Viral Post: ಪ್ರವಾಹ ಪೀಡಿತ ಸ್ಥಳಗಳಲ್ಲಿ ಮಹಿಳಾ IAS ಅಧಿಕಾರಿ ಕೆಲಸ! ಭೇಷ್ ಎಂದ ನೆಟ್ಟಿಗರು

ಕೆಲವು ಅಧಿಕಾರಿಗಳಂತೂ ಈ ಸಂದಿಗ್ಧ ಸಮಯದಲ್ಲಿ ತಮ್ಮ ಕಚೇರಿ ಬಿಟ್ಟು ಹೊರಗೆ ಬರುವುದಿಲ್ಲ, ಬರೀ ಫೋನಿನ ಮೂಲಕವೇ ಎಲ್ಲಾ ರೀತಿಯ ಮಾಹಿತಿ ತೆಗೆದುಕೊಳ್ಳುತ್ತಾ ತಮ್ಮ ಸಹಾಯಕ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿರುತ್ತಾ ಸುಮ್ಮನಾಗಿಬಿಡುತ್ತಾರೆ . ಇಂತಹ ಅಧಿಕಾರಿಗಳ ನಡುವೆ ಇಲ್ಲೊಬ್ಬ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಜನರ ಮಧ್ಯೆ ಇದ್ದು ಕೆಲಸ ಮಾಡಿ ಉತ್ತಮ ಅಧಿಕಾರಿ ಹೇಗಿರಬೇಕೆಂದು ತೋರಿಸಿಕೊಟ್ಟಿದ್ದಾರೆ.

 ಐಎಎಸ್ ಅಧಿಕಾರಿ ಕೀರ್ತಿ ಜಲ್ಲಿ

ಐಎಎಸ್ ಅಧಿಕಾರಿ ಕೀರ್ತಿ ಜಲ್ಲಿ

  • Share this:
ಅಸ್ಸಾಂನಲ್ಲಿ (Assam) ಹದಗೆಡುತ್ತಿರುವ ಪ್ರವಾಹ (flood) ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕಚಾರ್ ಜಿಲ್ಲಾಡಳಿತವು (District of Kachar) ಗುರುವಾರದಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳು (Educational institutions) ಮತ್ತು ಅಗತ್ಯವಲ್ಲದ ಖಾಸಗಿ ಸಂಸ್ಥೆಗಳನ್ನು 48 ಗಂಟೆಗಳ ಕಾಲ ಮುಚ್ಚುವುದಾಗಿ ಘೋಷಿಸಿದ್ದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿತ್ತು. ನಿರಂತರ ಮಳೆ (Rain), ಪ್ರವಾಹ ಮತ್ತು ಭೂಕುಸಿತವು (Landslide) ಅಸ್ಸಾಂನ ವಿವಿಧ ಭಾಗಗಳಲ್ಲಿ ಹಾನಿಯನ್ನುಂಟುಮಾಡಿದೆ, ಇದು ರಾಜ್ಯದ 20 ಜಿಲ್ಲೆಗಳ ಸುಮಾರು 5 ಲಕ್ಷ ಜನರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ಅಂದಾಜಿಸಲಾಗಿದೆ. ಏತನ್ಮಧ್ಯೆ, ಬಾಧಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಈಗಾಗಲೇ ಎನ್ಡಿಆರ್ಎಫ್ ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಸಂದಿಗ್ಧ ಸಮಯದಲ್ಲಿ ಕೆಲಸ ಮಾಡಿದ ಮಹಿಳಾ ಐಎಎಸ್ ಅಧಿಕಾರಿ
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಜನರ ರಕ್ಷಣೆಗೆ ನಿಲ್ಲುವಂತಹ ಅಧಿಕಾರಿಗಳು ಕೇವಲ ಬೆರಳೆಣಿಕೆಯಷ್ಟು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವು ಅಧಿಕಾರಿಗಳಂತೂ ಈ ಸಂದಿಗ್ಧ ಸಮಯದಲ್ಲಿ ತಮ್ಮ ಕಚೇರಿ ಬಿಟ್ಟು ಹೊರಗೆ ಬರುವುದಿಲ್ಲ, ಬರೀ ಫೋನಿನ ಮೂಲಕವೇ ಎಲ್ಲಾ ರೀತಿಯ ಮಾಹಿತಿ ತೆಗೆದುಕೊಳ್ಳುತ್ತಾ ತಮ್ಮ ಸಹಾಯಕ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿರುತ್ತಾ ಸುಮ್ಮನಾಗಿಬಿಡುತ್ತಾರೆ. ಇಂತಹ ಅಧಿಕಾರಿಗಳ ನಡುವೆ ಇಲ್ಲೊಬ್ಬ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಜನರ ಮಧ್ಯೆ ಇದ್ದು ಕೆಲಸ ಮಾಡಿ ಉತ್ತಮ ಅಧಿಕಾರಿ ಹೇಗಿರಬೇಕೆಂದು ತೋರಿಸಿಕೊಟ್ಟಿದ್ದಾರೆ.

ಹೌದು.. ಐಎಎಸ್ ಅಧಿಕಾರಿ ಕೀರ್ತಿ ಜಲ್ಲಿ ಅವರು ಪ್ರವಾಹ ಪೀಡಿತ ಸ್ಥಳಗಳಲ್ಲಿ ಜನರ ಮಧ್ಯೆ ಇದ್ದು ಕೆಲಸಗಳನ್ನು ಮಾಡಿಸುತ್ತಿರುವ ಫೋಟೋಗಳು ಬಹಳ ವಿಶೇಷ ಕಾರಣಕ್ಕಾಗಿ ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಅಸ್ಸಾಂನ ಕಚಾರ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸುತ್ತಿರುವ ಫೋಟೋಗಳು ಆನ್ಲೈನ್ ನಲ್ಲಿ ವೈರಲ್ ಆಗಿವೆ ಮತ್ತು ಸಂಕಷ್ಟದಲ್ಲಿರುವ ಜನರನ್ನು ತಲುಪಲು ಪ್ರಯತ್ನಿಸಿದ್ದಕ್ಕಾಗಿ ಜನರು ಅವರನ್ನು ಶ್ಲಾಘಿಸುತ್ತಿದ್ದಾರೆ. ಪ್ರವಾಹದ ವಿನಾಶಕಾರಿ ಪರಿಣಾಮಗಳಿಗೆ ಸಾಕ್ಷಿಯಾದ ಅಸ್ಸಾಂನ ಜಿಲ್ಲೆಗಳಲ್ಲಿ ಕಚಾರ್ ಕೂಡ ಒಂದು ಎಂದು ಹೇಳಬಹುದು.

ಸ್ಥಳೀಯ ಜನರೊಂದಿಗೆ ಸಂವಹನ
ಬುಧವಾರದಂದು ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ ಅವರು ಬೋರ್ಖೋಲಾ ಡೆವಲಪ್ಮೆಂಟ್ ಬ್ಲಾಕ್ ಮತ್ತು ಇತರ ಭಾಗಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಅವರು ಕಾಲ್ನಡಿಗೆಯಲ್ಲಿ ಪ್ರದೇಶಗಳನ್ನು ಪರಿಶೀಲಿಸಿದರು ಮತ್ತು ಈ ಪ್ರವಾಹ ಮತ್ತು ಭೂ ಸವೆತದಿಂದಾಗಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಅವರು ಸ್ಥಳೀಯ ಜನರೊಂದಿಗೆ ಸಂವಹನ ನಡೆಸಿದರು.

ಇದನ್ನೂ ಓದಿ: DC Jumps to Reservoir: ಅಧಿಕಾರಿಗಳನ್ನು ಪರೀಕ್ಷಿಸಲು ಸ್ವತಃ ಜಲಾಶಯಕ್ಕೆ ಧುಮುಕಿದ ಜಿಲ್ಲಾಧಿಕಾರಿ

ಪ್ರವಾಹ ಮತ್ತು ಸವೆತದಿಂದ ಭೂಮಿಯನ್ನು ರಕ್ಷಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಮಹಿಳಾ ಅಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಅವರ ಭೇಟಿಯ ಫೋಟೋಗಳು ಜಿಲ್ಲಾಧಿಕಾರಿಗಳ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್ ಆದ ಪೋಸ್ಟ್ ಗೆ ಭೇಷ್ ಎಂದ ನೆಟ್ಟಿಗರು
ಜನರ ಸಂಕಷ್ಟವನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಪ್ರದೇಶಗಳನ್ನು ಪರಿಶೀಲಿಸಲು ಹೊರಟ ಅಧಿಕಾರಿಗೆ ಇಂಟರ್ನೆಟ್ ನಲ್ಲಿ ನೆಟ್ಟಿಗರು ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿದ್ದಾರೆ."ಮಾನವಕುಲಕ್ಕೆ ನೀವು ಮಾಡುತ್ತಿರುವ ಸೇವೆಯ ಬಗ್ಗೆ ವರ್ಣಿಸಲು ನಮ್ಮ ಬಳಿ ಪದಗಳೇ ಇಲ್ಲ. ಮತ್ತೊಂದೆಡೆ, ಕಚಾರ್ ನ ಜನರಾದ ನಾವು, ಇಂತಹ ಜಿಲ್ಲಾಧಿಕಾರಿಯನ್ನು ನಮ್ಮ ಸ್ಥಳದಲ್ಲಿ ಪಡೆದಿದ್ದು ತುಂಬಾನೇ ಸಹಾಯಕವಾಗಿದೆ. ನೀವು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದೀರಿ, ತುಂಬಾ ಸರಳ, ವಿನಮ್ರ ಮತ್ತು ಪರಿಶುದ್ಧ ಆತ್ಮ ನಿಮ್ಮದು. ನೀವು ಪ್ರಶಂಸನೀಯರು, ನಿಮ್ಮಿಂದ ನಾವು ಕಲಿಯುವುದು ಬಹಳಷ್ಟಿದೆ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು “ಎಲ್ಲಾ ಜಿಲ್ಲಾಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳನ್ನು ನಿಮ್ಮಂತೆಯೇ ಹೋಗಿ ಪರಿಶೀಲನೆ ಮಾಡಬೇಕು. ಇದು ಸರ್ಕಾರ ಮತ್ತು ಜನರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುತ್ತದೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: Weird Tradition: ಹೂಳುವುದಿಲ್ಲ, ಸುಡುವುದಿಲ್ಲ! ಈ ಧರ್ಮದಲ್ಲಿ ಸತ್ತವರನ್ನು ರಣಹದ್ದುಗಳಿಗೆ ನೀಡುತ್ತಾರೆ

ಇತ್ತೀಚಿನ ವರದಿಯ ಪ್ರಕಾರ, 3.68 ಲಕ್ಷಕ್ಕೂ ಹೆಚ್ಚು ಜನರು ತೊಂದರೆ ಅನುಭವಿಸುತ್ತಿರುವ ನಗಾಂವ್, ನಂತರದ ಸ್ಥಾನದಲ್ಲಿ ಕಚಾರ್ ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ಜನರು ಮತ್ತು ಮೊರಿಗಾಂವ್ ನಲ್ಲಿ 41,000ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
Published by:Ashwini Prabhu
First published: