Gal Gadot: ಚಿತ್ರೀಕರಣದ ಸೆಟ್​ನಲ್ಲೇ ಮಗುವಿಗಾಗಿ ಬಾಟಲಿಗೆ ಎದೆಹಾಲು ತುಂಬಿಸಿದ ವಂಡರ್ ವುಮನ್​ ಖ್ಯಾತಿಯ ನಟಿ

ಗಲ್​ ಗಾಡೋಟ್ ಅವರು ಈಗಾಗಲೇ ಚಿತ್ರೀಕರಣಕ್ಕೆ ಮರಳಿದ್ದು, ಚಿತ್ರೀಕರಣದ ಸೆಟ್​ನಲ್ಲೇ ತಮ್ಮ ಪುಟ್ಟ ಕಂದಮ್ಮನಿಗಾಗಿ ಬಾಟಲಿಯಲ್ಲಿ ಎದೆಹಾಲು ತುಂಬಿಸುತ್ತಿದ್ದಾರೆ. ಮೇಕಪ್​ ಮಾಡಿಸಿಕೊಳ್ಳುವ ಸಮಯದಲ್ಲಿ ಮಗುವಿಗಾಗಿ ಬಾಟಲಿಗೆ ಎದೆಹಾಲನ್ನು ಪಂಪ್​ ಮಾಡುತ್ತಿರುವ ಎರಡು ಚಿತ್ರಗಳನ್ನು ಗಲ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಬಾಟಲಿಗೆ ಎದೆ ಹಾಲು ತುಂಬಿಸಿದ ನಟಿ ಗಲ್​ ಗಾಡೋಟ್​

ಬಾಟಲಿಗೆ ಎದೆ ಹಾಲು ತುಂಬಿಸಿದ ನಟಿ ಗಲ್​ ಗಾಡೋಟ್​

  • Share this:
ವಂಡರ್​ ವುಮನ್ ಸಿನಿಮಾ ಖ್ಯಾತಿಯ ನಟಿ ಗಲ್​ ಗಾಡೋಟ್  36 ಹರೆಯದವರಾದರೂ ತರುಣಿಯರನ್ನು ನಾಚಿಸುವಂತಿದ್ದಾರೆ. ಸಿನಿಮಾಗಳಲ್ಲಿ ಊಹಿಸಲು ಸಾಧ್ಯವಾಗದ ಸ್ಟಂಟ್​ಗಳನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುವ ನಟಿ, ವಂಡರ್​ ವುಮನ್​ ಸಿನಿಮಾ ಮಾಡುವ ಮೊದಲೇ ಅವರಿಗೆ ಇಬ್ಬರು ಮಕ್ಕಳಿದ್ದರು. ವಂಡರ್ ವುಮನ್​ ಸಿನಿಮಾ ರಿಲೀಸ್ ಆದಾಗ ಅವರಿಗೆ ಮಕ್ಕಳಿರುವುದೇ ದೊಡ್ಡ ಸುದ್ದಿಯಾಗಿತ್ತು. ಈಗ ಈ ನಟಿ  ಮೂರನೇ ಮಗುವಿನ ತಾಯಿಯಾಗಿದ್ದಾರೆ. ಇತ್ತೀಚೆಗಷ್ಟೆ 46 ರ ಹರೆಯದ ಎಸ್ಟೇಟ್ ಡೆವಲಪರ್ ಜರೋನ್ ವರ್ಸಾನೊ ಹಾಗೂ ಗಲ್​ ಗಾಡೋಟ್ ತಮ್ಮ ಮೂರನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಹೌದು, ಜರೋನ್ ದಂಪತಿಗಳು ತಮ್ಮ ಮೂರನೇ ಹೆಣ್ಣು ಮಗುವಿನ ಜನನದ ಸಂಭ್ರಮದಲ್ಲಿದ್ದು, ಅವರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಹಸೂಗೂಸನ್ನು ಇಟ್ಟುಕೊಂಡೇ ಈ ನಟಿ ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ. 

ಹೌದು, ಗಲ್​ ಗಾಡೋಟ್​ ಅವರು ಮೂರು ಹೆಣ್ಣು ಮಕ್ಕಳ ತಾಯಿ. ಮೂರನೇ ಮಗುವಿಗೆ ಎರಡು ತಿಂಗಳು ತುಂಬುವ ಮೊದಲೇ ಕೆಲಸಕ್ಕೆ ಮರಳಿದ್ದಾರೆ. ಇಂತಹ ಸಮಯದಲ್ಲೂ ಮಗುವಿನ ಆರೈಕೆ ಹಾಗೂ ಕೆಲಸ ಎರಡನ್ನೂ ಚನ್ನಾಗಿ ನಿರ್ವಹಿಸುತ್ತಿದ್ದಾರೆ.

Hollywood, Gal Gadot, Wonder Woman, Fast and Furious, Breast Feeding, Breastmilk, Breastpump, ವಂಡರ್ ವುಮನ್, ಕಂದನಿಗಾಗಿ ಬಾಟಲಿಗೆ ಎದೆಹಾಲು ತುಂಬಿಸಿದ ನಟಿ, ಮಾತೃತ್ವ ಮತ್ತು ಉದ್ಯೋಗ, ಗಾಲ್​ ಗಾಡೋಟ್, ನಟಿ ಗಾಲ್​ ಗಾಡೋಟ್, Wonder Mom Gal Gadot shares photos of herself pumping breast milk on sets pics gone viral ae
ವಂಡರ್​ ವುಮನ್​ ಖ್ಯಾತಿಯ ನಟಿ ಗಲ್​ ಗಾಡೋಟ್​ ಕುಟುಂಬದ ಚಿತ್ರ


ಗಲ್​ ಗಾಡೋಟ್ ಅವರು ಈಗಾಗಲೇ ಚಿತ್ರೀಕರಣಕ್ಕೆ ಮರಳಿದ್ದು, ಚಿತ್ರೀಕರಣದ ಸೆಟ್​ನಲ್ಲೇ ತಮ್ಮ ಪುಟ್ಟ ಕಂದಮ್ಮನಿಗಾಗಿ ಬಾಟಲಿಯಲ್ಲಿ ಎದೆಹಾಲು ತುಂಬಿಸುತ್ತಿದ್ದಾರೆ. ಮೇಕಪ್​ ಮಾಡಿಸಿಕೊಳ್ಳುವ ಸಮಯದಲ್ಲಿ ಮಗುವಿಗಾಗಿ ಬಾಟಲಿಗೆ ಎದೆಹಾಲನ್ನು ಪಂಪ್​ ಮಾಡುತ್ತಿರುವ ಎರಡು ಚಿತ್ರಗಳನ್ನು ಗಲ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆ ಬ್ಯಾಕ್​ ಸ್ಟೇಜ್​ನಲ್ಲಿ ಅಮ್ಮನಾಗಿ ಎಂದು ಶೀರ್ಷಿಕೆ ಬರೆದಿದ್ದಾರೆ.

ಇದನ್ನೂ ಓದಿ: Shwetha Srivatsav: ವರಮಹಾಲಕ್ಷ್ಮಿ ಹಬ್ಬದ ವಿಶೇಷ ಫೋಟೋಶೂಟ್​ನಲ್ಲಿ ಅಮ್ಮ-ಮಗಳ ಟ್ವಿನ್ನಿಂಗ್​..!

ಗಲ್​ ಗಾಡೋಟ್​ ಅವರ ಈ ಪೋಸ್ಟ್​ ಹಾಗೂ ಫೋಟೋಗಳು ವೈರಲ್​ ಆಗುತ್ತಿವೆ. ಕೆಲಸ ಹಾಗೂ ತಾಯ್ತನವನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತಿದ್ದಾರೆ ಎಂದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.


View this post on Instagram


A post shared by Gal Gadot (@gal_gadot)


ನಮ್ಮೆಲ್ಲರಿಗೂ ತಿಳಿದಿರುವಂತೆ ಗಲ್​ ಗಾಡೋಟ್ ತಮ್ಮ ಅತ್ಯದ್ಭುತ ನಟನೆಯಿಂದ ಹೆಸರುವಾಸಿಯಾಗಿರುವವರು. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಗಲ್ ವಂಡರ್‌ ವುಮನ್ ಚಿತ್ರದ ಪಾತ್ರದ ಮೂಲಕ ಪ್ರೇಕ್ಷಕರ ಮನಸನ್ನು ಕದ್ದವರು. ಈ ಚಿತ್ರದಲ್ಲಿ ಅವರ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚಿನದ್ದಾಗಿದೆ.

ಇದನ್ನೂ ಓದಿ: Suhana Khan: ಈ ನಿರ್ದೇಶಕಿಯ ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡಲಿರುವ ಸುಹಾನಾ ಖಾನ್​..!

ಗಲ್ ಗಾಡೋಟ್​ ಅವರು 46 ರ ಜರೋನ್ ವರ್ಸಾನೊ ಅವರನ್ನು 2008ರಲ್ಲಿ ಮದುವೆಯಾದರು. ವರ್ಸಾನೊ ವೃತ್ತಿಯಲ್ಲಿ ಎಸ್ಟೇಟ್ ಡೆವಲಪರ್. ಈ ದಂಪತಿಗೆ ಮೂರು ಮಂದಿ ಹೆಣ್ಣು ಮಕ್ಕಳು. ಇವರ ಮೊದಲ ಮಗುವಿನ ಹೆಸರು ಅಲ್ಮಾ ಈಗ ಆಕೆಗೆ 9 ವರ್ಷ ಹಾಗೂ ಎರಡನೇ ಮಗಳ ಹೆಸರು ಮಾಯಾ ಅವಳಿಗೆ ನಾಲ್ಕು ವರ್ಷ. ತಮ್ಮ ಮೂರನೇ ಪುತ್ರಿಗೆ ಡೇನಿಯೆಲ್ಲಾ ಎಂದು ಹೆಸರಿಟ್ಟಿದ್ದಾರೆ.

ಸಿನಿಮಾ ವಿಷಯಕ್ಕೆ ಬಂದರೆ  ಗಾಡೋಟ್ ಡ್ವೇನ್ ಜಾನ್ಸನ್ ಮತ್ತು ರಯಾನ್ ರೆನಾಲ್ಡ್ಸ್ ಜೊತೆ ಸಿನಿಮಾದಲ್ಲಿ ನಟಿಸಲಿದ್ದಾರೆ. ಜೊತೆಗೆ 'ಐರೆನಾ ಸೆಂಡ್ಲರ್', 'ಕ್ಲಿಯೋಪಾತ್ರ' ಮತ್ತು 'ವಂಡರ್ ವುಮನ್ 3' ಚಿತ್ರಗಳೂ ಗಲ್​ ಗಾಡೋಟ್​ ಕೈಯಲ್ಲಿವೆ.

ಇದನ್ನೂ ಓದಿ: Shivarajkumar 126th Movie: ಶಿವರಾಜ್​ಕುಮಾರ್​ ಜತೆ ಹೊಸ ಸಿನಿಮಾ ಪ್ರಕಟಿಸಿದ ರಿಷಭ್ ಶೆಟ್ಟಿ..!

ಗಲ್ ಗಾಡೋಟ್​ ನಟನೆಯೊಂದಿಗೆ ತಮ್ಮ ವೈಯಕ್ತಿಕ ಜೀವನವನ್ನೂ ಖುಷಿಯಿಂದಲೇ ಸಾಗಿಸುತ್ತಿದ್ದಾರೆ. ಈಕೆ ಸಂತುಷ್ಟ ತಾಯಿ ಮತ್ತು ಸಂತೋಷಭರಿತ ಪತ್ನಿ ಎಂಬುದರಲ್ಲಿ ಎರಡು ಮಾತಿಲ್ಲ. ಜೀವನದಲ್ಲಿ ಖುಷಿಯಾಗಿ ಹೇಗೆ ಇರಬೇಕು ಎಂಬುದನ್ನು ಗಾಲ್ ನಮಗೆ ತೋರಿಸಿಕೊಟ್ಟಿದ್ದಾರೆ. ಆಕೆ ಹೆಣ್ಣು ಮಕ್ಕಳಿಗೆ ರೋಲ್‌ ಮಾಡಲ್‌ ಎಂದು ಹೇಳಿದರೂ ತಪ್ಪಾಗುವುದಿಲ್ಲ.
Published by:Anitha E
First published: