರಣ ಏನು ಗೊತ್ತಾ?

  • Share this:

ಯೆಲ್ಲೊಸ್ಟೋನ್ (Yellowstone) ಮತ್ತು ಕಿಲಿಮಂಜಾರೊ ( Kilimanjaro )ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಅನೇಕ ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣಗಳಲ್ಲಿನ ಹಿಮನದಿಗಳು 2050 ರ ವೇಳೆಗೆ ಕಣ್ಮರೆಯಾಗಲಿವೆ ಎಂದು ಯುನೆಸ್ಕೋ ಹೇಳಿದೆ. ಅಧ್ಯಯನದ ಪ್ರಕಾರ, "ಈ ಹಿಮನದಿಗಳು 2000 ರಿಂದ ವೇಗವಾಗಿ ಕರಗುತ್ತಿವೆ ಎಂದು ಯುನೆಸ್ಕೋ ಹೇಳಿದೆ. ಆಘಾತಕಾರಿ ವಿಷಯ ಏನೆಂದರೆ, ಹಿಮನದಿಗಳು (Glaciers) ಪ್ರತಿ ವರ್ಷ 58 ಶತಕೋಟಿ ಟನ್‌ಗಳಷ್ಟು (TUN) ಮಂಜುಗಡ್ಡೆಯನ್ನು (Snow) ಕಳೆದುಕೊಳ್ಳುತ್ತಿವೆ. ಇದು ಫ್ರಾನ್ಸ್ ಮತ್ತು ಸ್ಪೇನ್‌ನ ಸಂಯೋಜಿತ ವಾರ್ಷಿಕ ನೀರಿನ ಬಳಕೆಗೆ ಸಮನಾಗಿರುತ್ತದೆ. ಇದು, ಜಾಗತಿಕ ಸಮುದ್ರ ಮಟ್ಟದ ಏರಿಕೆಗೆ ಸುಮಾರು ಐದು ಪ್ರತಿಶತದಷ್ಟು ಕಾರಣವಾಗಿದೆ ಎಂದು ಸಂಸ್ಥೆ ವಿವರಿಸಿದೆ.


"ಜಾಗತಿಕ ತಾಪಮಾನಗಳನ್ನು ಕಡಿಮೆ ಮಾಡುವಂಥ ಪ್ರಯತ್ನಗಳ ಹೊರತಾಗಿಯೂ 50 ವಿಶ್ವ ಪರಂಪರೆಯ ತಾಣಗಳಲ್ಲಿ ಮೂರನೇ ಒಂದು ಭಾಗದಷ್ಟು ಹಿಮನದಿಗಳು 2050 ರ ವೇಳೆಗೆ ಕಣ್ಮರೆಯಾಗುತ್ತವೆ. "ಆದರೆ ಕೈಗಾರಿಕಾ ಪೂರ್ವದ ಅವಧಿಗೆ ಹೋಲಿಸಿದರೆ ತಾಪಮಾನದ ಏರಿಕೆಯು 1.5 ° C ಗಿಂತ ಹೆಚ್ಚಿಲ್ಲದಿದ್ದರೆ ಉಳಿದ ಮೂರನೇ ಎರಡರಷ್ಟು ಜಾಗಗಳಲ್ಲಿ ಹಿಮನದಿಗಳನ್ನು ಉಳಿಸಲು ಇನ್ನೂ ಸಾಧ್ಯವಿದೆ ಎಂದು ಯುನೆಸ್ಕೋ ಹೇಳಿದೆ.


ಹೊರಸೂಸುವಿಕೆಯನ್ನು ಕಡಿಮೆ ಮಾಡಲೇಬೇಕಿದೆ


ಈಜಿಪ್ಟ್‌ನಲ್ಲಿ ನಡೆಯಲಿರುವ COP27 ಹವಾಮಾನ ಶೃಂಗಸಭೆಯ ಮುನ್ನ UNESCO ಮುಖ್ಯಸ್ಥ ಆಡ್ರೆ ಅಝೌಲೆ, "ಈ ವರದಿಯು ಕ್ರಮಕ್ಕೆ ಕರೆಯಾಗಿದೆ" ಎಂದು ಹೇಳಿದ್ದಾರೆ. "ನಮ್ಮ CO2 ಹೊರಸೂಸುವಿಕೆಯನ್ನು ಕಡಿಮೆ ಮಾಡಿದರೆ ಮಾತ್ರ ಹಿಮನದಿಗಳನ್ನು ಮತ್ತು ಅವುಗಳ ಮೇಲೆ ಅವಲಂಬಿತವಾಗಿರುವ ಅಸಾಧಾರಣ ಜೀವವೈವಿಧ್ಯವನ್ನು ಉಳಿಸಬಹುದು ಎಂದಿದ್ದಾರೆ.


World Heritage glaciers disappearing by 2050
ಸಾಂಕೇತಿಕ ಚಿತ್ರ


ಯಾವ್ಯಾವ ಖಂಡಗಳಲ್ಲಿ ಉಂಟಾಗುತ್ತೆ ಪರಿಣಾಮ?


ಆಫ್ರಿಕಾದಲ್ಲಿ, ಕಿಲಿಮಂಜಾರೋ ರಾಷ್ಟ್ರೀಯ ಉದ್ಯಾನವನ ಮತ್ತು ಮೌಂಟ್ ಕೀನ್ಯಾ ಸೇರಿದಂತೆ ಎಲ್ಲಾ ವಿಶ್ವ ಪರಂಪರೆಯ ತಾಣಗಳಲ್ಲಿನ ಹಿಮನದಿಗಳು 2050 ರ ವೇಳೆಗೆ ನಾಶವಾಗುತ್ತವೆ ಎಂದಿರುವ ಯುನೆಸ್ಕೋ, ಯುರೋಪ್‌ನಲ್ಲಿ, ಪೈರಿನೀಸ್ ಮತ್ತು ಡೊಲೊಮೈಟ್‌ಗಳಲ್ಲಿನ ಕೆಲವು ಹಿಮನದಿಗಳು ಬಹುಶಃ ಮೂರು ದಶಕಗಳ ಅವಧಿಯಲ್ಲಿ ಕಣ್ಮರೆಯಾಗಬಹುದು.


ಯುನೈಟೆಡ್ ಸ್ಟೇಟ್ಸ್‌ನ ಯೆಲ್ಲೊಸ್ಟೋನ್ ಮತ್ತು ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನಗಳಲ್ಲಿನ ಹಿಮನದಿಗಳ ಪರಿಸ್ಥಿತಿಯೂ ಅದೇ ಆಗಿದೆ. 10 ರಲ್ಲಿ ಒಂದು ಹಿಮ , ಮಂಜುಗಡ್ಡೆ ಕರಗುತ್ತಿರುವುದು ಹವಾಮಾನ ಬದಲಾವಣೆಯ ಕುರಿತು ಭಯ ಹುಟ್ಟುಸುವಂತಿದೆ ಎಂದು ಇಂಟರ್‌ಗವರ್ನಮೆಂಟಲ್ ಪ್ಯಾನಲ್ ವರದಿ ಹೇಳಿದೆ.


ಇದನ್ನೂ ಓದಿ: Multibagger Share: 1 ಷೇರು ಖರೀದಿಸಿದ್ರೆ ಉಚಿತವಾಗಿ ಸಿಗುತ್ತೆ 100 ಷೇರು, ಯಾರಿಗುಂಟು ಯಾರಿಗಿಲ್ಲ!


ಅಪಾಯದಲ್ಲಿರುವ ಹಿಮನದಿಗಳು ಎಲ್ಲೆಲ್ಲಿವೆ?


ಪ್ರಸ್ತುತ ಪ್ರತಿ ವರ್ಷ 58 ಶತಕೋಟಿ ಟನ್‌ಗಳಷ್ಟು ಮಂಜುಗಡ್ಡೆ ಕರಗಿಹೋಗುತ್ತಿದೆ. ಇದು ಫ್ರಾನ್ಸ್ ಮತ್ತು ಸ್ಪೇನ್‌ನ ಸಂಯೋಜಿತ ವಾರ್ಷಿಕ ನೀರಿನ ಬಳಕೆಗೆ ಸಮನಾಗಿರುತ್ತದೆ. ಅಲ್ಲದೇ, ಜಾಗತಿಕ ಸಮುದ್ರ ಮಟ್ಟದ ಏರಿಕೆಗೆ ಸುಮಾರು ಐದು ಪ್ರತಿಶತ ಕಾರಣವಾಗಿದೆ. ಅಪಾಯದಲ್ಲಿರುವ ಹಿಮನದಿಗಳು ಆಫ್ರಿಕಾ, ಏಷ್ಯಾ, ಯುರೋಪ್, ಲ್ಯಾಟಿನ್ ಅಮೇರಿಕಾ, ಉತ್ತರ ಅಮೇರಿಕಾ ಮತ್ತು ಓಷಿಯಾನಿಯಾದಲ್ಲಿವೆ.


UNESCO ಬಗ್ಗೆ


ಯುನೆಸ್ಕೋ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಯಾಗಿದ್ದು, ವಿಶ್ವಸಂಸ್ಥೆಯ (UN) ವಿಶೇಷ ಸಂಸ್ಥೆಯಾಗಿದೆ.


1. ಇದು ಯುಎನ್ ಏಜೆನ್ಸಿಗಳು ಮತ್ತು ಸುಸ್ಥಿರ ಅಭಿವೃದ್ಧಿ ಉದ್ದೇಶಗಳನ್ನು (ಎಸ್‌ಡಿಜಿಗಳು) ಪೂರೈಸುವ ಗುರಿಯನ್ನು ಹೊಂದಿರುವ ಸಂಸ್ಥೆಗಳ ಒಕ್ಕೂಟವಾದ ಯುನೈಟೆಡ್ ನೇಷನ್ಸ್ ಸಸ್ಟೈನಬಲ್ ಡೆವಲಪ್‌ಮೆಂಟ್ ಗ್ರೂಪ್ (ಯುಎನ್‌ಎಸ್‌ಡಿಜಿ) ನ ಸದಸ್ಯ ಕೂಡ.


2. ಯುನೆಸ್ಕೋದ ಪ್ರಧಾನ ಕಛೇರಿಯು ಪ್ಯಾರಿಸ್‌ನಲ್ಲಿದೆ. ಸಂಸ್ಥೆಯು ಪ್ರಪಂಚದಾದ್ಯಂತ 50 ಕ್ಕೂ ಹೆಚ್ಚು ಬ್ರಾಂಚ್‌ ಗಳನ್ನು ಹೊಂದಿದೆ.


3. ಇದು 193 ಸದಸ್ಯರು ಮತ್ತು 11 ಅಸೋಸಿಯೇಟ್ ಸದಸ್ಯರನ್ನು (ಏಪ್ರಿಲ್ 2020 ರಂತೆ) ಹೊಂದಿದೆ ಮತ್ತು ಇದನ್ನು ಸಾಮಾನ್ಯ ಸಮ್ಮೇಳನ ಮತ್ತು ಕಾರ್ಯಕಾರಿ ಮಂಡಳಿಯು ನಿರ್ವಹಿಸುತ್ತದೆ.


4. ಮೂರು UNESCO ಸದಸ್ಯ ರಾಷ್ಟ್ರಗಳು UN ಸದಸ್ಯರಲ್ಲ: ಕುಕ್ ದ್ವೀಪಗಳು, ನಿಯು ಮತ್ತು ಪ್ಯಾಲೆಸ್ಟೈನ್.


5. ಮೂರು ಯುಎನ್ ಸದಸ್ಯ ರಾಷ್ಟ್ರಗಳು (ಇಸ್ರೇಲ್, ಲಿಚ್ಟೆನ್‌ಸ್ಟೈನ್, ಯುನೈಟೆಡ್ ಸ್ಟೇಟ್ಸ್) ಯುನೆಸ್ಕೋ ಸದಸ್ಯರಾಗಿಲ್ಲ.


ಅಂದಹಾಗೆ ಯುನೆಸ್ಕೋ ಶಿಕ್ಷಣ, ವಿಜ್ಞಾನ ಮತ್ತು ಸಂಸ್ಕೃತಿಯಲ್ಲಿ ಅಂತರಾಷ್ಟ್ರೀಯ ಸಹಕಾರದ ಮೂಲಕ ಶಾಂತಿಯನ್ನು ನಿರ್ಮಿಸಲು ಪ್ರಯತ್ನಿಸುತ್ತದೆ.

First published: