ತುಂಡರಿಸಿದ ಜೋಕಾಲಿ ಸರಪಳಿ; ವಿಡಿಯೋದಲ್ಲಿ ಸೆರೆಯಾಯ್ತು ಎದೆ ಝಲ್ಲೆನಿಸುವ ದೃಶ್ಯ

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದವರಿಗೆ ಒಮ್ಮೆ ಕೈ, ಕಾಲು ನಡುಗುವುದು ಮಾತ್ರ ಗ್ಯಾರಂಟಿ.

ಎದೆ ಝಲ್ಲೆನಿಸುವ ದೃಶ್ಯ

ಎದೆ ಝಲ್ಲೆನಿಸುವ ದೃಶ್ಯ

  • Share this:

ಉಯ್ಯಾಲೆ, ಜೋಕಾಲಿ ಪ್ರತಿಯೊಬ್ಬರಿಗೂ ಇಷ್ಟದ ಆಟ. ಆದರೆ ಈ ಸ್ಟೋರಿ ಓದಿ ಮುಂದೆ ನೀವು ಉಯ್ಯಾಲೆ ಆಡಬಾರದು ಎಂದು ನಿರ್ಧಾರ ತೆಗೆದುಕೊಂಡರೆ? ನಾವು ಜವಾಬ್ದಾರರಲ್ಲ. ಇದರ ಜೊತೆಗೆಯೇ ಇತ್ತೀಚಿನ ದಿನಗಳಲ್ಲಿ ಸಾಹಸಮಯ ಆಟಗಳು ಹೆಚ್ಚಾಗುತ್ತಿವೆ. ಆಡಲು ಮಜಾ ಎನಿಸಿದರೂ ಜೀವಕ್ಕೆ ಕಂಟಕವೂ ಆಗಿರುತ್ತದೆ. ಸೊಂಟಕ್ಕೆ ಹಗ್ಗ ಕಟ್ಟಿ ತುಂಬಾ ಅಡಿ ಆಳದ ಪ್ರದೇಶಕ್ಕೆ ಇಳಿ ಬಿಡುವುದು, ಬೆಟ್ಟ ಗುಡ್ಡದ ಸಣ್ಣ ಹಾದಿಯ ಮೇಲೆ ನಡೆಯುವುದು, ಹೀಗೆ ವಿಭಿನ್ನ ಆಟಗಳನ್ನು ನೋಡಿದರೇನೇ ಎದೆ ಝಲ್ ಎನ್ನುತ್ತದೆ. ಆಡಿದರಂತೂ ಜೀವ ಬಾಯಿಗೆ ಬರುತ್ತದೆ ಎನ್ನುತ್ತಾರಲ್ಲ ಹಾಗಾಗುತ್ತದೆ ಪರಿಸ್ಥಿತಿ.


ಇದೇ ರೀತಿ ಜೋಕಾಲಿ ಆಟದ ವಿಷಯದಲ್ಲೂ ಆಗಿದೆ. ಈ ಘಟನೆ ರಷ್ಯಾದಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದವರಿಗೆ ಒಮ್ಮೆ ಕೈ, ಕಾಲು ನಡುಗುವುದು ಮಾತ್ರ ಗ್ಯಾರಂಟಿ.


ಪ್ರಪಾತದ ತಟದಲ್ಲಿ ಉಯ್ಯಾಲೆಯನ್ನು ಕಟ್ಟಲಾಗಿರುತ್ತದೆ. ಉಯ್ಯಾಲೆಯಲ್ಲಿ ಇಬ್ಬರು ಮಹಿಳೆಯರು ಆಡುತ್ತಿರುತ್ತಾರೆ. ಆ ಆಟದ ಸುತ್ತ ನೆರೆದಿದ್ದ ಜನರು ಖುಷಿ ಪಡುತ್ತಿರುತ್ತಾರೆ. ಉಯ್ಯಾಲೆಯನ್ನು ತಟದಿಂದ ತಳ್ಳಿದರೆ ಮುಂದೆ ಕಾಣುವುದು ಹಾಗೂ ಕೆಳಗಿರುವುದು ಪ್ರಪಾತ. ಇಷ್ಟೊಂದು ಅಪಾಯದಲ್ಲೂ ಖುಷಿಯಿಂದಲೇ ಆಡುತ್ತಿರುತ್ತಾರೆ. ಮೂರು, ನಾಲ್ಕು ಸುತ್ತು ಮುಗಿಯುತ್ತದೆ. ತದನಂತರ ಸುತ್ತಿಗೆ ಉಯ್ಯಾಲೆ ತೂಗುವಾತ ತೂಗಿ ಬಿಡುತ್ತಾನೆ. ಉಯ್ಯಾಲೆ ಪಕ್ಕದ ಕಂಬಕ್ಕೆ ತಾಗುತ್ತದೆ. ಉಯ್ಯಾಲೆಯ ಮೇಲಿದ್ದ ಯುವತಿಯರು ಪ್ರಪಾತಕ್ಕೆ ಬೀಳುತ್ತಾರೆ.

ರಷ್ಯಾದ ರಿಪಬ್ಲಿಕ್ ಆಫ್ ಡಾಗೆಸ್ತಾನ್‍ನ ಸುಲಕ್ ಕ್ಯಾನ್ಯನ್‍ನಲ್ಲಿ ಈ ಘಟನೆ ನಡೆದಿದೆ. 6300 ಅಡಿ ಬಂಡೆಯ ಅಂಚಿನಲ್ಲಿರುವ ಸ್ವಿಂಗ್‍ನಿಂದ ಇವರಿಬ್ಬರು ಬಿದ್ದರು. ಅದೃಷ್ಟವಶಾತ್, ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.


ಅಂಕಲ್ ರ್ಯಾಂಡಮ್ ಎಂಬ ಟ್ವಿಟರ್ ಖಾತೆಯಲ್ಲೂ ಈ ವಿಡಿಯೋ ಶೇರ್ ಆಗಿದ್ದು, 49 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.


ಇದನ್ನು ಓದಿ: ಒಟ್ಟಿಗೆ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆ ಪಾಸಾದ ಮೂವರು ಸಹೋದರಿಯರು

ದುಃಸ್ವಪ್ನದಂತಿದ್ದ ಈ ಘಟನೆಯಿಂದ ಮಹಿಳೆಯರಿಬ್ಬರು ಭಯಭೀತರಾಗಿದ್ದಾರೆ. ಕೆಲವೊಂದು ಸಣ್ಣ ಪುಟ್ಟ ಗಾಯಗಳಿಂದ ಹೆದರಿದ್ದಾರೆ. ಆದರೆ ಇವರಿಬ್ಬರಿಗೂ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ. ಉಯ್ಯಾಲೆ ಇನ್ನು ಎತ್ತರದಲ್ಲಿ ಇದ್ದಿದ್ದರೆ ಮುಂದಿನಘಟನೆ ಏನು ಆಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೊಮ್ಸೋನೋಲ್ಸ್‍ಕಾಯ್ ಪ್ರಾವ್ಡಾ ಪತ್ರಿಕೆಯು ಈ ರೀತಿಯ ಆಟಗಳ ಬಗ್ಗೆ ಕಾನೂನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ವರದಿ ಮಾಡಿದೆ.


ಇದನ್ನು ಓದಿ: ಸಂಜೆ ಹೊತ್ತಲ್ಲಿ ಕಾಫಿ ಜೊತೆಯಲ್ಲಿ ಇರಲಿ ಈ ರುಚಿಕಟ್ಟಾದ ಪ್ಯಾಜಿ ಕಬಾಬ್

ಡಾಗೆಸ್ತಾನ್‍ನ ಪ್ರವಾಸೋದ್ಯಮ ಸಚಿವಾಲಯವು, ಉಯ್ಯಾಲೆ ಆಟಕ್ಕೆ ಯಾವುದೇ ರೀತಿಯ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿರಲಿಲ್ಲ. ಇದರಿಂದ ಮಹಿಳೆಯರಿಗೆ ಅಪಾಯ ಎದುರಾಗಿದೆ ಎಂದು ಹೇಳಿದೆ.


ಕಾನೂನು ಜಾರಿ ಸಂಸ್ಥೆಗಳು, ಈ ರೀತಿಯ ಸಾಹಸಮಯ ಆಟಗಳಿಂದ ಜೀವಕ್ಕೆ ಹಾಗೂ ಆರೋಗ್ಯಕ್ಕೆ ಏನಾದರೂ ಅಪಾಯ ಇದೆಯಾ? ಯಾವ ರೀತಿಯ ಅಪಾಯ ಇದೆ ಎಂಬ ಬಗ್ಗೆ ತನಿಖೆ ಕೈಗೊಳ್ಳುತ್ತಿದೆ. ಜೊತೆಗೆ ಈ ಘಟನೆ ಸಂಬಂಧ ಎಲ್ಲಾ ರೀತಿಯಲ್ಲೂ ತನಿಖೆ ನಡೆಸಲಾಗುತ್ತಿದೆ.


First published: