ಬೆಕ್ಕಿನ ಜೀವ ಉಳಿಸಲು ಮಗುವಿನ ಪ್ರಾಣದೊಂದಿಗೆ ಚೆಲ್ಲಾಟ: ವೈರಲ್ ಆಯ್ತು ಭೀಭತ್ಸ ವಿಡಿಯೋ..!

ಈ ಮಗುವಿನ ಪ್ರಾಣದೊಂದಿಗಿನ ಚೆಲ್ಲಾಟದ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ.

zahir | news18-kannada
Updated:January 10, 2020, 3:53 PM IST
ಬೆಕ್ಕಿನ ಜೀವ ಉಳಿಸಲು ಮಗುವಿನ ಪ್ರಾಣದೊಂದಿಗೆ ಚೆಲ್ಲಾಟ: ವೈರಲ್ ಆಯ್ತು ಭೀಭತ್ಸ ವಿಡಿಯೋ..!
.
  • Share this:
ಪ್ರಾಣಿ ಪ್ರೀತಿ ಇರಬೇಕು ನಿಜ. ಆದರೆ ಆ ಪ್ರೀತಿಯನ್ನು ತೋರಿಸಲು ಪುಟ್ಟ ಬಾಲಕನನ್ನು ಬಳಸುವುದು ಎಷ್ಟು ಸರಿ? ಹೌದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿರುವ ವಿಡಿಯೋವೊಂದಕ್ಕೆ ಕೇಳಿ ಬರುತ್ತಿರುವ ಪ್ರತಿಕ್ರಿಯೆ ಇದು.

ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ವೈರಲ್​ ಆಗುತ್ತವೆ. ಕೆಲವೊಂದು ವಿಡಿಯೋ ನೋಡಿದ್ರೆ ಹೀಗೂ ಇರುತ್ತಾರಾ ಎಂದು ಊಹಿಸಿಕೊಳ್ಳುವುದು ಕೂಡ ಕಷ್ಟ. ಅಂತಹ ಒಂದು ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

ಈ ವೀಡಿಯೊದಲ್ಲಿ, ಚೀನಾದ ಮಹಿಳೆಯೊಬ್ಬಳು ತನ್ನ ಮಗುವನ್ನು ಕಟ್ಟಡದ 5ನೇ ಮಹಡಿಯಿಂದ ನೇತು ಹಾಕಿಕೊಂಡಿದ್ದಾಳೆ. ಅಷ್ಟಕ್ಕೂ ಇಂತಹದೊಂದು ದುಸ್ಸಾಹಸಕ್ಕೆ ಕೈ ಹಾಕಿರುವುದು ಬೆಕ್ಕವೊಂದರ ಜೀವ ಉಳಿಸಲು ಎಂಬುದೇ ಅಚ್ಚರಿ.

ಬೆಕ್ಕನ್ನು ಉಳಿಸುವ ಸಲುವಾಗಿ ಮಗುವಿನ ಸೊಂಟಕ್ಕೆ ಹಗ್ಗವನ್ನು ಕಟ್ಟಿ ನಂತರ ಐದನೇ ಮಹಡಿಯಿಂದ ಕೆಳಕ್ಕೆ ಇಳಿಸಿದ್ದಾರೆ. ಬಾಲ್ಕನಿನಿಂದ ಬೆಕ್ಕನ್ನು ಹಿಡಿದುಕೊಂಡ ಮಗುವನ್ನು ನಿಧಾನವಾಗಿ ಮೇಲೆಕ್ಕೆತ್ತಿದ್ದಾರೆ. ಆ ಮೂಲಕ ಸಾಕು ಬೆಕ್ಕಿನ ಕಾಪಾಡಿಕೊಂಡಿದ್ದಾರೆ. ಈ ಘಟನೆಯು ಸಿಚುವಾನ್ ಪ್ರಾಂತ್ಯದಲ್ಲಿ ನಡೆದಿದ್ದು, ಮಗುವಿಗೆ ಹಗ್ಗ ಕಟ್ಟಿ ಈ ಕಾರ್ಯಾಚರಣೆಗೆ ಆ ಮಹಿಳೆ 10 ನಿಮಿಷ ತೆಗೆದುಕೊಂಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಮಗುವಿನ ಪ್ರಾಣದೊಂದಿಗಿನ ಚೆಲ್ಲಾಟದ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ. ಬೆಕ್ಕನ್ನು ಉಳಿಸಲು ಮಗುವಿನ ಜೀವವನ್ನು ಅಪಾಯ ತಂದುಕೊಳ್ಳುವ ಅಗತ್ಯವೇನಿತ್ತು ಎಂದು ಕೆಲವರು ಟೀಕಿಸಿದ್ದಾರೆ.

ಇದನ್ನೂ ಓದಿ: Bigg Boss Kannada 7: ಬಿಗ್ ಬಾಸ್​ ಕನ್ನಡ ಸೀಸನ್​ 7ನಲ್ಲಿ ಬಿಗ್ ಟ್ವಿಸ್ಟ್​..!
First published:January 10, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading