ಇತ್ತೀಚಿಗಿನ ಕಾಲದಲ್ಲಿ ತಂತ್ರಜ್ಞಾನ (Technology) ಯಾವ ರೀತಿಯಾಗಿ ಮುಂದೆವರೆದಿದ್ಯೋ ಅದಕ್ಕೆ ತಕ್ಕಂತೆ ಮಾನವನು ಕೂಡ ಬೆಳೆದಿದ್ದಾನೆ. ಅದರ ಜೊತೆಗೆ ಯಾವುದೇ ರೀತಿಯ ರೋಗಗಳು ಇದ್ದರೂ ಕೂಡ ಆಪರೇಷನ್ ಮಾಡದೇ ಗುಣ ಪಡಿಸುವಷ್ಟರ ಮಟ್ಟಿಗೆ ಕಾಲ ಮುಂದುವರೆದಿದೆ. ಉದಾಹರಣೆಗೆ, ಲೇಝರ್ ಲೈಂಟ್ ಟ್ರೀಟ್ಮೆಂಟ್. ಹೌದು, ಚರ್ಮಕ್ಕೆ ಒಂದು ಚೂರು ಏನೂ ಆಗದೇ ಇರುವ ಹಾಗೆ ಲೇಝರ್ ಮೂಲಕವೇ ಆಪರೇಷನ್ ಮಾಡಿದ ಅದೆಷ್ಟೋ ಸಕ್ಸಸ್ ಉದಾಹರಣೆಗಳಿವೆ. ಜೊತೆಗೆ ಮಾತ್ರೆಗಳು ಕೂಡ. ಆದರೆ, ವೈದ್ಯರ (Docter) ಸಲಹೆಯ ಮೇರೆಗೆ ಮಾತ್ರೆಗಳನ್ನು ತೆಗೆದುಕೊಳ್ಳಬೇಕೇ ಹೊರತು, ನಾವಾಗಿಯೇ ಡಿಸಿಷನ್ಗಳನ್ನು (Deciosion) ತೆಗೆದುಕೊಳ್ಳಬಾರದು. ಆದ್ರೂ ಕೂಡ ಇಲ್ಲೊಂದು ಸೈಡ್ ಎಫೆಕ್ಟ್ (Side Effects) ಆಗಿದೆ. ಅಬ್ಬಾ! ಈ ಸುದ್ದಿ ಕೇಳಿದ್ರೆ ನೀವು ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಬಹುದು.
ಗರ್ಭನಿರೋಧಕ ಮಾತ್ರೆಗಳ ಸೇವನೆಯನ್ನು ನೀವು ಯಾವಾಗ ಬೇಕಾದರೂ ಮಾಡಬಹುದು. ಆದರೆ ನೀವು ಮಾತ್ರೆಗಳನ್ನು ಶೀಘ್ರವಾಗಿ ತೆಗೆದುಕೊಂಡಂತೆ ನೀವು ಗರ್ಭಧಾರಣೆಯಿಂದ ಸಂರಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ. ಗರ್ಭನಿರೋಧಕ ಮಾತ್ರೆಗಳು ಅನೇಕ ಅಡ್ಡ ಪರಿಣಾಮಗಳನ್ನು ಬೀರುತ್ತವೆ ಎಂದು ಹೇಳಲಾಗುತ್ತದೆ. ತಜ್ಞರ ಮಾರ್ಗದರ್ಶನದಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ.
ವೈರಲ್ ಆದ ಸುದ್ದಿ ಏನು?
30 ವರ್ಷದ ಮಹಿಳೆಯೊಬ್ಬರು ಇತ್ತೀಚೆಗೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರಿಂದ ತನ್ನ ಹಾರ್ಮೋನುಗಳು ಬದಲಾಗಿದೆ ಮತ್ತು ಲೆಸ್ಬಿಯನ್ ಆಗಿದ್ದಾಳೆ ಎಂದು ಹೇಳಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ತನ್ನ ಬಗ್ಗೆ ಹೇಳಿಕೊಂಡಿದ್ದಾರೆ. ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸುವುದನ್ನು ನಿಲ್ಲಿಸಿದ ನಂತರ ನಾನು ಲೆಸ್ಬಿಯನ್ ಆಗಿದ್ದೇನೆ ಎಂದು ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.
News.com.au ಪ್ರಕಾರ, ಮಹಿಳೆ ಟೆಸ್ಸಾ ಬೋನಾ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ವಾಸಿಸುತ್ತಿದ್ದಾರೆ. ಅವಳು ಹಿಂದೆ ಪುರುಷರೊಂದಿಗೆ ಮಾತ್ರ ಡೇಟಿಂಗ್ ಮಾಡುತ್ತಾ ಇದ್ದಳು. ಆದರೆ ಈಗ ಆಕೆ ಲೆಸ್ಬಿಯನ್ ಆಗಿದ್ದಾರೆ.
ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ ನಂತರ 3 ವಾರಗಳಲ್ಲಿ ಬದಲಾವಣೆಯನ್ನು ಕಂಡಿದೆ ಎಂದು ಅವರು ಹೇಳುತ್ತಾರೆ. ತಾನು ಈ ಹಿಂದೆ ಸಲಿಂಗಕಾಮಿ ಪುರುಷರತ್ತ ಆಕರ್ಷಿತಳಾಗಿರಲಿಲ್ಲ ಮತ್ತು ಪುರುಷರೊಂದಿಗೆ ಮಾತ್ರ ಡೇಟಿಂಗ್ ಮಾಡುತ್ತಿದ್ದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಹೇಗೆ ಆರಂಭವಾಯ್ತು ಈ ಬದಲಾವಣೆ?
ಆಕೆ ತನ್ನ ಋತುಚಕ್ರವನ್ನು ನಿಯಂತ್ರಿಸಲು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲಾರಂಭಿಸಿದ್ದರು. ಸುಮಾರು 15 ವರ್ಷಗಳಿಂದ ಈ ಮಾತ್ರೆಗಳನ್ನು ಸೇವಿಸುತ್ತಿದ್ದರು. ಕಳೆದ ವರ್ಷ ತನ್ನ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಆಗಿತ್ತು. ಅಂದಿನಿಂದ, ಅವರು ಪ್ರತಿದಿನ ಜನನ ನಿಯಂತ್ರಣ ಮಾತ್ರೆಗಳನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದರು. ಕೆಲವೇ ದಿನಗಳಲ್ಲಿ ತನ್ನಲ್ಲಿ ಬದಲಾವಣೆಯಾಯಿತು ಎನ್ನುತ್ತಾರೆ.
3 ವಾರಗಳಲ್ಲಿ ಅವಳು ವಿಭಿನ್ನ ವ್ಯಕ್ತಿಯಾದೆ ಎಂದು ಮಹಿಳೆ ಹೇಳುತ್ತಾರೆ. ಅವಳರು ಪುರುಷರ ಬದಲಿಗೆ ಮಹಿಳೆಯರ ಮೇಲೆ ಆಕರ್ಷಣೆಯನ್ನು ಅನುಭವಿಸಲು ಪ್ರಾರಂಭಿಸಿದರು. ಒಂದು ತಿಂಗಳಲ್ಲಿ ಅವರು ಮಹಿಳೆಯರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇದೆಲ್ಲವನ್ನೂ ತಾನು ಊಹಿಸಿರಲಿಲ್ಲ ಎಂದು ಹೇಳುತ್ತಾರೆ.
ಕಳೆದ 6 ತಿಂಗಳಿಂದ ಟೆಸ್ಸಾ ತನ್ನ ಮಹಿಳಾ ಸಂಗಾತಿಯೊಂದಿಗೆ ವಾಸಿಸುತ್ತಿದ್ದಾರೆ. ಫೋಬೆ ಚಕರ್ ಎಂಬಾಕೆ 24 ವರ್ಷದ ಈಕೆಯ ಸಂಗಾತಿಯ ಹೆಸರು. ಟೆಸ್ಸಾ ತನ್ನ ಸಂಗಾತಿಯನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳುತ್ತಾರೆ. ಪುರುಷ ಸಂಗಾತಿಯೊಂದಿಗೆ ವಾಸಿಸುವುದಕ್ಕಿಂತ ಇದು ತುಂಬಾ ವಿಭಿನ್ನವಾಗಿದೆ ಎಂದು ಅವರು ಹೇಳುತ್ತಾರೆ. ಒಂದು ಕ್ಷಣವೂ ಅವಳಿಂದ ದೂರವಿರಲು ಬಯಸುವುದಿಲ್ಲ ಎಂದು ಟೆಸ್ಸಾ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಡೇಟಿಂಗ್ ಮಾಡೋದನ್ನು ಕಲಿಸಲು ಸರ್ಕಾರವೇ ಕೋರ್ಸ್ ಆರಂಭಿಸಿದೆ!
ಈ ಬಗ್ಗೆ ತಜ್ಞರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನನ ನಿಯಂತ್ರಣ ಮಾತ್ರೆಗಳನ್ನು ನಿಲ್ಲಿಸಿದ ನಂತರ ವ್ಯಕ್ತಿಯ ಮಾನಸಿಕ ಸ್ಥಿತಿಯು ಬದಲಾಗಬಹುದು ಎಂದು ಬ್ರಿಸ್ಬೇನ್ ಮೂಲದ ಪ್ರಕೃತಿ ಚಿಕಿತ್ಸಕ ಮತ್ತು ಮಹಿಳಾ ಆರೋಗ್ಯ ತಜ್ಞ ಕ್ಯಾಥರಿನ್ ಮಾಸ್ಲೆನ್ ಹೇಳುತ್ತಾರೆ.
ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದನ್ನು ನಿಲ್ಲಿಸಿದ ನಂತರ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ಕಂಡ ಅನೇಕ ರೋಗಿಗಳನ್ನು ನಾನು ನೋಡಿದ್ದೇನೆ ಎಂದು ಹೇಳಿದರು. ಕೆಲ ರೋಗಿಗಳ ವ್ಯಕ್ತಿತ್ವದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದರು. ನೀವು ಕೂಡ ಈ ಮಾತ್ರೆಗಳನ್ನು ಸೇವಿಸುತ್ತಾ ಇದ್ರೆ, ಇನ್ನು ಮುಂದೆ ಹುಷಾರ್! ವೈದ್ಯರ ಒಂದಷ್ಟು ಸಲಹೆಗಳನ್ನು ತೆಗೆದುಕೊಂಡು ನಂತರ ಮಾತ್ರೆಗಳನ್ನು ತ್ಯಜಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ