ವಿಶ್ವಕಪ್ ಪಂದ್ಯದ ವೇಳೆ ಮೈದಾನದಲ್ಲಿ ನಗ್ನ ನರ್ತನ..! ವಿಡಿಯೋ ವೈರಲ್

World Cup 2019 : ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್​ ನಡುವಿನ ಪಂದ್ಯದ ವೇಳೆ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದಾರೆ. ಅದು ಕೂಡ ಬೆತ್ತಲೆಯಾಗಿ..!

zahir | news18
Updated:December 24, 2019, 4:54 PM IST
ವಿಶ್ವಕಪ್ ಪಂದ್ಯದ ವೇಳೆ ಮೈದಾನದಲ್ಲಿ ನಗ್ನ ನರ್ತನ..! ವಿಡಿಯೋ ವೈರಲ್
.
  • News18
  • Last Updated: December 24, 2019, 4:54 PM IST
  • Share this:
ಅಭಿಮಾನಿಗಳು ಮೈದಾನಕ್ಕೆ ನುಗ್ಗುವುದು ಸಾಮಾನ್ಯ. ಈ ಹಿಂದೆ ಐಪಿಎಲ್​​ನಲ್ಲಿ ಧೋನಿ ಅಭಿಮಾನಿಗಳು ಸೆಕ್ಯುರಿಟಿ ಗಾರ್ಡ್​ಗಳ ಕಣ್ತಪ್ಪಿಸಿ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿ ರುವುದು ನಿಮಗೆ ಗೊತ್ತಿರಬಹುದು. ಹಾಗೆಯೇ ಸಿಸಿಎಲ್ ಪಂದ್ಯದ ವೇಳೆ ಕಿಚ್ಚ ಸುದೀಪ್​ರನ್ನು ನೋಡಲು ಅಭಿಮಾನಿಯೊಬ್ಬ ಗ್ಯಾಲೆರಿಯಿಂದ ಗ್ರೌಂಡ್​ಗೆ ಹಾರಿದ್ದರು. ಆದರೆ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್​ ನಡುವಿನ ಪಂದ್ಯದ ವೇಳೆ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದಾರೆ. ಅದು ಕೂಡ ಬೆತ್ತಲೆಯಾಗಿ..!

ಇಂಗ್ಲೆಂಡ್​ನ ರಿವರ್​ಸೈಡ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ನ 41ನೇ ಪಂದ್ಯದ ವೇಳೆ ಇಂತಹದೊಂದು ಅಚಾತುರ್ಹ ನಡೆದಿದೆ. ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿಯಯ ಕಣ್ತಪ್ಪಿಸಿ ವ್ಯಕ್ತಿಯೊಬ್ಬರು ನಗ್ನಾವಸ್ಥೆಯಲ್ಲಿ ಮೈದಾನಕ್ಕೆ ಓಡಿ ಬಂದಿದ್ದರು.

ಬ್ಯಾಟ್​ ಮಾಡುತ್ತಿದ್ದ ಟಾಮ್ ಲಾಥಮ್ ಬಳಿ ಧಾವಿಸಿದ ವ್ಯಕ್ತಿಯು ಭರ್ಜರಿಯಾಗಿ ನರ್ತಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುವ ಕೆಲಸಕ್ಕೆ ಮುಂದಾದರು. ಈ ಹುಚ್ಚುತನದಿಂದಾಗಿ ಕೆಲ ಹೊತ್ತು ಪಂದ್ಯ ಕೂಡ ಸ್ಥಗಿತವಾಯಿತು. ಅಷ್ಟರಲ್ಲೇ ಧಾವಿಸಿದ ಭದ್ರತಾ ಸಿಬ್ಬಂದಿಯು ​ ವಿವಸ್ತ್ರವಾಗಿದ್ದ ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು.


ಈ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋನ ಬಿಟ್ಟಿ ಮನರಂಜನೆ ಬಗ್ಗೆ ಕೆಲವರು ಕಮೆಂಟಿಸಿದರೆ, ಮತ್ತೆ ಕೆಲವರು ಅಂತರಾಷ್ಟ್ರೀಯ ಮಟ್ಟದ ಪಂದ್ಯದ ವೇಳೆ ಇದೆಂಥಾ ಭದ್ರತೆ ಎಂದು ಐಸಿಸಿಯನ್ನು ಪ್ರಶ್ನಿಸಿದೆ.

ಇದನ್ನೂ ಓದಿ: ಕುರುಕ್ಷೇತ್ರದ ದುರ್ಯೋಧನನ ವಿರುದ್ಧ ಪೈಲ್ವಾನ್ ತೊಡೆ ತಟ್ಟುವುದು ಡೌಟು..!
First published:July 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ