• Home
  • »
  • News
  • »
  • trend
  • »
  • Work From Home ಉದ್ಯೋಗಿಗಳು ಈ 3 ಆಹಾರಗಳನ್ನು ಕಡ್ಡಾಯವಾಗಿ ಸೇವಿಸಲೇಬೇಕು: ಏಕೆ ಅಂತ ತಿಳಿಯಿರಿ

Work From Home ಉದ್ಯೋಗಿಗಳು ಈ 3 ಆಹಾರಗಳನ್ನು ಕಡ್ಡಾಯವಾಗಿ ಸೇವಿಸಲೇಬೇಕು: ಏಕೆ ಅಂತ ತಿಳಿಯಿರಿ

Work From Home (Photo: Google)

Work From Home (Photo: Google)

ಮನೆಯಿಂದಲೇ ಕೆಲಸ ಮಾಡುತ್ತಿದ್ದರೂ ಆರೋಗ್ಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಸರಿಯಲ್ಲ. ಮನೆಯಲ್ಲಿರುವಾಗ ಆಹಾರ ಪದಾರ್ಥಗಳ ಮೇಲೆ ಸಿಕ್ಕಾಪಟ್ಟೆ ಗಮನ ಹೋಗುವುದು ಸತ್ಯ. ಹಾಗಾದರೆ ಬ್ಯಾಲೆನ್ಸ್ ಆಗಿ ಆಹಾರವನ್ನು ಸೇವಿಸುವುದು ಹೇಗೆ ?

  • Share this:

    ಸೆಲೆಬ್ರಿಟಿ ಪೌಷ್ಟಿಕಾಂಶ ತಜ್ಞೆ ರುಜುತಾ ದಿವೇಕರ್ ಮೂರು ಮುಖ್ಯ ಆಹಾರಗಳನ್ನು ತಿಳಿಸಿದ್ದು ಮನೆಯಿಂದಲೇ ಕೆಲಸ ಮಾಡುವ ವೃತ್ತಿಪರರು ಇವುಗಳನ್ನು ಕಡ್ಡಾಯವಾಗಿ ಸೇವಿಸಬೇಕು ಎಂದು ಸಲಹೆ ನೀಡಿದ್ದಾರೆ. ಸಾಂಕ್ರಾಮಿಕದ ಸಮದಲ್ಲಿ ಹೆಚ್ಚಿನ ಕಚೇರಿಗಳು ಮನೆಯಿಂದಲೇ ಕೆಲಸ ಮಾಡುವ ಪ್ರವೃತ್ತಿಗೆ ಹೊಂದಿಕೊಂಡಿವೆ. ಹಾಗೂ ಅದೆಷ್ಟೋ ಉದ್ಯೋಗಿಗಳು ಕಚೇರಿಯತ್ತ ಮುಖ ಮಾಡದೇ ತಮ್ಮ ಮನೆಯಲ್ಲೇ ಕುಳಿತು ಕಚೇರಿ ಕೆಲಸಗಳನ್ನು ಮಾಡುತ್ತಿದ್ದಾರೆ. ಐಟಿ ವಲಯದಲ್ಲೇ ವರ್ಕ್ ಫ್ರಮ್ ಹೋಮ್ ಕಲ್ಪನೆ ಫೇಮಸ್​​ ಆಗಿದ್ದು ಉದ್ಯೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಅದೆಷ್ಟೋ ಉದ್ಯೋಗ ಕ್ಷೇತ್ರಗಳು ವರ್ಕ್ ಫ್ರಮ್ ಹೋಮ್ ಸಂಸ್ಕೃತಿಗೆ ಮಣೆಹಾಕಿವೆ.


    ಮನೆಯಿಂದಲೇ ಕೆಲಸ ಮಾಡುತ್ತಿದ್ದರೂ ಆರೋಗ್ಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಸರಿಯಲ್ಲ ಎಂಬುದು ಪೌಷ್ಟಿಕ ತಜ್ಞೆಯಾಗಿರುವ ರುಜುತಾ ದಿವೇಕರ್ ಅಭಿಪ್ರಾಯವಾಗಿದೆ. ಮನೆಯಲ್ಲಿರುವಾಗ ಆಹಾರ ಪದಾರ್ಥಗಳ ಮೇಲೆ ಸಿಕ್ಕಾಪಟ್ಟೆ ಗಮನ ಹೋಗುವುದು ಸತ್ಯ. ಹಾಗಾದರೆ ಬ್ಯಾಲೆನ್ಸ್ ಆಗಿ ಆಹಾರವನ್ನು ಸೇವಿಸುವುದು ಹೇಗೆ ಎಂಬುದನ್ನು ಕುರಿತು ರುಜುತಾ ಸಲಹೆ ನೀಡಿದ್ದಾರೆ. ಅದರಲ್ಲೂ ಕೆಲವೊಂದು ಪ್ರಮುಖ ಆಹಾರಗಳನ್ನು ನಮ್ಮ ಡಯೆಟ್‌ನಲ್ಲಿ ನಾವು ಸೇರಿಸಿಕೊಳ್ಳಲೇಬೇಕು ಎಂಬುದು ಇವರ ಅಭಿಪ್ರಾಯವಾಗಿದೆ.


    1)ತಾಜಾ ಹಣ್ಣುಗಳು: ವರ್ಕ್ ಫ್ರಮ್ ಮಾಡುತ್ತಿರಿ ಅಥವಾ ಕಚೇರಿಗೆ ಹೋಗುತ್ತಿರಿ ನಿಮ್ಮ ದೈನಂದಿನ ಆಹಾರದಲ್ಲಿ ತಾಜಾ ಹಣ್ಣುಗಳನ್ನು ನೀವು ಸೇವಿಸಲೇಬೇಕು ಎಂಬುದು ರುಜುತಾ ಸಲಹೆಯಾಗಿದೆ. ಹಣ್ಣುಗಳು ನಿಮಗೆ ಉತ್ತಮ ಮಟ್ಟದ ನಾರಿನಂಶವನ್ನು ಒದಗಿಸುತ್ತವೆ ಹಾಗೂ ಪ್ರಿಬಯೋಟಿಕ್ ಅನ್ನು ನೀಡುತ್ತವೆ. ನಿಮಗೆ ಸ್ಥಳೀಯವಾಗಿ ದೊರೆಯುವ ತಾಜಾ ಹಣ್ಣುಗಳನ್ನೇ ಸೇವಿಸಿ ಎಂದು ರುಜುತಾ ಸಲಹೆ ನೀಡುತ್ತಾರೆ. ಋತುಮಾನಗಳಿಗೆ ಅನುಗುಣವಾಗಿ ಲಭ್ಯವಿರುವ ಹಣ್ಣುಗಳ ಸೇವನೆಯಿಂದ ಮಾತ್ರವೇ ನಮಗೆ ಹಣ್ಣುಗಳಲ್ಲಿರುವ ಆರೋಗ್ಯಕಾರಿ ಅಂಶಗಳು ದೊರೆಯಲು ಸಾಧ್ಯ ಎಂಬುದು ಪೌಷ್ಟಿಕ ತಜ್ಞೆಯ ಅಭಿಪ್ರಾಯವಾಗಿದೆ.


    ಇದನ್ನೂ ಓದಿ: World Heart Day 2021: ಸಣ್ಣ ವಯಸ್ಸಿನ ಹೃದಯಾಘಾತ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅರಿವಿನ ಪಾಠ!


    2)ಒಣಹಣ್ಣುಗಳು (ಡ್ರೈಫ್ರುಟ್ಸ್): ನಿಮ್ಮ ದೈನಂದಿನ ಆಹಾರದಲ್ಲಿ ಡ್ರೈಫ್ರುಟ್ಸ್ ಇರಲಿ ಎಂಬುದು ದಿವೇಕರ್ ನೀಡುವ ಸಲಹೆಯಾಗಿದೆ. ಇದು ಮೂಳೆಗಳ ಅಭಿವೃದ್ಧಿಗೆ ಅತಿಮುಖ್ಯವಾದುದು. ಹುರಿದ ಕಡಲೆಕಾಳನ್ನು ನೀವು ಮೆಲ್ಲಬಹುದು ಹಾಗೂ ಇದು ಹೆಚ್ಚಿನ ಹೃದಯ ಸ್ವಾಸ್ಥ್ಯ ಅಂಶಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ. ಕಡಲೆಕಾಳಿನೊಂದಿಗೆ ಬೆಲ್ಲವನ್ನು ಸೇರಿಸಿ ನಿಮ್ಮ ಸಕ್ಕರೆಯ ಮೇಲಿನ ವಾಂಛೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂಬುದು ರುಜುತಾ ಸಲಹೆಯಾಗಿದೆ.


    3)ತುಪ್ಪ: ನಿಮ್ಮ ಆಹಾರದಲ್ಲಿ ಒಂದು ಚಮಚ ತುಪ್ಪವನ್ನು ನೀವು ಸೇರಿಸಲೇಬೇಕು ಎಂಬುದು ರುಜುತಾ ಸಲಹೆಯಾಗಿದೆ. ನಿಮ್ಮ ಉಪಹಾರ, ಮಧ್ಯಾಹ್ನದೂಟ ಅಥವಾ ರಾತ್ರಿಯ ಭೋಜನದ ಸಮಯದಲ್ಲಿ ಒಂದು ಚಮಚ ತುಪ್ಪ ಸೇವನೆ ಕಡ್ಡಾಯವಾದುದು ಎಂಬುದು ರುಜುತಾ ಸಲಹೆಯಾಗಿದೆ. ತುಪ್ಪವು ಜೀರ್ಣಕ್ರಿಯೆ ಅಂಶಗಳನ್ನು ಒಳಗೊಂಡಿದೆ. ಹತ್ತಾರು ಮೀಟಿಂಗ್, ಅಪರಿಮಿತ ಕೆಲಸದ ನಡುವೆ ನಿಮ್ಮ ಶಕ್ತಿ ಸೋರಿಕೆಯಾಗುವುದು ಸಹಜವಾಗಿರುತ್ತದೆ. ಈ ಸಮಯದಲ್ಲಿ ನಿಮಗೆ ಮರಳಿ ಶಕ್ತಿಯನ್ನು ಪೂರೈಸುವಲ್ಲಿ ತುಪ್ಪದ ಮಹತ್ವ ಹಿರಿದಾದುದು ಎಂಬುದು ರುಜುತಾ ಸಲಹೆಯಾಗಿದೆ. ತುಪ್ಪ ಸೇವನೆಯು ಒತ್ತಡವನ್ನು ನಿವಾರಿಸುತ್ತದೆ ಎಂಬುದು ಸೆಲೆಬ್ರಿಟಿ ಪೌಷ್ಟಿಕ ತಜ್ಞೆಯ ಸಲಹೆಯಾಗಿದೆ.

    Published by:Kavya V
    First published: