World Environment Day 2022: ವಿಶ್ವ ಪರಿಸರ ದಿನ 2022 ರ ಥೀಮ್ ಬಗ್ಗೆ ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

1972 ರಲ್ಲಿ ವಿಶ್ವಸಂಸ್ಥೆಯ ಮಾನವ ಪರಿಸರದ ಸ್ಟಾಕ್ ಹೋಮ್ ಸಮ್ಮೇಳನದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸುವುದಾಗಿ ಘೋಷಣೆ ಮಾಡಲಾಗಿತ್ತು. ಆದ್ದರಿಂದ ಯುಎನ್ಇಪಿ ನೇತೃತ್ವದಲ್ಲಿ ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

 • Share this:

  1972 ರಲ್ಲಿ ವಿಶ್ವಸಂಸ್ಥೆಯ ಮಾನವ ಪರಿಸರದ ಸ್ಟಾಕ್ ಹೋಮ್ ಸಮ್ಮೇಳನದಲ್ಲಿ ವಿಶ್ವ ಪರಿಸರ ದಿನವನ್ನು (World Environment Day) ಆಚರಿಸುವುದಾಗಿ ಘೋಷಣೆ ಮಾಡಲಾಗಿತ್ತು. ಆದ್ದರಿಂದ ಯುಎನ್ಇಪಿ (UNEP) ನೇತೃತ್ವದಲ್ಲಿ ಪ್ರತಿ ವರ್ಷ ಜೂನ್  5ರಂದು (June 5) ವಿಶ್ವ ಪರಿಸರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ವಿಶ್ವ ಪರಿಸರ ದಿನವನ್ನು ಮೊದಲ ಬಾರಿಗೆ 1974 ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ (United States) ಆಚರಿಸಲಾಯಿತು. ಈ ದಿನವು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕೈಗೊಳ್ಳಬೇಕಾದ ಕ್ರಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಜಾಗತಿಕ ತಾಪಮಾನ ಏರಿಕೆಯು ಒಂದು ದೊಡ್ಡ ಬೆದರಿಕೆಯಾಗಿದ್ದು, ಆರೋಗ್ಯಕರ ಜೀವನ ಮತ್ತು ಪ್ರಕೃತಿಯ ರಕ್ಷಣೆಯನ್ನು ಪಡೆಯಲು ನಮಗೆ ಸವಾಲುಗಳನ್ನು ನೀಡುತ್ತದೆ.


  50 ವರ್ಷಗಳ ಹಿಂದೆ ತಾಯಿ ಪ್ರಕೃತಿಯನ್ನು ರಕ್ಷಿಸಲು ಉದ್ದೇಶ ಇಂದಿಗೂ ಹಾಗೆಯೇ ಇದೆ. ಈ ಗ್ರಹವು ನಮ್ಮ ಏಕೈಕ ಮನೆಯಾಗಿದೆ ಮತ್ತು ಮುಂಬರುವ ಪೀಳಿಗೆಗೆ ನಾವು ಅದನ್ನು ಉಳಿಸಬೇಕಾಗಿದೆ. ಮಾಲಿನ್ಯ ಮುಕ್ತ ಮತ್ತು ಹಸಿರು ಭೂಮಿಯಿಂದ ತುಂಬಿರುವ ಜೀವನ ಶೈಲಿಯನ್ನು ರಚಿಸುವುದು ಮತ್ತು ಅಳವಡಿಸಿಕೊಳ್ಳುವುದು ಥೀಮ್‌ನ ನೀತಿಯಾಗಿದೆ.


  ಇದನ್ನೂ ಓದಿ: Viral Video: ಸ್ನಾನದ ವೇಳೆ ಖುಷಿಯಲ್ಲಿ ಪಲ್ಟಿ ಹೊಡೆಯೋ ಆನೆ! ಇದರ ಸರ್ಕಸ್ ನೋಡಿ ನೆಟ್ಟಿಗರು ಫಿದಾ


  ವಿಶ್ವ ಪರಿಸರ ದಿನ 2022 ವಿಶೇಷತೆ


  ಪ್ರಕೃತಿ ಮತ್ತು ಜೀವವನ್ನು ಉಳಿಸುವ ಮೂಲಕ ಶಾಂತಿ, ಸೌಹಾರ್ದತೆ, ಸಮೃದ್ಧಿ ಮತ್ತು ಆರೋಗ್ಯಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ದಿಕ್ಕಿನಲ್ಲಿ ವಿಶ್ವದ ಒಗ್ಗಟ್ಟಿನತ್ತ ಗಮನಹರಿಸುವುದು ‘ ಒಂದೇ ಭೂಮಿ ‘ ಎಂಬ ವಿಷಯದ ಪರಿಕಲ್ಪನೆಯಾಗಿದೆ.


  ಪ್ರತಿವರ್ಷ ವಿಶ್ವ ಪರಿಸರ ದಿನವನ್ನು ವಿವಿಧ ದೇಶಗಳಲ್ಲಿ ಆಯೋಜಿಸಲಾಗುತ್ತದೆ. ಈ ಬಾರಿಯ ವಿಶ್ವ ಪರಿಸರ ದಿನ ಅತಿಥೇಯ ದೇಶವಾದ ಸ್ವೀಡನ್ ನಲ್ಲಿ ಆಚರಿಸಲಾಗುತ್ತಿದೆ. ಜೊತೆಗೆ ಯುಎನ್ ಇಪಿ‌ ಮತ್ತು ಪಾಲುದಾರರ ಬೆಂಬಲದೊಂದಿಗೆ ಈ ವರ್ಷ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಸಭೆಯನ್ನು ಕೂಡ ಆಯೋಜಿಸಲಾಗಿದೆ.


  ಈ ವರ್ಷದ ವಿಶ್ವ ಪರಿಸರ ದಿನದ ಥೀಮ್ ‘ ಒಂದೇ ಭೂಮಿ ‘. ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ಸ್ವೀಡನ್‌ನಲ್ಲಿ ಆಯೋಜಿಸಲಾಗುವುದು. ವಿಶ್ವ ಪರಿಸರ ದಿನವು ಸಾರ್ವಜನಿಕವಾಗಿ ತಲುಪಲು ಜಾಗತಿಕ ವೇದಿಕೆಯಾಗಿ ಬೆಳೆದಿದೆ. ಪ್ರತಿವರ್ಷ 143ಕ್ಕೂ ಹೆಚ್ಚು ದೇಶಗಳು ಈ ದಿನದಲ್ಲಿ ಭಾಗಿಯಾಗುತ್ತವೆ.


  ಪರಿಸರ ದಿನದ ಮುಖ್ಯ ಉದ್ದೇಶಗಳು


  ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸುವುದರಿಂದ ನಮ್ಮ ಪ್ರಕೃತಿಗೆ ಹಲವಾರು ಉಪಯೋಗಗಳು ಇವೆ. ಪರಿಸರಕ್ಕೆ ಸಂಬಂಧಿಸಿದಂತೆ ಜನತೆಯಲ್ಲಿ ಜಾಗೃತಿ ಮೂಡಿಸುವುದು ಹಾಗೆ ಪರಿಸರಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಬಳಿ ಹೇಳಿ ಅದರ ಬಗ್ಗೆ ಜಾಗೃತಿ ಮೂಡಿಸುವುದು ಆಗಿದೆ.


  ಪರಿಸರ ಸ್ನೇಹಿ ಅಭಿವೃದ್ಧಿ ಪಡಿಸಲು ಅಭಿಯಾನ ಆರಂಭಿಸುವುದು. ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವುದು. ಪರಿಸರವನ್ನು ನಾಶ ಮಾಡದಂತ ಜಾಗೃತಿ ಮೂಡಿಸುವುದು. ಪರಿಸರ ಪ್ರತಿಯೊಂದು ಜೀವಿಗೆ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಅರಿವು ಮೂಡಿಸುವುದು ಈ ದಿನದ ಆಚರಣೆಯ ಹಿಂದಿರುವ ಮುಖ್ಯ ಉದ್ದೇಶವಾಗಿದೆ.


  ಇದನ್ನೂ ಓದಿ: Anabas fish: ನೀರಿನಿಂದ ಮೇಲಕ್ಕೆ ಹಾರಿ ಮೀನು ನುಗ್ಗಿದ್ದು ಮೀನುಗಾರನ ಗಂಟಲಿಗೆ! ಆಮೇಲೆ?


  ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು


  ಭೂಮಿಯಲ್ಲಿ ವಾಸಿಸುತ್ತಿರುವ ನಮ್ಮ ಪ್ರತಿಯೊಂದು ಸಂಪನ್ಮೂಲದ ಬಳಕೆಯನ್ನು ನೋಡಿಕೊಳ್ಳುವುದು ಅಗ್ರಗಣ್ಯ ಕರ್ತವ್ಯವಾಗಿದೆ ಇದನ್ನು ಉಳಿಸಿ ಬೆಳೆಸುವುದು ನಮ್ಮ ಮೂಲ ಉದ್ದೇಶವಾಗಿರಬೇಕು.  ಪರಿಸರವು ಅತ್ಯಂತ ಕಲುಷಿತಗೊಂಡಿದೆ ಮತ್ತು ನಮ್ಮ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವ ವಿಷಕಾರಿ ಅಂಶಗಳಿಂದ ತುಂಬಿದೆ. 


  ಮಾನವನು ತನ್ನ ಅನುಕೂಲತೆಗಳಿಗಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಇದರಿಂದಾಗಿ ಮಣ್ಣು, ಗಾಳಿ, ನೀರು ಹೀಗೆ ಸಂಪೂರ್ಣ ಪರಿಸರ ಹಾಳಾಗುತ್ತಿದೆ.  ಜೊತೆಗೆ ಹವಾಮಾನ ವೈಪರಿತ್ಯ ಆರೋಗ್ಯದ ಸಮಸ್ಯೆಗಳು ಸಹ ಗಣನೀಯವಾಗಿ ಹೆಚ್ಚಳವಾಗುತ್ತಿದೆ.


  ಕಳೆದ 2, 3 ವರ್ಷಗಳಿಂದ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ನಂತಹ ಸಾಂಕ್ರಾಮಿಕ ರೋಗಗಳಿಗೆ ನಾವು ಎಡೆ ಮಾಡಿಕೊಟ್ಟಂತಾಗುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು.

  Published by:Swathi Nayak
  First published: