Chips and Sandwich: 23 ವರ್ಷದಿಂದ ಚಿಪ್ಸ್ ಸ್ಯಾಂಡ್‍ವಿಚ್ ಬಿಟ್ಟು ಬೇರೇನೂ ತಿಂದಿಲ್ಲ ಈಕೆ! ಹೇಗಿದ್ದಾಳೆ ನೋಡಿ

ಯುಕೆನಲ್ಲಿ 25 ವರ್ಷದ ಯುವತಿಯೊಬ್ಬಳು, ಎರಡು ವರ್ಷದ ಪುಟಾಣಿಯಾಗಿದ್ದ ಕಾಲದಿಂದಲೂ, ಕೇವಲ ಚೀಸ್ ಮತ್ತು ಈರುಳ್ಳಿ ಚಿಪ್ಸ್, ಸ್ಯಾಂಡ್‍ವಿಚ್ ತಿಂದುಕೊಂಡೇ ಬದುಕಿದ್ದಳಂತೆ. ಇತ್ತೀಚೆಗೆ ಹಿಪ್ನೋಥೆರಪಿಗೆ ಒಳಗಾದ ಬಳಿಕ, ಆಕೆ ಕೊನೆಗೂ ನಮ್ಮ ನಿಮ್ಮೆಲ್ಲರಂತೆ ಸರಿಯಾದ ಊಟವನ್ನು ಸೇವಿಸಿದ್ದಾಳೆ.

23 ವರ್ಷ ಕೇವಲ ಚಿಪ್ಸ್ ಸ್ಯಾಂಡ್‍ವಿಚ್ ತಿಂದು ಬದುಕುತ್ತಿರುವ ಯುವತಿ

23 ವರ್ಷ ಕೇವಲ ಚಿಪ್ಸ್ ಸ್ಯಾಂಡ್‍ವಿಚ್ ತಿಂದು ಬದುಕುತ್ತಿರುವ ಯುವತಿ

  • Share this:
ನಿತ್ಯವೂ ಒಂದೇ ರೀತಿಯ ಆಹಾರವನ್ನು (Food) ಸೇವಿಸುವುದು ಬೋರು (Bore) ಎನ್ನದೇ ಇರುವವರು ಯಾರೂ ಇಲ್ಲ. ದಿನವೂ (Daily) ಅಲ್ಲದಿದ್ದರೂ ಆಗಾಗ ತರಾವರಿ ಖಾದ್ಯಗಳನ್ನು (Dish) ಸೇವಿಸಿದರೆ ನಾಲಗೆಗೂ (tongue) ರುಚಿ (Tasty), ಮನಸ್ಸಿಗೂ (Mind) ಖುಷಿ (Happy). ಆದರೆ, ಯುಕೆನಲ್ಲಿ 25 ವರ್ಷದ ಯುವತಿಯೊಬ್ಬಳು (Women), ಎರಡು ವರ್ಷದ ಪುಟಾಣಿಯಾಗಿದ್ದ ಕಾಲದಿಂದಲೂ, ಕೇವಲ ಚೀಸ್ ಮತ್ತು ಈರುಳ್ಳಿ ಚಿಪ್ಸ್ (Cheese and onion chips), ಸ್ಯಾಂಡ್‍ವಿಚ್ (Sandwich) ತಿಂದುಕೊಂಡೇ ಬದುಕಿದ್ದಳಂತೆ. ಇತ್ತೀಚೆಗೆ ಹಿಪ್ನೋಥೆರಪಿಗೆ (Hypnotherapy) ಒಳಗಾದ ಬಳಿಕ, ಆಕೆ ಕೊನೆಗೂ ನಮ್ಮ ನಿಮ್ಮೆಲ್ಲರಂತೆ ಸರಿಯಾದ ಊಟವನ್ನು (Meals) ಸೇವಿಸಿದ್ದಾಳೆ.

ನಿತ್ಯವೂ ಎರಡು ಪ್ಯಾಕೆಟ್ ಚಿಪ್ಸ್ ಗಳನ್ನಷ್ಟೆ ಸೇವಿಸಿ ಬದುಕುತ್ತಿದ್ದ ಮಹಿಳೆ
ಯುನೈಟೆಡ್ ಕಿಂಗ್‍ಡಮ್‍ನ ಜೋಯಿ ಸ್ಯಾಂಡ್ಲರ್ ಎಂಬ ಯುವತಿ, ಕಳೆದ 23 ವರ್ಷಗಳಿಂದ ನಿತ್ಯವೂ ತನ್ನ ನೆಚ್ಚಿನ ಎರಡು ಪ್ಯಾಕೆಟ್ ಚಿಪ್ಸ್ ಗಳನ್ನಷ್ಟೆ ಸೇವಿಸಿ ಬದುಕಿದ್ದಳಂತೆ. ಯಾವುದೇ ಆಹಾರ ತಿಂದರೂ, ಅದು ಆಕೆಗೆ ದೈಹಿಕವಾಗಿ ಆನಾರೋಗ್ಯದ ಭಾವನೆ ಮೂಡಿಸುತ್ತಿತ್ತಂತೆ, ಆ ಕಾರಣಕ್ಕಾಗಿ ಜಾಯ್ ಗರಿಗರಿ ಚಿಪ್ಸ್ ಸ್ಯಾಂಡ್‍ವಿಚ್‍ಗಳ ಸೇವನೆಗೆ ಅಂಟಿಕೊಂಡಳು.

ಮಾಧ್ಯಮ ಒಂದರ ವರದಿಯ ಪ್ರಕಾರ, ಆಕೆ ಅಂಬೆಗಾಲಿಡುವ ಮಗುವಾಗಿದ್ದಾಗಲೇ, ಬ್ರೆಡ್‍ನ ಜೊತೆ ವಾಕರ್ಸ್ ಚಿಪ್ಸ್ ಗಳನ್ನು ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದಳು. ಅವಳ ಪೋಷಕರು ಅವಳಿಗೆ ಬೇರೆ ಆಹಾರಗಳನ್ನು ತಿನ್ನಿಸಲು ಸರ್ವ ಪ್ರಯತ್ನಗಳನ್ನು ಮಾಡಿದರೂ, ಜಾಯ್ ಬೇರೆ ಆಹಾರಗಳನ್ನು ತಿನ್ನಲು ಬಾಯಿ ತೆಗೆಯದೆ, ಒಲ್ಲೆ ಎಂದು ಮುಖ ಸಿಂಡರಿಸುತ್ತಿದ್ದಳಂತೆ.

ತಿನ್ನಲು ಇಷ್ಟಪಡುತ್ತಿದ್ದ ಏಕೈಕ ತಿನಿಸು
“ಅಮ್ಮ ನನಗೆ ತಿನ್ನಿಸಲು ಸಾಧ್ಯವಾಗುತ್ತಿದ್ದ ಏಕೈಕ ತಿನಿಸು ಎಂದರೆ ಚಿಪ್ಸ್ ಗಳು. ಅವು ಮೃದು ಆಗುವ ವರೆಗೆ ನಾನು ಅವುಗಳನ್ನು ಚೀಪುತ್ತಿದ್ದೆ. ನಾನು ಚಿಕ್ಕವಳಿದ್ದಾಗ ಶಾಲೆಗೆ ಲಂಚ್ ಬಾಕ್ಸ್ ನಲ್ಲಿ ಚಿಪ್ಸ್ ಸ್ಯಾಂಡ್‍ವಿಚ್‍ಗಳನ್ನು ತೆಗೆದುಕೊಂಡು ಹೋಗುತ್ತಿದ್ದದ್ದು ನೆನಪಿದೆ. ನಾನು ತಿನ್ನಲು ಇಷ್ಟಪಡುತ್ತಿದ್ದ ಏಕೈಕ ತಿನಿಸು ಅದು” ಎಂದು ಜೋಯಿ ಹೇಳಿರುವುದಾಗಿ ಮಾಧ್ಯಮಗಳು ತಿಳಿಸಿದೆ.

ಕ್ರಿಸ್‍ಮಸ್ ಬಂತೆಂದರೆ ತುಂಬಾ ಕಷ್ಟಕರವಾದ ಸಮಯ
ತಾನು, ಬೆಳಗ್ಗಿನ ಉಪಹಾರಕ್ಕೆ ಒಣ ಸೀರಿಯಲ್‍ಗಳನ್ನು ತಿನ್ನುತ್ತಿದ್ದೆ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಒಂದೊಂದು ಚಿಪ್ಸ್ ಸ್ಯಾಂಡ್‍ವಿಚ್ ತಿನ್ನುತ್ತಿದ್ದೆ. ಅಪರೂಪಕ್ಕೆ ತನಿಷ್ಟದ ಚೀಸ್ ಮತ್ತು ಈರುಳ್ಳಿ ಚಿಪ್ಸ್ ಗಳ ಬದಲಿಗೆ ಬೇರೆ ಫ್ಲೇವರ್‍ಗಳನ್ನು ಪ್ರಯತ್ನಿಸುತ್ತಿದ್ದೆ ಎಂದಿದ್ದಾರೆ ಜೋಯಿ. ಚಿಪ್ಸ್ ಗಳ ಆಕೃತಿಯ ಬಗ್ಗೆ ಆಕೆ ಯಾವತ್ತೂ ತಲೆ ಕೆಡಿಸಿಕೊಂಡಿಲ್ಲವಂತೆ.

ಇದನ್ನೂ ಓದಿ: Viral Story: ಫೋರ್ಕ್ ಬಳಸುವಂತಿಲ್ಲ, ತಟ್ಟೆಯಲ್ಲಿ ಆಹಾರ ಖಾಲಿ ಮಾಡುವಂತಿಲ್ಲ! ವಿವಿಧ ದೇಶಗಳ 8 ವಿಚಿತ್ರ ನಿಯಮಗಳು ಇಲ್ಲಿವೆ

ತನ್ನಿಷ್ಟದ ಚಿಪ್ಸ್ ಸ್ಯಾಂಡ್‍ವಿಚ್ ತಿನ್ನುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಜೋಯಿಗೆ, ಕ್ರಿಸ್‍ಮಸ್ ಬಂತೆಂದರೆ ತುಂಬಾ ಕಷ್ಟವಾಗುತ್ತಿತ್ತಂತೆ. ಕಾರಣ, ಆಕೆಗೆ ದೇವರ ಅರ್ಪಣೆಗೆ ಇಟ್ಟ ಆಹಾರಗಳನ್ನು ತಿನ್ನಲು ಯಾವತ್ತೂ ಇಷ್ಟವಾಗುತ್ತಿರಲಿಲ್ಲ. ಆಕೆ ಗ್ರೇವಿಯಿಲ್ಲದ ಯಾಕ್‍ಶೈರ್ ಪುಡ್ಡಿಂಗ್ ಅನ್ನು ಮಾತ್ರ ತಿನ್ನುತ್ತಿದ್ದಳು.

ಮಲ್ಟಿಪಲ್ ಸ್ಕ್ಲಿರೋಸಿಸ್‍
ಇತ್ತೀಚೆಗೆ ಜೋಯಿಗೆ, ತಾನು ಮಲ್ಟಿಪಲ್ ಸ್ಕ್ಲಿರೋಸಿಸ್‍ಗೆ ಒಳಗಾಗಿರುವುದು ತಿಳಿದು ಬಂತು. ಮೆದುಳು ಮತ್ತು ನರಗಳ ಮೇಲೆ ಪರಿಣಾಮ ಬೀರುವ, ಜೀವನ ಪರ್ಯಂತ ಇರುವು ಸ್ಥಿತಿ ಅದು. ಆಗ ಜೋಯಿ ತನ್ನ ಆರೋಗ್ಯವನ್ನು ಸುಧಾರಿಸಬೇಕು ಎಂಬ ನಿರ್ಧಾರಕ್ಕೆ ಬಂದಳು. ಈ ಹಿಂದೆ ಒಂದೇ ಆಹಾರ ತಿನ್ನುವ ಚಟವುಳ್ಳ ಕೆಲವರನ್ನು ಗುಣ ಪಡಿಸಿದ್ದ, ಹಿಪ್ನೋಥೆರಪಿಸ್ಟ್ ಡೇವಿಡ್ ಕಿಲ್‍ಮುರ್ರೆ ಅವರನ್ನು ಸಂಪರ್ಕಿಸಿದಳು ಜೋಯಿ. ಅವರ ಬಳಿ ಹಿಪ್ನೋಥೆರಪಿಗೆ ಒಳಗಾದ ಬಳಿಕ ಆಕೆ ಜೀವನದಲ್ಲಿ ಮೊದಲ ಬಾರಿಗೆ ಹಣ್ಣು ತರಕಾರಿಗಳು ಮತ್ತು ಇತರ ಆಹಾರಗಳ ರುಚಿಯನ್ನು ಸವಿದಿದ್ದಾಳೆ.

ಇದನ್ನೂ ಓದಿ: Golgappa: ಗೋಲ್​ಗಪ್ಪ ಇಂದು ನಿನ್ನೆಯದಲ್ಲ! ದ್ರೌಪದಿ ಪಾಂಡವರಿಗೆ ಮಾಡಿಕೊಟ್ಟ ಸ್ಪೆಷಲ್​ ಫುಡ್​ ಇದೇನಾ?

ಆಕೆಗೆ ಹಣ್ಣುಗಳ ರುಚಿ ತುಂಬಾ ಇಷ್ಟವಾಗಿದ್ದು, ಮುಂದಿನ ದಿನಗಳಲ್ಲಿ ಕರಿ ಮತ್ತು ಇತರ ಪ್ರಕಾರಗಳ ವಿವಿಧ ಆಹಾರಗಳನ್ನು ಪ್ರಯತ್ನಿಸುವ ಆಲೋಚನೆಯಲ್ಲಿದ್ದಾಳೆ. ಮುಂದಿನ ಮಾರ್ಚ್‍ನಲ್ಲಿ ಮದುವೆಯಾಗಲಿರುವ ಆಕೆ, ತನ್ನ ಮದುವೆಯಲ್ಲಿ ಸರಿಯಾದ ಊಟವನ್ನು ಸೇವಿಸುವ ಮಟ್ಟಿಗೆ ಗುಣವಾಗುವ ನಿರೀಕ್ಷೆಯಲ್ಲಿದ್ದಾರೆ.

ನಿಯೋಫೋಬಿಯಾ ಆಹಾರ ಸೇವನೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ
ಜೋಯಿಗೆ ನಿಯೋಫೋಬಿಯಾ ಎಂಬ ಆಹಾರ ಸೇವನೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಇದೆ. ಈ ಫೋಬಿಯಾಗೆ ಒಳಗಾದವರು ಬೆರಳೆಣಿಕೆಯಷ್ಟು ಸರಳ ಬ್ರಾಂಡ್‍ಗಳ ಸೇವನೆಗೆ ಸೀಮಿತವಾಗಿರುತ್ತಾರೆ. ನಿತ್ಯವೂ ಅದನ್ನೇ ತಿನ್ನುತ್ತಾರೆ, ಈ ಫೋಬಿಯಾಗೆ ಒಳಗಾದವರು, ಹೊಸದೇನನ್ನೂ ತಿನ್ನದೇ ವರ್ಷಗಳ ಕಾಲ ಬದುಕಬಲ್ಲರು ಎಂದು ಡೇವಿಡ್ ಕಿಲ್ಮುರ್ರೆ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದರಲ್ಲಿ ತಿಳಿಸಿದ್ದಾರೆ.
Published by:Ashwini Prabhu
First published: