World Elephant Day 2022: ವಿಶ್ವ ಆನೆಗಳ ದಿನ; ಭೂಮಿಯ ಮೇಲಿನ ಅತಿದೊಡ್ಡ ಸಸ್ತನಿ ಬಗ್ಗೆ ನಿಮಗೆಷ್ಟು ಗೊತ್ತು?

ಪರಿಸರ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರವಹಿಸುವ ಗಜರಾಜ (ಆನೆ) ಹೆಚ್ಚಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಂತೆಯೇ ಸಮುದಾಯಕ್ಕೆ ಕೊಡುಗೆ ನೀಡುವುದರಲ್ಲಿ ಮಹತ್ವದ ಪಾತ್ರ ವಹಿಸಿವೆ. ಇಂತಿಪ್ಪ, ಸ್ನೇಹಜೀವಿಗಳಿಗೆ ಆಗಸ್ಟ್ 12 ಅನ್ನು ಆನೆಗಳ ದಿನವಾಗಿ ಅವುಗಳಿಗೆ ಅರ್ಪಣೆಗೊಂಡಿದೆ.

ವಿಶ್ವ ಆನೆಗಳ ದಿನ 2022

ವಿಶ್ವ ಆನೆಗಳ ದಿನ 2022

  • Share this:
ಪರಿಸರ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರವಹಿಸುವ ಆನೆ (Elephant) ಹೆಚ್ಚಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮ (Tourism) ಅಂತೆಯೇ ಸಮುದಾಯಕ್ಕೆ ಕೊಡುಗೆ ನೀಡುವುದರಲ್ಲಿ ಮಹತ್ವದ ಪಾತ್ರ ವಹಿಸಿವೆ. ಇಂತಿಪ್ಪ, ಸ್ನೇಹಜೀವಿಗಳಿಗೆ ಆಗಸ್ಟ್ 12 ಅನ್ನು ಆನೆಗಳ ದಿನವಾಗಿ ಅವುಗಳಿಗೆ ಅರ್ಪಣೆಗೊಂಡಿದೆ. ಮಾನವನ ದುರಾಸೆ ಹಾಗೂ ಸೂಕ್ತನೆಲೆ ಇಲ್ಲದೆಯೇ ಅದೆಷ್ಟೋ ಕಾಡು ಪ್ರಾಣಿಗಳು (Wild Animals) ಅಳಿವಿನಂಚಿನಲ್ಲಿವೆ ಅದರಲ್ಲಿ ಆನೆ ಕೂಡ ಒಂದು. ಅಧ್ಯಯನದ ಪ್ರಕಾರ 40,000-50,000 ಆನೆ ಸಂತತಿಗಳು ಮಾತ್ರವೇ ಉಳಿದಿದ್ದು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಾಲಿನಲ್ಲಿ ಗಜಪಡೆ ಕೂಡ ಸೇರಿಕೊಂಡಿವೆ ಎಂಬುದು ಖೇದಕರ ಸಂಗತಿಯಾಗಿದೆ. ಈ ದಿನದ ಮಹತ್ವವನ್ನು ಅರಿತುಕೊಳ್ಳಲು ಹಾಗೂ ಅತ್ಯದ್ಭುತ ಪ್ರಾಣಿ ಎಂಬ ಬಿರುದಿಗೆ ಭಾಜನವಾಗಿರುವ ಆನೆಯ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರೂ ಅರಿತಿರಲೇಬೇಕು.

ಭೂಮಿಯ ಮೇಲಿನ ಅತಿದೊಡ್ಡ ಸಸ್ತನಿ
ಹೌದು, ಆನೆಗಳು ಭೂಮಿಯ ಮೇಲಿನ ಅತಿದೊಡ್ಡ ಸಸ್ತನಿಗಳೆಂಬ ಬಿರುದನ್ನು ಪಡೆದುಕೊಂಡಿವೆ. ಗಂಡಾನೆಗಳು ಸರಾಸರಿ ಮೂರು ಮೀಟರ್‌ಗಳು (13 ಫೀಟ್) ಎತ್ತರವನ್ನು ಪಡೆದುಕೊಂಡಿದ್ದರೆ ಇವುಗಳ ತೂಕ ಆರು ಟನ್‌ಗಳಷ್ಟಿರುತ್ತದೆ. ಆನೆಗಳು 4-6 ಕೆಜಿಯಷ್ಟು ತೂಕದ ದೊಡ್ಡ ಮೆದುಳುಗಳನ್ನು ಹೊಂದಿರುತ್ತವೆ ಇದು ಭೂಮಿಯ ಮೇಲಿನ ಸಸ್ತನಿಗಳಲ್ಲೇ ಅತ್ಯಂತ ದೊಡ್ಡದಾಗಿದೆ. ಕಾಡಿನಲ್ಲಿ ಆನೆಗಳು 60-70 ವರ್ಷಗಳಷ್ಟು ಕಾಲ ಜೀವಿಸುತ್ತವೆ.

ಆಫ್ರಿಕನ್ ಆನೆಗಳು ಮತ್ತು ಏಷ್ಯನ್ ಆನೆಗಳು ಎರಡು ಮುಖ್ಯ ಜಾತಿಗಳಾಗಿವೆ
ತಮ್ಮ ಭೌಗೋಳಿಕ ಸ್ಥಳಗಳ ಹೊರತಾಗಿ, ಆಫ್ರಿಕನ್ ಆನೆಗಳು ಆಫ್ರಿಕಾ ಖಂಡದ ಆಕಾರದಲ್ಲಿಯೇ ದೊಡ್ಡ ಕಿವಿಗಳೊಂದಿಗೆ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಏಷ್ಯನ್ ಆನೆಗಳು, ಹೆಚ್ಚು ದುಂಡಗಿನ ಕಿವಿಗಳೊಂದಿಗೆ ಚಿಕ್ಕ ಗಾತ್ರವನ್ನು ಹೊಂದಿರುತ್ತವೆ. ಎರಡು ಪ್ರಭೇದಗಳು ವಿಭಿನ್ನವಾದ ಸೊಂಡಿಲುಗಳನ್ನು ಹೊಂದಿದ್ದು ಆಫ್ರಿಕನ್ ಆನೆಗಳು ತಮ್ಮ ಸೊಂಡಿಲುಗಳ ತುದಿಯಲ್ಲಿ ಎರಡು ವಿಭಾಗಗಳನ್ನು ಹೊಂದಿದ್ದು ಏಷ್ಯಾದ ಆನೆಗಳು ಕೇವಲ ಒಂದನ್ನು ಹೊಂದಿರುತ್ತವೆ.

ಏಷ್ಯನ್ ಆನೆಗಳು ಅಳಿವಿನಂಚಿನಲ್ಲಿರುವ ಪ್ರಭೇದಗಳಾಗಿವೆ
ಏಷ್ಯನ್ ಆನೆಯನ್ನು ಪ್ರಸ್ತುತ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (Union for Conservation of Nature (IUCN) ) ರೆಡ್ ಲಿಸ್ಟ್‌ನಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಪಟ್ಟಿಮಾಡಲಾಗಿದೆ ಮತ್ತು ಆನೆಗಳ ಸಂಖ್ಯೆಯು ಪ್ರತಿದಿನ ಕುಸಿಯುತ್ತಲೇ ಇದೆ. ಕೆಲವೊಂದು ಅಂದಾಜುಗಳು ಪ್ರಕಾರ, ಕಳೆದ 75 ವರ್ಷಗಳಲ್ಲಿ ಆನೆಗಳ ಸಂಖ್ಯೆಯಲ್ಲಿ 50% ನಷ್ಟು ಕುಸಿತ ಕಂಡುಬಂದಿದೆ ಮತ್ತು ಪ್ರಾಯಶಃ 20,000 ದಷ್ಟು ಏಷ್ಯನ್ ಆನೆಗಳು ಕಾಡಿನಲ್ಲಿ ಉಳಿದಿವೆ.

ಇದನ್ನೂ ಓದಿ: Animal World: ಪ್ರಾಣಿ ಪ್ರಪಂಚದ ಆಸಕ್ತಿಕರ ಸಂಗತಿಗಳು, ಇವುಗಳ ಬಗ್ಗೆ ತಿಳಿದುಕೊಳ್ಳಿ

ಆನೆಗಳು ತಮ್ಮ ಪಾದಗಳ ಮೂಲಕ ಕಂಪನಗಳೊಂದಿಗೆ ಸಂವಹನ ನಡೆಸುತ್ತವೆ
ಆನೆಗಳ ಬಗ್ಗೆ ಹೆಚ್ಚು ಆಸಕ್ತಿದಾಯಕ ಸಂಗತಿಗಳಲ್ಲಿ ಇದೂ ಒಂದಾಗಿದ್ದು ಅವುಗಳು ತಮ್ಮ ಪಾದಗಳ ಮೂಲಕ ಕೂಡ ಸಂವಹನ ನಡೆಸಬಹುದಾಗಿದೆ. ಆನೆಗಳು ಸಂವಹನ ನಡೆಸಲು ಹಲವಾರು ವಿಧಾನಗಳಿವೆ. ಸಾಮಾನ್ಯವಾಗಿ ಕುಟುಂಬ ಸದಸ್ಯರನ್ನು ಸ್ವಾಗತಿಸುವಾಗ, ಆಂಗಿಕ ಭಾಷೆ ಮತ್ತು ಸ್ಪರ್ಶ ಮತ್ತು ಪರಿಮಳದಂತಹ ವಿಶಿಷ್ಟ ಇಂದ್ರಿಯಗಳನ್ನು ಬಳಸಿ ಪರಸ್ಪರರನ್ನು ಕೂಗಲು ಘೀಳಿಡುತ್ತವೆ. ಆದಾಗ್ಯೂ, ಆನೆಗಳು ಬಳಸುವ ಅತ್ಯಂತ ವಿಶಿಷ್ಟವಾದ ಸಂವಹನ ವಿಧಾನವೆಂದರೆ ಭೂಕಂಪನ ಸಂಕೇತಗಳ ಮೂಲಕವಾಗಿದ್ದು ಅವು ನೆಲದಲ್ಲಿ ಕಂಪನಗಳನ್ನು ಸೃಷ್ಟಿಸುತ್ತವೆ, ಇತರ ಆನೆಗಳು ಈ ಕಂಪನಗಳನ್ನು ತಮ್ಮ ಪಾದಗಳು ಮತ್ತು ಮೂಳೆಗಳ ಮೂಲಕ ಅವುಗಳನ್ನು ಪತ್ತೆಹಚ್ಚುತ್ತವೆ ಸಂವಹನ ಚಾನೆಲ್ ನಂಬಲಾಗದಷ್ಟು ದೂರದಲ್ಲಿ ಮತ್ತು ದಿಗಿಲೆಬ್ಬಿಸುವ ವೇಗದಲ್ಲಿ ಕೆಲಸ ಮಾಡಬಹುದು.

ಆನೆ ಕುಟುಂಬದ ಘಟಕಗಳು ಮಾತೃಪ್ರಧಾನವಾಗಿವೆ
ಆನೆ ಕುಟುಂಬವು ಮಾತೃ ಪ್ರಧಾನ ವ್ಯವಸ್ಥೆಯನ್ನು ಆಧರಿಸಿವೆ. ಅಮ್ಮನಿಗೆ ಎಲ್ಲವೂ ತಿಳಿದಿರುತ್ತದೆ ಎಂಬ ಮಾತಿನಂತೆ ಆನೆ ಘಟಕದ ಮಾತೃಪಕ್ಷವು ಸಾಮಾನ್ಯವಾಗಿ ಕುಟುಂಬದ ಅತ್ಯಂತ ಪುರಾತನ ಮತ್ತು ವಯಸ್ಕ ಮಹಿಳಾ ಸದಸ್ಯೆಯೇ ಆಗಿರುತ್ತದೆ, ಅಂತೆಯೇ ಆಹಾರ ಮತ್ತು ನೀರಿಗಾಗಿ ದೂರದ ಪ್ರಯಾಣದಲ್ಲಿ ಹಿಂಡನ್ನು ಮುನ್ನಡೆಸುತ್ತದೆ. ಹಿಂಡಿನ ರಕ್ಷಣೆ, ಆಹಾರವನ್ನು ಹುಡುಕುವುದು, ಅಂತೆಯೇ ಎಳೆಯ ಕಂದಮ್ಮನ ಜವಬ್ದಾರಿಯನ್ನು ನಿರ್ವಹಿಸಲು ಕುಟುಂಬ ಘಟಕದ ಸದಸ್ಯರು ಸಾಮಾನ್ಯವಾಗಿ ಅಸಾಧಾರಣ ಟೀಮ್‌ವರ್ಕ್ ಅನ್ನು ಪ್ರದರ್ಶಿಸುತ್ತವೆ.

ಆನೆಯ ಸೊಂಡಿಲು ಕೈಗಳಂತೆ ಕೂಡ ಕೆಲಸ ಮಾಡುತ್ತವೆ
ಆನೆಯ ಸೊಂಡಿಲು ಮೂಗಿಗಿಂತಲೂ ಹೆಚ್ಚಿನ ಕೆಲಸ ಮಾಡುತ್ತದೆ. ವಾಸನೆ ಮತ್ತು ಉಸಿರಾಡುವುದಕ್ಕಿಂತಲೂ ಆನೆಗಳಿಗೆ ಹೆಚ್ಚುವರಿಯಾಗಿ ಸಹಕಾರಿಯಾಗಿದೆ. ಆಹಾರ ಮತ್ತು ವಸ್ತುಗಳನ್ನು ಹಿಡಿದುಕೊಳ್ಳಲು, ಮರದ ಕಾಂಡಗಳನ್ನು ಅಗೆಯಲು, ಆಟವಾಡಲು ಹಾಗೂ ಉದ್ದತೋಳಿನಂತೆ ಕೆಲಸ ಮಾಡುತ್ತದೆ. ಇನ್ನು ನೀರು ಸೇವಿಸಲು ಆನೆಗಳಿಗೆ ಸೊಂಡಿಲೇ ಸಹಕಾರಿ. ಸೊಂಡಿಲಿನಲ್ಲಿಯೇ 100,000 ವಿಭಿನ್ನ ಸ್ನಾಯುಗಳಿವೆ.

ಆನೆಗಳ ದಂತಗಳು ವಾಸ್ತವಿಕವಾಗಿ ಅವುಗಳ ಹಲ್ಲುಗಳಾಗಿವೆ
ಆನೆಯ ದಂತಗಳು ವಾಸ್ತವವಾಗಿ ವಿಸ್ತಾರವಾದ ಬಾಚಿಹಲ್ಲುಗಳಾಗಿದ್ದು, ಆನೆಗಳಿಗೆ ಸುಮಾರು 2 ವರ್ಷ ವಯಸ್ಸಿನಲ್ಲೇ ಮೊದಲು ಕಾಣಿಸಿಕೊಳ್ಳುತ್ತವೆ. ಆನೆಗಳು ದಂತವನ್ನು ಆಹಾರ ಮತ್ತು ನೀರು ಅಗೆಯಲು ಬಳಸುತ್ತವೆ ಅಂತೆಯೇ ಮರಗಳ ತೊಗಟೆಯನ್ನು ತೆಗೆದುಹಾಕಲು ಬಳಸುತ್ತವೆ.

ಇದನ್ನೂ ಓದಿ:  Egg: ಈ ಕೋಳಿ ಮೊಟ್ಟೆಯೊಂದರ ಬೆಲೆ 50 ಸಾವಿರ ರೂಪಾಯಿ! ಇದರಲ್ಲಿ ಅಂಥದ್ದೇನಿದೆ ವಿಶೇಷ?

ಆನೆಗಳು ಸಸ್ಯಾಹಾರಿಗಳಾಗಿವೆ
ಭೂಮಿಯ ಅತಿದೊಡ್ಡ ಭೂ ಸಸ್ತನಿಯಾಗಿದ್ದರೂ, ಆನೆಗಳ ಸಂಪೂರ್ಣ ಆಹಾರವು ಬೇರುಗಳು, ಹುಲ್ಲುಗಳು, ಹಣ್ಣುಗಳು ಮತ್ತು ತೊಗಟೆಯನ್ನು ಆಧರಿಸಿಕೊಂಡಿವೆ. ವಯಸ್ಕ ಆನೆಯು 300 ಪೌಂಡ್‌ಗಳಷ್ಟು ಆಹಾರವನ್ನು ಸೇವಿಸುತ್ತದೆ.

ಆನೆಗಳು ಚರ್ಮ ಹೆಚ್ಚು ದಪ್ಪವಾಗಿವೆ
ಆನೆಗಳು ಹೆಚ್ಚು ದಪ್ಪನೆಯ ಚರ್ಮವನ್ನು ಹೊಂದಿದ್ದು ವಿಪರೀತ ಶಾಖ ಮತ್ತು ಸೂರ್ಯನ ಪ್ರಜ್ವಲ ಕಿರಣದಿಂದ ಅವುಗಳನ್ನು ಸಂರಕ್ಷಿಸುತ್ತವೆ. ಆನೆಗಳು ನೀರು ಮತ್ತು ಮಣ್ಣಿನಲ್ಲಿ ಸ್ನಾನ ಮಾಡುವುದರಿಂದ ಹೆಚ್ಚಿನ ಮಡಿಕೆಗಳು ಮತ್ತು ಸುಕ್ಕುಗಳು ತೇವಾಂಶವನ್ನು ಸಂಗ್ರಹಿಸಬಹುದು ಮತ್ತು ಅಲ್ಲಿ ಚರ್ಮವು ತುಂಬಾ ಶುಷ್ಕವಾಗಿರುತ್ತದೆ.

ಆನೆಗಳು ಹೆಚ್ಚು ಬುದ್ಧಿವಂತ ಪ್ರಾಣಿಗಳು
ದೊಡ್ಡ ಕೋತಿಗಳು ಹಾಗೂ ಡಾಲ್ಫಿನ್‌ಗಳಂತೆ ಆನೆಯು ವಿಶ್ವದ ಅತ್ಯಂತ ಬುದ್ಧಿವಂತ ಪ್ರಾಣಿ ಎಂದೆನಿಸಿದೆ. ತಮ್ಮ ಸೊಂಡಿಲುಗಳನ್ನು ಬಳಸಿಕೊಂಡು ಹಲವಾರು ಕಾರ್ಯಗಳನ್ನು ಮಾಡುತ್ತವೆ. ಅದೇ ರೀತಿ ಸಹಾನುಭೂತಿ ಮತ್ತು ದುಃಖದಂತಹ ಸಂಕೀರ್ಣ ಭಾವನೆಗಳನ್ನು ಅನುಭವಿಸಲು ಸೊಂಡಿಲುಗಳನ್ನು ಬಳಸುತ್ತವೆ.

ದಂತಕ್ಕಾಗಿ ಆನೆ ಬೇಟೆ ಕಳೆದ ಶತಮಾನದಲ್ಲಿ 90% ರಷ್ಟು ಆನೆಗಳ ಸಂತತಿಯನ್ನು ನಾಶಪಡಿಸಿವೆ
ಆನೆಗಳ ಬಗ್ಗೆ ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ ದಂತ ವ್ಯಾಪಾರಕ್ಕಾಗಿ ಅವುಗಳನ್ನು ನಾಶಮಾಡುವುದಾಗಿದೆ. ಆನೆಯ ದಂತವು ನಂಬಲಾಗದಷ್ಟು ಲಾಭದಾಯಕ ಉದ್ಯಮವಾಗಿ ಮಾರ್ಪಟ್ಟಿದೆ. ನೂರಾರು ವರ್ಷಗಳ ಹಿಂದೆ, ದಂತವನ್ನು ಸಾಮಾನ್ಯವಾಗಿ ಘನತೆಯ ಸಂಕೇತವಾಗಿ ನೋಡಲಾಗುತ್ತಿತ್ತು. ದಂತಕ್ಕಾಗಿ 1970 ಮತ್ತು 1980 ರ ದಶಕದಲ್ಲಿ ನಡೆದ ಬೃಹತ್ ಅಕ್ರಮ ಆನೆ ಬೇಟೆಯಿಂದಾಗಿ, ಕಳೆದ ಶತಮಾನದಲ್ಲಿ ಸುಮಾರು 90% ರಷ್ಟು ಆಫ್ರಿಕನ್ ಆನೆಗಳು ನಾಶವಾಗಿವೆ.

ಇದನ್ನೂ ಓದಿ: Viral Video: ತನ್ನ ಕೈಯಿಂದಲೇ ಹುಲಿಗೆ ಆಹಾರ ನೀಡ್ತಿದ್ದಾನೆ ಈ ವ್ಯಕ್ತಿ! ಏನ್ ಧೈರ್ಯ ಗುರು

ಮಾನವ ಮತ್ತು ಆನೆಯ ನಡುವಿನ ಸಂಘರ್ಷಗಳು ಹೆಚ್ಚುತ್ತಿವೆ
ಹೆಚ್ಚುತ್ತಿರುವ ಮಾನವ ಜನಸಂಖ್ಯೆಯ ಸಾಂದ್ರತೆ ಮತ್ತು ಕೃಷಿಯ ವಿಸ್ತರಣೆಯಿಂದಾಗಿ, ವಿಶೇಷವಾಗಿ ಆಫ್ರಿಕಾದ ದೇಶಗಳಲ್ಲಿ, ಮಾನವರು ಮತ್ತು ವನ್ಯಜೀವಿಗಳ ನಡುವೆ ಉಲ್ಬಣಗೊಳ್ಳುತ್ತಿರುವ ಹಂಚಿಕೆಯ ಭೂಮಿ ಸಂಘರ್ಷಗಳಿಗೆ ಉತ್ತೇಜನ ನೀಡಿದೆ. ಅನೇಕರಿಗೆ ಆದಾಯದ ಏಕೈಕ ಮೂಲವಾಗಿರುವ ಬೆಳೆ-ದಾಳಿಯಿಂದ ಹಿಡಿದು, ಭೂ ಅಭಿವೃದ್ಧಿ, ಆನೆ ಜಾತಿಗಳ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥೆಯಿಂದಾಗಿ ಅವುಗಳ ನೈಸರ್ಗಿಕ ಆವಾಸಸ್ಥಾನಗಳ ಅವನತಿಯನ್ನು ತಡೆಗಟ್ಟಬೇಕಾಗಿದೆ.
Published by:Ashwini Prabhu
First published: