Women's Equality Day 2022: ಇಂದು ಮಹಿಳಾ ಸಮಾನತಾ ದಿನ; ಈ ದಿನದ ಇತಿಹಾಸ, ಮಹತ್ವ ತಿಳ್ಕೊಳ್ಳಿ

ಮಹಿಳಾ ಸಮಾನತೆ ದಿನವನ್ನು ಅಮೆರಿಕಾದಲ್ಲಿ ಪ್ರತೀ ವರ್ಷ ಆಗಸ್ಟ್ 26ರಂದು ಆಚರಿಸಲಾಗುತ್ತದೆ. ಸುದೀರ್ಘ ಹೋರಾಟದ ನಂತರ 1920ರಲ್ಲಿ ಅಮೆರಿಕಾದಲ್ಲಿ ಮಹಿಳೆಯರಿಗೆ ಅಧಿಕೃತ ಮತದಾನದ ಹಕ್ಕನ್ನು ನೀಡಿದ ಗುರುತಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. 

ಮಹಿಳಾ ಸಮಾನತೆಯ ದಿನ

ಮಹಿಳಾ ಸಮಾನತೆಯ ದಿನ

  • Share this:
ಮಹಿಳಾ ಸಮಾನತೆಯ ದಿನವನ್ನು (Women's Equality Day) ಅಮೆರಿಕಾದಲ್ಲಿ ಪ್ರತೀ ವರ್ಷ ಆಗಸ್ಟ್ 26 ರಂದು ಆಚರಿಸಲಾಗುತ್ತದೆ. ಸುದೀರ್ಘ ಹೋರಾಟದ ನಂತರ 1920ರಲ್ಲಿ ಅಮೆರಿಕಾದಲ್ಲಿ (America) ಮಹಿಳೆಯರಿಗೆ ಅಧಿಕೃತ ಮತದಾನದ ಹಕ್ಕನ್ನು ನೀಡಿದ ಗುರುತಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಮಹಿಳಾ ಸಮಾನತೆಯ ದಿನದ ಆಚರಣೆಯು 19 ನೇ ತಿದ್ದುಪಡಿಯ ಅಂಗೀಕಾರವನ್ನು ಸ್ಮರಿಸುವುದಲ್ಲದೆ, ಸಂಪೂರ್ಣ ಸಮಾನತೆಯ (Equality) ಕಡೆಗೆ ಮಹಿಳೆಯರ ನಿರಂತರ ಪ್ರಯತ್ನಗಳಿಗೆ ಗಮನವನ್ನು ಹರಿಸುತ್ತದೆ. ಕಚೇರಿ, ಗ್ರಂಥಾಲಯಗಳು, ಸಂಸ್ಥೆಗಳು ಮತ್ತು ಸಾರ್ವಜನಿಕ ಸೌಲಭ್ಯ (Public facility) ಕೇಂದ್ರಗಳು ಈ ದಿನದಂದು ಸಕ್ರಿಯವಾಗಿ ಪಾಲ್ಗೊಂಡು ಈ ದಿನದ ವಿಶೇಷತೆಯನ್ನು ಎತ್ತಿಹಿಡಿಯುವ ಮಹಿಳಾ ಸಮಾನತೆಯ ದಿನದ ಕಾರ್ಯಕ್ರಮಗಳು, ಪ್ರದರ್ಶನಗಳು, ವಿಡಿಯೋ ಪ್ರದರ್ಶನಗಳು ಅಥವಾ ಇತರ ಚಟುವಟಿಕೆಗಳನ್ನು ಏರ್ಪಡಿಸಿ ಪಾಲ್ಗೊಳ್ಳುತ್ತಾರೆ.

ಮಹಿಳಾ ಸಮಾನತೆಯ ದಿನದ ಇತಿಹಾಸ
ಮಹಿಳೆಯರಿಗೆ ಸಮಾನ ಮತದಾನದ ಹಕ್ಕುಗಳನ್ನು ನೀಡಲು 1920 ರಲ್ಲಿ US ಸಂವಿಧಾನಕ್ಕೆ ಹತ್ತೊಂಬತ್ತನೇ ತಿದ್ದುಪಡಿ ಎಂದು ಕರೆಯಲ್ಪಡುವ ತಿದ್ದುಪಡಿಯನ್ನು ಮಾಡಲಾಯಿತು. 1920 ರ ಮಧ್ಯಭಾಗದಲ್ಲಿ ಅಮೆರಿಕಾದಲ್ಲಿರುವ 50 ರಾಜ್ಯಗಳಲ್ಲಿ 35 ರಾಜ್ಯಗಳು ಮಹಿಳೆಯರಿಗೆ ಮತದಾನದ ಹಕ್ಕುಗಳ ಶಾಸನದ ಪರವಾಗಿ ಮತ ಚಲಾಯಿಸಿದವು. ಅದಾಗ್ಯೂ ಫೆಡರಲ್ ಸರಕಾರವು ತಿದ್ದುಪಡಿಯನ್ನು ಅಂಗೀಕರಿಸಲು ¾ ರಂತೆ 36 ಮತಗಳು ಅಗತ್ಯವಿತ್ತು.

ನಾಲ್ಕು ರಾಜ್ಯಗಳಾದ ಕನೆಕ್ಟಿಕಟ್, ವರ್ಮೊಂಟ್, ಉತ್ತರ ಕರೊಲಿನಾ ಮತ್ತು ಫ್ಲೋರಿಡಾ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಈ ನಿರ್ಣಯವನ್ನು ಪರಿಗಣಿಸಲು ನಿರಾಕರಿಸಿದ್ದವು. ಉಳಿದ ರಾಜ್ಯಗಳು ತಿದ್ದುಪಡಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದವು. ಆಗಸ್ಟ್ 18, 1920 ರಂದು ಅಂತಿಮವಾಗಿ ತಿದ್ದುಪಡಿಯನ್ನು ಅಂಗೀಕರಿಸಲು 36 ನೇ ರಾಜ್ಯವಾದ ಟೆನ್ನೆಸ್ಸೀ ಮತದ ಮೇಲೆ ಅವಲಂಬಿತವಾಗಿತ್ತು. ಆದರೆ ಮಹಿಳಾ ಸಮಾನತೆಯ ದಿನವನ್ನು ಇದಕ್ಕಿಂತ ಆರು ತಿಂಗಳ ನಂತರ ಆಗಸ್ಟ್ 26 ರಂದು ಗುರುತಿಸಲಾಗಿದೆ. ತಿದ್ದುಪಡಿ ಸಂವಿಧಾನಾತ್ಮಕವಾಗಿ ಅಂಗೀಕಾರವಾಗಿದ್ದರೂ, ನಿರ್ದಿಷ್ಟ ಸರಕಾರಿ ಅಧಿಕಾರಿಗಳು ಪ್ರಮಾಣೀಕರಿಸುವವರೆಗೆ ಅಧಿಕೃತವಲ್ಲ ಹಾಗಾಗಿ ಅಧಿಕೃತಗೊಳಿಸಿದ ಆಗಸ್ಟ್ 26 ರಂದು ಮಹಿಳಾ ಸಮಾನತೆಯ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: World's best lovers: ನಂಬಿದ್ರೆ ನಂಬಿ! ಇವರೇ ವಿಶ್ವದ ಅತ್ಯುತ್ತಮ ಪ್ರೇಮಿಗಳು!

ಈ ತಿದ್ದುಪಡಿಯನ್ನು ಅಂಗೀಕರಿಸಬೇಕಾದ ಅಧಿಕಾರಿ ಯುಎಸ್ ಸ್ಟೇಟ್ ಸೆಕ್ರೆಟರಿ ಬೈನ್‌ಬ್ರಿಡ್ಜ್ ಕಾಲ್ಬಿ. ಅತ ಆಗಸ್ಟ್ 26, 1920 ರಂದು ವಾಷಿಂಗ್ಟನ್ ಡಿಸಿಯಲ್ಲಿದ್ದ ತನ್ನ ಸ್ವಂತ ನಿವಾಸದಿಂದಲೇ ತಿದ್ದುಪಡಿಗೆ ಸಹಿ ಹಾಕಿದ ಕಾರಣ ಈ ದಿನಾಂಕದಂದು ಮಹಿಳಾ ಸಮಾನತೆಯ ದಿನವನ್ನಾಗಿ ಆಚರಿಸಲಾಗುತ್ತಿದೆ.

ಮಹಿಳಾ ಸಮಾನತೆಯ ದಿನದ ಮಹತ್ವ
ಹೆಣ್ಣು, ಗಂಡು ಎಂಬ ಭೇದವಿಲ್ಲದೆ ಎಲ್ಲರು ಒಂದೆ. ಹೆಣ್ಣು, ಗಂಡು ಇಬ್ಬರಿಗೂ ಸಮಾಜದಲ್ಲಿ ಸಮನಾವಾಗಿ ಬದಕುವ ಹಕ್ಕಿದೆ. ಆದ್ದರಿಂದ ವೇತನ ಅಸಮಾನತೆ, ಗರ್ಭಪಾತ, ಲಿಂಗ ಆಧಾರಿತ ಹಿಂಸೆ, ತಾರತಮ್ಯವನ್ನು ಹೊಗಲಾಡಿಸುವುದು.  ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿದ ಸಾಧನೆಗಳನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವುದು ಮತ್ತು ಮಹಿಳೆಯರ ಪ್ರಗತಿಗೆ ಪೂರಕವಾದ ಅವಕಾಶ ಕಲ್ಪಿಸಿಕೊಡುವುದು ಈ ದಿನದ ಉದ್ದೇಶವಾಗಿದೆ.

ಮಹಿಳಾ ಸಮಾನತೆಯ ದಿನ 2022: ಥೀಮ್
ಹಿಂದಿನ ವರ್ಷದಂತೆಯೇ ಈ ವರ್ಷ ಕೂಡ ಮಹಿಳಾ ಸಮಾನತೆಯ ಥೀಮ್ ಒಂದೇ ಆಗಿದೆ. ಕಳೆದ ವರ್ಷ ಪರಿಶ್ರಮಿ ಎಂಬ ಥೀಮ್ ಆಧರಿಸಿ ಸಾರ್ವತ್ರಿಕ ಮತದಾನದ ಮೇಲೆ ಕೇಂದ್ರೀಕೃತವಾಗಿದ್ದರೆ, ಈ ವರ್ಷ ಪರಿಶ್ರಮಿ-ಸಾಧಿಸಿಲ್ಲ ಎಂಬ ಥೀಮ್ ಆಗಿದೆ. ಪರಿಶ್ರಮಿ (ಹಾರ್ಡ್-ವನ್) ಥೀಮ್ ಸಾಕಷ್ಟು ಪರಿಶ್ರಮದ ನಂತರ ಸಾಧಿಸಿದ ಹಕ್ಕುಗಳ ಮೇಲೆ ಕೇಂದ್ರೀಕೃತವಾಗಿದ್ದರೆ ಈ ವರ್ಷದ ಥೀಮ್ ಪರಿಶ್ರಮಿ-ಸಾಧಿಸಿಲ್ಲ (ಹಾರ್ಡ್-ವನ್ ನಾಟ್ ಡನ್) ಎಂಬುದು ಲಿಂಗ ಸಮಾನತೆಯನ್ನು ಇನ್ನೂ ಸಾಧಿಸಿಲ್ಲ ಎಂಬುದನ್ನು ಉದ್ದೇಶಿಸಿದೆ.

ಇದನ್ನೂ ಓದಿ: Viral News: ಈ ದೇಶದಲ್ಲಿ ಜಾಸ್ತಿ ಮಕ್ಕಳಿದ್ರೆ ಟ್ಯಾಕ್ಸ್ ಡಿಸ್ಕೌಂಟ್​ ಕೊಡ್ತಾರಂತೆ!

ಅಮೇರಿಕಾದ ಮಹಿಳೆಯರು ಹತ್ತೊಂಬತ್ತನೇ ತಿದ್ದುಪಡಿಯ ಪ್ರಮಾಣೀಕರಣದ ವಾರ್ಷಿಕೋತ್ಸವದ ದಿನಾಂಕವನ್ನು ಆಗಸ್ಟ್ 26 ಅನ್ನು ಸಮಾನ ಹಕ್ಕುಗಳಿಗಾಗಿ ನಿರಂತರ ಹೋರಾಟದ ಸಂಕೇತವಾಗಿ ಗೊತ್ತುಪಡಿಸಿದ್ದಾರೆ. ಪ್ರತಿ ವರ್ಷದ ಆಗಸ್ಟ್ 26 ಅನ್ನು ಮಹಿಳಾ ಸಮಾನತೆಯ ದಿನವೆಂದು ಗೊತ್ತುಪಡಿಸಿ ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿದೆ. 1920 ರಲ್ಲಿ ಆ ದಿನದ ಸ್ಮರಣಾರ್ಥ, ಅಮೆರಿಕದ ಮಹಿಳೆಯರಿಗೆ ಮೊದಲ ಬಾರಿಗೆ ಮತದಾನದ ಹಕ್ಕನ್ನು ನೀಡಲಾಯಿತು ಮತ್ತು 1970 ರಲ್ಲಿ ಆ ದಿನದಂದು ಮಹಿಳಾ ಹಕ್ಕುಗಳಿಗಾಗಿ ರಾಷ್ಟ್ರವ್ಯಾಪಿ ಪ್ರದರ್ಶನ ನಡೆಯಿತು.
Published by:Ashwini Prabhu
First published: