Viral Video: ಹೆಂಡತಿಯರು ಕೊಟ್ಟ ಗಿಫ್ಟ್​ಗೆ ಗಂಡಂದಿರು ಫಿದಾ! ಸೂಪರ್ ಆಗಿತ್ತು ಸರ್ಪೈಸ್

ಸಹಜವಾಗಿಯೇ ಈ ಉಡುಗೊರೆ ಎನ್ನುವುದು ಮನಸ್ಸಿಗೆ ತುಂಬಾನೇ ಖುಷಿ ಕೊಡುವ ಒಂದು ಸಂಗತಿ ಎಂದು ಹೇಳಬಹುದು. ಕೆಲವೊಮ್ಮೆ ಕೆಲವು ಉಡುಗೊರೆಗಳು ಖುಷಿಯ ಜೊತೆಗೆ ಆಶ್ಚರ್ಯ ಪಡುವಂತೆ ಸಹ ಮಾಡುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಈ ಗಂಡಂದಿರು ತಮ್ಮ ಹೆಂಡತಿಯರಿಗಾಗಿ ಉಡುಗೊರೆ ಖರೀದಿಸಿ ಕೊಟ್ಟರೆ ಎಷ್ಟು ಖುಷಿಯಾಗುತ್ತದೆ. ಇಲ್ಲಿ ಒಂದು ವೀಡಿಯೋದಲ್ಲಿ ಗಂಡಂದಿರಿಗೆ ಅವರ ಹೆಂಡತಿಯರು ಉಡುಗೊರೆಯೊಂದನ್ನು ನೀಡಿದ್ದಾರೆ.

ಹೆಂಡ್ತಿಯರು  ಗಂಡಂದಿರಿಗೆ ನೀಡಿದ ಉಡುಗೊರೆ

ಹೆಂಡ್ತಿಯರು ಗಂಡಂದಿರಿಗೆ ನೀಡಿದ ಉಡುಗೊರೆ

  • Share this:
ಸಹಜವಾಗಿಯೇ ಈ ಉಡುಗೊರೆ (Gift) ಎನ್ನುವುದು ಮನಸ್ಸಿಗೆ ತುಂಬಾನೇ ಖುಷಿ ಕೊಡುವ ಒಂದು ಸಂಗತಿ ಎಂದು ಹೇಳಬಹುದು. ಕೆಲವೊಮ್ಮೆ ಕೆಲವು ಉಡುಗೊರೆಗಳು ಖುಷಿಯ ಜೊತೆಗೆ ಆಶ್ಚರ್ಯ ಪಡುವಂತೆ ಸಹ ಮಾಡುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಈ ಗಂಡಂದಿರು (Husband) ತಮ್ಮ ಹೆಂಡತಿಯರಿಗಾಗಿ (Wife) ಉಡುಗೊರೆ ಖರೀದಿಸಿ ಕೊಟ್ಟರೆ ಎಷ್ಟು ಖುಷಿಯಾಗುತ್ತದೆ. ಇಲ್ಲಿ ಒಂದು ವೀಡಿಯೋದಲ್ಲಿ ಗಂಡಂದಿರಿಗೆ ಅವರ ಹೆಂಡತಿಯರು ಉಡುಗೊರೆಯೊಂದನ್ನು ನೀಡಿದ್ದಾರೆ. ಈ ಉಡುಗೊರೆಯ ವಿಶೇಷತೆ ಏನೆಂದರೆ ಈ ಹೆಂಡತಿಯರು ತಮ್ಮ ತಮ್ಮ ಗಂಡಂದಿರಿಗಾಗಿ ಖರೀದಿಸಿದ ಟೀ ಶರ್ಟ್ (T-Shirt) ಒಂದೇ ರೀತಿಯದ್ದಾಗಿದೆ ಮತ್ತು ಅವರಿಗೆ ಗೊತ್ತಿರದಂತೆ ಇವುಗಳನ್ನು ಖರೀದಿಸಿ ಅವರಿಗೆ ಸರ್‌ಪ್ರೈಸ್ ನೀಡಲಾಗಿದೆ.

ಸಿಕ್ಕಾಪಟ್ಟೆ ವೈರಲ್ ಆಗಿರುವ ವೀಡಿಯೋದಲ್ಲಿ ಏನಿದೆ?
ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ವೀಡಿಯೋದಲ್ಲಿ ನಾಲ್ಕು ಜನ ಮಹಿಳೆಯರು ತಮ್ಮ ಗಂಡಂದಿರನ್ನು ಆಶ್ಚರ್ಯಗೊಳಿಸಲು ಮತ್ತು ಅವರ ಪ್ರತಿಕ್ರಿಯೆಗಳನ್ನು ಸೆರೆ ಹಿಡಿದು ವೀಡಿಯೋ ಮಾಡಲು ನಿರ್ಧರಿಸಿ ಪ್ಲ್ಯಾನ್ ಮಾಡಿ ಅವರ ಪ್ರತಿಕ್ರಿಯೆಯ ಸುಂದರವಾದ ವೀಡಿಯೋ ಮಾಡಿದ್ದಾರೆ.

ಅವರು ತಮ್ಮ ತಮ್ಮ ಗಂಡಂದಿರಿಗೆ ಅದೇ ನೀಲಿ ಮತ್ತು ಬಿಳಿ ಪಟ್ಟೆಗಳಿರುವ ಟೀ ಶರ್ಟ್ ಅನ್ನು ಖರೀದಿಸಿದರು. ಈ ವೀಡಿಯೋದಲ್ಲಿ ಆ ನಾಲ್ವರು ಗಂಡಂದಿರು ತಮ್ಮ ತಮ್ಮ ಹೆಂಡತಿಯರಿಂದ ಪಡೆದಂತಹ ಉಡುಗೊರೆಯನ್ನು ನೋಡಿ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ನೀವು ನೋಡಿದರೆ ನಿಮಗೆ ತುಂಬಾನೇ ಖುಷಿ ಎನಿಸುತ್ತದೆ.

ಒಂದೇ ಬಣ್ಣದ ಟಿ- ಶರ್ಟ್
ಈ ವೀಡಿಯೋ ಇಬ್ಬರು ದಂಪತಿಗಳು ಇನ್ನೂ ಇಬ್ಬರು ದಂಪತಿಗಳನ್ನು ಭೇಟಿಯಾಗಲು ರೆಸ್ಟೋರೆಂಟ್ ಗೆ ಹೋಗುತ್ತಿರುವ ಕಾರು ಪ್ರಯಾಣವನ್ನು ತೋರಿಸುವುದರೊಂದಿಗೆ ಶುರುವಾಗುತ್ತದೆ. ವೀಡಿಯೋದಲ್ಲಿರುವ ಎಲ್ಲಾ ನಾಲ್ವರು ಮಹಿಳೆಯರು ತುಂಬಾನೇ ಒಳ್ಳೆಯ ಸ್ನೇಹಿತರಾಗಿದ್ದಾರೆ ಮತ್ತು ತಮ್ಮ ಗಂಡಂದಿರಿಗಾಗಿ ಈ ಆಶ್ಚರ್ಯ ನೀಡುವಂತಹ ಉಡುಗೊರೆಯನ್ನು ಮೊದಲೇ ಯೋಜಿಸಿದ್ದರು.

ಇದನ್ನೂ ಓದಿ: Sologamy: ತನ್ನನ್ನು ತಾನೇ ಮದುವೆಯಾದ ಗುಜರಾತ್ ಯುವತಿ! ಇಲ್ನೋಡಿ ಫೋಟೋಸ್

ಅಲ್ಲಿ ಅವರು ಒಂದೇ ಶರ್ಟ್ ಅನ್ನು ಖರೀದಿಸುತ್ತಾರೆ ಮತ್ತು ಈ ರೆಸ್ಟೋರೆಂಟ್ ಗೆ ಭೇಟಿ ನೀಡಿದಾಗ ಅದನ್ನು ಅವರವರ ಗಂಡಂದಿರಿಗೆ ಧರಿಸುವಂತೆ ಹೇಳುತ್ತಾರೆ.

ಸುಂದರವಾದ ನೆನಪು ಮತ್ತು ಸಂತೋಷದ ಕ್ಷಣವನ್ನು ನೀಡಿದ ಸರ್ಪ್ರೈಸ್
ತಮ್ಮ ತಮ್ಮ ಮಡದಿಯ ಮಾತಿಗೆ ಒಪ್ಪಿ ಎಲ್ಲರೂ ಹೋಗಿ ಆ ಶರ್ಟ್ ಗಳನ್ನು ಧರಿಸಿಕೊಂಡು ರೆಸ್ಟೋರೆಂಟ್ ಗೆ ತಮ್ಮ ತಮ್ಮ ಹೆಂಡತಿಯರ ಜೊತೆಗೆ ಬರುತ್ತಾರೆ. ಅಲ್ಲಿಗೆ ಬಂದ ತಕ್ಷಣ ಒಬ್ಬರನ್ನೊಬ್ಬರು ಪರಸ್ಪರ ನೋಡಿಕೊಂಡು ಎಲ್ಲಾ ಪುರುಷರು ಒಂದೇ ರೀತಿಯ ಶರ್ಟ್ ಅನ್ನು ಧರಿಸಿದ್ದೇವೆ ಅಂತ ತಿಳಿದು ನಕ್ಕಿದ್ದೆ ನಕ್ಕಿದ್ದು, ಜೊತೆಗೆ ಗಂಡಂದಿರು ತುಂಬಾನೇ ಆಶ್ಚರ್ಯಚಕಿತರಾದರು. ಒಟ್ಟಿನಲ್ಲಿ ಈ ಒಂದೇ ರೀತಿಯ ಉಡುಗೊರೆಯು ಒಂದು ಸುಂದರವಾದ ನೆನಪು ಮತ್ತು ಸಂತೋಷದ ಕ್ಷಣವನ್ನು ಇವರಿಗೆ ನೀಡಿತು ಎಂದು ಹೇಳಬಹುದು.

13.4 ಲಕ್ಷಕ್ಕೂ ಹೆಚ್ಚು ಲೈಕ್ ಪಡೆದ ವಿಡಿಯೋ
ಲಿನ್ ಎಂಬ ಮಹಿಳೆ ತನ್ನ ವೈಯಕ್ತಿಕ ಬ್ಲಾಗ್ ಪುಟದಲ್ಲಿ 3,000ಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದು, ಅಲ್ಲಿ ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಸ್ನೇಹಿತ ಮತ್ತು ಸಹ ಬ್ಲಾಗರ್ ರಾಚೆಲ್ ಚಿನ್ ಅವರೊಂದಿಗೆ ಜಂಟಿಯಾಗಿ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:  Food Order: ಸ್ಪಷ್ಟವಾದ ತಮಿಳಿನಲ್ಲಿ ಫುಡ್ ಆರ್ಡರ್ ಮಾಡಿದ ಅಮೆರಿಕದ ವ್ಯಕ್ತಿ! ಮುಂದೇನಾಯಿತು ನೋಡಿ

ಅವರು ತಮ್ಮ ಪುಟದಲ್ಲಿ 19,500ಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಈ ವೀಡಿಯೋ ತುಂಬಾನೇ ವೈರಲ್ ಆಗಿದೆ, "ನಾವು ನಮ್ಮ ಗಂಡಂದಿರಿಗೆ ತಿಳಿಯದಂತೆ ಹೊಂದಿಕೆಯಾಗುವ ಟೀ ಶರ್ಟ್ ಗಳನ್ನು ಖರೀದಿಸಿದ್ದೇವೆ" ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.










View this post on Instagram






A post shared by Lynn (@eelynnlai)




ಮೇ 29 ರಂದು ಪೋಸ್ಟ್ ಮಾಡಿದ ನಂತರ, ಈ ವೀಡಿಯೋಗೆ 13.4 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಈ ವೀಡಿಯೋಗೆ ಪ್ರತಿಕ್ರಿಯೆಯಾಗಿ ಜನರು ವಿವಿಧ ಕಾಮೆಂಟ್ ಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ವೀಡಿಯೋ ನೋಡಿದ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು "ವಿವಾಹಿತ ಹುಡುಗಿಯರ ತಂಡ" ಎಂದು ಬರೆದಿದ್ದಾರೆ. "ನೋಡಲು ತುಂಬಾನೇ ಖುಷಿ ಕೊಡುವಂತಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: