'ನಾನು ಸತ್ತರೂ ಇದನ್ನು ಸಾಯಲು ಬಿಡಲ್ಲ': ತನ್ನ ಮಾಸ್ಕ್​​​ನ್ನು ನಾಯಿಗೆ ಹಾಕಿದ ವ್ಯಕ್ತಿಯ ವಿಡಿಯೋ ವೈರಲ್

'animal lover wagad' ಎಂಬ ಇನ್ಸ್‌ಟಾಗ್ರಾಮ್‌ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋಗೆ ''ಟ್ರೂ ಲವ್ ಮೋರ್‌ ದ್ಯಾನ್‌ ಮೈ ಲೈಫ್‌'' ಎಂಬ ಕ್ಯಾಪ್ಷನ್‌ ಅನ್ನೂ ಬರೆದುಕೊಂಡಿದ್ದಾರೆ.

ನಾಯಿಗೆ ಮಾಸ್ಕ್ ಹಾಕಿರುವ ವ್ಯಕ್ತಿ

ನಾಯಿಗೆ ಮಾಸ್ಕ್ ಹಾಕಿರುವ ವ್ಯಕ್ತಿ

 • Share this:
  ಕೊರೊನಾ ವೈರಸ್‌ ಪ್ರಕರಣಗಳು ದೇಶಾದ್ಯಂತ ಮತ್ತೊಮ್ಮೆ ತೀವ್ರ ಮಟ್ಟದಲ್ಲಿ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆ ಅನೇಕರು ಎಲ್ಲ ಜನರಿಗೂ ಮಾಸ್ಕ್‌ ಹಾಕಿಕೊಳ್ಳಬೇಕೆಂದು ಸಲಹೆ ನೀಡುತ್ತಲೆ ಇದ್ದಾರೆ. ಅಲ್ಲದೆ, ಇನ್ನೂ ಕೆಲವರು ತಮ್ಮ ಸಾಕು ಪ್ರಾಣಿಗಳಿಗೂ ಮಾಸ್ಕ್‌ ಹಾಕುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುತ್ತಿರುತ್ತಾರೆ. ಇದೇ ರೀತಿ, ಸಾಮಾಜಿಕ ಮಾಧ್ಯಮಗಳು ಮತ್ತೊಮ್ಮೆ ತಮ್ಮ ಸಾಕುಪ್ರಾಣಿಗಳು ಹಾಗೂ ಸಾಕುಪ್ರಾಣಿಗಳ ಆರೈಕೆಯ ಬಗ್ಗೆ ಭಾವನಾತ್ಮಕ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

  ಇದೇ ರೀತಿ, ದೇಶಾದ್ಯಂತ ಹಲವಾರು ರಾಜ್ಯ ಸರ್ಕಾರಗಳು ಕೊರೊನಾ ವೈರಸ್‌ನ ಎರಡನೇ ಅಲೆಯನ್ನು ತಡೆಗಟ್ಟಲು ಹೆಚ್ಚಿನ ನಿರ್ಬಂಧಗಳನ್ನು ಜಾರಿಗೊಳಿಸುತ್ತಿರುವುದರಿಂದ, ಒಬ್ಬ ವ್ಯಕ್ತಿಯು ತನ್ನ ನಾಯಿಗೆ ಮಾಸ್ಕ್‌ ಹಾಕಿ ಸ್ವತ: ತಾನು ಮಾಸ್ಕ್‌ ಧರಿಸದೆ ಇರುವ ವಿಡಿಯೋ ವೈರಲ್ ಆಗಿದೆ.

  ಇನ್ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡ ವಿಡಿಯೋದಲ್ಲಿ ವಯಸ್ಸಾದ ಮತ್ತು ದೀನದಲಿತ ವ್ಯಕ್ತಿಯು ತನ್ನ ನಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವುದನ್ನು ಕಾಣಬಹುದು. ಆತ ನಾಯಿಯ ಮೂತಿಗೆ ಮಾಸ್ಕ್‌ ಹಾಕಿದ್ದ, ಆದರೆ ಆತ ಹಾಕಿಕೊಂಡಿರಲಿಲ್ಲ. ಈ ಬಗ್ಗೆ ವಿಡಿಯೋ ಮಾಡುತ್ತಿದ್ದ ವ್ಯಕ್ತಿ, ಆತನನ್ನು ವಿಚಾರಿಸಿದಾಗ, ಆತ ''ಇದು ನನ್ನ ಮಗು. ನನಗೆ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ ಅವನಿಗೆ ಯಾವುದೂ ಕೆಡುಕಾಗಬಾರದು. ಇದನ್ನು ತಾನು ಬಯಸುವುದಿಲ್ಲ'' ಎಂದು ಹಿಂದಿಯಲ್ಲಿ ಉತ್ತರಿಸಿದ್ದಾನೆ. ಅಲ್ಲದೆ, ಭಾವನಾತ್ಮಕವಾಗಿ, ''ನಾನು ಸತ್ತರೂ, ನನ್ನ ನಾಯಿಯನ್ನು ಸಾಯಲು ಬಿಡುವುದಿಲ್ಲ” ಎಂದೂ ಹೇಳಿಕೊಂಡಿದ್ದಾರೆ.

  Crime News:16 ವರ್ಷದ ಹಿಂದಿನ ಜೋಡಿ ಕೊಲೆ ಪ್ರಕರಣ; 6 ಮಂದಿಗೆ ಜೀವಾವಧಿ ಶಿಕ್ಷೆ

  ಈ ವೈರಲ್ ವಿಡಿಯೋದಲ್ಲಿ ವ್ಯಕ್ತಿಯ ಹೃದಯಸ್ಪರ್ಶಿ ಪ್ರತಿಕ್ರಿಯೆ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದ್ದು, ಹಲವರು ಹಲವು ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

  'animal lover wagad' ಎಂಬ ಇನ್ಸ್‌ಟಾಗ್ರಾಮ್‌ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋಗೆ ''ಟ್ರೂ ಲವ್ ಮೋರ್‌ ದ್ಯಾನ್‌ ಮೈ ಲೈಫ್‌'' ಎಂಬ ಕ್ಯಾಪ್ಷನ್‌ ಅನ್ನೂ ಬರೆದುಕೊಂಡಿದ್ದಾರೆ. ಅಲ್ಲದೆ, ಅನೇಕ ಹ್ಯಾಶ್‌ ಟ್ಯಾಗ್‌ಗಳನ್ನೂ ಹಾಕಿಕೊಂಡಿದ್ದಾರೆ. ಈತ 100 % ಪ್ರಾಣಿಗಳ ಪ್ರೇಮಿ ಎಂದು ಆ ವಿಡಿಯೋದಲ್ಲಿ ಎಡಿಟ್‌ ಅನ್ನೂ ಮಾಡಲಾಗಿದೆ. ಈ ವೈರಲ್‌ ವಿಡಿಯೋವನ್ನು 13 ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದು, ಹಲವಾರು ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ಕಾಮೆಂಟ್‌ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

  ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯೊಂದಿಗೆ ಭಾರತ ಸೇರಿದಂತೆ ಇಡೀ ಜಗತ್ತನ್ನು ಹಿಡಿತ ಸಾಧಿಸುತ್ತಲೇ ಇದೆ. ಇನ್ನು, ನಾಯಿಗೆ ಮಾಸ್ಕ್‌ ಧರಿಸಿದ್ದಕ್ಕಾಗಿ ಶ್ವಾನ ವೈರಲ್‌ ಆಗಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ, ಈಕ್ವೆಡಾರ್‌ನ ಅಂಬಾಟೋದಲ್ಲಿ ಯುವಕನೊಬ್ಬ ತನ್ನ ಮುದ್ದಿನ ನಾಯಿಯ ಮೇಲೆ ಫೇಸ್ ಮಾಸ್ಕ್ ಹಾಕುವ ವೈರಲ್ ವಿಡಿಯೋವನ್ನು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದು, ನೆಟ್ಟಿಗರು ಭಾವುಕರಾಗಿದ್ದರು.
  Published by:Latha CG
  First published: