World Book and Copyright Day 2022: ಇಂದು ವಿಶ್ವ ಪುಸ್ತಕ ದಿನ, ಈ ದಿನದ ಇತಿಹಾಸ, ಮಹತ್ವ, ಥೀಮ್; ಇಲ್ಲಿದೆ ಮಾಹಿತಿ

ಇ - ಬುಕ್ಸ್, ಕಿಂಡಲ್‌, ಹೀಗೆ ನಾನಾ ರೀತಿಯಲ್ಲಿ ಪುಸ್ತಕಗಳನ್ನು ಓದಬಹುದು. ಆದರೂ, ಪುಸ್ತಕಗಳನ್ನು ಹಿಡಿದುಕೊಂಡು ಪುಟವನ್ನು ತಿರುಗಿಸುತ್ತಾ ಓದುವುದೇ ಎಷ್ಟು ಚೆಂದ ಅಲ್ವಾ..? ಅಂದ ಹಾಗೆ, ಇಂದು ವಿಶ್ವ ಪುಸ್ತಕ ದಿನ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಮೊದಲೆಲ್ಲ ಜನರ ಟೈಮ್‌ಪಾಸ್ (Timepass)‌ ಅಂದರೆ ಆಟ ಆಡುವುದನ್ನು ಹೊರತುಪಡಿಸಿದರೆ ಪುಸ್ತಕಗಳನ್ನು ಓದುವುದು. ಈಗಲೂ ಸಹ ಪುಸ್ತಕಗಳನ್ನು ಓದುವುದು ಹಲವರ ಅಭ್ಯಾಸ. ಆದರೂ, ಮೊಬೈಲ್‌, ಲ್ಯಾಪ್‌ಟಾಪ್‌, ಐಪ್ಯಾಡ್‌ನಂತಹ ಸಾಧನಗಳು ಬಂದ ಮೇಲೆ ಭೌತಿಕವಾಗಿ ಪುಸ್ತಕಗಳನ್ನು ಓದುವವರ ಸಂಕ್ಯೆ ಕಡಿಮೆಯಾಗಿದೆ ಎನ್ನಬಹುದು. ಈಗಿನ ಕಾಲದ ಮಕ್ಕಳು ಪುಸ್ತಕವನ್ನೇ ಓದುವುದಿಲ್ಲ ಎಂಬ ದೂರುಗಳು ಹಿರಿಯರಿಂದ ಆಗಾಗ ಕೇಳಿಬರುತ್ತದೆ. ಇನ್ನು, ಹಲವರು ಮೊಬೈಲ್‌ ಅಥವಾ ಇತರ ಸಾಧನಗಳಲ್ಲೇ ಪುಸ್ತಕಗಳನ್ನು ಓದುತ್ತಾರೆ. ಇ - ಬುಕ್ಸ್, ಕಿಂಡಲ್‌, ಹೀಗೆ ನಾನಾ ರೀತಿಯಲ್ಲಿ ಪುಸ್ತಕಗಳನ್ನು (Books) ಓದಬಹುದು. ಆದರೂ, ಪುಸ್ತಕಗಳನ್ನು ಹಿಡಿದುಕೊಂಡು ಪುಟವನ್ನು ತಿರುಗಿಸುತ್ತಾ ಓದುವುದೇ ಎಷ್ಟು ಚೆಂದ ಅಲ್ವಾ..? ಅಂದ ಹಾಗೆ, ಇಂದು ವಿಶ್ವ ಪುಸ್ತಕ ದಿನ (World Book and Copyright Day).


ಹೌದು, ವಿಶ್ವ ಪುಸ್ತಕ ದಿನವನ್ನು ಪ್ರತಿ ವರ್ಷ ಏಪ್ರಿಲ್ 23 ರಂದು ಆಚರಿಸಲಾಗುತ್ತದೆ. ಈ ದಿನವು ಪ್ರಸಿದ್ಧ ಇಂಗ್ಲಿಷ್ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್ (William Shakespeare) ಅವರ ಮರಣದ ವಾರ್ಷಿಕೋತ್ಸವೂ ಇವತ್ತೇ. ಓದುವಿಕೆ ಮತ್ತು ಪುಸ್ತಕಗಳ ಪ್ರೀತಿ, ಪ್ರಕಾಶನ ಹಾಗೂ ಹಕ್ಕುಸ್ವಾಮ್ಯ ಜಾಗೃತಿಯನ್ನು ಉತ್ತೇಜಿಸಲು ಯುನೆಸ್ಕೋ ಈ ದಿನವನ್ನು ಹೆಮ್ಮೆಯಿಂದ ಆಚರಿಸುತ್ತದೆ.


ವಿಶ್ವ ಪುಸ್ತಕ ದಿನ 2022: ಇತಿಹಾಸ


ಪುಸ್ತಕದ ದಿನವನ್ನು ಆಚರಿಸುವ ಕಲ್ಪನೆಯನ್ನು ಮೊದಲು ವೆಲೆನ್ಸಿಯನ್ ಬರಹಗಾರ ವಿಸೆಂಟೆ ಕ್ಲಾವೆಲ್ ಆ್ಯಂಡ್ರೆಸ್ ಅವರದ್ದು. ಲೇಖಕ ಮಿಗುಯೆಲ್ ಡಿ ಸೆರ್ವಾಂಟೆಸ್ (ಡಾನ್ ಕ್ವಿಕ್ಸೋಟ್ ಲೇಖಕ) ಅವರಿಗೆ ಗೌರವ ಸಲ್ಲಿಸಲು ಈ ದಿನವನ್ನು ಆಚರಣೆಗೆ ತಂದರು. ಅಂದ ಹಾಗೆ, ಮೊದಲು ಆ್ಯಂಡ್ರೆಸ್, ಸೆರ್ವಾಂಟೆಸ್ ಅವರ ಜನ್ಮದಿನವನ್ನು ಗುರುತಿಸಲು ಅಕ್ಟೋಬರ್ 7 ರಂದು ಮತ್ತು ನಂತರ ಅವರ ಮರಣ ವಾರ್ಷಿಕೋತ್ಸವವನ್ನು ಗುರುತಿಸಲು ಏಪ್ರಿಲ್ 23 ರಂದು ದಿನವನ್ನು ಆಚರಿಸಲಾಯಿತು.


1995 ರಲ್ಲಿ, UNESCO ನಿರ್ಧಾರ

ಬಳಿಕ, ಹಲವಾರು ಪ್ರಸಿದ್ಧ ಲೇಖಕರ ಜನ್ಮ ಮತ್ತು ಮರಣ ವಾರ್ಷಿಕೋತ್ಸವಗಳನ್ನು ಗುರುತಿಸಲು ಅಂತಿಮವಾಗಿ, ಏಪ್ರಿಲ್ 23 ರಂದು ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನವನ್ನು ಆಚರಿಸಲು 1995 ರಲ್ಲಿ, UNESCO ನಿರ್ಧರಿಸಿತು.


ಪ್ರಸಿದ್ಧ ಸಾಹಿತಿಗಳಿಗೆ ಗೌರವ

UNESCO ಆಯ್ಕೆ ಮಾಡಿದ ಈ ದಿನಾಂಕವು ವಿಶ್ವ ಸಾಹಿತ್ಯದಲ್ಲಿ ಸಾಂಕೇತಿಕವಾಗಿದೆ. ಏಕೆಂದರೆ, ಈ ದಿನಾಂಕದಂದು ಪ್ರಸಿದ್ಧ ಸಾಹಿತ್ಯ ವ್ಯಕ್ತಿಗಳಾದ ಸರ್ವಾಂಟೆಸ್, ಷೇಕ್ಸ್‌ಪಿಯರ್‌ ಮತ್ತು ಇಂಕಾ ಗಾರ್ಸಿಲಾಸೊ ಡೆ ಲಾ ವೆಗಾ ನಿಧನರಾದರು. ಹಾಗಾಗಿ ಈ ದಿನದಂದು ಅವರೆಲ್ಲರಿಗೂ ಗೌರವ ಸಲ್ಲಿಸುವ ಉದ್ದೇಶವೂ ಇದೆ.


ಇದರ ಜತೆಗೆ, ಈ ದಿನವು ಮಾರಿಸ್ ಡ್ರೂನ್, ಹಾಲ್ಡೋರ್ ಕೆ.ಲ್ಯಾಕ್ಸ್‌ನೆಸ್, ವ್ಲಾಡಿಮಿರ್ ನಬೊಕೋವ್, ಜೋಸೆಪ್‌ ಪ್ಲಾ ಮತ್ತು ಮ್ಯಾನುಯೆಲ್ ಮೆಜಿಯಾ ವ್ಯಾಲೆಜೊ ಸೇರಿದಂತೆ ಅನೇಕ ಇತರ ಪ್ರಮುಖ ವ್ಯಕ್ತಿಗಳ ಮರಣ ಮತ್ತು ಜನ್ಮ ವಾರ್ಷಿಕೋತ್ಸವವನ್ನು ಸಹ ಗುರುತಿಸುತ್ತದೆ.


ವಿಶ್ವ ಪುಸ್ತಕ ದಿನ 2022: ಥೀಮ್


ವಿಶ್ವ ಪುಸ್ತಕ ದಿನದ ಹಿಂದಿನ ಮುಖ್ಯ ಉದ್ದೇಶವೆಂದರೆ ಓದುವ ಸಂತೋಷ ಮತ್ತು ಆನಂದವನ್ನು ಹರಡುವುದು. ಇನ್ನು, ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನದ 2022 ರ ಥೀಮ್ ‘’ನೀವು ಎಂದಿಗೂ ಒಂಟಿತನವನ್ನು ಅನುಭವಿಸುವುದಿಲ್ಲದಿರಲು.. ಓದಿ..!


ಅಂದ ಹಾಗೆ, 2021ರ ಥೀಮ್‌ ಏನಾಗಿತ್ತು ಗೊತ್ತಾ..?


"ಓದಿ, ಆದ್ದರಿಂದ ನೀವು ಎಂದಿಗೂ ತೀವ್ರ ಬೇಸರ ಅನುಭವಿಸುವುದಿಲ್ಲ". ಇದರೊಂದಿಗೆ, ಓದುವ ವಲಯವನ್ನು ವಿಸ್ತರಿಸುವ ಮತ್ತು ಪುಸ್ತಕಗಳ ವ್ಯಾಪ್ತಿಯನ್ನು ಗುರುತಿಸುವುದು ಈ ದಿನದ ಪ್ಲ್ಯಾನ್‌.


UNESCO ಪ್ರಕಾರ, ಜಾರ್ಜಿಯಾದ ಟಿಬಿಲಿಸಿ ನಗರವನ್ನು 2021 ರ ವಿಶ್ವ ಪುಸ್ತಕ ರಾಜಧಾನಿಯಾಗಿ ಆಯ್ಕೆ ಮಾಡಲಾಗಿತ್ತು.


ಪ್ರತಿ ವರ್ಷ, UNESCO ಮತ್ತು ಪುಸ್ತಕ ಉದ್ಯಮದ ಮೂರು ಪ್ರಮುಖ ಕ್ಷೇತ್ರಗಳನ್ನು ಪ್ರತಿನಿಧಿಸುವ ಇತರ ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳೆಂದರೆ ಪ್ರಕಾಶಕರು, ಪುಸ್ತಕ ಮಾರಾಟಗಾರರು ಮತ್ತು ಗ್ರಂಥಾಲಯಗಳು. ಈ ಸಂಸ್ಥೆಗಳೆಲ್ಲ ಸೇರಿಕೊಂಡು ಒಂದು ವರ್ಷದ ಅವಧಿಗೆ ವಿಶ್ವ ಪುಸ್ತಕ ರಾಜಧಾನಿಯನ್ನು ಆಯ್ಕೆ ಮಾಡುತ್ತವೆ.


ಶೇಷ ದಿನವನ್ನು ಆಚರಿಸಲು ಬುಕ್‌ಫೇಸ್ ಸವಾಲು

ಕಳೆದ ವರ್ಷ, ಯುನೆಸ್ಕೋ ಈ ವಿಶೇಷ ದಿನವನ್ನು ಆಚರಿಸಲು ಬುಕ್‌ಫೇಸ್ ಸವಾಲನ್ನು ರಚಿಸಿತ್ತು. ಸಂಸ್ಥೆಯು ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, “ಪುಸ್ತಕಗಳ ಮುಖಪುಟಗಳು ನಂಬಲಾಗದಷ್ಟು ಮುಖ್ಯವಾಗಿವೆ ಮತ್ತು ನಮ್ಮ ಖರೀದಿ ನಿರ್ಧಾರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಮುಖಪುಟಗಳ ಬಗ್ಗೆ ನಾವೆಲ್ಲರೂ ತುಂಬಾ ಜಡ್ಜ್‌ಮೆಂಟಲ್‌ ಆಗುತ್ತೇವೆ. ಸಾಂಕ್ರಾಮಿಕ ರೋಗವು ನಮಗೆಲ್ಲರಿಗೂ ಪುಸ್ತಕಗಳ ಪ್ರಾಮುಖ್ಯತೆಯನ್ನು ನೆನಪಿಸಿದೆ ಮತ್ತು ಆರಾಮ ಹಾಗೂ ಪಲಾಯನವಾದಕ್ಕಾಗಿ ಓದುವುದು, ಕಳೆದ ವರ್ಷ ನಮಗೆಲ್ಲರಿಗೂ ಇದು ಅಗತ್ಯವಾಗಿತ್ತು.


ಇದನ್ನೂ ಓದಿ: Viral News: ಈ ಗ್ರಾಮದಲ್ಲಿ ಇಂದಿಗೂ ನಡೆಯುತ್ತೆ ಸ್ವಯಂವರ: ತಮ್ಮ ಸಂಗಾತಿಯನ್ನ ಯುವತಿಯರೇ ಆಯ್ಕೆ ಮಾಡಿಕೊಳ್ತಾರೆ

ಅಂತಹ ಸಂದರ್ಭಗಳಲ್ಲಿ, ನಾವು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು, ಶಿಕ್ಷಕರು, ಓದುಗರನ್ನು ಈ ಸವಾಲಿನಲ್ಲಿ ಭಾಗವಹಿಸಲು ಆಹ್ವಾನಿಸುತ್ತೇವೆ. ಇದರ ಜತೆಗೆ, ಪುಸ್ತಕೋದ್ಯಮ ಮತ್ತು ಗ್ರಂಥಾಲಯ ಸೇವೆಗಳು ಈ ಸವಾಲಿನಲ್ಲಿ ಭಾಗವಹಿಸುವ ಮೂಲಕ ತಮ್ಮ ಓದುವ ಪ್ರೀತಿಯನ್ನು ಸಾಕ್ಷ್ಯ ಪಡಿಸಲು ಮತ್ತು ವ್ಯಕ್ತಪಡಿಸಲು ಆಹ್ವಾನಿಸುತ್ತೇವೆ’’ ಎಂದು ಕಳೆದ ವರ್ಷ ಯುನೆಸ್ಕೋ ಹೇಳಿಕೆ ನೀಡಿತ್ತು.

Published by:Divya D
First published: