• Home
  • »
  • News
  • »
  • trend
  • »
  • A Happy Marriage: 32 ವರ್ಷಗಳಲ್ಲಿ ಈ ದಂಪತಿ ಒಮ್ಮೆಯೂ ಜಗಳವಾಡಿಲ್ವಂತೆ, ಹೆತ್ತವರ ದಾಂಪತ್ಯದ ಗುಟ್ಟು ಬಿಚ್ಚಿಟ್ಟ ಮಗಳು

A Happy Marriage: 32 ವರ್ಷಗಳಲ್ಲಿ ಈ ದಂಪತಿ ಒಮ್ಮೆಯೂ ಜಗಳವಾಡಿಲ್ವಂತೆ, ಹೆತ್ತವರ ದಾಂಪತ್ಯದ ಗುಟ್ಟು ಬಿಚ್ಚಿಟ್ಟ ಮಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

This Couple Never Fought i 32 Years: ತಮ್ಮ ಹಾಗೂ ತಾಯಿಯ ನಡುವಿನ ಸಂಭಾಷಣೆಯನ್ನೇ ಆಕೆ ಟ್ವಿಟ್ಟರ್‌ ನಲ್ಲಿ ಬರೆದುಕೊಂಡಿದ್ದು, ಸುಖೀ ದಾಂಪತ್ಯಕ್ಕೆ ಯಾವ ಅಂಶಗಳು ಅಡಿಪಾಯ ಎಂಬುದನ್ನು ಹೇಳಿಕೊಂಡಿದ್ದಾರೆ.

  • Share this:

ಗಂಡ - ಹೆಂಡತಿ (Husband And Wife) ಅಂದಮೇಲೆ ಜಗಳ ಕಾಮನ್.‌ ಜಗಳ (Fight) ಆಡಿ ಕೆಲವರು ದೂರ ದೂರ ಆದ್ರೆ, ಇನ್ನೂ ಕೆಲವರು ಅಡ್ಜಸ್ಟ್‌ ಮಾಡಿಕೊಂಡು ಜೀವನ ನಡೆಸ್ತಿರ್ತಾರೆ. ಆದ್ರೆ ಜಗಳ ಆಡದೇ, ಹೊಂದಾಣಿಕೆಯಿಂದ ಸಂತೋಷದಿಂದ ಜೀವನ ನಡೆಸುವವರು ತುಂಬಾ ಕಡಿಮೆ. ಇಲ್ಲೊಬ್ಬ ಮಹಿಳೆ ತನ್ನ ಹೆತ್ತವರ ಸುಖೀ ದಾಂಪತ್ಯದ ಸೀಕ್ರೇಟ್‌ (Marriage Secret) ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಆ ಮಹಿಳೆಯ ಹೆಸರು ಸಿಂಥಿಯಾ ಫ್ರಾನ್ಸಿಲನ್.‌ ಅವರು ಹೇಳೋ ಪ್ರಕಾರ 32 ವರ್ಷಗಳಲ್ಲಿ ಅವರ ಹೆತ್ತವರು ಜಗಳವಾಡುವುದನ್ನು ಅವರು ನೋಡೇ ಇಲ್ಲವಂತೆ. ಈ ಬಗ್ಗೆ ಯಾವತ್ತೂ ಕುತೂಹಲ ಹೊಂದಿದ್ದ ಸಿಂಥಿಯಾ ಒಮ್ಮೆ ಫೋನ್‌ ನಲ್ಲಿ ಮಾತನಾಡುತ್ತ ಇದ್ದಾಗ, ನಿಮ್ಮ 37 ವರ್ಷದ ದಾಂಪತ್ಯದಲ್ಲಿ ಎಂದಾದರೂ ಜಗಳ ಆಡಿದ್ದೀರಾ ಅಂತ ತಮ್ಮ ಹೆತ್ತವರನ್ನು ಕೇಳಿದ್ದರು. ಆಗ ಅವರ ತಾಯಿ ಹೇಳಿದ್ದ ಮಾತುಗಳನ್ನೇ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.


ಯಶಸ್ವಿ ದಾಂಪತ್ಯದ ರಹಸ್ಯಗಳು ಇವೇ!


ದಾಂಪತ್ಯ ಸಂಬಂಧದ ಸಂಘರ್ಷದ ಕುರಿತು ಪೋಷಕರೊಂದಿಗೆ ಮಾತನಾಡುತ್ತಾ, ಫ್ರಾನ್ಸಿಲನ್, ಅವರ ಸಲಹೆಗಳನ್ನೂ ಪಡೆಯುತ್ತಾರೆ. ಪ್ರತಿದಿನ ಒಬ್ಬರನ್ನೊಬ್ಬರು ಬೆಂಬಲಿಸುವ, ಪ್ರೀತಿಸುವ ಮಾರ್ಗಗಳನ್ನು ಆರಿಸಿಕೊಳ್ಳುವುದು ಮುಖ್ಯ. ಹಾಗೆಯೇ ಕಷ್ಟದ ಸಮಯದಲ್ಲಿ ಪರಸ್ಪರ ಧೈರ್ಯ ತುಂಬುವುದು ಯಶಸ್ವಿ ದಾಂಪತ್ಯದ ರಹಸ್ಯ ಎಂಬುದಾಗಿ ಅವರ ಹೆತ್ತವರು ಹೇಳಿದ್ದಾರಂತೆ.


ಫ್ರಾನ್ಸಿಲನ್ ಪ್ರಕಾರ, ಅವಳು ಎಂದಿಗೂ ಭೇಟಿಯಾಗದ ಅಜ್ಜಿ, ತನ್ನ ತಂದೆ ಕೆಲಸಕ್ಕೆ ಹೋದಾದ ತಾಯಿಗೆ ಕಷ್ಟ ಕೊಡುತ್ತಿದ್ದರು, ತನ್ನ ತಾಯಿಯನ್ನು ನಿಂದಿಸುತ್ತಿದ್ದರು ಎಂಬುದು ಗೊತ್ತಿರಲಿಲ್ಲ. ಆದರೆ ಕೆಲವೊಂದು ಸಂದರ್ಭಗಳು ಅವರನ್ನು ಒಟ್ಟಿಗೆ ಇರುವಂತೆ ಹಾಗೂ ಪರಸ್ಪರ ಬೆಂಬಲಿಸುವಂತೆ ಮಾಡಿದ್ದವು. ಅಲ್ಲದೇ ಕೆಲವೊಂದು ಸವಾಲಿನ ಮತ್ತು ಭಾವನಾತ್ಮಕ ಅನುಭವವು ಅವರ ಮದುವೆಯನ್ನು ಬಲಪಡಿಸಿತು ಎಂದು ತಾಯಿ ಹೇಳಿದ್ದಾಗಿ ಫ್ರಾನ್ಸಿಲನ್ ಹೇಳಿಕೊಳ್ತಾರೆ.


ಇದನ್ನೂ ಓದಿ: ಈ ವಿಮಾನ ಹತ್ತಲು ಚೆಕ್-ಇನ್​ ಮಾಡ್ಬೇಕು, ಆದ್ರೆ ಟೇಕ್​ ಆಫ್ ಮಾತ್ರ ಆಗಲ್ಲ


ಪ್ರೀತಿ ಒಂದು ಆಯ್ಕೆಯಾಗಿದೆ!


ಇನ್ನು, ಪ್ರೀತಿಯ ವಿಷಯಕ್ಕೆ ಬಂದಾಗ ತನ್ನ ಹೆತ್ತವರು ತನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದಾರೆ ಎನ್ನುತ್ತಾರೆ ಫ್ರಾನ್ಸಿಲನ್. ಅವರ ಪ್ರಕಾರ ಪ್ರೀತಿ ಒಂದು ಆಯ್ಕೆಯಾಗಿದೆ. ನೀವು ಅದನ್ನು ಪ್ರತಿದಿನ ಆಯ್ಕೆ ಮಾಡಬಹುದು. ಆಕೆಯ ತಾಯಿ ತನ್ನನ್ನು ತಾನು "ಬಹಳ ರೋಮ್ಯಾಂಟಿಕ್ ವ್ಯಕ್ತಿ" ಎಂದು ಪರಿಗಣಿಸುತ್ತಾಳೆ ಎಂಬುದಾಗಿ ಅವರು ವಿವರಿಸ್ತಾರೆ.


ಅಂದಹಾಗೆ, ಆಕೆಯ ಹೆತ್ತವರು ಮೊದಲು ಭೇಟಿಯಾಗಿದ್ದು ಅಮೆರಿಕದಲ್ಲಿ. ಹಾಗಂತ ಅವರಿಬ್ಬರೂ ಒಂದೇ ಸ್ವಭಾವದವರಲ್ಲ ಎನ್ನುವ ಫ್ರಾನ್ಸಿಲನ್‌, ಇಬ್ಬರೂ ವಿಭಿನ್ನ ವ್ಯಕ್ತಿತ್ವದವರು. ತಾಯಿ ಎಲ್ಲರ ಜೊತೆ ಚೆನ್ನಾಗಿ ಬೆರೆಯುವ ಸ್ವಭಾವದವರಾಗಿದ್ದರೆ ತಂದೆ ತುಂಬಾ ರಿಸೆರ್ವ್ಡ್‌ ಸ್ವಭಾವದವರು. ಆದರೆ ತಮ್ಮ ಮೂವರು ಹೆಣ್ಣು ಮಕ್ಕಳು ಹಾಗೂ ತನ್ನ ಪತ್ನಿಗೆ ಸದಾ ಬೆಂಬಲ ನೀಡುತ್ತಿದ್ದರು ಎನ್ನುತ್ತಾರೆ.


ಕಷ್ಟದ ಸನ್ನಿವೇಶಗಳೇ ಗೌರವ - ನಂಬಿಕೆಯನ್ನು ನಿರ್ಮಿಸುತ್ತವೆ!


ವಾಸ್ತವವಾಗಿ, ಕಷ್ಟದ ಸಂದರ್ಭದಲ್ಲಿರುವ ದುರ್ಬಲತೆಗಳು ಹೇಗೆ ಸಂಬಂಧವನ್ನು, ಗೌರವ, ನಂಬಿಕೆಯನ್ನು ಬಲಪಡಿಸುತ್ತವೆ ಎಂಬುದನ್ನು ನನ್ನ ತಂದೆಯಿಂದ ಕಲಿತಿದ್ದೇನೆ ಎನ್ನುತ್ತಾರೆ ಈ ಮಹಿಳೆ. ಅಲ್ಲದೇ, ತನ್ನ ತಂದೆ ಪರಿಸ್ಥಿತಿಗಳನ್ನು ನಿಭಾಯಿಸಿದ ರೀತಿ ಹಾಗೂ ಆತ ತೆಗೆದುಕೊಂಡ ನಿರ್ಧಾರಗಳು ಆತ ಎಂಥ ವ್ಯಕ್ತಿ ಎಂಬುದನ್ನು ಅರಿಯಲು ಸಹಾಯವಾಯ್ತು ಎನ್ನುವ ಆಕೆಯ ತಾಯಿ, ಪತಿಯನ್ನು ಗೌರವದಿಂದ ಕಾಣುವಂತಾದ ಸಂದರ್ಭಗಳನ್ನು ವಿವರಿಸ್ತಾರೆ.


ಇದನ್ನೂ ಓದಿ: ಬಣ್ಣಕ್ಕಿಂತ ಪರಿಶುದ್ಧ ಮನಸ್ಸು ಸುಂದರ ಎಂಬ ಸಂದೇಶ ಸಾರಿದ ಕಾಳಿಯ ಗ್ರಾಫಿಕ್ಸ್


ಹೀಗೆ ತಮ್ಮ ಹಾಗೂ ತಾಯಿಯ ನಡುವಿನ ಸಂಭಾಷಣೆಯನ್ನೇ ಆಕೆ ಟ್ವಿಟ್ಟರ್‌ ನಲ್ಲಿ ಬರೆದುಕೊಂಡಿದ್ದು, ಸುಖೀ ದಾಂಪತ್ಯಕ್ಕೆ ಯಾವ ಅಂಶಗಳು ಅಡಿಪಾಯ ಎಂಬುದನ್ನು ಹೇಳಿಕೊಂಡಿದ್ದಾರೆ. ಫ್ರಾನ್ಸಿಲನ್‌ ಟ್ವಿಟ್ಟರ್‌ ಪೋಸ್ಟ್‌ ಈಗ ವೈರಲ್‌ ಆಗಿದೆ. ಇದನ್ನು 173,000 ಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದು, ನೂರಾರು ಜನ ಕಾಮೆಂಟ್‌ ಮಾಡಿದ್ದಾರೆ.

Published by:Sandhya M
First published: