International Women's Health Day ಸಮಯದಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆಯೂ ತಿಳಿದುಕೊಳ್ಳೋಣ

1987ರಲ್ಲಿ ಕೋಸ್ಟರಿಕಾದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ಸಭೆಯಲ್ಲಿ, ಲ್ಯಾಟಿನ್ ಅಮೇರಿಕನ್ ಮತ್ತು ಕೆರಿಬಿಯನ್ ಮಹಿಳಾ ಆರೋಗ್ಯ ನೆಟ್ವರ್ಕ್ (LACWHN) ಮೇ 28 ಅನ್ನು ಅಂತರರಾಷ್ಟ್ರೀಯ ಮಹಿಳಾ ಆರೋಗ್ಯ ದಿನ ಅಥವಾ ಮಹಿಳಾ ಆರೋಗ್ಯಕ್ಕಾಗಿ ಅಂತರರಾಷ್ಟ್ರೀಯ ಕ್ರಿಯೆಯ ದಿನವೆಂದು ಸ್ಮರಿಸಲು ಘೋಷಿಸಿತು.

ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ದಿನ

ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ದಿನ

  • Share this:
ಮೇ 28 ಒಂದು ವಿಶೇಷ ದಿನ (Special Day). ಈ ದಿನವನ್ನು ಪ್ರತಿ ವರ್ಷ ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ದಿನ (International Women's Health Day) ಮತ್ತು ವಿಶ್ವ ಮುಟ್ಟಿನ ನೈರ್ಮಲ್ಯ ದಿನ (World Menstrual Hygiene Day) ಎಂದು ಗುರುತಿಸಲಾಗುತ್ತದೆ. ಮಹಿಳೆಯರ ಆರೋಗ್ಯ (Women's Health) ಮತ್ತು ಮುಟ್ಟಿನ ನೈರ್ಮಲ್ಯದ ಬಗ್ಗೆ ಸರಿಯಾದ ಗಮನ ನೀಡುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಒಬ್ಬ ಮಹಿಳೆ ಮನೆಗೆಲಸ, ಮಕ್ಕಳು, ಕುಟುಂಬ ಎಂಬ ಜವಾಬ್ದಾರಿಯ (Responsibility) ನಡುವೆ ಅವಳ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದನ್ನೇ ನಿರ್ಲಕ್ಷ್ಯಿಸಿ ಬಿಡುತ್ತಾಳೆ. ಸದಾ ಬೇರೆಯವರಿಗಾಗಿ ಸಮಯ ಮೀಸಲಿಡುವ ಪ್ರತಿಯೊಬ್ಬ ಮಹಿಳೆಯೂ ತನ್ನ ಆರೊಗ್ಯಕ್ಕೆ ಮತ್ತು ಅವಳಿಗಾಗಿ ಸಮಯ ಎತ್ತಿಡುವುದು ತುಂಬಾನೇ ಮುಖ್ಯ.

ಅದರಲ್ಲೂ ಋತುಚಕ್ರದಂತಹ ಸಮಯದಲ್ಲಿ ಆಕೆ ತನಗಾಗಿ ವಿಶೇಷ ಕಾಳಜಿ ವಹಿಸುವುದು ಅತಿಮುಖ್ಯ. ಮುಟ್ಟಿನ ಸಮಯದಲ್ಲಿ ಕೇವಲ ಆಕೆ ಮಾತ್ರವಲ್ಲದೇ ಅವಳ ಪ್ರೀತಿ ಪಾತ್ರರೂ ಕೂಡ ಅವಳಿಗೆ ಸಹಾಯ ಮಾಡುವುದು ಆಕೆಗೆ ವಿಶೇಷವಾದ ಶಕ್ತಿ ನೀಡುತ್ತದೆ.

ಅಭಿವೃದ್ಧಿ ಹೊಂದಿದ ಅಥವಾ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಮಹಿಳೆ ಆರೋಗ್ಯ ಮತ್ತು ಮುಟ್ಟನ್ನು ಸಾಮಾನ್ಯವಾಗಿ ಮನೆಗಳಲ್ಲಿ ನಿರ್ಲಕ್ಷಿಸಲಾಗುತ್ತದೆ. ಆದ್ದರಿಂದ ಈ ಬಗ್ಗೆ ಸರಿಯಾದ ತಿದ್ದುಪಡಿಗಳನ್ನು ಮಾಡಲು ಇದು ಸೂಕ್ತ ಸಮಯವಾಗಿದ್ದು, ಮೊದಲು ಈ ಎರಡು ದಿನಗಳ ಪರಿಚಯ ಮಾಡಿಕೊಳ್ಳೋಣ.

ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ದಿನ
ಮಹಿಳೆಯರ ಉತ್ತಮ ಆರೋಗ್ಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಮೂಲಕ ಜನರನ್ನು ಜಾಗೃತಗೊಳಿಸಲು ವಿಶ್ವದಾದ್ಯಂತ ಈ ದಿನವನ್ನು ಗುರುತಿಸಲಾಗಿದೆ. ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ದಿನವನ್ನು ಮಹಿಳಾ ಗ್ಲೋಬಲ್ ನೆಟ್‌ವರ್ಕ್ ಫಾರ್ ರಿಪ್ರೊಡಕ್ಟಿವ್ ರೈಟ್ಸ್ (WGNRR) ನಡೆಸಿಕೊಡುತ್ತದೆ.

ಇದನ್ನೂ ಓದಿ:   Periods And Health: ಋತುಚಕ್ರದ ಸಮಯದಲ್ಲಿ ರಕ್ತಸ್ರಾವದ ಬಣ್ಣ ಬದಲಾವಣೆ ಯಾವ ಕಾಯಿಲೆಯ ಸಂಕೇತ?

1987ರಲ್ಲಿ ಕೋಸ್ಟರಿಕಾದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ಸಭೆಯಲ್ಲಿ, ಲ್ಯಾಟಿನ್ ಅಮೇರಿಕನ್ ಮತ್ತು ಕೆರಿಬಿಯನ್ ಮಹಿಳಾ ಆರೋಗ್ಯ ನೆಟ್ವರ್ಕ್ (LACWHN) ಮೇ 28 ಅನ್ನು ಅಂತರರಾಷ್ಟ್ರೀಯ ಮಹಿಳಾ ಆರೋಗ್ಯ ದಿನ ಅಥವಾ ಮಹಿಳಾ ಆರೋಗ್ಯಕ್ಕಾಗಿ ಅಂತರರಾಷ್ಟ್ರೀಯ ಕ್ರಿಯೆಯ ದಿನವೆಂದು ಸ್ಮರಿಸಲು ಘೋಷಿಸಿತು.

ವಿಶ್ವ ಮುಟ್ಟಿನ ನೈರ್ಮಲ್ಯ ದಿನ
ಈ ದಿನವು ಮುಟ್ಟಿನ ಆರೈಕೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಎದುರಿಸುವ ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತದೆ. ಮುಟ್ಟಿನ ನೈರ್ಮಲ್ಯಕ್ಕೆ ನೈರ್ಮಲ್ಯ ಉತ್ಪನ್ನಗಳು ಏಕೆ ನಿರ್ಣಾಯಕವಾಗಿವೆ ಎಂಬುದನ್ನು ಸಹ ಇದು ತೋರಿಸುತ್ತದೆ.

ತಿಂಗಳ ಮುಟ್ಟಿನಲ್ಲಿ ಸ್ವಚ್ಛತೆ ಬಹುಮುಖ್ಯ. ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಮೇ 28ರಂದು ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. ಋತುಸ್ರಾವ ಮಹಿಳೆಯರಿಗೆ ಒಂದು ಸಹಜ ಪ್ರಕ್ರಿಯೆ. ಸ್ತ್ರೀತನದ ಪ್ರತೀಕ. ಆದರೆ ತಿಂಗಳಲ್ಲಿ ನಡೆಯುವ ಈ ಮೂರ್ನಾಲ್ಕು ದಿನಗಳ ಮುಟ್ಟಿನ ಅವಧಿಯಲ್ಲಿ ದೇಹದ ಸ್ವಚ್ಛತೆಯ ಕಡೆಗೆ ಗಮನ ಹರಿಸುವುದು ತುಂಬಾ ಮುಖ್ಯ. ಈ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜರ್ಮನ್ ಮೂಲದ ಎನ್ಜಿಒ 2013ರಲ್ಲಿ ಮೊದಲ ಬಾರಿಗೆ ಮುಟ್ಟು ನೈರ್ಮಲ್ಯದ ದಿನಾಚರಣೆಯನ್ನು ಶುರು ಮಾಡಿತು. ನಂತರ 2014ರಲ್ಲಿ ಇದನ್ನು ಜಾಗತಿಕವಾಗಿ ಆಚರಿಸಲಾಯಿತು. ಅಂದಿನಿಂದ ಜನಪ್ರಿಯಗೊಂಡ ಈ ದಿನವನ್ನು ಇಂದಿನವರೆಗೂ ಆಚರಿಸಲಾಗುತ್ತಿದೆ.

ನೈರ್ಮಲ್ಯದ ಬಗ್ಗೆ ಅರಿವು
ಜಗತ್ತು ಎಷ್ಟೇ ಮುಂದುವರಿದರೂ ಈ ಮುಟ್ಟಿನ ಬಗ್ಗೆ ಒಂದಿಷ್ಟು ಮೂಢನಂಬಿಕೆ ಮತ್ತು ನಿಷೇಧಗಳಿವೆ. ಜನರಿಗಿರುವ ಆ ಮೂಢನಂಬಿಕೆಗಳನ್ನು ಹೋಗಲಾಡಿಸಿ, ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಬೇಕಿದೆ.

ಇದನ್ನೂ ಓದಿ:  Women’s Health: ಮಹಿಳೆಯರೇ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ವಿಷಯದತ್ತ ಮೊದಲು ಗಮನಹರಿಸಿ!

ಮಹಿಳೆಯರ ಆರೋಗ್ಯ ಮತ್ತು ಮುಟ್ಟಿನ ನೈರ್ಮಲ್ಯದ ಬಗ್ಗೆ ಮಾತ್ರ ಮಾತನಾಡದೆ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಇದು ಸೂಕ್ತ ಸಮಯವಾಗಿದ್ದು, ಪ್ರತಿಯೊಬ್ಬರೂ ಇದರ ಸಲುವಾಗಿ ಕೈ ಜೋಡಿಸಬೇಕು. ಉತ್ತಮ ಜಗತ್ತನ್ನು ಸೃಷ್ಟಿಸಲು ಸಾಧ್ಯವಿರುವ ಎಲ್ಲ ರೀತಿಯ ಪ್ರಮುಖ ಸಮಸ್ಯೆಗಳಿಗೆ ಪ್ರಾಮುಖ್ಯತೆಯನ್ನು ನೀಡುವ ಪ್ರತಿಜ್ಞೆಯನ್ನು ನಾವೆಲ್ಲರೂ ತೆಗೆದುಕೊಳ್ಳೋಣ.
Published by:Ashwini Prabhu
First published: