• Home
  • »
  • News
  • »
  • trend
  • »
  • World Happy Index: ಈ ರಾಷ್ಟ್ರಗಳ ಜನರು ಸದಾ ಹೆಚ್ಚು ಖುಷಿಯಾಗಿರ್ತಾರಂತೆ!

World Happy Index: ಈ ರಾಷ್ಟ್ರಗಳ ಜನರು ಸದಾ ಹೆಚ್ಚು ಖುಷಿಯಾಗಿರ್ತಾರಂತೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವ್ಯಕ್ತಿಯ ಜೀವನದ ಮೇಲಿನ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳು ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂತೋಷದ ಸೂಚ್ಯಂಕಗಳನ್ನು ನಿರ್ಣಯಿಸಲಾಗುತ್ತದೆ. ಒಟ್ಟಾರೆ ಒಂದು ದೇಶದಲ್ಲಿ ಸಂತೋಷದಾಯಕ ಜನಸಂಖ್ಯೆಯನ್ನು ಹೊಂದಿರಬೇಕೆಂದರೆ ಅಲ್ಲಿನ ನಿಯಮಗಳು ಸರಿಯಾಗಿರಬೇಕು.

  • Share this:

ಜನರು ಹ್ಯಾಪಿ ಆಗಿರೋದಕ್ಕೆ ಬಹಳಷ್ಟು ಕಾರಣಗಳಿವೆ. ಹಾಗೆಯೇ ದುಃಖ ಪಡೋದಕ್ಕೂ ಕಾರಣಗಳು ಬಹಳಷ್ಟಿರುತ್ತವೆ. ಆದ್ರೆ ಒಂದು ರಾಷ್ಟ್ರದ ಜನಸಂಖ್ಯೆ (Population) ಅಂತ ತೆಗೆದುಕೊಂಡರೆ ಅದರಲ್ಲಿ ಅತಿಹೆಚ್ಚು ಜನರು ಸಂತೋಷವಾಗಿದ್ದರೆ, ಆರೋಗ್ಯವಾಗಿದ್ದರೆ (Healthy), ಶಿಕ್ಷಣವಂತರಾಗಿದ್ದರೆ, ಸ್ವತಂತ್ರರಾಗಿದ್ದರೆ, ಆರ್ಥಿಕವಾಗಿ (Economy) ಸಮರ್ಥರಾಗಿದ್ದರೆ ಅದನ್ನ ಸಂತೋಷದಾಯಕ ರಾಷ್ಟ್ರ ಅಂತ ಕರೆಯಬಹುದು. ಹೀಗೆಯೇ ಜಗತ್ತಿನಲ್ಲಿ ಕೆಲವಷ್ಟು ರಾಷ್ಟ್ರಗಳು ಸಂತೋಷದಾಯಕ (Happy) ಜನಸಂಖ್ಯೆಯನ್ನು ಹೊಂದಿವೆ.


ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ ತನ್ನ 10 ನೇ ವಾರ್ಷಿಕೋತ್ಸವವನ್ನು ಈ ವರ್ಷದ ಗ್ಲೋಬ್ ಹ್ಯಾಪಿನೆಸ್ ರಿಫ್ಲೆಕ್ಟ್ ಬಿಡುಗಡೆಯೊಂದಿಗೆ ಆಚರಿಸುತ್ತಿದೆ. ಇದು ವಿಶ್ವದಾದ್ಯಂತ 150 ಕ್ಕೂ ಹೆಚ್ಚು ದೇಶಗಳಲ್ಲಿ ಜನರು ತಮ್ಮ ಜೀವನವನ್ನು ಹೇಗೆ ನಡೆಸುತ್ತಾರೆ ಎಂಬುದನ್ನು ವರದಿ ಮಾಡಲು ಜಾಗತಿಕ ಸಮೀಕ್ಷೆಗಳ ಡೇಟಾವನ್ನು ವಿಶ್ಲೇಷಿಸಿದೆ. ಕೊರೋನಾದಂತಹ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಇಡೀ ಜಗತ್ತಿನಲ್ಲಿ ಜನರ ಜೀವನ ಕರಾಳವಾಗಿತ್ತು. ಜಗತ್ತಿನಲ್ಲೆಡೆ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡ ಕೋರೋನಾ ಜನರ ಜೀವನವನ್ನೇ ನಾಶ ಮಾಡಿತ್ತು.


ಆದರೆ ದಿನಗಳೆದಂತೆ ಅದರ ಪರಿಣಾಮ ಕಡಿಮೆಯಾಗಿ ಜನಜೀವನ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಿದೆ. ವಿಶ್ವ ಸಂತೋಷ ಸೂಚ್ಯಂಕ 2023 ಇದೇ ಆಶಾವಾದದ ಮೇಲೆ ಬೆಳಕು ಚೆಲ್ಲುತ್ತದೆ.


ವಿಶ್ವ ಸಂತೋಷ ಸೂಚ್ಯಂಕ ವರದಿ


ಸಸ್ಟೈನಬಲ್ ಡೆವಲಪ್‌ಮೆಂಟ್ ಸೊಲ್ಯೂಷನ್ಸ್ ನೆಟ್‌ವರ್ಕ್, ವರ್ಲ್ಡ್ ಹ್ಯಾಪಿನೆಸ್ ಇಂಡೆಕ್ಸ್ 2023 ಎಂಬ ವಾರ್ಷಿಕ ವರದಿಯನ್ನು ಪ್ರಕಟಿಸುತ್ತದೆ. ಈ ವರದಿಯು ಇಡೀ ಜಗತ್ತಿನಾದ್ಯಂತ 150ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಒಟ್ಟಾರೆ ಸಂತೋಷದ ಮಟ್ಟವನ್ನು ನಿರ್ಣಯಿಸುತ್ತದೆ. ಗ್ಯಾಲಪ್ ವರ್ಲ್ಡ್ ಪೋಲ್‌ನ ಅಂಕಿಅಂಶಗಳು, ಜಿಡಿಪಿ ಮತ್ತು ಜೀವಿತಾವಧಿಯಂತಹ ಹಲವಾರು ಇತರ ಅಂಶಗಳನ್ನು ಇಲ್ಲಿ ಆಧಾರವಾಗಿ ಇಟ್ಟುಕೊಂಡು ವರದಿ ನೀಡಲಾಗುತ್ತದೆ.


ವರ್ಲ್ಡ್ ಹ್ಯಾಪಿನೆಸ್ ಸೂಚ್ಯಂಕ 2022


ವರ್ಲ್ಡ್ ಹ್ಯಾಪಿನೆಸ್ ಸೂಚ್ಯಂಕ 2022 ರಲ್ಲಿ ಯಾವ್ಯಾವ ರಾಷ್ಟ್ರಗಳು ಅತ್ಯಂತ ಸಂತೋಷದಾಯ ರಾಷ್ಟ್ರಗಳು ಎಂಬುದಾಗಿ ಕರೆಯಲ್ಪಟ್ಟಿವೆ ಅನ್ನೋದನ್ನು ನೋಡೋಣ.


1. ಫಿನ್ಲ್ಯಾಂಡ್: ಫಿನ್‌ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಸಂಭವನೀಯ ಒಟ್ಟು 10 ಅಂಕಗಳ ಸ್ಕೋರ್‌ನಲ್ಲಿ 7.842 ಅಂಕಗಳನ್ನು ಪಡೆದಿದೆ.


ಫಿನ್‌ಲ್ಯಾಂಡ್‌ನ ಜನರಲ್ಲಿ ನಾಗರಿಕ ಒಗ್ಗಟ್ಟಿನ ಮತ್ತು ಪರಸ್ಪರ ನಂಬಿಕೆಯ ಪ್ರಜ್ಞೆಯು ಪ್ರಥಮ ಸ್ಥಾನವನ್ನು ಪಡೆಯಲು ಸಹಾಯ ಮಾಡಿದೆ. ಕೋವಿಡ್‌ 198 ಸಾಂಕ್ರಾಮಿಕವನ್ನು ಯಶಸ್ವಿಯಾಗಿ ನಿಭಾಯಿಸಲು ಇಡೀ ದೇಶಕ್ಕೆ ಸಹಾಯ ಮಾಡಿದ್ದು ಅದೇ ಭಾವನೆಗಳು.


ಜೊತೆಗೆ, ಫಿನ್‌ಲ್ಯಾಂಡ್‌ನ ಜನರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು ಎಂಬ ನಂಬಿಕೆಯನ್ನು ಹೊಂದಿದ್ದರು. ತಮ್ಮ ಸರ್ಕಾರದ ಸಮಗ್ರತೆ ಮತ್ತು ಸಾಮರ್ಥ್ಯದ ಬಗ್ಗೆ ಧನಾತ್ಮಕ ಅಭಿಪ್ರಾಯ ಹೊಂದಿದ್ದರು.


ಈ ಎರಡೂ ಅಂಶಗಳು ಒಬ್ಬರ ಒಟ್ಟಾರೆ ಸಂತೋಷದ ಮಟ್ಟದಲ್ಲಿ ಗಮನಾರ್ಹವಾದ ಅಂಶಗಳನ್ನು ಹೊಂದಿವೆ.


2. ಡೆನ್ಮಾರ್ಕ್: ಡೆನ್ಮಾರ್ಕ್‌ನ ಸಂಸ್ಕೃತಿ,ಸಮಾಜ ಹಾಗೂ ಇಲ್ಲಿನ ಜನರ ಮನಸ್ಥಿತಿ ವಿಶಿಷ್ಟವಾಗಿದ್ದು, ಅತ್ಯಂತ ಸಂತೋಷದಾಯ ರಾಷ್ಟ್ರಗಳ ಸಾಲಿನಲ್ಲಿ 2 ನೇ ಸ್ಥಾನ ಪಡೆದಿದೆ.


ಡೆನ್ಮಾರ್ಕ್‌ನಲ್ಲಿರುವ ಪ್ರತಿಯೊಬ್ಬರೂ ಪರಸ್ಪರರ ಅಭಿವೃದ್ಧಿಗೆ, ಕಲ್ಯಾಣಕ್ಕೆ ಜವಾಬ್ದಾರರಾಗಿರುತ್ತಾರೆ ಎಂಬ ಭಾವನೆ ಸಾಕಷ್ಟು ಪ್ರಬಲವಾಗಿದೆ. ದೇಶದ ಸಾಮಾಜಿಕ ರಚನೆಯು ಸಮಾನತೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಇದು ಒಂದು ಕಾರಣವಾಗಿರಬಹುದು.


3. ಐಸ್ಲ್ಯಾಂಡ್: ಆರೋಗ್ಯವು ಸಂತೋಷವನ್ನು ನಿರ್ಧರಿಸುವಲ್ಲಿ ಮಹತ್ವದ ಅಂಶವಾಗಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಐಸ್‌ಲ್ಯಾಂಡ್‌ನಲ್ಲಿನ ಆರೋಗ್ಯ ಸೇವೆಯು ಸರಾಸರಿಗಿಂತ ಹೆಚ್ಚಾಗಿರುತ್ತದೆ.


ಅಲ್ಲಿನ ಹೆಚ್ಚಿನ ನಿವಾಸಿಗಳು ಉನ್ನತ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದಾರೆ. ಅಲ್ಲದೇ, ಐಸ್ಲ್ಯಾಂಡ್ ವಿಶ್ವದ ಅತ್ಯಂತ ಸುಂದರವಾದ ನೈಸರ್ಗಿಕ ದೃಶ್ಯಾವಳಿಗಳಿಗೆ ನೆಲೆಯಾಗಿದೆ. ಅಲ್ಲಿನ ಜನರು ಹೆಚ್ಚು ಸಕ್ರಿಯರಾಗಿರುತ್ತಾರಲ್ಲದೇ, ಪ್ರಕೃತಿ ಸೌಂದರ್ಯವನ್ನು ಅನುಭವಿಸುತ್ತಾರೆ ಕೂಡ. ಅವರು ದೇಶದ ಅನೇಕ ಹೊರಾಂಗಣ ಅವಕಾಶಗಳನ್ನು ಹೆಚ್ಚು ಬಳಸಿಕೊಳ್ಳುತ್ತಾರೆ. ಪ್ರಕೃತಿಯ ವೈಭವವು ನಿಮ್ಮನ್ನು ಸುತ್ತುವರೆದಿರುವಾಗ ತೃಪ್ತಿ ಹೊಂದುವುದು ಮತ್ತು ಸಂತೋಷವಾಗಿರುವುದು ಅತ್ಯಂತ ಸುಲಭ.


4. ನೆದರ್ಲ್ಯಾಂಡ್:‌ ಅನೇಕ ಟುಲಿಪ್ ಹೂವಿನ ಅಭಿಮಾನಿಗಳಿಗೆ ಇದು ಸ್ವರ್ಗ ಸಮಾನವಾಗಿದೆ. ಸಾಮಾನ್ಯವಾಗಿ ಹಾಲೆಂಡ್‌ ಅಂತ ಕರೆಯಲ್ಪಡುವ ನೆದರ್ಲ್ಯಾಂಡ್‌ ಸಂತೋಷದ ಸೂಚ್ಯಂಕದಲ್ಲಿ 10 ಕ್ಕೆ 7.464 ಅಂಕಗಳನ್ನು ಪಡೆದಿದೆ.


ಇದು ವಿಶ್ವದ ಐದನೇ ಸಂತೋಷದ ರಾಷ್ಟ್ರವಾದ ನಾರ್ವೆಗಿಂತ ಮುಂದಿದೆ. ನಾರ್ವೆ ಐದನೇ ಸ್ಥಾನದಲ್ಲಿದೆ. ಔದಾರ್ಯವನ್ನು ಅಳೆಯುವ ಅಗ್ರ ಏಳು ದೇಶಗಳಲ್ಲಿ ನೆದರ್ಲ್ಯಾಂಡ್ಸ್ ಅತಿ ಹೆಚ್ಚು ಅಂಕಗಳನ್ನು ಪಡೆದಿತ್ತು. ಅಲ್ದೇ, ಇಲ್ಲಿ ಕಡಿಮೆ ಮಟ್ಟದ ಭ್ರಷ್ಟಾಚಾರ ಇದೆ ಅನ್ನೋದು ಗಮನಿಸಬೇಕಾದ ವಿಚಾರವಾಗಿದೆ.


ವರ್ಲ್ಡ್ ಹ್ಯಾಪಿನೆಸ್ ಇಂಡೆಕ್ಸ್ 2023


5. ಲಕ್ಸೆಂಬರ್ಗ್: ಪ್ರಾಚೀನ ಸ್ಥಳಗಳು ಮತ್ತು ಕೋಟೆಗಳನ್ನು ಕಾಲ್ಪನಿಕ ಕಥೆಯಿಂದ ನೇರವಾಗಿ ನೋಡಲು ಲಕ್ಸೆಂಬರ್ಗ್‌ ಅತ್ಯಂತ ಒಳ್ಳೆಯ ಸ್ಥಳ. ಅಲ್ದೇ ದೇಶದ ಅದ್ಭುತ ನೈಸರ್ಗಿಕ ಭೂದೃಶ್ಯಗಳು, ಸಾಂಸ್ಕೃತಿಕ ವೈವಿಧ್ಯತೆಯನ್ನು ಅನುಭವಿಸಲು ಜನರು ಲಕ್ಸೆಂಬರ್ಗ್‌ಗೆ ಹೋಗುತ್ತಾರೆ.


ಇಲ್ಲಿ ನೀವು ಅದ್ಭುತ ವಾತಾವರಣವನ್ನು ಹಾಗೂ ಪ್ರಕೃತಿ ಸೌಂದರ್ಯದ ಸೊಬಗನ್ನು ಆನಂದಿಸುವಿರಿ. ಅಲ್ದೇ ಇಲ್ಲಿ ನಿಮ್ಮನ್ನು ಉತ್ಸಾಹದಿಂದ ಸ್ವಾಗತಿಸುವ ಜನರನ್ನು ಭೇಟಿಯಾಗುತ್ತೀರಿ.


ಇದನ್ನೂ ಓದಿ: Chicken Tikka Masala: ನಾನ್‌ ವೆಜ್‌ ಪ್ರಿಯರ ಬಾಯಿ ರುಚಿ ತಣಿಸಿದ್ದ ಖ್ಯಾತ ಉದ್ಯಮಿ ಇನ್ನಿಲ್ಲ, 77ನೇ ವಯಸ್ಸಲ್ಲಿ ನಿಧನರಾದ 'ಚಿಕನ್ ಟಿಕ್ಕಾ ಮಸಾಲ' ದೊರೆ ಅಲಿ ಅಹ್ಮದ್ ಅಸ್ಲಂ


6. ಸ್ವೀಡನ್: ಇಲ್ಲಿನ ಜನರು ಆರೋಗ್ಯಕರ ಜೀವನವನ್ನು ನಡೆಸುತ್ತಾರೆ. ವೃತ್ತಿ ಹಾಗೂ ವೈಯಕ್ತಿಕ ಜೀವನದ ಸಮತೋಲ ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಗಮನ ಹರಿಸುತ್ತಾರೆ.


ಹಾಗಾಗಿಯೇ ಇಲ್ಲಿನ ಜನರು ಸಂತೋಷದ ಜನಸಂಖ್ಯೆಯನ್ನು ಹೊಂದಿದ್ದಾರೆ. ಮತ್ತೊಂದು ಸಂಶೋಧನೆಯ ಪ್ರಕಾರ, ಸ್ವೀಡನ್ ಮಹಿಳೆಯರಿಗೆ ಅತ್ಯುತ್ತಮ ಎನ್ನಲಾದ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಒಂದು ಎನ್ನಲಾಗಿದೆ.


ಏಕೆಂದರೆ ಇಲ್ಲಿ ಶಿಶು ವಿಹಾರದಿಂದ ಪ್ರಾರಂಭವಾಗುವ ಸಾಮಾಜಿಕ ಸಮಾನತೆಗೆ ದೇಶವು ಬಲವಾದ ಒತ್ತು ನೀಡುತ್ತದೆ. ಇಲ್ಲಿ 16 ತಿಂಗಳ ಪಾವತಿಸಿದ ಪೋಷಕರ ರಜೆ (ಮಾತೃತ್ವ ಮತ್ತು ಪಿತೃತ್ವ ರಜೆ) ನೀಡುತ್ತದೆ. ಉಚಿತ ಡೇ ಕೇರ್ ಅನ್ನು ಒದಗಿಸುತ್ತದೆ. ಸ್ವೀಡನ್ನಿಗರ ಸಂತೋಷವು ಈ ಎಲ್ಲಾ ವಿಷಯಗಳಿಗೆ ಭಾಗಶಃ ಕಾರಣವಾಗಿದೆ.


7. ಇಸ್ರೇಲ್ : ಇಸ್ರೇಲ್ ದೃಢವಾದ ಸಾಮಾಜಿಕ ಮತ್ತು ಕೌಟುಂಬಿಕ ರಚನೆ, ಆರೋಗ್ಯಕರ ಜೀವಿತಾವಧಿ, ಅತ್ಯುತ್ತಮ ವೈದ್ಯಕೀಯ ಆರೈಕೆ ಮತ್ತು ಸ್ಥಿರ ಆರ್ಥಿಕತೆಯನ್ನು ಹೊಂದಿದೆ.


ಇವೆಲ್ಲವೂ ದೇಶದ ನಿವಾಸಿಗಳಿಗೆ ಸುರಕ್ಷತೆ ಭಾವನೆಗೆ ಕೊಡುಗೆ ನೀಡುತ್ತವೆ. ಈ ಸಂಬಂಧಗಳ ಮೇಲಿನ ಪ್ರಾಮುಖ್ಯತೆಯಿಂದಾಗಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಇಲ್ಲಿ ಸಾಧ್ಯವಾಗುತ್ತದೆ.


ಸಮುದ್ರ, ಪುರಾತತ್ತ್ವ ಶಾಸ್ತ್ರದ ಸ್ಥಳಗಳು, ಐತಿಹಾಸಿಕ ತಾಣಗಳು, ಅದ್ಭುತ ಪಾಕಪದ್ಧತಿ ಮತ್ತು ಸುಂದರ ಜನರು ಇಲ್ಲಿನ ವಿಶೇಷತೆಗಳಾಗಿವೆ.


8. ನ್ಯೂಜಿಲ್ಯಾಂಡ್ : ನ್ಯೂಜಿಲ್ಯಾಂಡ್‌ ನ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ವಿಶ್ವದಲ್ಲೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದರ ಜೊತೆಗೆ, ರಾಷ್ಟ್ರವು ಸಾಮಾನ್ಯವಾಗಿ ಶಾಂತಿಯುತವಾಗಿರುತ್ತದೆ.


ನ್ಯೂಜಿಲ್ಯಾಂಡ್‌ ನಲ್ಲಿ, ಅನುಭವಿಸಲು, ಸಂತೋಷವಾಗಿರಲು ಸಾಕಷ್ಟು ವಿಷಯಗಳಿವೆ. ಅತ್ಯುತ್ತಮವಾದ ಹಾದಿಗಳು, ಹೈಕಿಂಗ್, ಸ್ಕೀಯಿಂಗ್, ಸ್ಕೈಡೈವಿಂಗ್, ಜಲಚರ ಚಟುವಟಿಕೆಗಳನ್ನು ಮಾಡಬಹುದಾಗಿದೆ.


ವರ್ಲ್ಡ್ ಹ್ಯಾಪಿನೆಸ್ ಇಂಡೆಕ್ಸ್ ಅನ್ನು ಹೇಗೆ ಅಳೆಯಲಾಗುತ್ತದೆ?


ಸಂತೋಷದ ಸೂಚ್ಯಂಕವನ್ನು ಹೇಗೆ ಅಳೆಯಲಾಗುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕಾಗಿಯೇ ಮೇಲೆ ತೋರಿಸಿರುವ ಶ್ರೇಯಾಂಕಗಳನ್ನು ಪಡೆಯಲು ಈ ಸಂಶೋಧನೆಯಲ್ಲಿ ಬಳಸಲಾದ ವಿಧಾನವನ್ನು ನೋಡೋಣ.


ಕ್ಯಾಂಟ್ರಿಲ್ ಲೈಫ್ ಲ್ಯಾಡರ್ ಪ್ರಶ್ನೆಯಲ್ಲಿ, ಸಂಗ್ರಹಿಸಿದ ಅಂಕಿ ಅಂಶಗಳು ಪ್ರತಿ ರಾಷ್ಟ್ರದ ಸಾವಿರಾರು ಜನರ ಸ್ಪಂದನೆಯನ್ನು ಒಳಗೊಂಡಿದೆ. ಈ ವ್ಯಕ್ತಿಗಳಿಗೆ ತಮ್ಮ ವೈಯಕ್ತಿಕ ಯೋಗಕ್ಷೇಮದ ಅಥವಾ ಸಂತೋಷದ ಸ್ಕೋರ್ ನಿರ್ಣಯಿಸಲು ಕೇಳಲಾಗುತ್ತದೆ.


ಇಂತಹ ಜನರ ಪ್ರತಿಕ್ರಿಯೆಗಳನ್ನು ಆಧರಿಸಿದ ಅಂಕಿ ಅಂಶಗಳನ್ನು ಪಟ್ಟಿ ಮಾಡಲಾಗುತ್ತದೆ.


ಇದರ ಜೊತೆಗೆ ಮತ್ತಷ್ಟು ನಿರ್ದಿಷ್ಟ ಅಂಶಗಳನ್ನೂ ಪರಿಗಣಿಸಲಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ


*ಸಾಮಾನ್ಯ ಜೀವಿತಾವಧಿ


*ತಲಾವಾರು GDP


*ಸಾಮಾಜಿಕ ಬೆಂಬಲ


*ಉದಾರತೆ


*ಜೀವನದಲ್ಲಿ ಒಬ್ಬರ ಹಾದಿಯನ್ನು ನಿರ್ಧರಿಸುವ ಸ್ವಾತಂತ್ರ್ಯ


*ಭ್ರಷ್ಟ ಆಚರಣೆಗಳ ಸಾರ್ವಜನಿಕ ದೃಷ್ಟಿಕೋನ


*ವ್ಯಕ್ತಿಯ ಜೀವನದ ಮೇಲಿನ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳು ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂತೋಷದ ಸೂಚ್ಯಂಕಗಳನ್ನು ನಿರ್ಣಯಿಸಲಾಗುತ್ತದೆ. ಒಟ್ಟಾರೆ ಒಂದು ದೇಶದಲ್ಲಿ ಸಂತೋಷದಾಯಕ ಜನಸಂಖ್ಯೆಯನ್ನು ಹೊಂದಿರಬೇಕೆಂದರೆ ಅಲ್ಲಿನ ನಿಯಮಗಳು ಸರಿಯಾಗಿರಬೇಕು. ಜನರಿಗೆ ಶಿಕ್ಷಣದ ಜೊತೆಗೆ ಸ್ವಾತಂತ್ರ್ಯವಿರಬೇಕು. ಸೌಲಭ್ಯಗಳಿರಬೇಕು. ಕಟ್ಟುಪಾಡುಗಳಿಲ್ಲದೇ ಸಂತೋಷವಾಗಿ ಜೀವನ ಕಳೆದಾಗ ಮಾತ್ರ ಅಲ್ಲಿನ ಜನರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಚೆನ್ನಾಗಿರಲು ಹಾಗೂ ಜೀವಿತಾವಧಿ ಹೆಚ್ಚಾಗಲು ಸಾಧ್ಯ. ಹಾಗಾಗಿ ಈ ನಿಟ್ಟಿನಲ್ಲಿ ಸಮಾಜ ಹಾಗೂ ಸರ್ಕಾರಗಳು ಕಾರ್ಯ ನಿರ್ವಹಿಸಿದರೆ ಬಹಳಷ್ಟು ರಾಷ್ಟ್ರಗಳು ಈ ಸಾಲುಗೆ ಸೇರಬಹುದೇನೋ

First published: