• Home
  • »
  • News
  • »
  • trend
  • »
  • Ancient Gold Coins: ಫ್ರಾನ್ಸ್​ನ ಹಳೆಯ ಕಟ್ಟಡದ ಗೋಡೆಗಳಲ್ಲಿತ್ತು ನೂರಾರು ಚಿನ್ನದ ನಾಣ್ಯಗಳು ..

Ancient Gold Coins: ಫ್ರಾನ್ಸ್​ನ ಹಳೆಯ ಕಟ್ಟಡದ ಗೋಡೆಗಳಲ್ಲಿತ್ತು ನೂರಾರು ಚಿನ್ನದ ನಾಣ್ಯಗಳು ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Gold Coins Found In France: ಪೆಟ್ಟಿಗೆಯನ್ನು ಗೋಡೆಯಲ್ಲಿ ಹುದುಗಿಸಿ, ಕಲ್ಲುಗಳ ನಡುವೆ ಮುಚ್ಚಲಾಗಿತ್ತು ಎಂದು ಮಹಲಿನ ಮಾಲೀಕ ಫ್ರಾಂಕೋಯಿಸ್ ಮಿಯಾನ್ ಎಎಫ್‌ಪಿಗೆ ತಿಳಿಸಿದರು. ಇನ್ನು, ಕೆಲವು ದಿನಗಳ ನಂತರ, ಮರದ ಬೀಮ್‌ ಮೇಲೆ ಬಚ್ಚಿಟ್ಟಿದ್ದ ಇನ್ನೂ ಹಲವು ನಾಣ್ಯಗಳು ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ  ಸಿಕ್ಕಿದೆ ಎಂದು ಮಾಲೀಕರು ಹೇಳಿದರು

ಮುಂದೆ ಓದಿ ...
  • Share this:

ಹಳೆಯ ಕಾಲದ ಕಟ್ಟಡಗಳಲ್ಲಿ ಹಿಂದಿನ ಕಾಲದ ಸಾಕಷ್ಟು ಮೌಲ್ಯದ ಚಿನ್ನ, ಬೆಲೆಬಾಳುವ ವಸ್ತುಗಳು ಸಿಗುತ್ತದೆ ಎಂದು ಹಲವರು ಹೇಳುತ್ತಾರೆ. ಅದೇ ರೀತಿ, ಇಂತಹ ಘಟನೆಗಳು ಕೆಲವೊಮ್ಮೆ ಬೆಳಕಿಗೆ ಬರುತ್ತಿರುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ಈ ಘಟನೆ ಬೇರೆ ದೇಶಗಳಲ್ಲೂ ವರದಿಯಾಗುತ್ತಿರುತ್ತದೆ. ಈಗ ಫ್ರಾನ್ಸ್‌ನಲ್ಲೂ(France) ಅದೇ ರೀತಿಯ ಘಟನೆಯೊಂದು ನಡೆದಿದೆ. ಫ್ರೆಂಚ್‌ನ ಜನಜಂಗುಳಿ ಇಲ್ಲದ ಪ್ರದೇಶದಲ್ಲಿರುವ ಮ್ಯಾನ್ಷನ್‌ನ ಗೋಡೆಗಳಲ್ಲಿ ನೂರಾರು ಅಪರೂಪದ ಹಾಗೂ ಹಳೆಯ ಕಾಲದ ಚಿನ್ನದ ನಾಣ್ಯಗಳು(Gold Coins) ದೊರೆತಿವೆ.


ಹರಾಜು ಕೇಂದ್ರವೊಂದು ಈ ಚಿನ್ನದ ನಾಣ್ಯಗಳನ್ನು ಹರಾಜಿಗಿಡುವ ಪ್ರಕ್ರಿಯೆ ನಡೆಸಲಿದೆ. ಲೂಯಿಸ್ XIII ಮತ್ತು ಲೂಯಿಸ್ XIV ಆಳ್ವಿಕೆಯಲ್ಲಿ ಫ್ರೆಂಚ್ ಕ್ರಾಂತಿಗೆ ಮುಂಚಿತವಾಗಿ ಮುದ್ರಿಸಲಾದ 239 ನಾಣ್ಯಗಳನ್ನು ಈ ಕಟ್ಟಡದ ಗೋಡೆಗಳಲ್ಲಿ ಪತ್ತೆ ಮಾಡಲಾಗಿದೆ. ಪಶ್ಚಿಮ ಬ್ರಿಟಾನಿ ಪ್ರದೇಶದ ಕ್ವಿಂಪರ್ ಬಳಿಯಲ್ಲಿರುವ ಈ ಭವನದ ಮಾಲೀಕರು ತಮ್ಮ ಆಸ್ತಿಯ ಮೂರು ಕಟ್ಟಡಗಳನ್ನು ಒಗ್ಗೂಡಿಸಲು, ಕಟ್ಟಡದ ನವೀಕರಣ ಮಾಡಲು ಕಲ್ಲಿನ ಕೆಲಸಗಾರರನ್ನು ನೇಮಿಸಿಕೊಂಡಾಗ ಪತ್ತೆಯಾಗಿದೆ ಎಂದು ಹರಾಜುದಾರ ಐವೋರ್ ಹೇಳಿದರು. ಕೆಲಸದ ಸಮಯದಲ್ಲಿ, ಮೂರು ಕುಶಲಕರ್ಮಿಗಳಿಗೆ ಗೋಡೆಯಲ್ಲಿ ಚಿನ್ನದ ನಾಣ್ಯಗಳಿಂದ ತುಂಬಿದ ಲೋಹದ ಪೆಟ್ಟಿಗೆ ಪತ್ತೆಯಾಗಿದ್ದು, ತಕ್ಷಣವೇ ಮಾಲೀಕರಿಗೆ ತಿಳಿಸಿದ್ದಾರೆ.


"ಪೆಟ್ಟಿಗೆಯನ್ನು ಗೋಡೆಯಲ್ಲಿ ಹುದುಗಿಸಿ, ಕಲ್ಲುಗಳ ನಡುವೆ ಮುಚ್ಚಲಾಗಿತ್ತು ಎಂದು ಮಹಲಿನ ಮಾಲೀಕ ಫ್ರಾಂಕೋಯಿಸ್ ಮಿಯಾನ್ ಎಎಫ್‌ಪಿಗೆ ತಿಳಿಸಿದರು. ಇನ್ನು, ಕೆಲವು ದಿನಗಳ ನಂತರ, ಮರದ ಬೀಮ್‌ ಮೇಲೆ ಬಚ್ಚಿಟ್ಟಿದ್ದ ಇನ್ನೂ ಹಲವು ನಾಣ್ಯಗಳು ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ  ಸಿಕ್ಕಿದೆ ಎಂದು ಮಾಲೀಕರು ಹೇಳಿದರು.


ಇದನ್ನೂ ಓದಿ: ಈಗ ಖರೀದಿಸಿ ಮತ್ತು 3 ತಿಂಗಳ ನಂತರ ಯಾವುದೇ ಬಡ್ಡಿ ಇಲ್ಲದೆ ಪಾವತಿಸಿ!

ಇನ್ನು, 2019ರಲ್ಲೇ ಈ ಶೋಧ ಮಾಡಲಾಗಿದ್ದರೂ, ಕಟ್ಟಡದ ಮಾಲೀಕರು ನಿಧಿಯನ್ನು ಮಾರಾಟ ಮಾಡುವ ಹರಾಜು ಕೇಂದ್ರಕ್ಕೆ ಕಳಿಸಿದ ಬಳಿಕ ಇತ್ತೀಚೆಗೆ ಆ ಬಗ್ಗೆ ವರದಿಯಾಗಿದೆ. ಇನ್ನು, ಈ ಚಿನ್ನದ ನಾಣ್ಯಗಳಿಂದ 250,000 ದಿಂದ 300,000 ಯುರೋಗಳಷ್ಟು ($ 296,000- $ 355,000) ಆದಾಯವನ್ನು ಅಂದಾಜಿಸಲಾಗಿದೆ. ಅಲ್ಲದೆ, ಈ ಹಣವನ್ನು ಮಾಲೀಕರು ಹಾಗೂ ನಾಣ್ಯಗಳನ್ನು ಕಂಡುಕೊಂಡ ಕುಶಲಕರ್ಮಿಗಳ ನಡುವೆ ಹಂಚಿಕೊಳ್ಳಲಾಗುತ್ತದೆ.


ಲೂಯಿಸ್ ಡಿ'ಓರ್ ಮತ್ತು ಡಬಲ್ ಲೂಯಿಸ್ ಡಿ'ಓರ್‌ನ ಹಲವು ನಾಣ್ಯಗಳನ್ನೂ ಈ ನಿಧಿ ಹೊಂದಿದ್ದು, 1646ರ ಹಿಂದಿನ ಲೂಯಿಸ್ XIV ಚಿತ್ರಿಸುವ ಅತ್ಯಂತ ಅಪರೂಪದ ನಾಣ್ಯವನ್ನೂ ಒಳಗೊಂಡಿದೆ. ಇದರ ಅಂದಾಜು ಮೌಲ್ಯವೇ 15,000 ಯುರೋಗಳಷ್ಟು ಎಂದು ಹೇಳಲಾಗಿದೆ.

ನಾಣ್ಯಗಳು ಬಹುಶಃ ಶ್ರೀಮಂತ ವ್ಯಾಪಾರಿ ಅಥವಾ ಭೂಮಾಲೀಕರ ಉಳಿತಾಯ ಎಂದು ಐವೊಯಿರ್‌ನಲ್ಲಿ ಪರಿಣಿತರಾದ ಫ್ಲೋರಿಯನ್ ಡಿ'ಓಸನ್ ವಿಲ್ಲೆ ಎಎಫ್‌ಪಿಗೆ ತಿಳಿಸಿದರು


ಫ್ರೆಂಚ್ ಕಾನೂನಿನ ಪ್ರಕಾರ, 2016ರ ಮಧ್ಯದ ನಂತರ ಸ್ವಾಧೀನಪಡಿಸಿಕೊಂಡ ಖಾಸಗಿ ಆಸ್ತಿಯಲ್ಲಿ ಪತ್ತೆಯಾದಲ್ಲಿ ಎಲ್ಲಾ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳು ಸ್ವಯಂಚಾಲಿತವಾಗಿ ರಾಜ್ಯಕ್ಕೆ ಸೇರಿರುತ್ತವೆ. ಆದರೆ ಈ ದಂಪತಿ 2012ರಲ್ಲಿ ಮಹಲನ್ನು ಸ್ವಾಧೀನಪಡಿಸಿಕೊಂಡ ಹಿನ್ನೆಲೆ, ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಬದಲು ಮಾರಾಟ ಮಾಡಲು ಅವರಿಗೆ ಅಧಿಕಾರ ನೀಡಲಾಗಿದೆ.


ಇದನ್ನೂ ಓದಿ: ಈ ರೈತ ಬೆಳೆದ ಬೆಂಡೆಕಾಯಿಗೆ 800 ರೂ/ಕೆಜಿ, ಯಾವುದು ಈ ವಿಶಿಷ್ಟ ತಳಿ? ಎಲ್ಲಾ ಕಡೆ ಬೆಳೆಯಬಹುದಾ? ಫುಲ್ ಡೀಟೆಲ್ಸ್


ಸಾಮಾನ್ಯವಾಗಿ ಭಾರತದಲ್ಲಿ ಹಳೆಯ ನಾಣ್ಯಗಳು ಮತ್ತು ಪುರಾತನ ವಸ್ತುಗಳು ಲಭಿಸುತ್ತಿದ್ದವು. ಹಳೆಯ ಕಾಲದಲ್ಲಿ ಹಿರಿಯರು ಮತ್ತು ರಾಜರು  ಯುದ್ಧಕ್ಕೆ ಹೋಗುವಾಗ ಹಾಗೂ ತಮ್ಮ ಸಂಪತನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ನಾಣ್ಯಗಳನ್ನು ಭೂಮಿಯ ಆಳದಲ್ಲಿ ಅಡಗಿಸುತ್ತಿದ್ದರು.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು