Video: ಮಹಿಳೆಯರನ್ನ ಹಸುವಿಗೆ ಹೋಲಿಸಿದ ಮಿಲ್ಕ್ ಡೈರಿ ಕಂಪನಿ! ಅತಿ ದೊಡ್ಡ ಹಾಲು ಉತ್ಪನ್ನ ಕಂಪನಿ ವಿರುದ್ಧ ತಿರುಗಿ ಬಿದ್ದ ಜನರು

ಅತಿ ದೊಡ್ಡ ಹಾಲು ಉತ್ಪನ್ನ (Dairy Product) ಕಂಪನಿಯೊಂದರ ಜಾಹೀರಾತಿನ (advertisement) ಎಡವಟ್ಟಿನ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಮಹಿಳೆಯರನ್ನು ಹಸುಗಳಿಗೆ ಹೋಲಿಸಿದ ಆರೋಪ ಡೈರಿ ಕಂಪನಿಯ ಮೇಲೆ ಹೊರಿಸಲಾಗಿದೆ. ಅಷ್ಟಕ್ಕೂ ಈ ಘಟನೆ ನಡೆದದ್ದು ಎಲ್ಲಿ ಗೊತ್ತಾ? ಈ ಸ್ಟೋರಿ ಓದಿ.

ಸಿಯೋಲ್ ಮಿಲ್ಕ್ ಜಾಹೀರಾತು

ಸಿಯೋಲ್ ಮಿಲ್ಕ್ ಜಾಹೀರಾತು

 • Share this:
  ಸಾಮಾಜಿಕ ಜಾಲತಾಣಗಳಲ್ಲಿ (Social Media) ಪ್ರತಿದಿನ ಯಾವುದಾದರೊಂದು ವಿಷಯ ವೈರಲ್(Viral)​ ಆಗುತ್ತಿರುತ್ತದೆ. ಕೆಲವೊಮ್ಮೆ ಆ ವಿಷಯದ ಬಗ್ಗೆ ಚರ್ಚೆ ನಡೆಯುತ್ತದೆ. ಇದೀಗ ಅತಿ ದೊಡ್ಡ ಹಾಲು ಉತ್ಪನ್ನ (Dairy Product) ಕಂಪನಿಯೊಂದರ ಜಾಹೀರಾತಿನ (advertisement) ಎಡವಟ್ಟಿನ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಮಹಿಳೆಯರನ್ನು ಹಸುಗಳಿಗೆ ಹೋಲಿಸಿದ ಆರೋಪ ಡೈರಿ ಕಂಪನಿಯ ಮೇಲೆ ಹೊರಿಸಲಾಗಿದೆ. ಅಷ್ಟಕ್ಕೂ ಈ ಘಟನೆ ನಡೆದದ್ದು ಎಲ್ಲಿ ಗೊತ್ತಾ? ಈ ಸ್ಟೋರಿ ಓದಿ.

  ದಕ್ಷಿಣ ಕೊರಿಯಾದ ಅತಿದೊಡ್ಡ ಹಾಲು​ ಉತ್ಪನ್ನ ಕಂಪನಿ ಸಿಯೋಲ್ ಮಿಲ್ಕ್ (Seoul Milk) ತನ್ನ ಜಾಹೀರಾತಿನಲ್ಲಿ ಹಸುಗಳನ್ನು ತೋರಿಸುವುದರ ಜೊತೆಗೆ ಮಹಿಳೆಯರನ್ನು ತೋರಿಸಿದೆ. ಈ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಡೈರಿ ಕಂಪನಿ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ.

  ಡೈರಿ ಕಂಪನಿ ಕ್ಷಮೆ ಕೇಳಬೇಕು

  ಡೈರಿ ಕಂಪನಿಯ ಜಾಹೀರಾತನ್ನು ನೋಡಿದ ದಕ್ಷಿಣ ಕೊರಿಯಾದ ಜನರು ಕೋಪಗೊಂಡಿದ್ದಾರೆ. ಜನರ ಆಕ್ರೋಶವನ್ನು ಕಂಡು ಕೊನೆಗೆ ಸಿಯೋಲ್ ಮಿಲ್ಕ್ ಕಂಪನಿ ತನ್ನ ತಪ್ಪಿಗೆ ಕ್ಷಮೆಯಾಚಿಸಿದೆ. ಈ ಜಾಹೀರಾತಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದ್ದಂತೆ ಜನರಲ್ಲಿ ಆಕ್ರೋಶ ಹೆಚ್ಚಾಗಿದೆ. ಕಂಪನಿ ವಿರುದ್ಧ ತಿರುಗಿಬಿದ್ದಿದ್ದಾರೆ.

  ಸಿಯೋಲ್ ಅತಿದೊಡ್ಡ ಹಾಲಿನ ಉತ್ಪನ್ನದ ಕಂಪನಿ. ಸಿಯೋಲ್ ಮಿಲ್ಕ್‌ನ 37-ಸೆಕೆಂಡ್‌ಗಳ ಜಾಹೀರಾತಿನಲ್ಲಿ,  ವ್ಯಕ್ತಿಯೋರ್ವ ಕಾಡಿನಲ್ಲಿ ಶೂಟಿಂಗ್ ಮಾಡುತ್ತಿರುವುದನ್ನು ತೋರಿಸಿದ್ದಾರೆ. ನಂತರ ಆತ ಹೊಳೆಯಿಂದ ನೀರು ಕುಡಿಯುತ್ತಿರುವ ಮಹಿಳೆಯರನ್ನು ಕ್ಯಾಮೆರಾದಲ್ಲಿ ರಹಸ್ಯವಾಗಿ ಸೆರೆಹಿಡಿಯುತ್ತಾನೆ. ನಂತರ ಆತ ಮಹಿಳೆಯರ ಬಳಿಗೆ ಬರಲು ಮುಂದಾದಾಗ ಆತ ಹಾಕಿಕೊಂಡಿರುವ ಶೂ ಅಲ್ಲಿ ಬಿದ್ದಿದ್ದ ಸಣ್ಣ ಮರದ ಕೊಂಬೆಗೆ ತಾಗಿ ಶಬ್ಧವಾಗುತ್ತದೆ.  ತಕ್ಷಣ, ಮಹಿಳೆಯರು ಇದ್ದಕ್ಕಿದ್ದಂತೆ ಹಸುಗಳಾಗಿ ಬದಲಾಗುತ್ತಾರೆ.

  ಹೆಣ್ಣನ್ನು ಹಸುಗಳಿಗೆ ಹೋಲಿಸಿ ಎಡವಟ್ಟು ಮಾಡಿಕೊಂಡ ಕಂಪನಿ

  ಡೈರಿ ಕಂಪನಿಯ ಈ ವಿವಾದಾತ್ಮಕ ಜಾಹೀರಾತು ‘ಶುದ್ಧ ನೀರು, ಸಾವಯವ ಆಹಾರ, 100% ಶುದ್ಧ ಸಿಯೋಲ್ ಹಾಲು’ ಎಂಬ ಸಾರವನ್ನು ತೋರ್ಪಡಿಸಲು ಹೊರಟಿತ್ತು. ಚೊಂಗ್‌ಜಾಂಗ್‌ನ ಆಹ್ಲಾದಕರ ಪ್ರಕೃತಿಯಲ್ಲಿರುವ ಸಾವಯವ ಫಾರ್ಮ್‌ನಿಂದ ಹಸುವಿನ ಹಾಲು ಉತ್ಪಾದಿಸಲಾಗುತ್ತದೆ ಎಂಬುದನ್ನು ಜಾಹೀರಾತಿನಲ್ಲಿ ಹೇಳಲು ಕಂಪನಿ ಮುಂದಾಗಿತ್ತು. ಆದರೆ ಈ ಜಾಹೀರಾತಿನಲ್ಲಿ ಹಾಲು ಮತ್ತು ಹಸುವಿನ ಬಗ್ಗೆ ತೋರಿಸುವುದ ಜೊತೆಗೆ ಮಹಿಳೆಯರು ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಅವರೆಲ್ಲ ಹಸುಗಳಾಗಿ ಮಾರ್ಪಡುತ್ತಾರೆ. ಇದನ್ನು ಕಂಡ ದಕ್ಷಿಣ ಕೊರಿಯಾದ ಜನರು ಕೋಪಗೊಂಡಿದ್ದಾರೆ.

  ಇದನ್ನು ಓದಿ: 100ಕ್ಕೂ ಹೆಚ್ಚು ಮೃತದೇಹಗಳೊಂದಿಗೆ ಸೆಕ್ಸ್! ಕೊನೆಗೂ ಸಿಕ್ಕಿಬಿದ್ದು ಜೈಲು ಸೇರಿದ ಸೈಕೋ ರೇಪಿಸ್ಟ್  ಇದನ್ನು ಓದಿ: Huawei P50 Pocket foldable: ನೋಡೋಕೆ ಮೇಕಪ್ ಕಿಟ್ ಥರಾ ಇರೋ ಇದು ಹುಡುಗಿಯರಿಗಾಗಿ ಬರ್ತಿರೋ ಹೊಸಾ ಸ್ಮಾರ್ಟ್​ಫೋನ್!

  ಕಂಪನಿಯು ಜಾಹೀರಾತನ್ನು ತೆಗೆದುಹಾಕಿದೆ

  ಸಿಯೋಲ್ ಮಿಲ್ಕ್ ತನ್ನ ಕ್ಷಮೆಯಾಚನೆಯಲ್ಲಿ ಹೀಗೆ ಹೇಳಿದೆ- 'ನವೆಂಬರ್ 29 ರಂದು ಸಿಯೋಲ್ ಮಿಲ್ಕ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಜಾಹೀರಾತನ್ನು ಅಪ್‌ಲೋಡ್ ಮಾಡಲಾಗಿತ್ತು, ಆದರೆ ಈ ಜಾಹೀರಾತಿನಿಂದ ಜನರಿಗೆ ನೋವಾಗಿದೆ. ಹಾಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ನಾವು ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ. ಜೊತೆಗೆ ಕಂಪನಿಯ ಅಧಿಕೃತ YouTube ಚಾನಲ್‌ನಿಂದ ಜಾಹೀರಾತನ್ನು ತೆಗೆದುಹಾಕಲಾಗಿದೆ.
  Published by:Harshith AS
  First published: