ಎಲ್ಲವೂ ಆನ್‌ಲೈನ್ (Online) ಆಗಿರುವ ಇಂದಿನ ವಾತಾವರಣದಲ್ಲಿ ಕೈಯಲ್ಲಿ ಸ್ಮಾರ್ಟ್‌ಫೋನ್ (Smart Phone) ಇರುವ ಪ್ರತಿಯೊಬ್ಬರೂ ಆನ್‌ಲೈನ್‌ನಲ್ಲಿಯೇ ಹಣದ ವಹಿವಾಟು ನಡೆಸುತ್ತಿದ್ದಾರೆ. ಹಾಗೆ ಮಾಡುವಾಗ, ಕೆಲವೊಮ್ಮೆ ನಾವು ಕಳುಹಿಸಬೇಕಾದ ಬ್ಯಾಂಕ್ ಖಾತೆಗೆ (Bank Account) ಬದಲಾಗಿ ಬೇರೆ ಬ್ಯಾಂಕ್ ಖಾತೆಗೆ ಹಣವನ್ನು ಕಳುಹಿಸಿದರೆ ಏನಾಗುತ್ತದೆ? ಎಂಬುದಕ್ಕೆ ಇಲ್ಲಿ ಒಂದು ಘಟನೆ ನಡೆದಿದೆ. ಈ ಘಟನೆಯನ್ನು ನೀವು ಕೇಳಿದ ನಂತರ ಆನ್‌ಲೈನ್‌ನಲ್ಲಿ ಯಾವುದೇ ಹಣದ ವಹಿವಾಟು (Money transactions) ನಡೆಸಬೇಕೆಂದರೂ ನಿಮಗೆ ಈ ಘಟನೆ ನೆನಪಾಗಿ ಪ್ರತಿ ಹಂತದಲ್ಲೂ ಎಚ್ಚರ ವಹಿಸುತ್ತೀರಿ. ಆದರೆ ಆ ಘಟನೆ ಯಾವುದು? ಎಲ್ಲಿ ನಡೆಯಿತು? ಎಂಬೆಲ್ಲ ಮಾಹಿತಿಯನ್ನು ನಾವಿಂದು ಈ ಲೇಖನದಲ್ಲಿ ನಿಮಗೆ ತಿಳಿಸಿ ಕೊಡುತ್ತಿದ್ದೇವೆ.
ತಾಯಿಯ ಬದಲು ಅಪರಿಚಿತರಿಗೆ ಹಣ ವರ್ಗಾಹಿಸಿದ ಮಹಿಳೆ
ನಮ್ಮ ದಿನನಿತ್ಯದ ಜೀವನದ ಹಣದ ವಹಿವಾಟನ್ನು ಆನ್‌ಲೈನ್‌ನ ವಿವಿಧ ರೂಪಗಳು ಮತ್ತಷ್ಟು ಸುಲಭಗೊಳಿಸಿವೆ. ಆದರೆ ಅಷ್ಟೇ ಹುಷಾರಾಗಿರುವಂತೆ ಪಾಠವನ್ನು ಕೆಲ ಸಲ ಹೇಳಿಕೊಡುತ್ತವೆ. ಮಲೇಷಿಯಾದ ಫಹಾದಾ ಬಿಸ್ತಾರಿ ಎಂಬ ಮಹಿಳೆಯು ಆಕಸ್ಮಿಕವಾಗಿ ತನ್ನ ಮೊದಲ ಸಂಬಳವನ್ನು ತನ್ನ ತಾಯಿಯ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ ಬದಲಿಗೆ ಯಾರಿಗೋ ಅಪರಿಚಿತರಿಗೆ ವರ್ಗಾಯಿಸಿದ್ದಾಳೆ. ಇದರಿಂದ ಎಷ್ಟೆಲ್ಲ ಸಮಸ್ಯೆ ಉಂಟಾಯಿತು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ.
ಈ ಸಮಸ್ಯೆ ಬಗ್ಗೆ ಅವಳು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾಳೆ. ತನ್ನ ಬ್ಯಾಂಕ್ ಖಾತೆಯಿಂದ ಅಮ್ಮನಿಗೆ ವರ್ಗಾಯಿಸುವ ಹಣವು ಹೇಗೆ ಬೇರೆಯವರ ಬ್ಯಾಂಕ್ ಖಾತೆಗೆ ವರ್ಗವಾಯಿತು ಎಂಬುದನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಅವರಿಗೆ ಎಷ್ಟೆಲ್ಲ ಸಮಸ್ಯೆ ಆಯಿತು ಎಂಬುದನ್ನು ಸಹ ಹೇಳಿಕೊಂಡಿದ್ದಾರೆ.
ಟಿಕ್‌ಟಾಕ್ ವಿಡಿಯೋದಲ್ಲಿ ಘಟನೆಯ ಬಗ್ಗೆ ವಿವರಿಸಿದ ಫಹಾದಾ ಬಿಸ್ತಾರಿ
ಆ ಟಿಕ್‌ಟಾಕ್ ವಿಡಿಯೋದಲ್ಲಿ "ಇಂದು ನನಗೆ ಮೊದಲ ತಿಂಗಳದ ಸಂಬಳ ಬಂದಿದೆ. ಆದರೆ ನಾನು ಕೆಲವೇ ಕೆಲವು ದಿನಗಳು ಮಾತ್ರ ಕೆಲಸ ಮಾಡಿರುವುದರಿಂದ, ನನಗೆ ಸಂಬಳವೂ ಕಡಿಮೆ ಬಂದಿದೆ. ಈ ಸಂಬಳದ ಹಣವನ್ನು ನಾನು ನನ್ನ ತಾಯಿಗೆ ವರ್ಗಾಯಿಸಬೇಕೆಂದು ಹಣವನ್ನು ವರ್ಗಾಯಿಸುವಾಗ ಖಾತೆಯ ವಿವರಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸದೇ, ಉತ್ಸಾಹದಿಂದ ಹಾಗೆಯೇ ಹಣವನ್ನು ವರ್ಗಾಯಿಸಿದೆ.
ಇದನ್ನೂ ಓದಿ: Viral Video: ನ್ಯೂಸ್ ಓದುವ ವೇಳೆ ಆ್ಯಂಕರ್ ಬಾಯಿಯೊಳಕ್ಕೆ ಹೋದ ನೊಣ! ನಗು ತರಿಸುತ್ತೆ ಈ ವಿಡಿಯೋ
ಸ್ವಲ್ಪ ಸಮಯದ ನಂತರ ನನ್ನ ತಾಯಿ ಕರೆ ಮಾಡಿ ನನಗೆ ಇನ್ನು ಯಾವ ಹಣವೂ ಬಂದಿಲ್ಲ ಎಂದಾಗ ಮತ್ತೊಮ್ಮೆ ಖಾತೆ ವಿವರ ನೋಡುವಾಗ ನಾನು ತಪ್ಪಾಗಿ ಬೇರೆಯವರ ಖಾತೆಗೆ ಹಣವನ್ನು ವರ್ಗಾಯಿಸಿದ್ದೇನೆ ಎಂದು ನಾನು ಮಾಡಿದ ತಪ್ಪಿನ ಅರಿವು ಆಗ ನನಗೆ ಉಂಟಾಗಿದೆ” ಎಂದು ಫಹಾದಾ ಹೇಳಿದರು. “ನಾನು ನನ್ನ ಮೊದಲ ಸಂಬಳ ಬಂದಿರುವುದಕ್ಕೆ ಬಹಳ ಖುಷಿಯಿಂದ ಇದ್ದೆ. ಅದರ ಉತ್ಸುಕದಲ್ಲಿ ನಾನು ಹಣದ ವರ್ಗಾವಣೆಯನ್ನು ಖಚಿತ ಪಡಿಸುವ ಮೊದಲು ಹಣವನ್ನು ಯಾರಿಗೆ ಕಳುಹಿಸುತ್ತಿದ್ದೆದ್ದೇನೆ ಎಂಬುದನ್ನು ಪರಿಶೀಲಿಸಲಿಲ್ಲ” ಎಂದು ಫಹಾದಾ ಹೇಳಿದರು.
“ಇದರ ಜೊತೆಗೆ ನನ್ನ ತಾಯಿಯು ಇನ್ನು ಯಾವ ಹಣವೂ ನನ್ನ ಬ್ಯಾಂಕ್ ಖಾತೆಗೆ ಬಂದಿಲ್ಲ ಎಂದಾಗ ಅದರ ರಸೀದಿಯನ್ನು ತನ್ನ ತಾಯಿಗೆ ಕಳುಹಿಸಿದಾಗ, ತನ್ನ ಮೊದಲ ಸಂಬಳವನ್ನು ಯಾರೋ ಗೊತ್ತಿಲ್ಲದ ಅಪರಿಚಿತರಿಗೆ ವರ್ಗಾಯಿಸಿದ್ದೇನೆ ಎಂದು ತಿಳಿಯಿತು” ಎಂದು ಫಹಾದಾ ಹೇಳಿದರು.
ಹಣ ಪಡೆದ ಅಪರಿಚಿತ ವ್ಯಕ್ತಿ ಏನಂದ್ರು
"ನನ್ನ ತಾಯಿಯು ನನಗೆ ಆ ಅಪರಿಚಿತ ವ್ಯಕ್ತಿಗೆ ಪೋನ್ ಮಾಡಿ ಈ ರೀತಿ ತಪ್ಪಾಗಿ ಹಣ ವರ್ಗಾವಣೆಯಾಗಿದೆ. ಮತ್ತೆ ನಮಗೆ ಮರುಪಾವತಿ ಮಾಡಿ ಎಂದು ಕೇಳಿಕೋ ಎಂದು ಹೇಳಿದರು. ಅದಕ್ಕೆ ನಾನು ಆ ಪೋನ್ ನಂಬರಿಗೆ ಕಾಲ್ ಮಾಡಿದೆ. ಸಂದೇಶ ಕಳುಹಿಸಿದೆ ಮತ್ತು ವಾಟ್ಸಾಪ್ ಮಾಡಿದೆ. ಕೊನೆಗೂ ಅವರು ಪ್ರತಿಕ್ರಿಯೆ ನೀಡಿ ನೀವು ನಮಗೆ ದೇಣಿಗೆ ನೀಡಿದ್ದೀರಿ ಎಂದುಕೊಳ್ಳಿ ಎಂದರು.
ಇದನ್ನೂ ಓದಿ: WhatsApp: ವಾಟ್ಸ್ಆ್ಯಪ್ ನಿಮಗಾಗಿ ತರುತ್ತಿದೆ ಈ ಹೊಸ ಫೀಚರ್!
ಆಗ ನಾನು ನಾನು ದೇಣಿಗೆ ಕೊಡುವಷ್ಟು ಹಣ ಸಂಪಾದನೆ ಮಾಡಿಲ್ಲ ಮತ್ತು ನಾನು ದೇಣಿಗೆ ನೀಡಲು ಸಹ ಇಷ್ಟಪಡುವುದಿಲ್ಲ. ನನ್ನ ವೇತನ ತುಂಬಾ ಕಡಿಮೆ ಇದೆ. ಅದನ್ನು ನನ್ನ ತಾಯಿಗೆ ನೀಡಲು ನಾನು ಬಯಸುತ್ತೇನೆ . ದಯವಿಟ್ಟು ನನ್ನ ಹಣವನ್ನು ನನಗೆ ವಾಪಸ್ಸು ಮಾಡಿ ಎಂದು ಕೇಳಿಕೊಂಡೆ. ಈ ಘಟನೆ ನನಗೆ ಜೀವನ ಪಾಠವನ್ನು ಕಲಿಸಿಕೊಟ್ಟಿದೆ. ಆದರೆ ಮರುದಿನ ಅವರು ನಮಗೆ ನಮ್ಮ ಹಣವನ್ನು ಮರು ವರ್ಗಾಯಿಸಿದರು” ಎಂದು ಫಹಾದಾ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ