(VIDEO): ಫಿಫಾ ವಿಶ್ವಕಪ್ 2018: ಪಂದ್ಯ ಮುಗಿದ ಬಳಿಕ ಸ್ಟೇಡಿಯಂ ಶುಚಿಗೊಳಿಸಿದ ಜಪಾನ್, ಸೆನೆಗಲ್ ಅಭಿಮಾನಿಗಳು

news18
Updated:June 21, 2018, 9:27 PM IST
(VIDEO): ಫಿಫಾ ವಿಶ್ವಕಪ್ 2018: ಪಂದ್ಯ ಮುಗಿದ ಬಳಿಕ ಸ್ಟೇಡಿಯಂ ಶುಚಿಗೊಳಿಸಿದ ಜಪಾನ್, ಸೆನೆಗಲ್ ಅಭಿಮಾನಿಗಳು
news18
Updated: June 21, 2018, 9:27 PM IST
ನ್ಯೂಸ್ 18 ಕನ್ನಡ

ಮಾಸ್ಕೋ (ಜೂ. 21): ಫಿಫಾ ವಿಶ್ವಕಪ್​ನಲ್ಲಿ ಮೊನ್ನೆಯಷ್ಟೇ ನಡೆದ ಜಪಾನ್ ಹಾಗೂ ಕೊಲಂಬಿಯಾ ನಡುವಣ ಪಂದ್ಯದಲ್ಲಿ ಜಪಾನ್ ತಂಡ 2-1 ಅಂತರದಿಂದ ರೋಚಕ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ದಕ್ಷಿಣ ಅಮೆರಿಕಾ ತಂಡವೊಂದರ ವಿರುದ್ಧ ವಿಶ್ವಕಪ್​ನಲ್ಲಿ ಗೆದ್ದ ಏಷ್ಯಾದ ಮೊದಲ ತಂಡ ಜಪಾನ್ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು. ಆದರೆ ಪಂದ್ಯ ಮುಗಿದ ಬಳಿಕ ಜಪಾನ್ ಮತ್ತು ಸೆನೆಗಲ್ ಅಭಿಮಾನಿಗಳು ಮಾಡಿದ ಕೆಲಸ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮೊರ್ದೊವಿಯಾ ಅರೆನಾನದಲ್ಲಿ ನಡೆದ ಪಂದ್ಯದಲ್ಲಿ, ಆಟ ಮುಗಿದ ಬಳಿಕ ಜಪಾನ್ ಹಾಗೂ ಸೆನೆಗಲ್ ತಂಡದ ಅಭಿಮಾನಿಗಳು ಇಡೀ ಕ್ರೀಡಾಂಗಣವನ್ನು ಸ್ವಚ್ಚಗೊಳಿಸಿದ್ದಾರೆ. ಜನರು ಕ್ರೀಡಾಂಗಣವನ್ನು ತೊರೆಯುತ್ತಿದ್ದಂತೆ ನೀಲಿ ಬಣ್ಣದ ಕಸದ ಚೀಲವನ್ನು ಹಿಡಿದು ಮೂಲೆ ಮೂಲೆಯಿಂದ ಕಸ ಸಂಗ್ರಹಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲಡೆ ಹರಿದಾಡುತ್ತಿದ್ದು, ಜಪಾನ್ ಹಾಗೂ ಸೆನೆಗಲ್ ಅಭಿಮಾನಿಗಳ ಕೆಲಸಕ್ಕೆ ಪ್ರಶಂಸೆ ಕೇಳಿಬರುತ್ತಿದೆ.

 




 

First published:June 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ