Viral Video: ಕಾನ್ಫರೆನ್ಸ್ ಕಾಲ್‍ನಲ್ಲಿದ್ದ ವೇಳೆ ಈಜುಕೊಳಕ್ಕೆ ಬಿದ್ದ ತಂದೆ; ದೃಶ್ಯ ಸೆರೆ ಹಿಡಿದ ಮಗಳು, ವಿಡಿಯೋ ವೈರಲ್

Work From Home Viral Video: ಈತ ತನ್ನ ಕೆಲಸದಲ್ಲಿ ಎಷ್ಟು ಶ್ರದ್ಧೆ ಹೊಂದಿದ್ದಾರೆ. ಬಿದ್ದ ಕೂಡಲೇ ಆತ ಜೇಬಿನಿಂದ ಕೈ ತೆಗೆಯುವುದು ಮತ್ತು ಮುಖವೂ ನೆಲಕ್ಕೆ ಬಡಿದು ಅವಘಡ ಉಂಟಾಗುವುದನ್ನು ಸ್ವತಃ ಫೋನಿನಲ್ಲೇ ಇದ್ದರೂ ಇವೆಲ್ಲವನ್ನೂ ಎಚ್ಚರದಿಂದ ನಿಭಾಯಿಸುವ ರೀತಿಗೆ ನೆಟಿಜನ್‍ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಆಫೀಸ್​ ಕೆಲಸದ ನಡುವೆಯೇ ಪೂಲ್​ಗೆ ಬಿದ್ದ ತಂದೆಯ ವೈರಲ್​ ವಿಡಿಯೋದ ಫೋಟೊ

ಆಫೀಸ್​ ಕೆಲಸದ ನಡುವೆಯೇ ಪೂಲ್​ಗೆ ಬಿದ್ದ ತಂದೆಯ ವೈರಲ್​ ವಿಡಿಯೋದ ಫೋಟೊ

  • Share this:
    ಕೊರೋನಾ ಮಹಾಮಾರಿಯಿಂದಾಗಿ (Coronavirus Pandemic) ಸಾಕಷ್ಟು ಐಟಿ ಬಿಟಿ ಮಂದಿ ವರ್ಕ್ ಫ್ರಂ ಹೋಮ್ ಎಂಬ ಪರಿಕಲ್ಪನೆಯಲ್ಲಿ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಆನ್‍ಲೈನ್ ಮೀಟಿಂಗ್ (Online Gaming), ಕಾನ್ಫರೆನ್ಸ್ ಕಾಲ್ (Conference Call) ಎಂದು ಕಚೇರಿಗೆ ಹೋಗುತ್ತಿದ್ದ ದಿನಗಳಿಗಿಂತ ಮನೆಯಲ್ಲಿ ಕುಳಿತು ಕೆಲಸ ಮಾಡುವ ವೇಳೆ ಫುಲ್ ಬ್ಯುಸಿ ಆಗಿದ್ದಾರೆ. ಕೆಲಸ ಮುಗಿದ ಬಳಿಕವೂ ನಿರಂತರವಾಗಿ ಕರೆಯಲ್ಲೇ ಇರುವಂತಾಗಿದೆ. ಹೀಗೆ ಕರೆಯಲ್ಲೇ ಇದ್ದ ಸಮಯದಲ್ಲೇ ಈಜುಕೊಳಕ್ಕೆ ಬಿದ್ದು ಯಥಾಸ್ಥಿತಿಯಲ್ಲೇ ಎದ್ದು ಕುಳಿತು ಕರೆಯಲ್ಲಿ ಮಾತು ಮುಂದುವರೆಸುವ ವ್ಯಕ್ತಿಯೊಬ್ಬರನ್ನು ನಾವು ನೋಡಬಹುದು.

    ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video on Social Media) ಆಗಿದೆ. ಹೌದು ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕರೆಯಲ್ಲಿ ಮಾತನಾಡುತ್ತಾ ಈಜುಕೊಳದ ಪಕ್ಕದಲ್ಲಿ ನಡೆದುಕೊಂಡು ಬರುತ್ತಿರುತ್ತಾರೆ. ಆಗ ಬರ ಬರುತ್ತಾ ಈಜುಕೊಳದ ಕೊನೆಗೆ ಬಂದ ವೇಳೆ ಕಾಲು ಜಾರಿ ಈಜುಕೊಳಕ್ಕೆ ಬೀಳುತ್ತಾರೆ. ಆದರೂ ಫೋನಿನಲ್ಲಿ ಮಾತನಾಡುವುದನ್ನು ಬಿಡದ ಅವರು ಪುನಃ ಈಜುಕೊಳದಿಂದ ಎದ್ದು ಈಜುಕೊಳದಲ್ಲಿ ಬಿದ್ದು ಒದ್ದೆಯಾದ ಕಾಲಿನಲ್ಲಿದ್ದ ಸಾಕ್ಸ್ ಅನ್ನು ತೆಗೆಯುತ್ತಲೇ ಫೋನಿನಲ್ಲಿ ಮಾತನ್ನು ಮುಂದುವರೆಸುತ್ತಾರೆ. ಕಾನ್‍ವೇ ಶೋ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ (Instagram Viral Video) ಈ ವಿಡಿಯೋ ಶೇರ್ ಆಗಿದ್ದು, ನನ್ನ ತಂದೆ ಕಾನ್ಫರೆನ್ಸ್ ಕರೆಯಲ್ಲಿ ಇದ್ದ ವೇಳೆ ಈಜುಕೊಳದಲ್ಲಿ ಬಿದ್ದಿದ್ದಾರೆ. ಪುನಃ ಎದ್ದು ಕುಳಿತು ಫೋನಿನಲ್ಲಿ ಮಾತು ಮುಂದುವರೆಸಿದ್ದಾರೆ ಎಂಬ ಅಡಿಬರಹದಡಿ ಮಗಳು ತಂದೆಯ ತಮಾಷೆಯ ವಿಡಿಯೋ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ರೇಸ್ ಕಾರ್ ಬಗ್ಗೆ ಪಾಕಿಸ್ತಾನದ ಲೇಡಿ ಟಿವಿ ಆ್ಯಂಕರ್ ಕೇಳಿದ ಪ್ರಶ್ನೆ ಭಾರೀ ವೈರಲ್

    ಈತ ತನ್ನ ಕೆಲಸದಲ್ಲಿ ಎಷ್ಟು ಶ್ರದ್ಧೆ ಹೊಂದಿದ್ದಾರೆ. ಬಿದ್ದ ಕೂಡಲೇ ಆತ ಜೇಬಿನಿಂದ ಕೈ ತೆಗೆಯುವುದು ಮತ್ತು ಮುಖವೂ ನೆಲಕ್ಕೆ ಬಡಿದು ಅವಘಡ ಉಂಟಾಗುವುದನ್ನು ಸ್ವತಃ ಫೋನಿನಲ್ಲೇ ಇದ್ದರೂ ಇವೆಲ್ಲವನ್ನೂ ಎಚ್ಚರದಿಂದ ನಿಭಾಯಿಸುವ ರೀತಿಗೆ ನೆಟಿಜನ್‍ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಆರ್‌ಸಿಬಿ ತಂಡ ಸೇರಿದ ಎಬಿ ಡಿವಿಲಿಯರ್ಸ್; ಸನ್ ರೈಸರ್ಸ್ ತಂಡ ಸೇರಿದ ಕೇನ್ ವಿಲಿಯಮ್ಸನ್​

    ಒಬ್ಬರು, ನಾನು ಕೂಡ ಪ್ರತಿದಿನ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದುವೇ ವೃತ್ತಿಪರತೆ ಎಂದಿದ್ದಾರೆ. ಇನ್ನೊಬ್ಬರು ಇದು ಕೌಶಲ್ಯತೆ ಎಂದು ಹೊಗಳಿದ್ದಾರೆ. ಮತ್ತೊಬ್ಬರು ನೀವು ನಡೆಯುವಾಗ ಯಾವ ಸ್ಥಳದಲ್ಲಿ ನಡೆಯುತ್ತಿರುವಿ ಎಂಬ ಬಗ್ಗೆ ಅರಿವಿರಲಿ ಕಾರು ಚಲಾಯಿಸುವಾಗಲೂ ಸಹ ಎಂದು ಸಲಹೆ ನೀಡಿದ್ದಾರೆ, ಈ ರೀತಿಯ ಉದ್ಯೋಗಿಯ ಅವಶ್ಯಕತೆ ಇದೆ ಮತ್ತೊಬ್ಬರು ಕಮೆಂಟ್ ಮಾಡಿ ವೃತ್ತಪಪರತೆಯನ್ನು ಶ್ಲಾಘಿಸಿದ್ದಾರೆ, ಇನ್ನೊಬ್ಬರು ಮಾನಸಿಕವಾಗಿ ವೃತ್ತಿಪರರಾಗಿದ್ದಾರೆ, ಆದರೆ ವಿಚಾರದಲ್ಲಿ ಅಲ್ಲ ಎಂದು ಅವರ ಕಾಲೆಳೆದಿದ್ದಾರೆ. ಮತ್ತೊಂದಿಷ್ಟು ಮಂದಿ ಅದ್ಭುತ, ಕೂಲ್, ಒಳ್ಳೆಯ ಚಲನೆ, ಪ್ರಭಾವ ಶಾಲಿ, ಎಂದೆಲ್ಲಾ ಹೇಳಿದ್ದಾರೆ. ಮೂರು ದಿನಗಳ ಹಿಂದೆ ಶೇರ್ ಆದ ಈ ವಿಡಿಯೊವನ್ನು 15 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.








    View this post on Instagram






    A post shared by Tim Conway Jr. (@conwayshow)






    ಹೀಗೆ ಆಫೀಸ್ ಕಾಲ್‍ನಲ್ಲಿದ್ದಾಗ ಸಾಕಷ್ಟು ಉದ್ಯೋಗಿಗಳು ಎಡವಟ್ಟು ಮಾಡಿಕೊಂಡಿರುವ ನಿದರ್ಶನಗಳು ಸಾಕಷ್ಟಿವೆ. ಕೆಲವು ದಿನಗಳ ಹಿಂದೆ ಮಹಿಳೆಯೊಬ್ಬಳು ಸಿಇಒ ಹಾಗೂ ಸಹೋದ್ಯೋಗಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ವೇಳೆ ಕುರ್ಚಿ ಮುರಿದು ಆಕೆ ನೆಲಕ್ಕೆ ಬಿದ್ದು, ಪುನಃ ಎದ್ದು ಕುಳಿತು ಎಲ್ಲರೊಂದಿಗೆ ಮಾತು ಮುಂದುವರೆಸುವ ಘಟನೆ ನಡೆದಿತ್ತು. ಈ ಬಗ್ಗೆ ಸ್ವತಃ ಹಂಚಿಕೊಂಡಿರುವ ಮಹಿಳೆ ನಾನು ಸಿಇಒ ಜೊತೆ ಮೀಟಿಂಗ್‍ನಲ್ಲಿದ್ದ ವೇಳೆ ಕುರ್ಚಿ ಮುರಿದು ನಾನು ಬಿದ್ದಿರುವ ಘಟನೆಯನ್ನು ನೋಡಿ ಖುಷಿ ಪಡಿ ಎಂಬ ಅಡಿಬರಹದಡಿ ಶೇರ್ ಮಾಡಿದ್ದರು.
    Published by:Sharath Sharma Kalagaru
    First published: