Baby Girl: ವಿಮಾನದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ!

ವಿಮಾನದಲ್ಲಿ ನಡೆದ ಘಟನೆಯ ಪೋಸ್ಟ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ನೋಡಿ. ಗರ್ಭಿಣಿ ಮಹಿಳೆಯೊಬ್ಬಳು ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ ಬಗ್ಗೆ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರ ಹೃದಯವನ್ನು ಗೆದ್ದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ವಿಮಾನದಲ್ಲಿ ಜನಿಸಿದ ಮಗು

ವಿಮಾನದಲ್ಲಿ ಜನಿಸಿದ ಮಗು

  • Share this:
ಮೊನ್ನೆ ತಾನೇ ಒಂದು ವಿಮಾನದಲ್ಲಿ (Flight) ಒಬ್ಬ ವೃದ್ದನ ಹುಟ್ಟುಹಬ್ಬವನ್ನು (The old man's birthday) ವಿಮಾನದಲ್ಲಿರುವ ಎಲ್ಲಾ ಸಿಬ್ಬಂದಿಗಳು (Staff) ಮತ್ತು ಸಹ ಪ್ರಯಾಣಿಕರು (Travelers) ಸೇರಿ ಆಚರಿಸಿದ್ದಾರೆ ಎಂಬ ವೈರಲ್ ವೀಡಿಯೋವನ್ನು (Viral Video) ನಾವು ನೋಡಿದ್ದೆವು. ಈಗ ಮತ್ತೊಂದು ವಿಮಾನದಲ್ಲಿ ನಡೆದ ಘಟನೆಯ ಪೋಸ್ಟ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದೆ ನೋಡಿ. ಗರ್ಭಿಣಿ ಮಹಿಳೆಯೊಬ್ಬಳು (Pregnant Women) ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಹೆಣ್ಣು (Girl) ಮಗುವಿಗೆ ಜನ್ಮ ನೀಡಿದ ಬಗ್ಗೆ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರ ಹೃದಯವನ್ನು ಗೆದ್ದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಫ್ರಂಟಿಯರ್ ಏರ್‌ಲೈನ್ಸ್ ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಈ ಘಟನೆಯ ಬಗ್ಗೆ ಹಂಚಿಕೊಂಡಿದೆ. ತಾಯಿ ತನ್ನ ನವಜಾತ ಶಿಶುವಿಗೆ ನೀಡಲು ನಿರ್ಧರಿಸಿದ ಮುದ್ದಾದ ಹೆಸರನ್ನು ಸಹ ಅವರು ಸೇರಿಸಿದರು. ಈ ಪೋಸ್ಟ್ ನಿಮ್ಮನ್ನು ಸಂತೋಷಪಡಿಸದೆ ಬಿಡದು.

ಗರ್ಭಿಣಿ ಮಹಿಳೆಯೊಬ್ಬರ ಹೆರಿಗೆಗೆ ಸಹಾಯ ಮಾಡಿದ ಫ್ಲೈಟ್ ಅಟೆಂಡೆಂಟ್
ಈ ವಿಮಾನದಲ್ಲಿನ ಫ್ಲೈಟ್ ಅಟೆಂಡೆಂಟ್ ಆದ ಡಯಾನಾ ಗಿರಾಲ್ಡೊ ಅವರು ಗರ್ಭಿಣಿ ಮಹಿಳೆಯೊಬ್ಬರ ಹೆರಿಗೆಗೆ ಸಹಾಯ ಮಾಡುವುದರ ಮೂಲಕ ಒಳ್ಳೆಯ ಕೆಲಸ ಮಾಡಿದ್ದು, ಈ ಕೆಲಸಕ್ಕೆ ಅದೇ ವಿಮಾನದ ಕ್ಯಾಪ್ಟನ್ ಆದ ಕ್ರಿಸ್ ನೈ ಅವರು ಫ್ಲೈಟ್ ಅಟೆಂಡೆಂಟ್ ಅವರನ್ನು ತುಂಬಾನೇ ಪ್ರಶಂಸಿಸಿದರು.

ಇದನ್ನೂ ಓದಿ:   Burger Man: 32,340 ಬರ್ಗರ್ ತಿಂದವನು ಈತ! ಹುಟ್ಟಿದಾಗಿನಿಂದ ತಿಂದಿದ್ದು ಬರೀ ಬರ್ಗರ್

ಈ ವಿಮಾನವು ಡೆನ್ವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒರ್ಲ್ಯಾಂಡೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ವಿಮಾನದಲ್ಲಿಯೇ ಮಹಿಳೆಗೆ ಹೆರಿಗೆ ನೋವು ಶುರುವಾಯಿತು. ಕೂಡಲೇ ಫ್ಲೈಟ್ ಅಟೆಂಡೆಂಟ್ ಡಯಾನಾ ಅವರು ಆ ಗರ್ಭಿಣಿ ಮಹಿಳೆಯನ್ನು ವಿಮಾನದ ಹಿಂಬದಿಯಲ್ಲಿರುವ ಶೌಚಾಲಯಕ್ಕೆ ಹೋಗಲು ಸಹಾಯ ಮಾಡಿದರು ಮತ್ತು ಮಗುವಿಗೆ ಜನ್ಮ ನೀಡಲು ಆಕೆಗೆ ಸಹಾಯ ಮಾಡಿದರು.

ಈ ಬಗ್ಗೆ ವಿಮಾನ ಸಂಸ್ಥೆ ಹೇಳಿದ್ದು ಹೀಗೆ
ಈ ವಿಮಾನಯಾನ ಸಂಸ್ಥೆಯು ಕ್ಯಾಪ್ಟನ್ ಅವರ ಹೊಗಳಿಕೆಯ ಮಾತುಗಳಿಗೆ ಇನ್ನಷ್ಟು ಸೇರಿಸಿ ಮತ್ತೊಂದು ಉಲ್ಲೇಖವನ್ನು ಸಹ ಸೇರಿಸಿದವು. "ಇಡೀ ವಿಮಾನದ ಸಿಬ್ಬಂದಿಗಳು ನಿಜವಾಗಿಯೂ ಉತ್ತಮ ಕೆಲಸ ಮಾಡಿದರು. ಈ ಸುದ್ದಿ ತಿಳಿದ ನಾನು ವಿಮಾನದ ನಿಯಂತ್ರಣಗಳು ಮತ್ತು ಹಾರಾಟದ ಕರ್ತವ್ಯಗಳನ್ನು ನನ್ನ ಮೊದಲ ಅಧಿಕಾರಿಗೆ ವರ್ಗಾಯಿಸಿದೆ.



ಪೆನ್ಸಾಕೋಲಾ ವಿಮಾನ ನಿಲ್ದಾಣವನ್ನು ಸೂಚಿಸುವ ಮೂಲಕ ನಮಗಾಗಿ ಅರೆವೈದ್ಯಕೀಯ ಸಿಬ್ಬಂದಿಯನ್ನು ಸಿದ್ಧಪಡಿಸುವ ಮೂಲಕ ಡಿಸ್ಪ್ಯಾಚ್ ವಿಭಾಗದವರು ಉತ್ತಮವಾಗಿ ಕೆಲಸವನ್ನು ಮಾಡಿದರು. ಇದು ಉತ್ತಮವಾಗಿ ಮಾಡಿದ ಕೆಲಸವಾಗಿತ್ತು ಮತ್ತು ವಿಮಾನದಲ್ಲಿ ನವಜಾತ ಶಿಶುವನ್ನು ಯಶಸ್ವಿಯಾಗಿ ಹೆರಿಗೆ ಮಾಡಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿರುವುದನ್ನು ನೋಡಿ ನನಗೆ ತುಂಬಾನೇ ಸಂತೋಷವಾಯಿತು" ಎಂದು ಕ್ರಿಸ್ ಹೇಳಿದರು.

ಮುದ್ದಾದ ಮಗುವಿನ ಹೆಸರೇನು ಗೊತ್ತಾ?
ಕ್ರಿಸ್ ಅವರು ತಾಯಿ ತನ್ನ ಮಗುವಿಗೆ ನಿರ್ಧರಿಸಿದ ಹೆಸರನ್ನು ಹಂಚಿಕೊಳ್ಳುವ ಮೂಲಕ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದರು. "ಈ ತಾಯಿ ತಮ್ಮ ಮಗಳು ವಿಮಾನದಲ್ಲಿ ಜನಿಸಿದ ಕಾರಣ ಆ ಮಗುವಿನ ಮಧ್ಯದ ಹೆಸರನ್ನು ‘ಸ್ಕೈ’ ಎಂದು ಇಡಲು ಆಯ್ಕೆ ಮಾಡಿದರು" ಎಂದು ಅವರು ವಿವರಿಸಿದರು. ಅವರು ಪೋಸ್ಟ್ ಜೊತೆಗೆ ಕೆಲವು ಸುಂದರವಾದ ಕ್ಷಣದ ಫೋಟೋಗಳನ್ನು ಸಹ ಕ್ರಿಸ್ ಅವರು ಹಂಚಿ ಕೊಂಡಿದ್ದಾರೆ.

ಇದನ್ನೂ ಓದಿ:   Train: ರೈಲಿನಲ್ಲಿ 9 ರೀತಿಯ ಹಾರ್ನ್​ಗಳಿವೆ! ಎಲ್ಲವೂ ಒಂದೊಂದು ಅರ್ಥವನ್ನು ಹೊಂದಿವೆ

ಪೋಸ್ಟ್ ಅನ್ನು ಹಂಚಿ ಕೊಂಡಾಗಿನಿಂದಲೂ 2,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗಿದೆ ಮತ್ತು ಈ ಕಾಮೆಂಟ್ ಗಳ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇವೆ. ಈ ಪೋಸ್ಟ್ ವಿವಿಧ ರೀತಿಯ ಕಾಮೆಂಟ್ ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ. "ಇದು ಅದ್ಭುತವಾಗಿದೆ" ಎಂದು ಫೇಸ್‌ಬುಕ್ ಬಳಕೆದಾರರೊಬ್ಬರು ಬರೆದಿದ್ದಾರೆ. "ನಿಮ್ಮೆಲ್ಲರಿಗೂ ಮತ್ತೆ ಮತ್ತೆ ಅಭಿನಂದನೆಗಳು. ಪುಟ್ಟ ಮಗುವಿಗೆ ಸ್ವಾಗತ" ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ.



"ಫ್ರಂಟಿಯರ್ ಏರ್‌ಲೈನ್ಸ್ ಸಿಬ್ಬಂದಿ ಈ ಮಹಿಳೆಗೆ ಹೆರಿಗೆ ಮಾಡಿಸಲು ಸಹಾಯ ಮಾಡಿ ಉತ್ತಮ ಕೆಲಸ ಮಾಡಿದ್ದಾರೆ, ಹೊಸ ತಾಯಿಗೆ ಅಭಿನಂದನೆಗಳು" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: