Garba Dance: ಟ್ರೆಡ್‌ಮಿಲ್ ಮೇಲೆ ಗರ್ಬಾ ನೃತ್ಯ! ಈ ಮಹಿಳೆಯರ ಧೈರ್ಯ ನೋಡಿ ಭೇಷ್ ಎಂದ ನೆಟ್ಟಿಗರು

ಮೂವರು ಮಹಿಳೆಯರು ಏನು ಮಾಡಿದ್ದಾರೆ ಮತ್ತು ಅದನ್ನು ಎಂತಹ ಸ್ಥಳದಲ್ಲಿ ಮಾಡಿದ್ದಾರೆ ಒಮ್ಮೆ ನೋಡಿ. ಡ್ಯಾನ್ಸ್ ಮಾಡುವುದು ತಪ್ಪಲ್ಲ, ಆದರೆ ಆ ಮಾಡುವಂತಹ ಡ್ಯಾನ್ಸ್ ನಮ್ಮ ಜೀವಕ್ಕೆ ಆಪತ್ತು ತರುವ ಸಂದರ್ಭವನ್ನು ಸೃಷ್ಟಿಸಬಾರದು ಅಷ್ಟೇ. ಅದೃಷ್ಟವಶಾತ್ ಇಲ್ಲಿ ಅಂತಹ ಯಾವುದೇ ಅಹಿತಕರವಾದ ಘಟನೆ ನಡೆದಿಲ್ಲ.

ಗರ್ಬಾ ನೃತ್ಯ

ಗರ್ಬಾ ನೃತ್ಯ

  • Share this:
ಸಾಮಾನ್ಯವಾಗಿ ನಾವು ಗುಜುರಾತಿ (Gujarati) ಜನರ ಜನಪ್ರಿಯ ನೃತ್ಯವಾದ (Popular dance) ಗರ್ಬಾ ನೃತ್ಯವನ್ನು (Garba Dance) ವಿಶೇಷ ಸಂದರ್ಭಗಳಲ್ಲಿ ಮಾಡುವುದನ್ನು ನೋಡಿರುತ್ತೇವೆ ಮತ್ತು ತುಂಬಾನೇ ಇಷ್ಟ ಪಟ್ಟಿರುತ್ತೇವೆ ಕೂಡ. ಆದರೆ, ಇತ್ತೀಚೆಗೆ ಈ ಗರ್ಬಾ ನೃತ್ಯವನ್ನು ರೈಲು (Train) ಬೇಗನೆ ಬಂದಿದೆ ಎಂದು ಪ್ರಯಾಣಿಕರು ಅಲ್ಲೇ ರೈಲ್ವೇ ನಿಲ್ದಾಣದ (Railway Station) ಪ್ಲಾಟ್ ಫಾರ್ಮ್ ನ ಮೇಲೆ ಡ್ಯಾನ್ಸ್ (Dance) ಮಾಡಿದ್ದು ನಾವೆಲ್ಲಾ ಸಾಮಾಜಿಕ ಮಾಧ್ಯಮದಲ್ಲಿ (Social Media) ನೋಡಿಯೇ ಇರುತ್ತೇವೆ. ಇತ್ತೀಚೆಗೆ ಈ ಗರ್ಬಾ ನೃತ್ಯವನ್ನು ಮದುವೆ ಸಮಾರಂಭಗಳಲ್ಲಿಯೂ ಕೆಲವರು ಮಾಡಿದ್ದನ್ನು ನೋಡಿದ್ದೇವೆ.

ಎಡವಟ್ಟುಗಳಿಗೆ ಕಾರಣವಾಗುತ್ತಿರುವ ವಿಡಿಯೋಗಳು
ನೋಡಲು ಕಣ್ಣಿಗೆ ಮುದ ನೀಡುವ ಡ್ಯಾನ್ಸ್ ಗರ್ಬಾ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಏಕೆಂದರೆ ಗರ್ಬಾ ಡ್ಯಾನ್ಸ್ ಎನ್ನುವುದು ಅಷ್ಟೊಂದು ಚೆನ್ನಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಮಹಿಳೆಯರು ಗುಂಪು ಕಟ್ಟಿಕೊಂಡು ಮಾಡುತ್ತಾರೆ ಎಂದು ಹೇಳಬಹುದು. ಇತ್ತೀಚೆಗೆ ಜನರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ವೀಡಿಯೋ ಪೋಸ್ಟ್ ಗಳು ಜನಪ್ರಿಯವಾಗಬೇಕು ಎಂಬ ಆಸೆಯಿಂದ ಏನೆಲ್ಲಾ ಮಾಡುತ್ತಿದ್ದಾರೆ ಎಂದರೆ ಕೆಲವೊಮ್ಮೆ ಹೀಗೆ ಮಾಡುವ ವೀಡಿಯೋಗಳು ದೊಡ್ಡ ದೊಡ್ಡ ಎಡವಟ್ಟುಗಳಿಗೆ ಕಾರಣವಾಗಬಹುದು ಎಂದು ಸಹ ಯೋಚನೆ ಮಾಡುತ್ತಿಲ್ಲ.

ಇದನ್ನೂ ಓದಿ:  Dance Video: ‘ಲತ್ ಲಗ್ ಗಯೀ’ ಹಿಟ್ ಹಾಡಿಗೆ ಗಗನಸಖಿ ಡ್ಯಾನ್ಸ್! ಸಿಕ್ಕಾಪಟ್ಟೆ ವೈರಲ್

ಇಲ್ಲಿಯೂ ಸಹ ಮೂವರು ಮಹಿಳೆಯರು ಏನು ಮಾಡಿದ್ದಾರೆ ಮತ್ತು ಅದನ್ನು ಎಂತಹ ಸ್ಥಳದಲ್ಲಿ ಮಾಡಿದ್ದಾರೆ ಒಮ್ಮೆ ನೋಡಿ. ಡ್ಯಾನ್ಸ್ ಮಾಡುವುದು ತಪ್ಪಲ್ಲ, ಆದರೆ ಆ ಮಾಡುವಂತಹ ಡ್ಯಾನ್ಸ್ ನಮ್ಮ ಜೀವಕ್ಕೆ ಆಪತ್ತು ತರುವ ಸಂದರ್ಭವನ್ನು ಸೃಷ್ಟಿಸಬಾರದು ಅಷ್ಟೇ. ಅದೃಷ್ಟವಶಾತ್ ಇಲ್ಲಿ ಅಂತಹ ಯಾವುದೇ ಅಹಿತಕರವಾದ ಘಟನೆ ನಡೆದಿಲ್ಲ.

ಟ್ರೆಡ್‌ಮಿಲ್ ಮೇಲೆ ಗರ್ಬಾ ಡ್ಯಾನ್ಸ್
ಮೂವರು ಮಹಿಳೆಯರು ಜಿಮ್ ನಲ್ಲಿ ವ್ಯಾಯಾಮ ಮಾಡಲು ಬಳಸುವ ಟ್ರೆಡ್‌ಮಿಲ್ ಮೇಲೆ ವಾಕಿಂಗ್ ಮತ್ತು ಜಾಗಿಂಗ್ ಮಾಡುವುದನ್ನು ಬಿಟ್ಟು ಗರ್ಬಾ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ವೀಡಿಯೋ ಮಾಡಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ಕೊಂಡಿದ್ದಾರೆ. ಈ ಗರ್ಬಾ ಡ್ಯಾನ್ಸ್ ನ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಮೂವರು ಮಹಿಳೆಯರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು, ಗರ್ಬಾ ಡ್ಯಾನ್ಸ್ ಮಾಡಿರುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ
ಇಲ್ಲಿ ಡ್ಯಾನ್ಸ್ ಮಾಡುತ್ತಿರುವ ಈ ಮೂವರು ಮಹಿಳೆಯರು ತಮ್ಮ ಪ್ರತಿಯೊಂದು ಹೆಜ್ಜೆಗಳನ್ನು ಸಂಪೂರ್ಣವಾಗಿ ಸಂಯೋಜಿಸಿದರು ಮತ್ತು ಇದನ್ನು ನೋಡಿದವರು ಯಾರಾದರೂ ಸರಿ ಬಹು ಬೇಗನೆ ಮಂತ್ರಮುಗ್ಧರಾಗುತ್ತಾರೆ. ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟವಾದ ಗರ್ಬಾ ವರ್ಲ್ಡ್ ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಇದು 2 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಆದಾಗ್ಯೂ, ಇಂಟರ್ನೆಟ್ ನ ಒಂದು ವಿಭಾಗವು ಯಾರಾದರೂ ಸಮನ್ವಯವನ್ನು ಕಳೆದುಕೊಂಡಿದ್ದರೆ, ಇದು ತುಂಬಾನೇ ಅಪಾಯಕಾರಿಯಾಗುತ್ತಿತ್ತು ಎಂದು ಹೇಳಿ ಎಚ್ಚರಿಸಿ ಗಮನ ಸೆಳೆದಿದ್ದಾರೆ.




ಇಲ್ಲಿಯವರೆಗೆ ನೀವು ಹಲವಾರು ಗರ್ಬಾ ನೃತ್ಯದ ಪ್ರದರ್ಶನಗಳನ್ನು ನೋಡಿರಬಹುದು, ಆದರೆ ನೃತ್ಯಗಾರರು ಟ್ರೆಡ್‌ಮಿಲ್ ಮೇಲೆ ನಡೆದಾಡುತ್ತಾ ಗ್ರೂವ್ ಮಾಡುವುದನ್ನು ಎಂದಿಗೂ ನೋಡಿರುವುದಿಲ್ಲ ಬಿಡಿ. ಅವರು ತಮ್ಮ ಪ್ರದರ್ಶನವನ್ನು ಎಷ್ಟು ಅದ್ಭುತವಾಗಿ ಸಂಯೋಜಿಸಿದ್ದಾರೆ ಎಂದರೆ ನೋಡುಗರಿಗೆ ನಿಜಕ್ಕೂ ಸಾಕಷ್ಟು ಆಶ್ಚರ್ಯಗೊಳಿಸುವಂತಿದೆ ಎಂದು ಹೇಳಬಹುದು. ಈ ವೀಡಿಯೋಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.

ಇದನ್ನೂ ಓದಿ:  Instagram Video: ಮಕ್ಕಳಿಗೆ ಮಾತ್ರ ಅಲ್ಲ, ಈ ನಾಯಿಗೂ ಔಷಧಿ ಅಂದ್ರೆ ಇಷ್ಟವಿಲ್ಲವಂತೆ!

ಕೆಲವರು ಈ ಮಹಿಳೆಯರ ನೃತ್ಯದ ಸಮನ್ವಯವನ್ನು ಶ್ಲಾಘಿಸಿದರೆ, ಇನ್ನೂ ಕೆಲವು ನೆಟ್ಟಿಗರು ಹೀಗೆ ಮಾಡುವುದು ಇವರಿಗೆ ಅಪಾಯ ಎಂದು ಹೇಗೆ ತಿಳಿಯಲಿಲ್ಲ ಎಂದು ಕೇಳಿದ್ದಾರೆ. "ಟ್ರೆಡ್‌ಮಿಲ್ ನಲ್ಲಿ ಈ ರೀತಿಯ ಉಡುಗೆಯನ್ನು ಧರಿಸಿ ಡ್ಯಾನ್ಸ್ ಮಾಡಿರುವುದು ಸಂಪೂರ್ಣವಾಗಿ ಅಸುರಕ್ಷಿತ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. "ಇವರು ಹಾಕಿಕೊಂಡಿರುವ ಬಟ್ಟೆ ಟ್ರೆಡ್‌ಮಿಲ್ ನಲ್ಲಿ ಸಿಕ್ಕಿ ಹಾಕಿಕೊಂಡರೆ ಅದು ಕೆಟ್ಟ ಅಪಘಾತಕ್ಕೆ ಕಾರಣವಾಗಬಹುದು" ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
Published by:Ashwini Prabhu
First published: